For Quick Alerts
ALLOW NOTIFICATIONS  
For Daily Alerts

ವಿಚ್ಛೇದನದಿಂದ ಕಮರದಿರಲಿ ಮಕ್ಕಳ ಬಾಳು

|
ಒಂದಾಗಿ ಬಾಳಬೇಕು ಎಂದು ಕೈಹಿಡಿದ ಜೋಡಿಗಳು ಯಾವುದೊ ಕಾರಣ ಹೇಳಿ ವಿಚ್ಛೇದನ ಪಡೆಯುತ್ತಾರೆ. ಹೀಗೆ ಪಡೆಯುವ ಜೊಡಿಗಳು ನೆಮ್ಮದಿ ಬೇಕು,ಸ್ವತಂತ್ರ ಬೇಕು ಎಂದು ಬೇರೆಯಾದರೂ ಅವರ ಮುಂದಿನ ಬಾಳು ಹಸನಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ಬೇರೆಯಾದರೆ ಅದರಿಂದ ಹೆಚ್ಚು ಕಷ್ಟ ಅನುಭವಿಸುವರು ಏನೂ ಅರಿಯದ ಮಕ್ಕಳು.

ಮಕ್ಕಳು ಮತ್ತು ವಿಚ್ಛೇದನವನ್ನು ಒಂದಾಗಿ ಕಾಣಲು ಸಾಧ್ಯವಾಗದಿದ್ದರೂ ಈ ಅಪ್ಪ-ಅಮ್ಮನ ಜಗಳದಲ್ಲಿ ಮಕ್ಕಳ ಪುಟ್ಟ ಕನಸುಗಳು ಕಮರಿ ಅವರ ಬಾಳಿನ ನೆಮ್ಮದಿ ಚಿಂದಿಯಾಗುವುದಂತೂ ದಿಟ. ಮಕ್ಕಲ್ಲಿ ಅನೇಕ ತಪ್ಪು ಕಲ್ಪನೆಗಳು ಆಗದಂತೆ ಮಾಡಲು ಈ ರೀತಿ ಮಾಡಿ.

1. ಆದಷ್ಟೂ ಹೊಂದಾಣಿಕೆಯಿಂದ ಬಾಳಲು ಪ್ರಯತ್ನಿಸಿ, ವಿಚ್ಛೇದನ ಅನಿವಾರ್ಯ ಆದಾಗ ಮಕ್ಕಳಿಗೆ ಸತ್ಯಾಂಶಗಳನ್ನು ತಿಳಿಸಿ.

2. ವಿಚ್ಛೇದನ ಪಡೆದ ಮೇಲೆ ಮಕ್ಕಳನ್ನು ಕಡೆಗಣಿಸಬೇಡಿ. ಮೊದಲಿನಂತೆಯೆ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು.

3. ಮಕ್ಕಳೊಡನೆ ಆದಷ್ಟೂ ಸಮಯ ಕಳೆಯುವುದರಿಂದ ಅವರಲ್ಲಿ ಅಭದ್ರತೆಯ ಭಾವನೆ ಉಂಟಾಗುವುದಿಲ್ಲ.

4. ಮಕ್ಕಳ ಅಪ್ಪ-ಅಮ್ಮ ವಿಚ್ಛೇದನ ಪಡೆದಿದ್ದರೆ ಅಂತಹ ಮಕ್ಕಳಲ್ಲಿ ಅವರಿಗೆ ನೋವು ಆಗುವಂತೆ ಆ ವಿಷಯಗಳ ಬಗ್ಗೆ ಕೇಳಬೇಡಿ.

5. ಮಕ್ಕಳ ಹುಟ್ಟು ಹಬ್ಬಕ್ಕೆ, ಅಥವಾ ಯಾವುದಾದರೂ ಹಬ್ಬದ ಸಂದರ್ಭದಲ್ಲಿ ಎಲ್ಲಾದರೂ ರೆಸ್ಟೋರೆಂಟ್ ಗಳಿಗೆ ಹೋಗಿ ಮಕ್ಕಳ ಎದುರಿನಲ್ಲಿ ಪರಸ್ಪರ ಸ್ನೇಹಿತರ ರೀತಿ ವರ್ತಿಸಿ ಇದು ಮಕ್ಕಳಿಗೆ ಸಂತೋಷವನ್ನು ನೀಡುತ್ತದೆ.

6. ವಿಚ್ಛೇದನ ನಂತರ ನಿಮ್ಮ ಮತ್ತೊಬ್ಬ ಬಾಳ ಸಂಗಾತಿ ಎದುರಿನಲ್ಲಿ ಮಕ್ಕಳನ್ನು ಬೈಯದಾಗಲಿ , ಹೀಯಾಳಿಸುವುದಾಗಲಿ ಮಾಡಬೇಡಿ, ಅಲ್ಲದೆ ಮಕ್ಕಳೆದುರು ನಿಮ್ಮ ಮಾಜಿ ಸಂಗಾತಿಯನ್ನು ದೂರ ಬೇಡಿ. ನಿಮಗೆ ಅವರು ಮಾಜಿ ಸಂಗಾತಿಯಾಗಿರಬಹುದು ಆದರೆ ನಿಮ್ಮ ಮಕ್ಕಳಿಗೆ ನೀವಿಬ್ಬರೂ ಮಾಜಿ ಅಪ್ಪ- ಅಮ್ಮ ಅಲ್ಲ ನೆನಪಿರಲಿ.

7. ವಿಚ್ಛೇದನ ನಂತರ ನಿಮ್ಮ ಜವಬ್ದಾರಿ ನಿಮ್ಮ ಮಕ್ಕಳೊಡನೆ ಮುಗಿಯುವುದಿಲ್ಲ. ಆ ಮ್ಕಕಳು ನಿಮ್ಮ ಪ್ರೀತಿಯಿಂದ ವಂಚಿತರಾಗದಿರಲಿ.

English summary

Divorce Affect On Children | Children And Divorce | ವಿಚ್ಛೇದನದಿಂದ ಮಕ್ಕಳ ಮೇಲೆ ಬೀರುವ ಪರಿಣಾಮ | ವಿಚ್ಛೇದನ ಮತ್ತು ಮಕ್ಕಳು

Divorce is not easy on any of the partners but sometimes keeping in mind the situation and the distance in the relationship, it seems to be the best decision. Coping with life after divorce becomes very difficult for both but it is worst for children.Take a look.
X
Desktop Bottom Promotion