For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗು ಸುರಕ್ಷಿತವಾಗಿ ಶಾಲೆಗೆ ಹೋಗುತ್ತಿದೆಯೇ?

By Super
|

ಪಾಕಿ ಜೈನ್ ಎಂಬ ಮಹಿಳೆ ಒಂದು ದಿನ ಆಘಾತಕ್ಕೆ ಒಳಗಾದರು. ಕಾರಣ ಆಕೆಯ ಏಳು ವರ್ಷದ ಮಗು ಶಾಲೆಯಿಂದ ಬಂದ ಕೂಡಲೆ, ಅವಾಚ್ಯವಾದ, ಅಶ್ಲೀಲ ಪದಗಳನ್ನು ಬಳಸಲು ಆರಂಭಿಸಿದ್ದನು. " ಯಾರಿಂದ ಈ ಪದಗಳನ್ನು ಕಲಿತೆ ಎಂದು ಆಕೆ ಅವನನ್ನು ಪ್ರಶ್ನಿಸಿದಾಗ, ಆ ಮಗು ಹೇಳಿತು- ಶಾಲೆಯ ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಸಹ ಈ ಪದಗಳನ್ನು ಬಳಸುತ್ತಾರೆ, ಮತ್ತು ತಾನು ಸಹ ಅವರಂತೆ ದೊಡ್ಡವನು ಎಂದು ಕರೆಸಿಕೊಳ್ಳಲು ಈ ಪದಗಳನ್ನು ಬಳಸಲು ಆರಂಭಿಸಿದೆ ಎಂದು ಸಮಜಾಯಿಷಿ ನೀಡಿದನು." ಇಂತಹ ಸನ್ನಿವೇಶ ಯಾರಿಗೆ ತಾನೇ ಎದುರಾಗಿರುವುದಿಲ್ಲ.

ಆಕೆಯೊಬ್ಬಳೆ ಅಷ್ಟೇ ಅಲ್ಲ, ನಮ್ಮಲ್ಲಿ ಬಹುತೇಕ ಜನ ಪೋಷಕರು ಇಂತಹ ಪರಿಸ್ಥಿತಿಗಳನ್ನು ಎದುರಿಸಿರುತ್ತಾರೆ. ಬಹುತೇಕ ಜನ ಪೋಷಕರು ಮತ್ತು ಶಾಲಾ ಮಂಡಳಿಗಳು ಮಕ್ಕಳಿಗೆ ಶಿಸ್ತನ್ನು ನಾಲ್ಕು ಗೋಡೆಗಳ ಮಧ್ಯೆ ಕಲಿಸಲು ಮಾತ್ರ ಪ್ರಯತ್ನ ಪಡುತ್ತಾರೆ. ಈ ನಿಯಮಗಳು ಶಾಲೆಯ ಬಸ್ಸಿನಲ್ಲೆ ಅನ್ವಯವಾಗುವುದಿಲ್ಲ ಎಂದರೆ ಆಲೋಚಿಸಿ. ಇತ್ತೀಚಿನ ದಿನಗಳಲ್ಲಿ ಬಸ್ಸುಗಳಲ್ಲಿ ಮಕ್ಕಳು ರೌಡಿಗಳಂತೆ ವರ್ತಿಸುವುದು ಸಾಮಾನ್ಯವಾಗಿದೆ. ಇಲ್ಲಿ ಮಕ್ಕಳು ಪರಸ್ಪರ ಹೊಡೆದಾಡುವುದು ಉಂಟು.

Is your kid travelling to school safely?

ನಿಮ್ಮ ಮಗು ಯಾವಾಗ ರೌಡಿಯಾಗಿ ಪರಿವರ್ತನೆಗೊಳ್ಳುತ್ತದೆ
ನಿಮ್ಮ ಮಗು ಶಾಲೆಯ ಬಸ್ಸಿನಲ್ಲಿ ಕೆಟ್ಟ ಮಾತುಗಳನ್ನು ಕಲಿತುಕೊಂಡು ಮನೆಗೆ ಬರುತ್ತಿದೆಯೇ? ಹಾಗಾದರೆ ಮೊದಲು ನಿಮ್ಮ ಮಗುವಿಗೆ ಕೆಟ್ಟ ಮಾತುಗಳನ್ನಾಡಿದರೆ ಯಾರಿಗು ಹಿಡಿಸುವುದಿಲ್ಲ ಎಂದು ಹೇಳಿ. ಹಾಗೆಯೇ ಆ ಮಗುವಿಗೆ ತಿಳಿಸಿ ಕೆಟ್ಟ ಮಾತುಗಳನ್ನು ಆಡಿ, ದೊಡ್ಡವರಾಗುವುದು ಬೇಕಾಗಿಲ್ಲ ಎಂದು. ದೊಡ್ಡವರಾಗುವುದು ಹೇಗೆ? ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂದು ನೀತಿ ಹೇಳಿ. ಕೆಟ್ಟದ್ದನ್ನು ಅನುಸರಿಸದಿರುವಂತೆ ತಿಳಿ ಹೇಳಿ.

ಮಗುವಿಗೆ ಕಾಡುವ ತುರಿಕೆಗೆ ಪರಿಣಾಮಕಾರಿ ಚಿಕಿತ್ಸೆ

" ಅದರೂ ಮಕ್ಕಳು ಶಾಲಾ ಬಸ್ಸುಗಳಲ್ಲಿ ಜಗಳವಾಡಿಕೊಂಡು ಮನೆಗೆ ಬಂದರೆ, ಪೋಷಕರು ಮೊದಲು ಬಸ್ಸಿನ ಡ್ರೈವರ್ ಮತ್ತು ಶಾಲೆಯ ಆಡಳಿತ ಮಂಡಳಿಗಳವರ ಮೇಲೆ ಮುಗಿಬೀಳುತ್ತಾರೆ. ನಿಜವಾಗಿ ಇದು ಈ ಸಮಸ್ಯೆಯನ್ನು ಬಗೆಹರಿಸಲು ಇರುವ ಉತ್ತಮ ಮಾರ್ಗವಲ್ಲ. ನಿಮ್ಮ ಮಗುವಿನ ಪರವಾಗಿ ನೀವು ಸಹ ಜಗಳವಾಡಿದರೆ, ಮಗುವಿನ ಜಗಳಕ್ಕೆ ನೈತಿಕ ಬೆಂಬಲ ಒದಗಿಸಿದಂತಾಗುತ್ತದೆ. ಅದರ ಬದಲಿಗೆ ಮಗುವು ಮತ್ತೊಮ್ಮೆ ಅಂತಹ ಪರಿಸ್ಥಿತಿಯಲ್ಲಿ ಸಿಲುಕದಂತೆ ಎಲ್ಲರಿಗು ತಿಳಿಹೇಳಿ. ಆಗ ಮಗುವಿಗೆ ನೈತಿಕತೆಯ ಪರಿಚಯವಾಗುತ್ತದೆ" ಎಂದು ಸಾನಾನಿ ಯವರು ಹೇಳುತ್ತಾರೆ.

ಎರಡೂ ಪಕ್ಷಗಳ ವಾದ ವಿವಾದಗಳನ್ನು ಕೇಳಿ, ಒಂದು ವೇಳೆ ನಿಮ್ಮ ಮಗುವಿನದು ತಪ್ಪಿದ್ದರೆ, ಕೋಪಾವೇಶದಿಂದ ವರ್ತಿಸಬೇಡಿ. ಅದರ ಬದಲಿಗೆ ನಿಮ್ಮ ಮಗುವಿನ ಬಗ್ಗೆ ಕಾಳಜಿ ತೋರಿಸಿ. " ನಿಮ್ಮ ಮಗುವಿಗೆ ತಿಳಿ ಹೇಳಿ ಇತರರನ್ನು ಬೈಯ್ಯುವುದು ಮತ್ತು ಒಡೆಯುವುದು ತಪ್ಪು ಎಂದು. ಇದಕ್ಕೂ ಮೇಲಾಗಿ ಮಕ್ಕಳು ಜಗಳಗಳನ್ನು ಮನೆಯವರ ಗಮನಕ್ಕೆ ತರುವುದಿಲ್ಲ. ಮೊದಲು ಈ ವಿಷಯದ ಬಗ್ಗೆ ನಿಮ್ಮ ಮಗುವಿಗೆ ತಿಳಿಹೇಳಿ. ಇಂತಹ ಸನ್ನಿವೇಶಗಳು ನಡೆದಾಗ ಅದನ್ನು ಬಸ್ಸಿನ ಮೇಲ್ವಿಚಾರಕರ ಮತ್ತು ಶಿಕ್ಷಕರ ಗಮನಕ್ಕೆ ತರಬೇಕೆಂಬುದನ್ನು ಹೇಳಿ ಕೊಡಿ." ಎಂದು ಡಾ. ಸೋನಾರ್‌ರವರು ಅಭಿಪ್ರಾಯಪಡುತ್ತಾರೆ.

ಶಾಲಾ ಮಂಡಳಿಗಳ ಪಾತ್ರ
ಶಾಲಾ ಬಸ್ಸುಗಳಲ್ಲಿ ಸುರಕ್ಷತೆಗಾಗಿ ಶಾಲಾ ಆಡಳಿತ ಮಂಡಳಿಗಳವರು ಪ್ರತ್ಯೇಕವಾದ ಕಾಳಜಿಗಳನ್ನು ತೆಗೆದುಕೊಳ್ಳಬೇಕು. ಕೆಲವೊಂದು ನಗರದ ಶಾಲೆಗಳು ಪ್ರತಿಯೊಂದು ಬಸ್ಸಿನಲ್ಲಿ, ಶಿಸ್ತನ್ನು ಕಾಪಾಡಲು ಬಸ್ ಮಾನಿಟರ್‌ಗಳನ್ನು ನೇಮಿಸಿರುತ್ತಾರೆ. ಇದರ ಜೊತೆಗೆ ಬಸ್ ಸಿಬ್ಬಂದಿಯ ಮೇಲೆ ನಿಗಾವಹಿಸಲು ಸಿಸಿಟಿವಿಗಳನ್ನು ಸಹ ಅಳವಡಿಸಲಾಗುತ್ತಿದೆ. ಇನ್ನೂ ವಿಶೇಷವಾದ ಸಂಗತಿಯೆಂದರೆ ಕಾಂಡಿವಲ್ಲಿಯಲ್ಲಿರುವ ಒಂದು ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಗು ತನ್ನ ಐಡಿ ಕಾರ್ಡ್ ಸ್ವೈಪ್ ಮಾಡಿ ಬಸ್ಸಿಗೆ ಏರಿದ ತಕ್ಷಣ, ಅವರ ಪೋಷಕರಿಗೆ ಮೊಬೈಲ್ ಸಂದೇಶ ರವಾನೆಯಾಗುತ್ತದೆ.

ಬಹುತೇಕ ಶಾಲೆಗಳು ಆರ್‌ಟಿಒ ಮತ್ತು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಮಹಿಳಾ ಅಟೆಂಡರ್‌ಗಳನ್ನು ಸಹ ಬಸ್ಸಿನಲ್ಲಿ ಮಕ್ಕಳ ಜೊತೆಗೆ ಪ್ರಯಾಣಿಸುವ ನಿಯಮವನ್ನು ಜಾರಿಗೆ ತಂದಿವೆ. " ಬಸ್ಸಿನಲ್ಲಿ ತರಬೇತಿ ಹೊಂದಿದ ಸಿಬ್ಬಂದಿ ಇರುವುದು ತುಂಬಾ ಮುಖ್ಯ. ಒಂದು ವೇಳೆ ಬಸ್ಸಿನಲ್ಲಿ ದೊಡ್ಡ ಮತ್ತು ಚಿಕ್ಕ ಮಕ್ಕಳು ಒಟ್ಟಿಗೆ ಪ್ರಯಾಣಿಸುತ್ತಿದ್ದರೆ, ಅಟೆಂಡರ್ ದೊಡ್ಡವರನ್ನು ಹಿಂದೆ ಕುಳ್ಳಿರಿಸಿ, ಚಿಕ್ಕ ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಳ್ಳುವ ಪರಿಪಾಠವನ್ನು ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕು ದೊಡ್ಡ ಮಕ್ಕಳು ಚಿಕ್ಕ ಮಕ್ಕಳೊಂದಿಗೆ ಬಸ್ಸಿನಲ್ಲಿ ಸೇರುವುದನ್ನು ನಿಯಂತ್ರಿಸಬೇಕು" ಎಂದು ಸಾನಾನಿಯವರು ಹೇಳುತ್ತಾರೆ.

ಶಾಲಾ ಆಡಳಿತ ಮಂಡಳಿಗಳವರು ತೆಗೆದುಕೊಳ್ಳಬಹುದಾದ ಕ್ರಮಗಳು
*ಶಾಲಾ ಬಸ್ಸುಗಳಲ್ಲಿ ಪಾಲಿಸಬೇಕಾದ ಸುರಕ್ಷತಾ ನಿಯಮಗಳ ಬಗ್ಗೆ ಸೂಚನೆಗಳನ್ನು ನೀಡಿ.
*ವಿದ್ಯಾರ್ಥಿಗಳನ್ನು ಸರಿಯಾದ ಸಮಯಕ್ಕೆ ಹೊರಗೆ ಕಳುಹಿಸಿ, ಆಗ ಅವರು ಓಡಿ ಹೋಗಿ ಬಸ್ಸು ಹಿಡಿಯುವ ಗೊಂದಲವಿರುವುದಿಲ್ಲ.
*ಬಸ್ಸಿನ ತಾಂತ್ರಿಕ ತೊಂದರೆಗಳ ಬಗ್ಗೆ ಪರಿಶೀಲನೆ ಮಾಡಿ ಮತ್ತು ಎಲ್ಲಾ ಸುರಕ್ಷತಾ ಕ್ರಮಗಳನ್ನು ತಪ್ಪದೆ ಪಾಲಿಸಿ.
*ಬಸ್ಸಿನಲ್ಲಿ ಅಗತ್ಯ ಸಿಬ್ಬಂದಿಯಿರುವಂತೆ ನೋಡಿಕೊಳ್ಳಿ ಮತ್ತು ಶಾಲೆ ಬಸ್ಸಿನಲ್ಲಿ ಮಹಿಳಾ ಅಟೆಂಡರ್ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಿ.
*ಬಸ್ಸಿನಲ್ಲಿ ಮಕ್ಕಳ ವರ್ತನೆಗಳ ಮೇಲೆ ನಿಗಾ ಇರಿಸಲು ಸಿಸಿಟಿವಿಗಳನ್ನು ಅಳವಡಿಸಿ.

ಡೈಪರ್ ರಾಶಸ್ ಹೋಗಲಾಡಿಸಲು 12 ಮನೆಮದ್ದುಗಳು!

ನೆನಪಿಡಬೇಕಾದ ಅಂಶಗಳು
*ಬಸ್ಸುಗಳನ್ನು ಬಾಡಿಗೆಗೆ ತಂದಿದ್ದರೆ, ಆ ಏಜೆನ್ಸಿಯ ಹಿನ್ನಲೆಯನ್ನು ಪರಿಶೀಲನೆ ಮಾಡಿ.
*ನಿಮ್ಮ ಮಕ್ಕಳಿಗೆ ಸುರಕ್ಷತೆಯ ಪಾಠಗಳನ್ನು ಹೇಳಿ ಕೊಡಿ. ಬಸ್ಸಿಗೆ ಹತ್ತುವುದು ಹೇಗೆ ಮತ್ತು ಇಳಿಯುವುದು ಹೇಗೆ ಎಂದು ತಿಳಿಸಿ.
*ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಗಳ ಯಾವುದೇ ದುರ್ವರ್ತನೆಗಳನ್ನು ತಕ್ಷಣ ಗಮನಕ್ಕೆ ತರುವ ವ್ಯವಸ್ಥೆಯನ್ನು ಮಾಡಬೇಕು.
*ನಿಮ್ಮ ಮಕ್ಕಳಿಗೆ ಶಾಲ ಬಸ್ಸಿನಲ್ಲಿ ಸ್ವಚ್ಛತೆಯನ್ನು ಕಾಪಾಡುವ ಕುರಿತು ತಿಳಿಸಿ.

English summary

Is your kid travelling to school safely?

Pakhi Jain was in for a shock when she heard her seven-year old return from school one day and mouth expletives. "When asked who taught such words, he said everyone in his school bus used them and he was following suit because he wants to be like his seniors," says Jain, who didn't know how to deal with the situation at that time.
Story first published: Saturday, September 13, 2014, 13:09 [IST]
X
Desktop Bottom Promotion