For Quick Alerts
ALLOW NOTIFICATIONS  
For Daily Alerts

ಸಂಕೋಚ ಸ್ವಭಾವದ ಮಕ್ಕಳ ಪೋಷಣೆಗೆ ಸಲಹೆಗಳು

By poornima Heggade
|

ಇದು ಎಲ್ಲಾ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವುದು ಹಾಗೂ ಮಕ್ಕಳ ಸಾಧನೆಯನ್ನು ಬಯಸುವುದು ಸಹಜ. ಭಯದ ಯಾವುದೇ ಲಕ್ಷಣಗಳೂ ಇಲ್ಲದೆ ಗುಂಪಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ ಮಾಡುವ ಅನೇಕ ಮಕ್ಕಳನ್ನು ನಾವು ನೋಡಿದ್ದೇವೆ. ಆದರೆ, ಜನರನ್ನು ಭೇಟಿ ಮಾಡಲು ನಾಚಿಕೊಳ್ಳುವ, ಇದೇ ಗುಂಪುಗಳಲ್ಲಿ ಮರೆಮಾಚಿಕೊಂಡಿರುವ ಮಕ್ಕಳೂ ಕೂಡ ಸಾಕಷ್ಟಿದ್ದಾರೆ. ಅವರು ಯಾವುದೇ ವಯಸ್ಸಿನ ಜನರೊಂದಿಗೆ ಸಂಪರ್ಕ ಬೆಳೆಸಲು ಸಾಕಷ್ಟು ಕಷ್ಟಪಡುತ್ತಾರೆ. ನಿಮ್ಮ ಮಗುವೂ ಕೂಡ ಸಂಕೋಚದ ಸ್ವಭಾವವನ್ನು ಹೊಂದಿದ್ದರೆ ಅದನ್ನು ಕಂಡುಹಿಡಿದು ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಅತ್ಯಂತ ಮುಖ್ಯ. ಏಕೆಂದರೆ ಆಂರಂಭದಲ್ಲಿಯೇ ಈ ಗುಣವನ್ನು ಕಂಡುಹಿಡಿಯದಿದ್ದಲ್ಲಿ ನಿಮ್ಮ ಮಗುವಿನ ಭಾವನಾತ್ಮಕವಾಗಿ ಆರೋಗ್ಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದು ಅಂತಿಮವಾಗಿ ನಿಮ್ಮ ಮಗುವಿನ ಸಾಮಾಜಿಕ ವರ್ತನೆಯ ಮೇಲೂ ಪರಿಣಾಮ ಬೀರಬಹುದು,

ಸಂಕೋಚ ಸ್ವಭಾವ ಹೊಂದಿರುವುದರಿಂದ ನಿಮ್ಮ ಮಗುವಿನ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಕಡಿಮೆಗೊಳಿಸುತ್ತದೆ, ಸ್ನೇಹಿತರ ಗುಂಪಿನಿಂದ ಅವರನ್ನು ದೂರ ಮಾಡುತ್ತದೆ ಮತ್ತು ನಿಮ್ಮ ಸಂಬಂಧಿಗಳು ನಿಮ್ಮ ಬಂಧಗಳಿಂದ ದೂರವುಳಿಯಬಹುದು! ಸಂಪೂರ್ಣವಾಗಿ ಸಾಮಾಜಿಕ ಒಡನಾಟಗಳಿಂದ ದೂರವಾಗಿ ಅವರಲ್ಲಿ ಖಿನ್ನತೆ ಮತ್ತು ಆತಂಕವನ್ನು ಮೂಡಿಸಬಹುದು. ಇವು ನಾಚಿಕೆ ಸ್ವಭವದ ಮಗುವಿನ ಪೋಷಣೆಯ ಪ್ರಾಮುಖ್ಯತೆಯನ್ನು ಹೆಚ್ಚಿಸುವ ವಿಷಯಗಳು. ಆದರೆ, ನಿಮ್ಮ ಬೆಂಬಲ ಮತ್ತು ಆರೈಕೆ , ನಿಮ್ಮ ಮಗುವಿನ ಈ ಸಂಕೋಚ ಸ್ವಭಾವದ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡಬಹುದು. ನೀವು ನಾಚಿಕೆ ಸ್ವಭಾವದ ಮಕ್ಕಳ ಪೋಷಣೆಗೆ ಪರಿಣಾಮಕಾರಿ ಪೋಷಕರ ಸಲಹೆಗಳನ್ನು ಹುಡುಕುತ್ತಿದ್ದರೆ ನಿಮ್ಮ ಹುಡುಕಾಟ ಇಲ್ಲಿಗೆ ನಿಲ್ಲಿಸಿ! ಇಲ್ಲಿ ನೀವು ನಿಮ್ಮ ನಾಚಿಕೆ ಸ್ವಭಾವದ ಮಗುವಿನ ಪೋಷಣೆಗೆ ಪ್ರಯತ್ನಿಸಲು ಕೆಲವು ಸುಲಭ ಪೋಷಕರ ಸಲಹೆಗಳನ್ನು ನೀಡಲಾಗಿದೆ.

Tips For Nurturing A Shy Child

ಅವರನ್ನು ಗದರಿಸದಿರಿ: ನೀವು ಯಾರಿಗಾದರೂ ನಿಮ್ಮ ಮಗುವನ್ನು ಪರಿಚಯಿಸುವಾಗ ಅವರು ನಿಮ್ಮ ಹಿಂದೆ ಅಡಗಿಕೊಂಡರೆ ಅವರನ್ನು ಗದರಿಸಬೇಡಿ. ಕೇವಲ ಪರಿಸ್ಥಿತಿಯನ್ನು ಕಡೆಗಣಿಸಬೇಡಿ. ನಿಮ್ಮ ಮಕ್ಕಳು ನಾಚಿಕೆ ಸ್ವಭಾವದವರು ಎಂಬುದನ್ನು ನಿಮ್ಮನ್ನು ಭೇಟಿ ಮಾಡಿದವರಿಗೆ ಹೇಳಬೇಡಿ. ನಿಮ್ಮ ಮಗು ಅತಿಥಿಗಳೊಂದಿಗೆ ಬೆರೆಯುವಂತಹ ಕೆಲವು ಸನ್ನಿವೇಶಗಳನ್ನು ಉದ್ದೇಶಪೂರ್ವಕವಾಗಿ ನಿರ್ಮಿಸಿ.

ಸಾಮಾಜಿಕ ಕೌಶಲಗಳನ್ನು ಕಲಿಸಿ: ಅವರಿಗೆ ಇತರ ಮಕ್ಕಳೊಂದಿಗೆ ಆಡವಾಡಲು ಅವಕಾಶ ಮಾಡಿಕೊಡಿ. ನೀವು ಮಗು ಮಾಡಿದ ಧೂಳು ಮತ್ತು ಮಣ್ಣನ್ನು ಸ್ವಚ್ಛಗೊಳಿಸಬೇಕಾಗಬಹುದು ಆದರೆ ನಿಮ್ಮ ನಾಚಿಕೆ ಸ್ವಭಾವದ ಮಗುವಿನ ಪಾಲನೆ ಸ್ನೇಹಿತರನ್ನು ಒಟ್ಟುಗೂಡಿಸುವಿಕೆಯಿಂದ ಮಾತ್ರ ಸಾಧ್ಯವೆಂಬುದನ್ನು ಮರೆಯಬೇಡಿ. ತನ್ನದೇ ವಯಸ್ಸಿನ ಮಕ್ಕಳೊಂದಿಗೆ ಬೆರೆಯುವುದರಿಂದ ಸಾಮಾನ್ಯ ಸಂವಹನ, ಹಂಚಿಕೆ ಮತ್ತು ಸಂಬಂಧಗಳ ಮೂಲಭೂತ ಅಂಶಗಳನ್ನು ಅವರು ಕಲಿಯಬಲ್ಲರು.

ನಾಚಿಕೆ ಸ್ವಭಾವ ಎಂಬ ಹಣೆಪಟ್ಟಿ ಬೇಡ: ನಿಮ್ಮ ಮಗುವಿಗೆ ನಾಚಿಕೆ ಸ್ವಭಾವವನ್ನು ಎತ್ತಿ ಹೇಳುವುದನ್ನು ತಪ್ಪಿಸಬೇಕಾದದ್ದು ನೀವು ಮಾಡಲೇಬೇಕಾದ ಮೊದಲ ಕೆಲಸ. ಇದು ಅವರಿಗೆ ಅವರ ಸ್ವಭಾವದ ಬಗ್ಗೆ ಒತ್ತಿ ಹೇಳಿದಂತಾಗುತ್ತದೆ. ಇತರರ ಮುಂದೆ ಅವಮಾನವಾದರೆ ಅವರು ಹೆಚ್ಚು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು! ನೀವು ಅವರ ಈ ಸ್ವಭಾವವನ್ನೇ ಎತ್ತಿ ಹೇಳಿದರೆ ಸಂಕೋಚ ಬದಲಾವಣೆ ಸಾಧ್ಯವಿಲ್ಲ ಎಂಬ ಭಾವನೆಯನ್ನು ಮೂಡಿಸಬಹುದು.

ಗುಂಪುಗಳೊಂದಿಗೆ ಬೆರೆಯುವುದು: ನಾಚಿಕೆ ಸ್ವಭಾವವನ್ನು ಹೊಂದಿರುವ ಮಕ್ಕಳಿಗೆ ಪ್ರಮುಖ ಪೋಷಕರ ಸಲಹೆಯೆಂದರೆ ಅವರನ್ನು ಗುಂಪು ಸಭೆಗಳಲ್ಲಿ ಭಾಗವಹಿಸುವಂತೆ ಮಾಡಿ. ಮತ್ತೆ ಮತ್ತೆ ಅದೇ ಜನರನ್ನು ಭೇಟಿಯಾಗುತ್ತಿದ್ದರೆ ಅವರ ಸಂಕೋಚ ಕಡಿಮೆಯಾಗಲು ಸಹಾಯವಾಗುತ್ತದೆ. ಈ ಮೂಲಕ ಕ್ರಮೇಣ ಸಾಮಾಜಿಕ ನಡವಳಿಕೆ ಬಗ್ಗೆ ತಮ್ಮ ಪರಿಕಲ್ಪನೆ ಬದಲಾವಣೆ ಮಾಡಿಕೊಳ್ಳಲೂ ನಿಮ್ಮ ಮಗುವಿಗೆ ಸಹಾಯವಾಗುತ್ತದೆ.

ಮನೆಯಲ್ಲಿಯೇ ವೇದಿಕೆ ನಿರ್ಮಿಸಿ: ಕುಟುಂಬದೊಂದಿಗೆ ಸಮಯ ಕಳೆಯುವುದು ನಾಚಿಕೆ ಸ್ವಭಾವದ ಮಗುವಿನ ಪೋಷಣೆಗೆ ಉತ್ತಮ ಸಲಹೆ. ನಿಮ್ಮ ಮಗುವಿಗೆ ಕುಟುಂಬದ ಸದಸ್ಯರೆದುರು ಒಂದು ಕವಿತೆ ಹಾಡಲು ಅಥವಾ ಭಾಷಣ ಮಾಡಲು ಹೇಳಿ. ಇದು ನಿಮ್ಮ ಮಗುವಿಗೆ ಒಂದು ಗುಂಪನ್ನು ಎದುರಿಸಲು ಹೆಚ್ಚಿನ ವಿಶ್ವಾಸ ಮೂಡಿಸಬಲ್ಲ ಅತ್ಯಂತ ಉಪಯುಕ್ತ ಪರಿಣಾಮಕಾರಿ ಪೋಷಕರ ಸಲಹೆಗಳಲ್ಲಿ ಒಂದಾಗಿದೆ.

ಪ್ರೋತ್ಸಾಹಿಸಿ : ಎಲ್ಲಾ ಮಕ್ಕಳು ಇತರರ ಮುಂದೆ ಅವರ ಪೋಷಕರು ಅವರನ್ನು ಪ್ರಶಂಸೆ ಮಾಡುವುದನ್ನು ಇಷ್ಟಪಡುತ್ತಾರೆ. ಆದ್ದರಿಂದ ನಿಮ್ಮ ಮಗು ಗುಂಪು ಸಭೆಗಳಲ್ಲಿ ಮಾಡಿದ ಸಾಧನೆಗಳನ್ನು ಪ್ರೋತ್ಸಾಹಿಸಿ ಮತ್ತು ಅಭಿನಂದಿಸಿ. ಇದರಿಂದ, ಗುಂಪಿನಲ್ಲಿ ತಾವು ಇತರರಿಗಿಂತ ವಿಶೇಷ ಮತ್ತು ಉತ್ತಮವಾದವರು ಎಂಬ ಭಾವನೆ, ಆತ್ಮವಿಶ್ವಾಸ ಅವರಲ್ಲಿ ಮೂಡುತ್ತದೆ.

ಸಂವಹನ : ಕೆಲವು ಸಂದರ್ಭಗಳಲ್ಲಿ, ಅವರ ಸಂಕೋಚ ಸ್ವಭಾವಕ್ಕೆ ಕಾರಣ ಅವರಲ್ಲಿರುವ ಭಯವಾಗಿರಬಹುದು. ಅವರ ಸಂಕೋಚ ಸ್ವಭಾವ ಬಗ್ಗೆ ನಿಮ್ಮ ಮಗುವಿನೊಂದಿಗೆ ಕೆಲವು ಸಮಯ ಮಾತನಾಡಿ. ನೀವು ಸಂಕೋಚದ ಸ್ವಭಾವ ಎಂದು ಪರಿಗಣಿಸುವ ಅವರ ಈ ಸ್ವಭಾವ ಅಪರಿಚಿತರಿಂದ ಉಂಟಾದ ಯಾವುದೇ ಹಿಂದಿನ ಕೆಟ್ಟ ಅನುಭವಗಳು ಅಥವಾ ತೊಂದರೆಗಳು ಅವರನ್ನು ಹೆದರುವಂತೆ ಮಾಡಿ ಉಂಟಾಗಿರಬಹುದು. ಆದ್ದರಿಂದ ಸಾಕಷ್ಟು ಮಾತನಾಡಿ ಅವರಲ್ಲಿರುವ ಭಯವನ್ನು ಹೋಗಲಾಡಿಸಿ.

ಮಕ್ಕಳ ಮನಸ್ಸು ಸಾಕಷ್ಟು ಸೂಕ್ಷ್ಮವಾಗುರುತ್ತದೆ. ಆದ್ದರಿಂದ ಅವರಲ್ಲಿರುವ ಸಂಕೋಚದ ಸ್ವಭಾವವನ್ನು ಖಂಡಿಸದೇ ಸರಿಯಾದ ರೀತಿಯಲ್ಲಿ ಅವರು ಸಾಮಾನ್ಯರಂತೆ ಸಾಮಾನ್ಯರಲ್ಲಿ ಬೆರೆಯುವಂತೆ ಮಾಡಲು ತಾಳ್ಮೆವಹಿಸಿ ಅವರ ಮನಸ್ಸನ್ನು ಅರಿತು ಮುಂದುವರಿಯಿರಿ.

English summary

Tips For Nurturing A Shy Child

It is natural that all parents want the spotlight on their children. There are many children who can express themselves in a crowd with no matter of fear. But, there will be some children hidden in the mass, who are basically shy even to meet people.
Story first published: Tuesday, January 7, 2014, 12:59 [IST]
X
Desktop Bottom Promotion