For Quick Alerts
ALLOW NOTIFICATIONS  
For Daily Alerts

ನಿಜಕ್ಕೂ ಕಾರ್ಟೂನ್ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆಯೇ?

|

ಕಾರ್ಟೂನ್‌ಗಳನ್ನು ನೋಡಿ ಆನಂದಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಅವುಗಳನ್ನು ನೋಡುವುದು ಒಂದು ಅಭ್ಯಾಸವಾಗಿ ಮತ್ತು ಚಟವಾಗಿ ಪರಿಣಮಿಸಿದರೆ ಮಾತ್ರ ಆಗ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ. ಕಾರ್ಟೂನ್ ನೋಡುವುದರಿಂದ ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮಗಳು ಕುರಿತು ನಿಮಗೆ ತಿಳಿದಿದೆಯೇ? ಬನ್ನಿ ಅದರ ಕುರಿತು ಮುಂದೆ ಓದಿ. ಕಾರ್ಟೂನ್‍ಗಳು ಇಂದಿನ ಯುಗದ ಮಕ್ಕಳ ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿವೆ.

ನಮ್ಮಲ್ಲಿ ಬಹಳಷ್ಟು ಜನ ಪೋಷಕರು ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಮಕ್ಕಳಿಗೆ ಕಾರ್ಟೂನ್ ನೋಡಿಕೊಂಡು ಆರಾಮವಾಗಿರಲು ಬಿಟ್ಟು ಬಿಡುತ್ತಾರೆ. ಮಕ್ಕಳು ಓದುವುದು, ಬರೆಯುವುದು, ತಿನ್ನುವುದು ಆಡುವುದು ಎಲ್ಲವೂ ಕಾರ್ಟೂನ್ ನೋಡಿಕೊಂಡೆ ಆಗಿ ಬಿಟ್ಟಿದೆ.

ನೀವು ಸಹ ಅಂತಹ ಪೋಷಕರಲ್ಲಿ ಒಬ್ಬರಾಗಿದ್ದಲ್ಲಿ, ನಿಮ್ಮ ಮಗುವನ್ನು ಆ ದುಷ್ಪರಿಣಾಮದಿಂದ ತಪ್ಪಿಸಲು ಮತ್ತು ನಿಮ್ಮ ಮಗುವಿನ ಬೆಳವಣಿಗೆಗೆ ಸಹಕರಿಸಲು ಇದೊಂದು ಉತ್ತಮ ಸಮಯ ಎಂಬುದನ್ನು ಮರೆಯಬೇಡಿ. ಪ್ರತಿ ದಿನ ಕಾರ್ಟೂನ್ ನೋಡುವುದರಿಂದ ಅದು ಅವರಿಗೆ ಚಟವಾಗಿ ಅಂಟಿಕೊಳ್ಳುತ್ತದೆ. ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುತ್ತದೆ.

Negative Impact Of Cartoons On Kids

ಬಹಳಷ್ಟು ಅಧ್ಯಯನಗಳಿಂದ ದೃಢಪಟ್ಟಿರುವ ಅಂಶವೆಂದರೆ ಕಾರ್ಟೂನ್ ನೋಡುವುದರಿಂದ ಮಕ್ಕಳ ಕಲ್ಪನಾ ಸಾಮರ್ಥ್ಯ ಹಾಳಾಗುತ್ತದೆ. ಅವರಿಗೆ ಇದರಿಂದ ನೈಜ ಜೀವನ ಮತ್ತು ನೈಜ ಜೀವನದ ಅನುಭವಗಳು ತಪ್ಪಿ ಹೋಗುತ್ತವೆಯಂತೆ. ಹೊರಾಂಗಣದ ಆಟಗಳಲ್ಲಿ ದೊರೆಯುವ ಲಾಭಗಳಿಗೆ ಹೋಲಿಸಿದರೆ, ಕಾರ್ಟೂನ್ ಮಕ್ಕಳನ್ನು ಜಡಗೊಳಿಸುತ್ತದೆ ಎಂದು ಹೇಳಬಹುದು. ಬನ್ನಿ ಇದು ಹೇಗೆಲ್ಲ ಮಕ್ಕಳ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ತಿಳಿಯೋಣ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?

ಭಾಷಾಬೆಳವಣಿಗೆ ಕುಂದುತ್ತದೆ
ಕಾರ್ಟೂನ್ ನೋಡುವುದರಿಂದ ಮಕ್ಕಳ ಪದಸಂಪತ್ತು ಬೆಳೆಯುವುದಿಲ್ಲ. ಇದು ನಿಮ್ಮ ಮಗುವಿನ ಭಾಷಾ ಪ್ರೌಢಿಮೆಗೆ ಅಡ್ಡಗಾಲು ಹಾಕುತ್ತದೆ. ಅವರು ಮಾತನಾಡುವುದು ಅವರ ನೆಚ್ಚಿನ ಕಾರ್ಟೂನ್ ಪಾತ್ರದಂತೆಯೇ ಇರುತ್ತದೆ. ಬದಲಿಗೆ ಕಾರ್ಟೂನ್‌ಗಳು ಬಹುತೇಕ ಆಂಗೀಕ ಅಭಿನಯಕ್ಕೆ ಪ್ರಾಧಾನ್ಯತೆ ನೀಡುವುದರಿಂದ ಭಾಷಾ ಬೆಳವಣಿಗೆ ಎಲ್ಲಿಂದ ಸಾಧ್ಯ, ಇದನ್ನು ನೋಡುವ ಮಕ್ಕಳಿಗೆ?

ದೃಷ್ಟಿ ಸಮಸ್ಯೆ
ಭಾರಿ ಬೆಳಕಿನಿಂದ ಕೂದಿದ ಟಿ.ವಿ ಮತ್ತು ಕಂಪ್ಯೂಟರ್ ಪರದೆಗಳನ್ನು ಮಕ್ಕಳು ತುಂಬಾ ಹೊತ್ತು ನೋಡುವುದರಿಂದ ಅವರಿಗೆ ಕಾಲಾನಂತರ ದೃಷ್ಟಿ ಸಮಸ್ಯೆ ಎದುರಾಗಬಹುದು. ಈಗಂತು 24 ಗಂಟೆ ಕಾರ್ಟೂನ್ ಪ್ರದರ್ಶನ ನೀಡುವ ಹಲವಾರು ಚಾನೆಲ್‌ಗಳು, ಜೊತೆಗೆ ಕಂಪ್ಯೂಟರ್ ಮತ್ತು ಮೊಬೈಲ್‌ಗಳು ನಿಮ್ಮ ಮಕ್ಕಳ ದೃಷ್ಟಿ ಸಮಸ್ಯೆಗೆ ಮೂಲ ಕಾರಣವಾಗುತ್ತವೆ.

ಕಡಿಮೆ ದೈಹಿಕ ಚಟುವಟಿಕೆಗಳು
ಕಾರ್ಟೂನ್‍ಗಳನ್ನು ನೋಡುವ ಚಟ ಇರುವವರು ಹೊರಾಂಗಣದಲ್ಲಿ ಆಡಲು ಹೋಗುವುದಿಲ್ಲ. ಅವರ ವ್ಯಾಪ್ತಿಯ ಮನೆಯ ನಾಲ್ಕು ಗೋಡಿಗಳಿಗೆ ಸೀಮಿತವಾಗುತ್ತದೆ. ಹೊರಗೆ ಹೋಗಿ ಆಡದಿದ್ದರೆ, ಅವರು ಹೇಗೆ ಚಟುವಟಿಕೆಯಿಂದ ಕೂಡಿರುತ್ತಾರೆ ಮತ್ತು ಲವಲವಿಕೆಯಿಂದ ವರ್ತಿಸುತ್ತಾರೆ. ಇದು ಕಾರ್ಟೂನ್ ನೋಡುವುದರಿಂದ ಮಕ್ಕಳ ಮೇಲೆ ಉಂಟಾಗುವ ಮತ್ತೊಂದು ಪರಿಣಾಮವಾಗಿರುತ್ತದೆ.

ವರ್ತನೆಗಳ ಸಮಸ್ಯೆಗಳು
ಕಾರ್ಟೂನ್ ನೋಡಿಕೊಂಡು ಬಹಳಷ್ಟು ಕಾಲ ಕಳೆಯುವುದರಿಂದ ಮಕ್ಕಳ ವರ್ತನೆಗಳ ಮೇಲೆ ಸಮಸ್ಯೆಯುಂಟಾಗುತ್ತದೆ. ಇವರು ಇತರರ ಜೊತೆಗೆ ಬೆರೆಯಲು ಹಿಂದೆ-ಮುಂದೆ ನೋಡುತ್ತಾರೆ. ತಮ್ಮ ಸುತ್ತ-ಮುತ್ತ ಏನು ನಡೆಯುತ್ತದೆ ಎಂದು ಅವರು ತಿಳಿದುಕೊಳ್ಳಲು ಹೋಗುವುದಿಲ್ಲ. ಇದರಿಂದ ಅವರಲ್ಲಿ ಪ್ರಮುಖವಾಗಿ ಸಾಮಾಜೀಕರಣ ಸಮಸ್ಯೆ ತಲೆದೋರುತ್ತದೆ. ಇದು ಅವರ ವ್ಯಕ್ತಿತ್ವದಲ್ಲಿ ದೊಡ್ಡ ಲೋಪ ದೋಷವಾಗಿ ಪರಿಣಮಿಸುತ್ತದೆ.

English summary

Negative Impact Of Cartoons On Kids

Enjoying cartoons has its own fun and benefits, but when the interest for cartoons becomes an addiction, the case is different. Do you know how cartoon effects children? Read on to know more.
Story first published: Friday, March 27, 2015, 15:59 [IST]
X
Desktop Bottom Promotion