Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಎರಡು ಮಕ್ಕಳ ನಡುವೆ ಎಷ್ಟು ಅಂತರವಿದ್ದರೆ ಕ್ಷೇಮ?
ಒಂದೇ ಮಗು ಎಂಬ ನೀತಿಗೆ ಕಟ್ಟುಬಿದ್ದಿದ್ದ ಚೀನಾ ಈಗ ಎರಡು ಮಕ್ಕಳಿಗೆ ಅನುಮತಿ ನೀಡಿದೆ. ಭಾರತದಲ್ಲಿ ಒಂದು ಬೇಕು ಎರಡು ಸಾಕು ಎಂಬ ನಿಯಮ ಬಹಳ ವರ್ಷಗಳಿಂದ ಪ್ರಚಲಿತದಲ್ಲಿದೆ. ಆದರೆ ಇಂದು ಯುವಜನತೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವತ್ತ ಒಲವೇ ತೋರುತ್ತಿಲ್ಲ.

ಇಬ್ಬರು ಮಕ್ಕಳು ಸಾಕು ಎಂಬುದೇ ಬಹುತೇಕ ಭಾರತೀಯ ದಂಪತಿಗಳ ಅಭಿಪ್ರಾಯವಾಗಿದೆ. ಆದರೆ ಈ ಇಬ್ಬರು ಮಕ್ಕಳಲ್ಲಿ ಅಂತರ ಎಷ್ಟಿರಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಮಾತ್ರ ಎಲ್ಲಾ ದಂಪತಿಗಳಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಕೆಲವರು ಒಂದು ವರ್ಷಕ್ಕೆ ಆದ್ಯತೆ ನೀಡಿದರೆ ಕೆಲವರು ಎರಡು, ಕೆಲವರು ಮೂರು ಹೀಗೇ ಭಿನ್ನ ಅಭಿಪ್ರಾಯಗಳನ್ನು ಮಂಡಿಸುತ್ತಾರೆ.
ಆದರೆ ಹೆಚ್ಚಿನವರು ಮೂರು ವರ್ಷಗಳ ಅಂತರ ಹಾಗೂ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದ್ದರೆ ಅದು ಅತ್ಯಂತ ಆದರ್ಶಪ್ರಾಯ ಕುಟುಂಬ ಎಂಬ ಅಭಿಪ್ರಾಯ ಹೊಂದಿದ್ದಾರೆ. ಏಕೆಂದರೆ ಮೊದಲ ಮಗುವಿನ ಮೂಲಕ ಬದಲಾಗಿದ್ದ ಜೀವನದಲ್ಲಿ ಎರಡನೆಯ ಮಗುವಿನ ಆಗಮನವಾಗುತ್ತಿದ್ದಂತೆಯೇ ಅನಿವಾರ್ಯವಾಗಿ ಆಗುವ ಬದಲಾವಣೆಗೆ ಒಂದು ವರ್ಷ ಅಥವಾ ಎರಡು ವರ್ಷದ ಅವಧಿ ತೀರಾ ಕಡಿಮೆ ಎಂದು ಹೆಚ್ಚಿನ ತಾಯಂದಿರು ಅಭಿಪ್ರಾಯ ಪಡುತ್ತಾರೆ.
ಆದ್ದರಿಂದ ಎರಡು ಮಕ್ಕಳ ನಡುವಣ ಅಂತರ ಇಷ್ಟೇ ಇರಬೇಕೆಂಬ ಬಗ್ಗೆ ಖಚಿತವಾದ ಮಾಹಿತಿ ಒದಗಿಸಲು ಸಾಧ್ಯವಿಲ್ಲ. ಒಂದು ವೇಳೆ ಈ ಅಂತರ ಕಡಿಮೆಯಾದರೆ ತಾಯಿ ಹೇಗೂ ಒಂದು ಮಗುವಿಗಾಗಿ ರಾತ್ರಿ ಏಳಬೇಕಾಗಿದ್ದುದು ಎರಡು ಮಕ್ಕಳಿಗಾಗಿಯೂ ಏಳಬೇಕಾಗುತ್ತದೆ. ಅಂತಹ ಹೆಚ್ಚಿದ್ದರೆ ತಾಯಿಯಾದವಳಿಗೆ ಹೆಚ್ಚಿನ ಸಮಯ ನಿದ್ದೆಯಿಲ್ಲದೇ ಹೋಗುತ್ತದೆ ಎಂಬ ವಾದವೂ ಇದೆ.
ವಯಸ್ಸಿನಲ್ಲಿ ಹೆಚ್ಚು ಅಂತರವಿರದ ಮಕ್ಕಳು ಸರಿಸುಮಾರಾಗಿ ಒಟ್ಟಿಗೇ ಆಡಿ ನಲಿದು ಬೆಳೆಯುವ ಕಾರಣ ಪಾಲಕರಿಗೆ ಹೆಚ್ಚಿನ ತಲೆಬಿಸಿ ಇರುವುದಿಲ್ಲ. ಆದರೆ ಅಂತರ ತೀರಾ ಹೆಚ್ಚಾಗಿದ್ದರೆ ಹಲವು ತೊಡಕುಗಳಿವೆ. ಏಕೆಂದರೆ ಕಿರಿಯ ಮಗುವಿಗೆ ತಂದೆತಾಯಿಯರು ಹೆಚ್ಚಿನ ಕಾಳಜಿ ನೀಡಬೇಕಾಗಿದ್ದರೂ ಹಿರಿಯ ಮಗುವಿಗೆ ಇದೊಂದು ತಾರತಮ್ಯದಂತೆಯೇ ಅನ್ನಿಸುತ್ತದೆ.
ಅಲ್ಲದೇ ಹೆಚ್ಚಿನ ಸಮಯದಲ್ಲಿ ಪಾಲಕರು ಚಿಕ್ಕ ಮಗುವಿನ ಜವಾಬ್ದಾರಿಯನ್ನು ಹಿರಿಯ ಮಗುವಿನ ಮೇಲೇ ಹೊರೆಸುತ್ತಾರೆ. ಇದು ಹಿರಿಯ ಮಗುವಿನ ಮೇಲೆ ಮಾನಸಿಕವಾದ ಒತ್ತಡವನ್ನೂ ಹೇರಬಹುದು. ಇವೆಲ್ಲವನ್ನೂ ಪರಿಗಣಿಸಿದಾಗ ಹೆಚ್ಚಿನ ತಾಯಂದಿರು ಒಪ್ಪುವ ಮೂರು ವರ್ಷದ ಅಂತರವೇ ಅತಿ ಉತ್ತಮ ಎಂದು ಪರಿಗಣಿಸಬಹುದು.



Click it and Unblock the Notifications



