For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಸ್ಥೂಲಕಾಯಕ್ಕೂ ಹಾರ್ಮೋನುಗಳಿಗೂ ಸಂಬಂಧವಿದೆಯೇ?

By Arshad
|

ಮಕ್ಕಳಲ್ಲಿ ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯ ಕಳವಳಕಾರಿಯಾಗಿದೆ. ಅದರಲ್ಲೂ ಹದಿಹರೆಯ ದಾಟುತ್ತಿದ್ದಂತೆಯೇ ಕೆಲವು ಹಾರ್ಮೋನುಗಳ ಕೊರತೆಯಿಂದ ಸ್ಥೂಲಕಾಯ ಆವರಿಸುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸುತ್ತವೆ. ಸಂಶೋಧನೆಗಳ ಮೂಲಕ ಈ ತೊಂದರೆಗೆ ಸ್ಪೆಕ್ಸಿನ್ (spexin) ಎಂಬ ಹಾರ್ಮೋನಿನ ಉತ್ಪಾದನೆಯ ಕೊರತೆ ಎಂದು ಕಂಡುಬಂದಿದೆ.

 Is Childhood Obesity Linked With Hormones?

ಈ ಹಾರ್ಮೋನಿನ ಕೊರತೆಯಿಂದ ಸ್ಥೂಲಕಾಯ ಆವರಿಸುತ್ತದೆ ಎಂಬುದೇನೋ ಸರಿ. ಆದರೆ ಇದೇ ಹಾರ್ಮೋನು ರಕ್ತದ ಒತ್ತಡ ಮತ್ತು ದೇಹದಲ್ಲಿ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸುವ ಹಾರ್ಮೋನು ಸಹಾ ಆಗಿದೆ. ಹೆಚ್ಚಿನ ಹದಿಹರೆಯದವರಲ್ಲಿ ಮತ್ತು ಕೆಲವು ಹಿರಿಯರಲ್ಲಿಯೂ ಈ ಹಾರ್ಮೋನಿನ ಪ್ರಮಾಣ ಕಡಿಮೆಯಾಗಿದ್ದು ಸ್ಥೂಲಕಾಯಕ್ಕೆ ಕಾರಣವಾಗಿರಬಹುದು. ಮಕ್ಕಳಿಗೆ ಕಾಡುವ ಸ್ಥೂಲಕಾಯ, ಎಂದಿಗೂ ನಿರ್ಲಕ್ಷಿಸದಿರಿ

ಈ ನಿಟ್ಟಿನಲ್ಲಿ ನಡೆಸಿದ ಸಂಶೋಧನೆಯಲ್ಲಿ ತಜ್ಞರು ಐವತ್ತಕ್ಕೂ ಹೆಚ್ಚು ಸ್ಥೂಲಕಾಯದ ಮತ್ತು ಇಪ್ಪತ್ತು ಸಾಮಾನ್ಯ ಮೈಕಟ್ಟಿನ ಹದಿಹರೆಯದ ಯುವಕ ಮತ್ತು ಯುವತಿಯರ ಆರೋಗ್ಯದ ಮಾಹಿತಿಯನ್ನು ಕೂಲಂಕಶವಾಗಿ ವಿಶ್ಲೇಷಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.

ಇವರ ರಕ್ತದ ಮಾದರಿಗಳನ್ನು ಪರೀಕ್ಷಿಸಿದಾಗ ಇದರಲ್ಲಿರುವ ಸ್ಪೆಕ್ಸಿನ್ ಅಂಶವನ್ನೂ ಪ್ರಮುಖವಾಗಿ ಪರಿಗಣಿಸಲಾಗಿತ್ತು. ಸಂಪೂರ್ಣ ಸಮೀಕ್ಷೆಯ ಬಳಿಕ ಸ್ಥೂಲಕಾಯಕ್ಕೂ ಈ ಹಾರ್ಮೋನಿಗೂ ನಿಕಟ ಸಂಬಂಧವಿರುವುದನ್ನು ಕಂಡುಕೊಳ್ಳಲಾಯ್ತು. ಸ್ಥೂಲಕಾಯದವರಲ್ಲಿ ಇದು ಗಣನೀಯವಾಗಿ ಕಡಿಮೆ ಇದ್ದು ಸಾಮಾನ್ಯ ಮೈಕಟ್ಟಿನವರಲ್ಲಿ ಸಮರ್ಪಕ ಪ್ರಮಾಣದಲ್ಲಿತ್ತು.

ಆದರೆ ಇದು ಈ ಸಂಶೋಧನೆಯ ಪ್ರಾಥಮಿಕ ಹಂತ ಮಾತ್ರವಾಗಿದ್ದು ಈ ಹಾರ್ಮೋನಿನ ಪ್ರಭಾವ ಮತ್ತು ಸ್ಥೂಲಕಾಯದ ಹಾಗೂ ಆರೋಗ್ಯದ ಮೇಲೆ ಇದರ ಪ್ರಮಾಣದ ಕೃತಕ ಏರುಪೇರು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಲು ಇನ್ನೂ ಸಂಶೋಧನೆಗಳಾಗಬೇಕಿದೆ. ಅಲ್ಲಿಯವರೆಗೆ ಈ ಹಾರ್ಮೋನಿನ ಬಳಕೆಯಿಂದ ಸ್ಥೂಲಕಾಯವನ್ನು ತಡೆಗಟ್ಟುವ ಯಾವುದೇ ವಿಧಾನಕ್ಕೆ ತಜ್ಞರು ತಮ್ಮ ಅನುಮೋದನೆಯನ್ನು ನೀಡಿಲ್ಲ.

English summary

Is Childhood Obesity Linked With Hormones?

Researchers claim that weight gain could occur in adolescents when certain hormone levels dip. The name of the hormone is said to me spexin and when its levels are low, teenagers are said to be at the risk of gaining unwanted weight.
X
Desktop Bottom Promotion