For Quick Alerts
ALLOW NOTIFICATIONS  
For Daily Alerts

ತಾಯಿಯ ಖಿನ್ನತೆಯು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?

By Deepu
|

ಮನುಷ್ಯನನ್ನು ಕಾಡುವ ಕಾಯಿಲೆಗಳಲ್ಲಿ ಮಾನಸಿಕ ಕಾಯಿಲೆಗಳು ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುತ್ತವೆ. ದೈಹಿಕ ಸಮಸ್ಯೆಗಳಿಗೆ ಔಷಧಿಯನ್ನು ನೀಡಬಹುದಾದರು, ಮಾನಸಿಕ ಸಮಸ್ಯೆಗಳಿಗೆ ಔಷಧಿಯನ್ನು ನೀಡಲು ಆಗುವುದಿಲ್ಲ. ಅದರಲ್ಲಿ ಖಿನ್ನತೆಯು ಹಲವರನ್ನು ಕಾಡುವ ಮಾನಸಿಕ ಕಾಯಿಲೆಯಾಗಿ ಗುರುತಿಸಲ್ಪಟ್ಟಿದೆ. ಈ ಖಿನ್ನತೆಯ ಕುರಿತಾಗಿ ಹಲವಾರು ಸಂಶೋಧನೆಗಳು ಹಿಂದೆ ನಡೆದಿವೆ ಮತ್ತು ಈಗಲೂ ನಡೆಯುತ್ತಿವೆ.

Does A Mother's Depression Affect Child?

ಇತ್ತೀಚೆಗೆ ಖಿನ್ನತೆಯ ಮೇಲೆ ನಡೆದ ಒಂದು ಅಧ್ಯಯನದ ಪ್ರಕಾರ ಖಿನ್ನತೆಯಿರುವ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತಾರಂತೆ. ಅದರಲ್ಲೂ 1-14 ವರ್ಷದ ವಯಸ್ಸಿನ ಮಕ್ಕಳ ಮೇಲೆ ಈ ಖಿನ್ನತೆಯು ಅಧಿಕ ಪರಿಣಾಮವನ್ನು ಬೀರುತ್ತದೆಯಂತೆ. ಅಧ್ಯಯನ ತಿಳಿಸಿರುವಂತೆ, ಈ ಖಿನ್ನತೆಯು ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಸಹ ಪರಿಣಾಮ ಬೀರುತ್ತದೆಯಂತೆ.

10 ಲಕ್ಷಕ್ಕೂ ಅಧಿಕ ಮಕ್ಕಳ ಮೇಲೆ ನಡೆಸಿದ ಅಧ್ಯಯನದ ಆಧಾರದ ಮೇಲೆ, ಸಂಶೋಧಕರು ಪೋಷಕರ ಖಿನ್ನತೆಯು ಸಹ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕಂಡುಕೊಂಡಿದ್ದಾರೆ. ಅಧ್ಯಯನಕಾರರು ಖಿನ್ನತೆಯಿಂದ ಬಳಲುತ್ತಿರುವ ತಾಯಂದಿರ ಮಕ್ಕಳೊಂದಿಗೆ ಖಿನ್ನತೆಯಿಲ್ಲದಿರುವ ತಾಯಂದಿರ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ತಾಳೆ ಮಾಡಿದಾಗ ಖಿನ್ನತೆಯಿರುವ ತಾಯಂದಿರ ಮಕ್ಕಳು ಇತರರಿಗಿಂತ ಸುಮಾರು 4-5% ಕಡಿಮೆ ಸರಾಸರಿಯನ್ನು ಹೊಂದಿರುವುದು ಕಂಡು ಬಂದಿದೆ. ಮಕ್ಕಳಿಗೆ ಕಾಡುವ 'ಸಾಮಾಜಿಕ ಆತಂಕ' ಎಂಬ ಪೆಡಂಭೂತ...

ಮಕ್ಕಳ ವಿದ್ಯಾಭ್ಯಾಸದ ಸಮಯದಲ್ಲಿ ಯಾವುದಾದರು ತೊಂದರೆಯಾಗಿ ಅವರ ವಿದ್ಯಾಭ್ಯಾಸಕ್ಕೆ ಅಡಚಣೆಯಾದರೆ, ಮುಂದಿನ ಅವರ ಭವಿಷ್ಯವು ಸಹ ಅಡಚಣೆಗೊಳಗಾಗುತ್ತದೆ. ಆದ್ದರಿಂದ ಬೆಳೆಯುವ ಹಂತದಲ್ಲಿ ಮಕ್ಕಳಿಗೆ ಪೋಷಕರಿಂದ ಯಾವುದೇ ಸಮಸ್ಯೆಯುಂಟಾಗದಂತೆ ಪೋಷಕರೆ ನೋಡಿಕೊಳ್ಳಬೇಕು.

ಅಪ್ಪನ ಖಿನ್ನತೆಗೆ ಹೋಲಿಸಿದಾಗ, ತಾಯಿಯ ಖಿನ್ನತೆಯು ಗಂಡು ಮಗುವಿನ ಮೇಲೆ ಅಗಾಧ ಪರಿಣಾಮವನ್ನು ಬೀರುತ್ತದೆ. ಖಿನ್ನತೆಯು ಅತ್ಯಂತ ಶೋಚನೀಯವಾದ ಸ್ಥಿತಿಯಾಗಿದ್ದು, ಈ ಸ್ಥಿತಿಯಲ್ಲಿ ಖಿನ್ನತೆಗೆ ಒಳಗಾದವರು ಯಾವುದೆ ಕೆಲಸವನ್ನು ಮಾಡಲಾರದ ಸ್ಥಿತಿಗೆ ತಲುಪುತ್ತಾರೆ. ಈ ಸ್ಥಿತಿಯಲ್ಲಿ ಜನರು ಎಲ್ಲಾ ಉತ್ಸಾಹ ಮತ್ತು ಸಂತೋಷವನ್ನು ಕಳೆದುಕೊಳ್ಳುತ್ತಾರೆ. ತಾಯಿಗೆ ಈ ಖಿನ್ನತೆ ಬಂದಾಗ, ಆಕೆ ಮಕ್ಕಳ ಜೊತೆಗೆ ಕೂಡಿ ಆಡಲು ಮನಸ್ಸು ಮಾಡುವುದಿಲ್ಲ. ಇದು ಮಕ್ಕಳಲ್ಲಿ ಪ್ರೀತಿಯನ್ನು ಕಳೆದುಕೊಳ್ಳುವ ದುಃಖ ಮತ್ತು ಭಯವನ್ನುಂಟು ಮಾಡುತ್ತದೆ. ಹಾರಾಡುವ ವಯಸ್ಸಿನಲ್ಲಿ ಖಿನ್ನತೆ ರೆಕ್ಕೆ ಮುರಿಯುವುದು!

ಅಧ್ಯಯನಕಾರರ ಪ್ರಕಾರ ಕೆಲವು ತಾಯಂದಿರು ಖಿನ್ನತೆಯಿಂದ ಬಳಲುತ್ತಿದ್ದರು ಸಹ ಅವರು ಅದನ್ನು ಪರೀಕ್ಷಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಕೆಲವರಿಗೆ ವೈದ್ಯಕೀಯ ಕಾರಣಗಳಿಂದ ಖಿನ್ನತೆ ಬರಬಹುದು. ಆದರೆ ಖಿನ್ನತೆಗೊಳಗಾದವರು ಅಗತ್ಯ ಚಿಕಿತ್ಸೆಯನ್ನು ಪಡೆದು, ತಮ್ಮ ಖಿನ್ನತೆಯಿಂದ ಮಕ್ಕಳ ಭವಿಷ್ಯ ಹಾಳಾಗುವುದನ್ನು ತಪ್ಪಿಸಬೇಕು ಎಂದು ಇವರು ಹೇಳಿದ್ದಾರೆ.

English summary

Does A Mother's Depression Affect Child?

A new study claims that depression of parents could affect the academic performance of children. Especially, when parents suffer depression when the children are between 1-14 years of age, the risk would be higher. The study further says that depression of parents may impact the growth and development of children.
Story first published: Sunday, February 7, 2016, 12:07 [IST]
X
Desktop Bottom Promotion