Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಅಧ್ಯಯನ ವರದಿ: ತಂದೆಯೇ ಮಗುವಿಗೆ ರೋಲ್ ಮಾಡೆಲ್
ಮಕ್ಕಳು ಮಾತನಾಡಲು ನಡೆದಾಡಲು ತೊಡಗುತ್ತಿದ್ದಂತೆ ತನ್ನ ತಂದೆ ತಾಯಿಯರಿಂದ ಕಲಿತುಕೊಳ್ಳುವ ಪ್ರತಿಯೊಂದು ವಿಷಯವೂ ಮುಂದಿನ ಜೀವನಕ್ಕೆ ಭದ್ರ ಬುನಾದಿಯಾಗುತ್ತದೆ. ಸಾಮಾನ್ಯವಾಗಿ ಕಿರಿಯ ಪ್ರಾಥಮಿಕ ತರಗತಿಯವರೆಗೂ ತಾಯಿಯಿಂದ ಕಲಿತುಕೊಳ್ಳುವ ವಿಷಯಗಳಿಗೆ ಹೆಚ್ಚು ಮಹತ್ವವಿದ್ದರೆ ಐದನೆಯ ತರಗತಿಯ ಬಳಿಕ ತಂದೆಯಿಂದ ಕಲಿತುಕೊಳ್ಳುವ ವಿಷಯಗಳೇ ಮುಂದೆ ಆ ಮಗುವಿನ ಸಾಮಾಜಿಕ ಬೆಳವಣಿಗೆಗೆ ಭದ್ರ ಬುನಾದಿಯಾಗುತ್ತದೆ ಎಂದು ಇತ್ತೀಚಿನ ಒಂದು ಸಂಶೋಧನೆ ತಿಳಿಸಿದೆ.

ಈ ವಿಷಯವನ್ನು ಖ್ಯಾತ ನಿಯತಕಾಲಿಕೆಗಳಾದ Early Childhood Research Quarterly ಮತ್ತು Infant and Child Development ಎಂಬ ಪತ್ರಿಕೆಗಳು ಪ್ರಕಟಿಸಿದ್ದು ಇದಕ್ಕೆ ಆಧಾರವಾಗಿ ಹಲವು ಮಾಹಿತಿಗಳನ್ನೂ ಒದಗಿಸಿದೆ. ಈ ಮಾಹಿತಿಗಳ ಪ್ರಕಾರ ಮಗುವಿನ ಬೌದ್ಧಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಇಡಿಯ ಕುಟುಂಬವೇ ಕಾರಣವಾಗಿದ್ದು ತಂದೆಯ ಮತ್ತು ತಾಯಿಯ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದೆ. ಮುದ್ದಿನ ಮಗಳಿಗೆ ತಂದೆ ಹೇಳುವ 5 ಕಿವಿಮಾತುಗಳೇನು?
ಒಂದು ವೇಳೆ ಮಕ್ಕಳ ಬೆಳವಣಿಗೆಯ ಕುರಿತು ತಂದೆಯಾದವರು ತಮಗೆ ಮಕ್ಕಳಿಂದ ಒದಗುತ್ತಿರುವ ತೊಂದರೆ ಅಥವಾ ಒತ್ತಡ ಎಂಬ ರೀತಿಯಲ್ಲಿ ವರ್ತಿಸಿದರೆ ಇದು ಮಕ್ಕಳ ಮನಸ್ಸಿನ ಮೇಲೆ ಅಪಾರವಾದ ಋಣಾತ್ಮಕ ಭಾವನೆ ಮೂಡಿಸುತ್ತದೆ, ಇದರಿಂದ ಮಗುವಿನ ಕಲಿಕಾ ಸಾಮರ್ಥ್ಯ, ಭಾಷಾ ಸಾಮರ್ಥ್ಯಗಳು ಬಾಧೆಗೊಳಗಾಗುತ್ತವೆ ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ವಿಶೇಷವಾಗಿ ಮಕ್ಕಳು ಎರಡರಿಂದ ಮೂರು ವರ್ಷದ ವಯಸ್ಸಿನವರಾಗಿರುವಾಗ ತಂದೆ ತಾಯಿಯರ ಪ್ರತಿಕ್ರಿಯೆಗಳು ಅಪಾರ ಪ್ರಭಾವ ಬೀರುತ್ತವೆ.
ವಿಶೇಷವಾಗಿ ಗಂಡು ಮಕ್ಕಳಲ್ಲಿ ಭಾಷಾ ಕಲಿಕೆಯಲ್ಲಿ ತಂದೆಯ ಪ್ರಭಾವ ಹೆಣ್ಣು ಮಕ್ಕಳಿಗಿಂತಲೂ ಹೆಚ್ಚಾಗಿರುತ್ತದೆ. ತದ್ವಿರುದ್ಧವಾಗಿ ಹೆಣ್ಣು ಮಕ್ಕಳಲ್ಲಿ ತಾಯಿಯ ಪ್ರಭಾವ ಹೆಚ್ಚಾಗಿರುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿಯರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಮಕ್ಕಳ ಬಾಲ್ಯವನ್ನು ನಿರ್ಧರಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಇದಕ್ಕೂ ಹಿಂದೆ ಮಕ್ಕಳ ಬೆಳವಣಿಗೆಯಲ್ಲಿ ತಂದೆಯ ಪಾತ್ರ ಹೆಚ್ಚಾಗಿರುವುದಿಲ್ಲ ಎಂದು ನಂಬಲಾಗಿತ್ತು. ಆದರೆ ಈ ಸಂಶೋಧನೆಯ ಮೂಲಕ ಇದುವರೆಗೆ ನಂಬಿಕೊಂಡು ಬಂದಿದ್ದ ಗ್ರಹಗತಿಗಳೆಲ್ಲಾ ಬದಲಾಗಲಿವೆ. ಮಕ್ಕಳ ಬಾಲ್ಯದ ತಾತ್ಕಾಲಿಕ ಬದಲಾವಣೆ ಮತ್ತು ಪ್ರಬುದ್ಧತೆಯ ಹಂತದಲ್ಲಿ ಕಾಣಬರುವ ಶಾಶ್ವತ ಬದಲಾವಣೆಗಳಿಗೆ ತಂದೆಯ ಪಾತ್ರ ಮಹತ್ತರವಾಗಿದೆ ಎಂದು ಮಿಶಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಕ್ಲೇರ್ ವ್ಯಾಲೋಟನ್‌ರವರು ತಿಳಿಸುತ್ತಾರೆ.
ಮಕ್ಕಳ ಸಾಮಾಜಿಕ ಬೆಳವಣಿಗೆಯಲ್ಲಿ ತಂದೆಯ ಮಾನಸಿಕ ಆರೋಗ್ಯ ದೀರ್ಘಕಾಲದ ಅಥವಾ ಶಾಶ್ವತವಾದ ಪ್ರಭಾವ ಬೀರುತ್ತದೆ. ಉದಾಹರಣೆಗೆ ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸುವುದು, ಇತರರೊಂದಿಗೆ ಸಹಕರಿಸುವುದು, ತನ್ನ ಮೇಲೆ ನಿಯಂತ್ರಣವಿರಿಸಿ ಕೊಳ್ಳುವುದು ಇತ್ಯಾದಿ. ತಂದೆಯ ಪ್ರೀತಿ ಮಗುವಿಗೆ ಶ್ರೀರಕ್ಷೆಯಾಗಲು ಸಲಹೆಗಳು
ಈ ಪ್ರಭಾವ ಮಗು ಸುಮಾರು ಐದನೆಯ ತರಗತಿಯ ಹಂತದಲ್ಲಿದ್ದಾಗ ಗರಿಷ್ಠ ಮಟ್ಟದಲ್ಲಿರುತ್ತದೆ. ವ್ಯತಿರಿಕ್ತವಾಗಿ ತಂದೆಯ ಖಿನ್ನತೆ, ಒತ್ತಡ, ಸಿಡುಕುವಿಕೆ, ಕೋಪ ಮೊದಲಾದವು ಮಗು ಅಂಬೆಗಾಲಿಡುವ ಹಂತದಲ್ಲಿ ಹೆಚ್ಚು ಪ್ರಭಾವ ಬೀರುತ್ತಿದ್ದು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಸಾಮಾಜಿಕ ಬೆಳವಣಿಗೆಗೆ ತಾಯಿಗಿಂತಲೂ ತಂದೆಯ ಪ್ರಭಾವವೇ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಈ ಸಂಶೋಧನೆ ತಿಳಿಸುತ್ತದೆ.



Click it and Unblock the Notifications














