For Quick Alerts
ALLOW NOTIFICATIONS  
For Daily Alerts

ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಹೇಗೆ? ಇಲ್ಲಿದೆ ಟಿಪ್ಸ್

|

ಮಕ್ಕಳ ಪೋಷಣೆ ಖಂಡಿತವಾಗಿಯೂ ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಮಗುವನ್ನು ರೂಪಿಸಬೇಕು, ಸ್ವಾವಲಂಬಿ ಮಗುವಾಗಿ ಬೆಳೆಸಬೇಕು ಎಂದು ಮಕ್ಕಳನ್ನು ಬೆಳೆಸುವುದರಲ್ಲಿ ಪೋಷಕರ ತ್ಯಾಗ ಅಪಾರವಿರುತ್ತದೆ. ಅಲ್ಲದೇ ಇಂತಹ ಪ್ರಕ್ರಿಯೆಯನ್ನು ಪೋಷಕರು ಇಷ್ಟಪಡುತ್ತಾರೆ ಸಹ.

ನಿತ್ಯ ನಾವು ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆಯುವುದರಿಂದ, ಅವರ ಜತೆ ನಿಗದಿತ ಸಮಯ ಒಡನಾಟ ಹೊಂದುವುದರಿಂದ, ಆಗಾಗ್ಗೆ ಮಕ್ಕಳ ಚಲನವಲನಗಳನ್ನು ಗಮನಿಸುತ್ತಿರುವುದರಿಂದ ತಾವು ಮಕ್ಕಳನ್ನು ಚೆನ್ನಾಗಿ ಬೆಳೆಸುತ್ತಿದ್ದೇವೆ, ಅಗತ್ಯ ಮಾರ್ಗದರ್ಶನ ನೀಡುತ್ತಿದ್ದೇವೆ ಎಂದು ಬಹುತೇಕ ಪೋಷಕರು ಅಂದುಕೊಳ್ಳುತ್ತಾರೆ. ಆದರೆ ಮಗುವಿನಲ್ಲೂ ಇಂತಹ ಭಾವನೆ ಇದೆಯೇ, ನಿಜವಾಗಿಯೂ ಮಕ್ಕಳ ಪೋಷಣೆ ಹೀಗೆ ಮಾಡಬೇಕೆ ಎಂಬುದನ್ನು ಹಲವು ಪೋಷಕರು ಯೋಚಿಸುವುದಿಲ್ಲ.

Why Spending Quality Time With Kids Is More Important Than Counting Hours

ನಿಜವಾಗಿಯೂ ಹೇಳಬೇಕೆಂದರೆ ನೀವು ಮಕ್ಕಳೊಂದಿಗೆ ಎಷ್ಟು ಸಮಯ ಕಳೆದಿದ್ದೀರಿ ಎನ್ನುವುದಕ್ಕಿಂತ, ಎಂಥಾ ಗುಣಮಟ್ಟದ ಸಮಯ ಕಳೆದಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ಮಕ್ಕಳ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ, ಅಲ್ಲದೇ ಅವರನ್ನು ಭಾವನಾತ್ಮಕವಾಗಿಯೂ ಬಲಶಾಲಿಯಾಗಿ ಮಾಡುತ್ತದೆ. ಉತ್ತಮವಾಗಿ ವರ್ತಿಸುವ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ವರ್ತನೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.

ಪೋ‍ಷಕರು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಏಕೆ ಮುಖ್ಯವಾಗುತ್ತದೆ, ಇದು ಮಕ್ಕಳಿಗೆ ಹೇಗೆ ಸಹಾಯವಾಗುತ್ತದೆ ಎಂದು ಕೆಲವು ಸಲಹೆಗಳನ್ನು ಮುಂದೆ ನೀಡಲಾಗಿದೆ.

1. ಮಗು ಹಾಗೂ ನಿಮ್ಮ ನಡುವಿನ ಬಾಂಧವ್ಯ ವೃದ್ಧಿಗೆ ವಾತಾವರಣ ಕಲ್ಪಿಸಿ

1. ಮಗು ಹಾಗೂ ನಿಮ್ಮ ನಡುವಿನ ಬಾಂಧವ್ಯ ವೃದ್ಧಿಗೆ ವಾತಾವರಣ ಕಲ್ಪಿಸಿ

ನಿಮ್ಮ ಮಕ್ಕಳೊಂದಿಗೆ ಇಡೀ ದಿನ ಸಮಯ ಕಳೆದು, ಅವರ ಜತೆಯಲ್ಲೇ ಇದ್ದರೆ ಅಲ್ಲದೇ ಇದು ನಿಮ್ಮ ಹಾಗೂ ಮಗುವಿನ ನಡುವೆ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ನಂಬಿದರೆ ಇದು ನಿಮ್ಮ ತಪ್ಪಾದ ಅಭಿಪ್ರಾಯವಾಗಿರಬಹುದು. ನೀವು ನಿಮ್ಮ ಮಗುವಿನೊಂದಿಗೆ ಉತ್ತಮ ಸಂವಹನ ನಡೆಸದೇ ಇದ್ದರೇ ಉತ್ತಮ ಸಂಪರ್ಕ ಸಾಧಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಮಕ್ಕಳೊಂದಿಗೆ ನೀವು ಗುಣಮಟ್ಟದ ಸಮಯವನ್ನು ಕಳೆಯುವಾಗ ಮಗು ನಿಮ್ಮ ಜತೆ ಪ್ರೀತಿಯಿಂದ ಬೆರೆಯಲು, ಮುಕ್ತವಾಗಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳಲು ಹಾಗೂ ಹೊಸ ಆಲೋಚನೆಗಳನ್ನು ನಿಮ್ಮೊಂದಿಗೆ ಚರ್ಚಿಸಲು ಅನುಕೂಲಕರವಾಗುವಂಥ ವಾತಾವರಣವನ್ನು ಸೃಷ್ಟಿಸಿ. ಇದು ಮಗು ಹಾಗೂ ನಿಮ್ಮ ನಡುವೆ ಅತ್ಯುತ್ತಮ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುತ್ತದೆ.

2. ಮಕ್ಕಳಿಗೆ ಭಾವನಾತ್ಮಕವಾಗಿ ಸುರಕ್ಷಿತವಾಗಿದೆ ಎಂಬ ಭಾವನೆ ಮೂಡಿಸುತ್ತದೆ

2. ಮಕ್ಕಳಿಗೆ ಭಾವನಾತ್ಮಕವಾಗಿ ಸುರಕ್ಷಿತವಾಗಿದೆ ಎಂಬ ಭಾವನೆ ಮೂಡಿಸುತ್ತದೆ

ಪೋಷಕರು ತಮ್ಮ ಸುತ್ತಲೂ ಇದ್ದಾರೆ ಎಂದರೆ ಮಕ್ಕಳಲ್ಲಿ ಒಂದು ಸುರಕ್ಷಿತ ಭಾವನೆ ಮೂಡುತ್ತದೆ. ಏನಾದರೂ ತಪ್ಪು ಸಂಭವಿಸಿದಲ್ಲಿ ಅವರ ಕೈಹಿಡಿಯಲು, ತಪ್ಪು ದಾರಿಯಿಂದ ಸರಿ ದಾರಿಗೆ ತರಲು ಸದಾ ತಮ್ಮ ಪೋಷಕರು ಜತೆಯಲ್ಲೇ ಇದ್ದಾರೆ ಎಂದು ಮಕ್ಕಳು ನಂಬುತ್ತಾರೆ ಹಾಗೂ ಅದನ್ನು ಪ್ರೀತಿಸುತ್ತಾರೆ. ಇಂತಹ ಘಟನೆಗಳು ನಿಮ್ಮ ಹಾಗೂ ಮಕ್ಕಳ ನಡುವೆ ಭಾವನಾತ್ಮಕ ಸಂಬಂಧವನ್ನು ನಿರ್ಮಿಸುತ್ತದೆ. ಆದ್ದರಿಂದ, ನೀವು ಇಲ್ಲದೆ ಇರುವ ವೇಳೆ ಯಾವ ರೀತಿ ನಿಮ್ಮ ಮಕ್ಕಳು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂಬುದನ್ನು ಕಲಿಸಿ, ಇದರಿಂದ ನೀವು ಜತೆ ಸದಾ ಇಲ್ಲದಿದ್ದಾಗ ದೈಹಿಕವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಧೈರ್ಯ ಅವರಲ್ಲಿ ಮೂಡುತ್ತದೆ. ಇದು ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ದೀರ್ಘಾವಧಿಯ ಸಂಬಂಧಕ್ಕೆ ಸಹಾಯವಾಗುತ್ತದೆ.

3. ಗುಣಮಟ್ಟದ ಸಮಯ ಮಕ್ಕಳಿಗೆ ಕಲಿಯಲು ಜತೆಗೇ ಬೆಳೆಯಲು ಸಹಾಯ ಮಾಡುತ್ತದೆ

3. ಗುಣಮಟ್ಟದ ಸಮಯ ಮಕ್ಕಳಿಗೆ ಕಲಿಯಲು ಜತೆಗೇ ಬೆಳೆಯಲು ಸಹಾಯ ಮಾಡುತ್ತದೆ

ನೀವು ನಿಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಾಗ ನೀವು ಕಲಿಯಲು ಮಾತ್ರವಲ್ಲದೆ ಅವರು ಸಮಾಜಮುಖಿಯಾಗಿ ಬೆಳೆಯಲು ಸಹ ಸಹಾಯ ಮಾಡುತ್ತೀರಿ ಎಂಬುದು ನೆನಪಿರಲಿ. ನೀವು ಅಧ್ಯಯನಕ್ಕೆ ದೈನಂದಿನ ದಿನಚರಿಯನ್ನು ನಿಗದಿಪಡಿಸಲು ಸಹಾಯ ಮಾಡುವುದು ಮತ್ತು ಅವರ ಕಾರ್ಯಯೋಜನೆಗಳಲ್ಲಿ ಸಹಾಯ ಮಾಡುವುದು ನಿಮ್ಮ ಮಕ್ಕಳಿಗೆ ತಾಳ್ಮೆಯನ್ನು ಕಲಿಯಲು ಸಹಾಯ ಮಾಡುತ್ತದೆ ಮತ್ತು ಚಿಕ್ಕವಯಸ್ಸಿನಿಂದಲೇ ಅಧ್ಯಯನ ಮತ್ತು ಶಿಕ್ಷಣದತ್ತ ಉತ್ತಮ ಮನಸ್ಸಿನಿಂದ ಗಮನ ಹರಿಸುವ ಅಭ್ಯಾಸವನ್ನು ಬೆಳೆಸುತ್ತದೆ. ಇಂತಹ ಪೋಷಣೆ ನಿಮ್ಮ ಮಗುವಿನ ಮನಸ್ಸಿನಲ್ಲಿ ಸಕಾರಾತ್ಮಕ ಗುಣಗಳನ್ನು ಮೂಡಿಸಲು ಮತ್ತು ಮಕ್ಕಳು ವಿಧೇಯರನ್ನಾಗಿ ಮಾಡಲು ಸಹಾಯ ಮಾಡುತ್ತದೆ.

4. ಮಕ್ಕಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ

4. ಮಕ್ಕಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ

ನಿಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯದ ಹೊರತು ಅವರ ದಿನಚರಿ ಹೇಗಿದೆ, ಅವರ ಮಾನಸಿಕ ಸ್ಥಿತಿ ಹೇಗಿದೆ ಎಂದು ಕೇಳಿದರೆ ಅವರಿಂದ ನಿಜವಾದ ಉತ್ತರ ಎಂದಿಗೂ ನಿಮಗೆ ಸಿಗುವುದಿಲ್ಲ. ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನೀವು ತಿಳಿಯಲು ಸಹ ಎಂದಿಗೂ ಸಾಧ್ಯವಾಗುವುದಿಲ್ಲ. ಆದರೆ, ನಿಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದರಿಂದ, ಅವರು ನಿಮ್ಮ ಮೇಲೆ ನಂಬಿಕೆ ಇಡುತ್ತಾರೆ, ನೀವು ಸಹ ಅವರ ನಂಬಿಕೆಯನ್ನು ಗಳಿಸುವಂತೆ ವರ್ತಿಸಿರುತ್ತೀರಿ. ಏಕೆಂದರೆ ಇಲ್ಲಿಯವರೆಗೂ ನೀವು ನಿಮ್ಮ ಮಕ್ಕಳ ಪರವಾಗಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳದವರಾಗಿರುತ್ತೀರಿ ಮತ್ತು ನಿಮ್ಮನ್ನು ಮಕ್ಕಳು ಸ್ನೇಹಿತರಂತೆ ನೋಡಿಕೊಳ್ಳುತ್ತಾರೆ ಮತ್ತು ಅವರ ಸಮಸ್ಯೆಗಳನ್ನು ಹಂಚಿಕೊಳ್ಳಲು ಯಾವುದೇ ಮುಜುಗರಪಡುವುದಿಲ್ಲ.

5. ಮಕ್ಕಳೂ ನಿಮ್ಮನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ

5. ಮಕ್ಕಳೂ ನಿಮ್ಮನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ

ನೀವು ನಿಮ್ಮ ಮಕ್ಕಳೊಂದಿಗೆ ಎಷ್ಟು ಅತ್ಯುತ್ತಮವಾದ ಗುಣಮಟ್ಟದ ಸಮಯವನ್ನು ಕಳೆಯುತ್ತೀರೋ ಅಷ್ಟೂ ಸಹ ಅವರು ಸ್ವಾವಲಂಬಿಗಳಾಗಲು ಸಹಕಾರ ನೀಡುತ್ತದೆ. ನೀವು ಅವರಿಗೆ ನೀಡುವ ಗುಣಮಟ್ಟದ ಸಮಯದ ಮೌಲ್ಯವನ್ನು ಅವರು ಸಹ ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧರಾಗುತ್ತಾರೆ. ಅವರು ಸ್ವಯಂ-ಅವಲಂಬಿತರಾಗುತ್ತಾರೆ, ತಮ್ಮ ಕೆಲಸಗಳನ್ನು ತಾವಾಗಿಯೇ ಮಾಡಲು ಪ್ರಯತ್ನಿಸುತ್ತಾರೆ, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಅಂತಿಮವಾಗಿ ತಮ್ಮಿಂದ ನಿಮಗೆ ಯಾವುದೇ ಹೊರೆ ಅಥವಾ ತೊಂದರೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ.

ಈ ಎಲ್ಲಾ ಕಾರಣಗಳಿಂದಾಗಿ ಪೋಷಕರು ತಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಬಹಳ ಪ್ರಮುಖವಾಗುತ್ತದೆ. ಮಕ್ಕಳೊಂದಿಗೆ ಆಟಗಳನ್ನು ಆಡುವುದು, ಈಜು, ಚಿತ್ರಕಲೆ, ಪುಸ್ತಕ ಓದುವುದು ಅಥವಾ ಪ್ರವಾಸಗಳಿಗೆ ತೆರಳುವುದು ಹೀಗೆ ಮಕ್ಕಳಿಗೆ ಇಷ್ಟವಾಗುಂಥ ಕ್ರಿಯಾತ್ಮಕತೆಗಳ ಮೂಲಕ ಅವರ ಜೊತೆ ಉತ್ತಮ ಒಡನಾಟ ಹೊಂದಲು ಹಾಗೂ ಮಕ್ಕಳೊಂದಿಗೆ ಬಲವಾದ ಸಂಪರ್ಕವನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.

English summary

Why Spending Quality Time With Kids Is More Important Than Counting Hours

From feeding infants to dropping them to school, helping kids to learn how to ride a bicycle to sending them for further studies; parents do so much for their kids. They make sure to give their best upbringing to their kids. Parenting is never an easy task, and still, parents love it. They give their maximum time to their kids and make sure they are always there to guide their kids.
Story first published: Tuesday, October 22, 2019, 16:53 [IST]
X
Desktop Bottom Promotion