For Quick Alerts
ALLOW NOTIFICATIONS  
For Daily Alerts

ಮಗುವಿನ ತೂಕದ ಹಿಂದಿರುವ ಸತ್ಯಾಸತ್ಯತೆ....

By Deepu
|

ಆಗ ತಾನೆ ಹುಟ್ಟಿದ ಮಗುವನ್ನು ತೂಕ ಮಾಡಿ ಅದನ್ನು ಬರೆದಿಟ್ಟುಕೊಳ್ಳಲಾಗುತ್ತದೆ. ಮಗುವಿನ ಬೆಳವಣಿಗೆಯಲ್ಲಿ ಅದರ ತೂಕವೂ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಯಾಕೆಂದರೆ ತೂಕ ಸರಿಯಾಗಿದ್ದರೆ ಮಾತ್ರ ಮಗು ಆರೋಗ್ಯವಾಗಿದೆ ಎಂದು ಹೇಳಬಹುದಾಗಿದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮಗುವಿನ ತೂಕದಲ್ಲಿ ಏರುಪೇರಾಗುವುದಿದೆ. ಇದು ಹೇಗೆ ಎಂದು ತಿಳಿದುಕೊಳ್ಳುವ.

Facts About A Baby’s Weight

ಮೊದಲ ಕೆಲವು ದಿನಗಳಲ್ಲಿ ಹುಟ್ಟಿದ ಮಗುವಿನ ತೂಕದಲ್ಲಿ ಏರುಪೇರಾಗಬಹುದು. ಮಗುವಿನ ತೂಕದಲ್ಲಿ ಶೇ.5ರಷ್ಟು ಕುಸಿತ ಕಾಣಬಹುದು. ಇದು ಸಾಮಾನ್ಯವೆನ್ನಬಹುದು. ಮಗು 15-20 ದಿನಗಳ ಅಂತರದಲ್ಲಿ ತೂಕ ಹೆಚ್ಚಿಸಿಕೊಳ್ಳಬಹುದು. ಗರ್ಭದಲ್ಲಿರುವ ಕಂದಮ್ಮನ ತುಂಟಾಟ ಹೇಗಿರುತ್ತೆ ನೋಡಿ...

ಮೊದಲ ಕೆಲವು ತಿಂಗಳಲ್ಲಿ ಮಗು 115-220 ಗ್ರಾಂ ತೂಗಬಹುದು. 6 ತಿಂಗಳ ಬಳಿಕ ಮಗುವಿನ ತೂಕ ಹೆಚ್ಚಾಗುತ್ತಾ ಹೋಗುತ್ತದೆ. ಮೊದಲ ವರ್ಷದಲ್ಲಿ ಮಗು ಹುಟ್ಟಿದಾಗ ಇದ್ದ ತೂಕಕ್ಕಿಂತ ಎರಡು ಪಟ್ಟು ತೂಕ ಹೊಂದಿರುತ್ತದೆ. ಇದಕ್ಕಿಂತ ಹೆಚ್ಚಿನ ತೂಕವಿದ್ದರೆ ಆಗ ವೈದ್ಯರಿಗೆ ತೋರಿಸುವುದು ಉತ್ತಮ.

ಸರಾಸರಿ ತೂಕವನ್ನು ಪಡೆಯಬೇಕಾದರೆ ಮಗುವಿಗೆ ಆಗಾಗ ಸ್ತನಪಾನ ಮಾಡಿಸುತ್ತಾ ಇರಬೇಕು.(ದಿನದಲ್ಲಿ 7-12 ಸಲ). ಮಗು ವೇಗವಾಗಿ ತೂಕ ಹೆಚ್ಚಿಸಿಕೊಳ್ಳುತ್ತಾ ಇದ್ದರೆ ಕೆಲವು ತಾಯಂದಿರು ಇದು ಬೊಜ್ಜು ಎಂದು ತಿಳಿದು ಚಿಂತೆಗೀಡಾಗುತ್ತಾರೆ.

ಮೊಲೆಹಾಲು ಉತ್ತಮ ಕ್ಯಾಲರಿಯನ್ನು ಒಳಗೊಂಡ ಆಹಾರವಾಗಿರುವ ಕಾರಣದಿಂದ ಇದರ ಬಗ್ಗೆ ಚಿಂತಿಸಬೇಕಿಲ್ಲ. ಕೇವಲ ಮೊಲೆಹಾಲು ತಿನ್ನುವ ಮಗುವಿಗಿಂತ ಮೊಲೆಹಾಲಿನೊಂದಿಗೆ ಇತರ ಆಹಾರ ಸೇವಿಸುತ್ತಿರುವ ಮಗುವಿನ ತೂಕವು ಭಿನ್ನವಾಗಿರುತ್ತದೆ. ಎರಡು ಮಕ್ಕಳ ನಡುವೆ ಎಷ್ಟು ಅಂತರವಿದ್ದರೆ ಕ್ಷೇಮ?

ಮಗು ಸರಿಯಾಗಿ ಹಾಲು ಸೇವನೆ ಮಾಡಿದೆಯಾ ಎಂದು ತಿಳಿದುಕೊಳ್ಳುವುದು ಹೇಗೆ? ಮಗು ಸರಿಯಾಗಿ ಹಾಲು ಸೇವನೆ ಮಾಡಿದರೆ ಅದಕ್ಕೆ ತೃಪ್ತಿಯೆನಿಸುತ್ತದೆ. ಮಗು ತೃಪ್ತಿಯೆನಿಸಿದಾಗ ಯಾವುದೇ ಕಿರಿಕಿರಿ ಮಾಡದೆ ನಿದ್ರೆ ಮಾಡುವುದು.

English summary

Facts About A Baby’s Weight

The weight of a new born baby tends to fluctuate a bit during the first few days of birth. In fact, the weight may dip by 5% which is considered normal. The baby gradually puts the weight again in a span of 15-20 days.
X
Desktop Bottom Promotion