For Quick Alerts
ALLOW NOTIFICATIONS  
For Daily Alerts

ಮೈಂಡ್‌ಫುಲ್‌ ಪೇರೆಂಟಿಂಗ್‌ ಎಂದರೇನು? ಪೋಷಕರಿಗೆ ಇದರಿಂದ ಆಗುವ ಗುಣಗಳೇನು?

|

ಪೋಷಕರಾಗುವುದು ಎಷ್ಟು ಖುಷಿಯ ವಿಷಯವೇ, ಅಷ್ಟೇ ಸವಾಲಿನ ವಿಷಯ ಕೂಡ ಹೌದು. ಅವರು ನಕ್ಕಾಗ, ತೊದಲು ಮಾತುಗಳನ್ನು ಆಡಿದಾಗ ಎಷ್ಟು ಖುಷಿಯಾಗುತ್ತದೋ, ಹಠ ಹಿಡಿದು ಅಳುವಾಗ ಸಾಕು-ಸಾಕಾಗುವುದು. ಕೆಲ ಮಕ್ಕಳಂತೂ ಸಿಕ್ಕಾಪಟ್ಟೆ ಹಠಮಾರಿಗಳಾಗಿರುತ್ತವೆ, ಕಂಡ ವಸ್ತುಗಳಿಗೆ ಹಠ ಮಾಡುವುದು, ಮನೆಯಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಬಿಸಾಡುವುದು ಹೀಗೆ ಅವರನ್ನು ಸುಧಾರಿಸುವಲ್ಲಿ ಸಾಕೋ ಸಾಕಾಗಿರುತ್ತದೆ.

What is Mindful Parenting,

ಕೊನೆಗೆ ಅವರನ್ನು ನಿಯಂತ್ರಿಸಲು ಕೋಪ ಮಾಡುವುದು, ಜೋರು ಮಾಡುವುದು, ಏಟು ಕೊಡುವುದೇ ಸರಿಯಾದ ಮಾರ್ಗವೆಂದು ಭಾವಿಸುತ್ತಾರೆ. ಆದರೆ ಈ ಭಾವನೆ ಒಳ್ಳೆಯ ಪೋಷಕರ ಲಕ್ಷಣವಲ್ಲ. ನೀವೇ ಗಮನಿಸಿರಬಹುದು ಏನೋ ಕೀಟಲೆ ಮಾಡಿದರು ಎಂದು ಎರಡು ಏಟು ಕೊಟ್ಟಿರುತ್ತೀರಿ, ಹಾಗಂತ ಅವರು ಕೀಟಲೆ ಮಾಡುವುದನ್ನು ನಿಲ್ಲಿಸುತ್ತಾರೆಯೇ? ಇಲ್ಲ... ಹೊಡೆಯುವ, ಗದರಿಸುವ ಬದಲು ಅವರನ್ನು ನಯವಾಗಿ ಬಗ್ಗಿಸಬೇಕು, ಅದುವೇ ಮೈಂಡ್‌ಫುಲ್‌ ಪೇರೆಂಟಿಂಗ್.

ಮೈಂಡ್‌ಫುಲ್‌ ಪೇರೆಂಟಿಂಗ್ ಎಂದರೇನು?

ಮೈಂಡ್‌ಫುಲ್‌ ಪೇರೆಂಟಿಂಗ್ ಎಂದರೇನು?

ನಮ್ಮ ಕೋಪ, ಭಾವನೆಗಳನ್ನು ನಿಯಂತ್ರಿಸಿ ಮಕ್ಕಳಿಗೆ ಹೇಗೆ ವರ್ತಿಸಬೇಕು ಎಂದು ಹೇಳಿ ಕೊಡುವುದೇ ಮೈಂಡ್‌ಫುಲ್‌ ಪೇರೆಂಟಿಂಗ್. ನೀವು ನಿಮ್ಮ ಮಕ್ಕಳನ್ನು ತಿದ್ದುವ ಮೊದಲು ನೀವು ಬದಲಾಗಬೇಕು.

ಕೆಲವೊಮ್ಮೆ ಯಾವುದೇ ಕಾರಣಕ್ಕೆ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಿರುತ್ತೀರಿ, ತುಂಬಾ ಸುಸ್ತಾಗಿರುತ್ತೀರಿ, ಮನಸ್ಸು ಸಂಪೂರ್ಣ ಹಾಳಾಗಿರುತ್ತದೆ ಈ ಸಮಯದಲ್ಲಿ ಮಕ್ಕಳ ಕೀಟಲೆ, ಹಠ ಮತ್ತಷ್ಟು ಕೋಪ ತರಿಸುವುದು, ಆದರೆ ಪೋಷಕರೇ ಈ ರೀತಿ ಮಾಡಿದ್ದೇ ಆದರೆ ನಾವೇ ನಮ್ಮ ಮಕ್ಕಳಿಗೆ ತಪ್ಪಾದ ನಡುವಳಿಕೆ ಬೆಳೆಸಲು ಕಾರಣವಾಗುತ್ತೇವೆ ಎಂಬುವುದನ್ನು ಮರೆಯದಿರಿ, ಹೇಗೆ? ಎಂದು ಕೇಳುತ್ತಿದ್ದೀರಾ? ಮುಂದೆ ಓದಿ.

ಏನು ಮಾಡಬೇಕು?

ಏನು ಮಾಡಬೇಕು?

ಮೈಂಡ್‌ಫುಲ್‌ ಪೇರೆಂಟಿಂಗ್ ಎಂದರೆ ನೀವು ತುಂಬಾ ಪರ್ಫೆಕ್ಟ್ ಅಥವಾ ನಿಮ್ಮಿಂದ ಯಾವುದೇ ತಪ್ಪು ಆಗಲ್ಲ ಎಂದಲ್ಲ, ಆದರೆ ಮೈಂಡ್‌ಫುಲ್‌ ಪೇರೆಂಟಿಂಗ್ ಎಂದರೆ ಕೆಲವೊಮ್ಮೆ ಪೋಷಕರಾಗಿ ನೀವು ಸರಿ ಮಾಡಬಹುದು, ಕೆಲ ತಪ್ಪುಗಳೂ ಆಗಬಹುದು, ಆದರೆ ಇದರಲ್ಲಿ ನಿಮಗೆ ವಾಸ್ತವದಲ್ಲಿ ನಿಂತು ಮತ್ತೊಮ್ಮೆ ಆಲೋಚಿಸಲು ಸಾಧ್ಯವಾಗುವುದು.

ಮೈಂಡ್‌ಫುಲ್‌ ಪೇರೆಂಟಿಂಗ್‌ನಲ್ಲಿ ಕೋಪದ ಕೈಗೆ ಬುದ್ಧಿ ಕೊಡುವುದಕ್ಕಿಂತ ನೀವು ಪ್ರಜ್ಞಾಪೂರ್ವವಾಗಿ ಯೋಚಿಸುವಿರಿ. ಅಲ್ಲದೆ ಇದರಲ್ಲಿ ಪಶ್ಚಾತಾಪ, ಅವಮಾನ ಅವುಗಳೆನ್ನೆಲ್ಲಾ ಬಿಟ್ಟು ಆ ಸಂದರ್ಭಕ್ಕೆ ತಕ್ಕಂತೆ ವರ್ತಿಸಲು ನಿಮಗೆ ಸಾಧ್ಯವಾಗುವುದು.

ಮೈಂಡ್‌ಫುಲ್‌ ಪೇರೆಂಟಿಂಗ್ ಎಂದರೆ ನಿಮಗೆ ಏನು ಅನಿಸುತ್ತದೆ ಎಂಬುವುದರತ್ತ ಗಮನ ನೀಡಿ. ಅಂದ್ರೆ ನಿಮಗೆ ಕೋಪ ಬರಲ್ಲ ಅಥವಾ ಅಪ್‌ಸೆಟ್ ಆಗಲ್ಲ ಎಂದಲ್ಲ, ಆದ್ರೆ ಇದರಲ್ಲಿ ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಮೈಂಡ್‌ಫುಲ್ ಪೇರೆಂಟಿಂಗ್ ಪ್ರಯೋಜನಗಳು

ಮೈಂಡ್‌ಫುಲ್ ಪೇರೆಂಟಿಂಗ್ ಪ್ರಯೋಜನಗಳು

* ನಿಮ್ಮ ಭಾವನೆಗಳ ಬಗ್ಗೆ ನಿಮಗೆ ಅರಿವು ಇರುತ್ತದೆ

* ನಿಮ್ಮ ಮಗುವಿನ ಅವಶ್ಯಕತೆ, ಭಾವನೆ, ಆಲೋಚನೆಗಳ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗುವುದು.

* ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ

* ನಿಮ್ಮ ಮಕ್ಕಳನ್ನು ಟೀಕಿಸುವುದು ಕಡಿಮೆಯಾಗುವುದು.

* ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

* ಮಗುವಿನೊಂದಿಗೆ ನಿಮ್ಮ ಬಾಂಧವ್ಯ ಮತ್ತಷ್ಟು ಉತ್ತಮವಾಗುವುದು.

 ಮೈಂಡ್‌ಫುಲ್‌ ಪೇರೆಂಟಿಂಗ್ ಅಭ್ಯಾಸ ಮಾಡುವುದು ಹೇಗೆ?

ಮೈಂಡ್‌ಫುಲ್‌ ಪೇರೆಂಟಿಂಗ್ ಅಭ್ಯಾಸ ಮಾಡುವುದು ಹೇಗೆ?

ಕೆಲವೊಮ್ಮೆ ಮಕ್ಕಳ ನಡುವಳಿಕೆ ನಿಮಗೆ ಕೋಪ, ಹತಾಶೆ ಎಲ್ಲಾ ತರಬಹುದು. ಉದಾಹರಣೆಗೆ ನೀವು ರೆಸ್ಟೋರೆಂಟ್‌ಗೆ ಹೋಗಿರುತ್ತೀರಿ, ಅಲ್ಲಿ ಮಕ್ಕಳು ಆ ಆಹಾರ ಬೇಡ ಎಂದು ಎಸೆಯುತ್ತಾರೆ. ಅಂಥ ಸಂದರ್ಭದಲ್ಲಿ ಕೋಪ ಬರುವುದು ಸಹಜ. ಆದರೆ ಈ ಸಂದರ್ಭದಲ್ಲಿ ನೀವು ಕೋಪದ ಕೈಗೆ ಬುದ್ಧಿ ಕೊಡುವ ಬದಲು ನೀವು ಈ ಸಂದರ್ಭದಲ್ಲಿ ನಿಮ್ಮ ಭಾವನೆಗಳನ್ನು ಗಮನಿಸಬೇಕು.

ಇಂಥ ಸಂದರ್ಭದಲ್ಲಿ ನಿಮ್ಮ ಮಗುವಿನ ಜೊತೆ ತರ್ಕ ಮಾಡುವ ಬದಲು, ಕೋಪ ಪ್ರದರ್ಶಿಸುವ ಬದಲು ಒಂದು ದೀರ್ಘ ಉಸಿರು ತೆಗೆಯಿರಿ, ನಿಮ್ಮ ದೇಹದ ಮೇಲೆ ಗಮನ ಹರಿಸಿ, ನಿಮ್ಮ ಉಸಿರಾಟದಲ್ಲಿ ಆಗುತ್ತಿರುವ ಬದಲಾವಣೆ ಗಮನಿಸಿ. ಆಗ ನಿಮಗೆ ಮತ್ತಷ್ಟು ಪಕ್ವವಾಗಿ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತದೆ.

ಇದು ನಿಮಗೆ ಸಿಂಪಲ್ ಅನಿಸಬಹುದು, ಆದರೆ ಒಮ್ಮೆ ಅಭ್ಯಾಸ ಮಾಡಿ ನೋಡಿ ಸಾಕಷ್ಟು ಬದಲಾವಣೆ ಕಾಣಬಹುದು.

English summary

What is Mindful Parenting? Examples and Benefits in kannada

What is Mindful Parenting? Examples and Benefits, read on
Story first published: Friday, February 12, 2021, 20:48 [IST]
X
Desktop Bottom Promotion