For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕಾಡುವ ಸ್ಥೂಲಕಾಯ, ಎಂದಿಗೂ ನಿರ್ಲಕ್ಷಿಸದಿರಿ

By Manu
|

ಮಕ್ಕಳಲ್ಲಿ ಬೆಳವಣಿಗೆ ಶೀಘ್ರವಾಗಿ ಕಂಡುಬಂದರೂ ಅವರ ಮೂಳೆಗಳು ಅಷ್ಟೇ ಎತ್ತರದ ವಯಸ್ಕರಷ್ಟು ದೃಢವಾಗಿರುವುದಿಲ್ಲ. ಆದ್ದರಿಂದ ಮಕ್ಕಳಲ್ಲಿ ಸ್ಥೂಲಕಾಯ ಆವರಿಸಿದಷ್ಟೂ ಅಪಘಾತದ ಸಾಧ್ಯತೆ ಹೆಚ್ಚು ಎಂದು ಮಕ್ಕಳ ತಜ್ಞರು ಅಭಿಪ್ರಾಯಪಡುತ್ತಾರೆ. ಸಾಮಾನ್ಯವಾಗಿ ರಸ್ತೆ ದಾಟುವ ಸಮಯದಲ್ಲಿ, ಶಾಲೆ ಬಿಟ್ಟ ಬಳಿಕ ಮನೆಗೆ ಧಾವಿಸುವ ಸಂಭ್ರಮದಲ್ಲಿ ಮಕ್ಕಳು ಹೆಚ್ಚು ಉದ್ವೇಗ ತೋರುತ್ತಾರೆ. ಇತ್ತೀಚಿನ ಸಂಶೋಧನೆಯಲ್ಲಿ ಸ್ಥೂಲಕಾಯದ ಮಕ್ಕಳು ರಸ್ತೆ ದಾಟುವ ಸಮಯದಲ್ಲಿ ಇತರ ಮಕ್ಕಳಿಗಿಂತ ಹೆಚ್ಚು ಸಿಡಿಮಿಡಿ, ಅಸಹನೆ ತೋರುತ್ತಾರೆ. ಇದು ರಸ್ತೆಯ ಸುರಕ್ಷತೆಯ ವಿಷಯದಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗುತ್ತದೆ.

ಈ ವಿಷಯವನ್ನು ಸಂಶೋಧಕರು ಟ್ರಾಫಿಕ್ ಸಿಗ್ನಲ್ ನ ಪರಿಸರದಲ್ಲಿ ಸುಮಾರು ಇನ್ನೂರು ಮಕ್ಕಳ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಈ ಫಲಿತಾಂಶವನ್ನು ನೀಡಿದ್ದಾರೆ. ಈ ಅಂಕಿ ಅಂಶಗಳ ಪ್ರಕಾರ ಟ್ರಾಫಿಕ್ ಸಿಗ್ನಲ್ ನಲ್ಲಿ ಸ್ಥೂಲಕಾಯದ ಮಕ್ಕಳು ಹೆಚ್ಚು ಅಸಹನೆ ತೋರುತ್ತಾರೆ ಮತ್ತು ಒಂದೆರಡು ಸೆಕೆಂಡುಗಳ ಅವಕಾಶ ಸಿಕ್ಕರೂ ಅದರೊಳಗೇ ದಾಟಿಕೊಳ್ಳುವ ಉತ್ಸುಕತೆ ತೋರುತ್ತಾರೆ ಹಾಗೂ ಇದು ಸಾಧ್ಯವಾಗದಿದ್ದರೆ ಅಪಾರ ಅಸಹನೆ ತೋರ್ಪಡಿಸುತ್ತಾರೆ.

Childhood Obesity: Get Facts on Prevention and Causes

ಈ ಪ್ರಯತ್ನದಲ್ಲಿ ಹೆಚ್ಚು ಸ್ಥೂಲಕಾಯದ ಮಕ್ಕಳು ವಾಹನಗಳಿಗೆ ಅಡ್ಡಬಂದು ಢಿಕ್ಕಿ ಹೊಡೆದಿದ್ದಾರೆ. ಏಕೆಂದರೆ ಸ್ಥೂಲದೇಹದ ಮಕ್ಕಳ ಚಿಂತನೆ ಮತ್ತು ವೇಗದ ಪರಿಗಣನೆಗೂ ಅವರ ಸ್ಥೂಲದೇಹವನ್ನು ಹೊತ್ತೊಯ್ಯುವ ಸಾಮರ್ಥಕ್ಕೂ ವ್ಯತ್ಯಾಸವಿರುವ ಕಾರಣ ಅಪಘಾತಕ್ಕೆ ಈಡಾಗುವ ಸಂಭವ ಹೆಚ್ಚುತ್ತದೆ. ಮಕ್ಕಳ ಮೂಳೆಸಂದುಗಳು ಹಿರಿಯರಷ್ಟು ಸಮರ್ಪಕವಾಗಿರದ ಕಾರಣ ಹೆಚ್ಚಿನ ತೂಕ ಈ ಸಂದುಗಳನ್ನು ಹೆಚ್ಚು ಸವೆಸುತ್ತದೆ. ಅಲ್ಲದೇ ಸಂದುಗಳ ನಡುವೆ ಇರುವ ದ್ರವ ಸ್ಥೂಲಕಾಯದ ಕಾರಣ ಅಕ್ಕಪಕ್ಕ ಸರಿದು ಮೂಳೆಯಿಂದ ಮೂಳೆಗೆ ನೇರವಾಗಿ ತಾಕುವ ಸಂಭವವಿರುತ್ತದೆ. ಇದು ಮೂಳೆಗಳು ಶೀಘ್ರವಾಗಿ ಸವೆಯಲೂ ಕಾರಣವಾಗುತ್ತವೆ.

ಸ್ಥೂಲಕಾಯ ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಮಕ್ಕಳ ಚಿಂತನೆ, ಸಮಯ ಪರಿಪಾಲನೆ, ಸ್ಮರಣ ಶಕ್ತಿ, ಸಂಘಟನಾಶಕ್ತಿ ಮತ್ತು ಯೋಜನಾಶಕ್ತಿಗಳೆಲ್ಲವೂ ಪ್ರಭಾವಕ್ಕೊಳಗಾಗುತ್ತವೆ. ಇದೇ ಕಾರಣಕ್ಕೆ ಟ್ರಾಫಿಕ್ ಸಿಗ್ನಲ್ ನಲ್ಲಿ ಸ್ಥೂಲದೇಹಿ ಮಕ್ಕಳು ಹೆಚ್ಚು ಅಸಹನೆ ತೋರಿರಬಹುದು ಎಂದು ಮಕ್ಕಳ ತಜ್ಞರು ಅಭಿಪ್ರಾಯ ಪಡುತ್ತಾರೆ.

ಸ್ಥೂಲಕಾಯದಿಂದ ಮಕ್ಕಳ ಚಿಂತನಾ ಸಾಮರ್ಥ್ಯ ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯಗಳೂ ಕುಂಠಿತಗೊಳ್ಳುವುದು ಕಂಡುಬಂದಿದೆ. ಆದ್ದರಿಂದ ಮಕ್ಕಳಲ್ಲಿ ಸ್ಥೂಲಕಾಯ ಕಂಡುಬಂದರೆ ಇದಕ್ಕೆ ಸೂಕ್ತವಾದ ಕ್ರಮಗಳನ್ನು ಪಾಲಕರು ತಕ್ಷಣವೇ ಕೈಗೊಳ್ಳಬೇಕು. ಸೂಕ್ತ ಆಹಾರ, ಆಟ, ದೈಹಿಕ ವ್ಯಾಯಮ ಮೊದಲಾದವುಗಳಿಂದ ಇವನ್ನು ಖಂಡಿತಾ ಸರಿಪಡಸಬಹುದು ಮತ್ತು ಸರಿಪಡಿಸಲೇಬೇಕು. ಎಷ್ಟೋ ಸಲ ಮಕ್ಕಳು ಬೆಣ್ಣೆಕೃಷ್ಣನಂತೆ ಆಹಾರವಸ್ತುಗಳನ್ನು ಕದ್ದು ತಿನ್ನುತ್ತಿದ್ದುದು ಪಾಲಕರಿಗೆ ಅರಿವೇ ಇರುವುದಿಲ್ಲ. ಇದೂ ಮಕ್ಕಳ ಸ್ಥೂಲಕಾಯಕ್ಕೆ ಒಂದು ಕಾರಣ

ಕೆಲವು ಸಲಹೆಗಳು:
* ಮಕ್ಕಳು ತಿನ್ನುವ, ದೈಹಿಕ ಚಟುವಟಿಕೆ ಮೊದಲಾದ ಎಲ್ಲಾ ಅಭ್ಯಾಸಗಳಲ್ಲಿ ಹಿರಿಯರನ್ನು ಅನುಕರಿಸುತ್ತಾರೆ. ಆದ್ದರಿಂದ ಮನೆಯಲ್ಲಿ ಸ್ಥೂಲದೇಹಿಗಳೇ ಹೆಚ್ಚಾಗಿದ್ದರೆ, ಮತ್ತು ಇದಕ್ಕೆ ಇಡಿಯ ದಿನ ಏನಾದರೂ ಮೆಲುಕು ಹಾಕುತ್ತಿರುವ ಅಭ್ಯಾಸವಿದ್ದರೆ ಇದು ಮಕ್ಕಳಿಗೂ ಅನ್ವಯವಾಗಿರುತ್ತದೆ. ತಕ್ಷಣ ಇದನ್ನು ಬದಲಿಸಲು ಹಿರಿಯರು ಮನಸ್ಸು ಮಾಡಬೇಕು.


* ಹಿರಿಯರೇ ತಡವಾಗಿ ಎದ್ದು ವ್ಯಾಯಮವಿಲ್ಲದ ಜೀವನ ನಡೆಸುತ್ತಿದ್ದರೆ ಮಕ್ಕಳೂ ಇದನ್ನೇ ಅನುಸರಿಸುತ್ತಾರೆ.
* ಹಿರಿಯರೇ ಸಿಹಿಯನ್ನು ಹೆಚ್ಚಾಗಿ ತಿನ್ನುತ್ತಿದ್ದರೆ ಮಕ್ಕಳು ಇನ್ನೂ ಹೆಚ್ಚು ತಿನ್ನತೊಡಗುತ್ತಾರೆ.
* ನಿಯಮಿತ ನಡಿಗೆ, ವ್ಯಾಯಮದ ಪರಿಸರವಿಲ್ಲದ ಮನೆಯ ಮಕ್ಕಳೂ ಆ ತರಹವೇ ಬೆಳೆಯುತ್ತಾರೆ
* ಸ್ಥೂಲಕಾಯ ಅನಾರೋಗ್ಯಕರ ಎಂಬ ವಿಷಯವನ್ನು ನಯವಾಗಿ ಮನದಟ್ಟು ಮಾಡಿಸಿ ವ್ಯಾಯಮ, ಆಟೋಟ, ಈಜು ಮೊದಲಾದ ಚಟುವಟಿಕೆಗಳಲ್ಲಿ ಮಕ್ಕಳನ್ನು ಸೇರಿಸುವುದು ಉತ್ತಮ ಕ್ರಮವಾಗಿದೆ.
English summary

Childhood Obesity: Get Facts on Prevention and Causes

Recent study opines that obesity may also hamper a kid's thinking, time management, memory, organisational skills and planning. This may be the reason why obese kids were found out to be impulsive during the traffic experiment done on kids. Reas more info regarding about these...
Story first published: Thursday, March 31, 2016, 10:21 [IST]
X
Desktop Bottom Promotion