For Quick Alerts
ALLOW NOTIFICATIONS  
For Daily Alerts

ಕೋವಿಡ್19 ಆತಂಕದ ಸಮಯದಲ್ಲಿ ಗರ್ಭಿಣಿಯರು ಪಾಲಿಸಲೇಬೇಕಾದ ಕ್ರಮಗಳು

|

ಜಗತ್ತಿನ ಇತಿಹಾಸದಲ್ಲಿಯೇ ಅರಿಯದಷ್ಟು ಭೀಕರ ಪರಿಸ್ಥಿತಿ ಇಂದು ಕೊರೋನಾ ವೈರಸ್ ಮೂಲಕ ಎದುರಾಗಿದೆ. ಇದು ಹರಡುವ ವೇಗ ಮತ್ತು ರೋಗಿಯನ್ನು ಸೋಂಕಿಗೊಳಗಾಗಿಸುವ ಕ್ಷಮತೆ ಹಾಗೂ ಇದುವರೆಗೂ ಇದಕ್ಕೆ ಔಷಧಿ ಇಲ್ಲದಿರುವ ಕಾರಣ ಜಗತ್ತೇ ಇಂದು ಸ್ತಭ್ದಗೊಂಡಿದೆ. ಆರೋಗ್ಯವಂತರಿಗೇ ಇದರ ಸೋಂಕು ಎದುರಾಗುವ ಸಾಧ್ಯತೆ ಹೆಚ್ಚಿರುವಾಗ ಗರ್ಭವತಿಯರು ಮತ್ತು ಬಾಣಂತಿಯರು ಇನ್ನೂ ಸುಲಭವಾಗಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚೇ ಇರಬಹುದೆಂದು ಎಲ್ಲರೂ ಊಹಿಸುತ್ತಾರೆ.

ಆದರೆ ಆರೋಗ್ಯತಜ್ಞರು ಮತ್ತು ವಿಜ್ಞಾನಿಗಳ ಪ್ರಕಾರ ಪ್ರಸ್ತುತ ಸ್ಥಿತಿ ಮತ್ತು ಸಂಶೋಧನೆಗಳ ಫಲಿತಾಂಶವನ್ನು ಪರಿಗಣಿಸಿದಾಗ ಇತರ ವ್ಯಕ್ತಿಗಳಿಗಿಂತಲೂ ಗರ್ಭವತಿಯರು ಮತ್ತು ಬಾಣಂತಿಯರಿಗೆ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗುವ ಅಥವಾ ಇನ್ನೂ ಸುಲಭವಾಗಿ ಎದುರಾಗುವ ಸಾಧ್ಯತೆ ಇಲ್ಲ. ಅಂದರೆ ಸಾಮಾನ್ಯ ಆರೋಗ್ಯದ ವ್ಯಕ್ತಿಗೆ ಇರುವಷ್ಟೇ ಸೋಂಕಿನ ಸಾಧ್ಯತೆ ಗರ್ಭವತಿಯರು ಮತ್ತು ಬಾಣಂತಿಯರಿಗೂ ಇರುತ್ತದೆ.


ಆದರೆ ಈ ವೈರಸ್ಸು ಹೇಗೆ ಕಾರ್ಯನಿರ್ವಹಿಸುತ್ತದೆ, ಹೇಗೆ ಮಾನವ ದೇಹದ ಮೇಲೆ ಆಕ್ರಮಣ ಮಾಡುತ್ತದೆ ಎಂಬುದರ ಬಗ್ಗೆ ಸಂಶೋಧನೆಗಳು ಭರದಿಂದ ನಡೆದಿದ್ದು ಫಲಿತಾಂಶಗಳು ಹಾಗೂ ಚಿಕಿತ್ಸೆಗಳು ಇನ್ನಷ್ಟೇ ಬರಬೇಕಾಗಿದೆ. ಇದರ ಲಕ್ಷಣಗಳು ಸಾಮಾನ್ಯ ಶೀತ ಫ್ಲೂ ನಂತೆಯೇ ಇದ್ದರೂ ಇದರ ದೇಹದ ಮೇಲೆ ಆಗುವ ಪರಿಣಾಮಗಳು ಮಾತ್ರ ಬೇರೆಯೇ ಆಗಿರುತ್ತದೆ. ಗರ್ಭವತಿಯರು ಮತ್ತು ಬಾಣಂತಿಯರಿಗೆ ಶೀತ ಉಂಟು ಮಾಡುವ ಫ್ಲೂ ವೈರಸ್ಸುಗಳ ಸೋಂಕಿನ ಸಾಧ್ಯತೆ ಅತಿ ಹೆಚ್ಚಿರುತ್ತದೆ.

Coronavirus

ಕೋವಿಡ್ 19 ವೈರಸ್ಸು ಫ್ಲೂ ವೈರಸ್ಸಿಗೂ ಹಲವು ರೀತಿಯಿಂದ ಭಿನ್ನವಾಗಿದೆ. ಫ್ಲೂ ವೈರಸ್ಸಿಗೆ ನಮ್ಮ ರೋಗ ನಿರೋಧಕ ಶಕ್ತಿ ಪ್ರತಿರೋಧ ಉಂಟು ಮಾಡುತ್ತದೆ. ಕೋವಿಡ್ ವೈರಸ್ಸು ಗರ್ಭವತಿ ಅಥವಾ ಬಾಣಂತಿಗೆ ಎದುರಾದರೂ ಇದು ಮಗುವಿಗೆ ಹರಡುವ ಸಾಧ್ಯತೆಯ ಬಗ್ಗೆ ಇದುವರೆಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಇಂದಿನ ಲೇಖನದಲ್ಲಿ ಗರ್ಭವತಿಯರು ಮತ್ತು ಬಾಣಂತಿಯರಿಗೆ ಎದುರಾಗುವ ಹಲವಾರು ಪ್ರಶ್ನೆಗಳನ್ನು ತಜ್ಞ ವೈದ್ಯರು ನೀಡುವ ಉತ್ತರಗಳನ್ನು ನೋಡೋಣ:

1. ಕೋವಿಡ್ -19 ವೈರಸ್ಸು ಗರ್ಭಾವಸ್ಥೆಯಲ್ಲಿ ತೊಂದರೆ ಉಂಟು ಮಾಡಬಹುದೇ?

1. ಕೋವಿಡ್ -19 ವೈರಸ್ಸು ಗರ್ಭಾವಸ್ಥೆಯಲ್ಲಿ ತೊಂದರೆ ಉಂಟು ಮಾಡಬಹುದೇ?

ಉತ್ತರ: ಇದುವರೆಗೆ ದೊರಕಿರುವ ಮಾಹಿತಿಗಳು ಅಷ್ಟು ಖಚಿತವಲ್ಲದಿದ್ದರೂ ಬಹುತೇಕ ಮಟ್ಟಿಗೆ ಹೇಳುವುದಾದರೆ ಫ್ಲೂ ವೈರಸ್ಸಿಗಿಂತ ಭಿನ್ನವಾಗಿರುವ ಕೋವಿಡ್ ವೈರಸ್ ಎದುರಾಗುವ ಸಾಧ್ಯತೆ ಇತರ ವ್ಯಕ್ತಿಗಳಷ್ಟೇ ಗರ್ಭವತಿಯರು ಮತ್ತು ಬಾಣಂತಿಯರಿಗೂ ಇರುತ್ತದೆ. ತೀರಾ ಇತ್ತೀಚಿನ ಮಾಹಿತಿಯ ಪ್ರಕಾರ, ಕೊರೋನಾ ವೈರಸ್ಸಿನಿಂದ ಇದುವರೆಗೆ ಯಾವುದೇ ಗರ್ಭಿಣಿ ಸಾವಿಗೀಡಾದ ಸುದ್ದಿ ಇಲ್ಲ. ಆದ್ದರಿಂದ ಕೊರೋನಾ ವೈರಸ್ ಸೋಂಕು ಗರ್ಭಾವಸ್ಥೆಯಲ್ಲಿ ತೊಂದರೆ ಉಂಟು ಮಾಡುವುದಾಗಲೀ ಗರ್ಭದಲ್ಲಿರುವ ಮಗುವಿಗೆ ಹರಡುವುದಾಗಲೀ ಅಥವಾ ಹುಟ್ಟಿರುವ ಮಗುವಿಗೆ ಹರಡುವುದಾಗಲೀ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಾಗೆಂದ ಮಾತ್ರಕ್ಕೆ ಇವರು ಸುರಕ್ಷಿತರು ಎಂದು ಅರ್ಥವಲ್ಲ. ಇತರ ವ್ಯಕ್ತಿಗಳಂತೆ ಇವರೂ ಸೋಂಕಿಗೆ ಒಳಗಾಗುವ ಸಾಧ್ಯತೆ ಇದ್ದೇ ಇದೆ ಹಾಗೂ ಇದರಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು.

2. ಗರ್ಭವತಿಯರ ಮೇಲೆ ಕೊರೋನಾ ಪ್ರಭಾವ ಹೇಗಿರುತ್ತದೆ?

2. ಗರ್ಭವತಿಯರ ಮೇಲೆ ಕೊರೋನಾ ಪ್ರಭಾವ ಹೇಗಿರುತ್ತದೆ?

ಉತ್ತರ: ಆರೋಗ್ಯ ತಜ್ಞರ ಪ್ರಕಾರ ಹೆಚ್ಚಿನ ಗರ್ಭವತಿಯರು ಲಘು ಅಥವಾ ಮಧ್ಯಮ ಮಟ್ಟದ ಶೀತ ಅಥವಾ ಫ್ಲೂ ಲಕ್ಷಣಗಳನ್ನು ಪ್ರಕಟಿಸುತ್ತಾರೆ. ನ್ಯುಮೋನಿಯಾ ಮೊದಲಾದ ಗಂಭೀರ ಲಕ್ಷಣಗಳನ್ನು ವೃದ್ದರಲ್ಲಿ ಕಾಣಲಾಗಿದೆ. ಉಳಿದಂತೆ ರೋಗ ನಿರೋಧಕ ಶಕ್ತಿ ಉಡುಗಿರುವ ಅಥವಾ ದೀರ್ಘಕಾಲೀನ ಇತರ ಕಾಯಿಲೆ ಇರುವವರಲ್ಲಿ ಲಕ್ಶಣಗಳು ಉಲ್ಬಣಿಸಿವೆ.

3.ಕೋವಿಡ್-19 ಸೋಂಕು ಒಂದು ವೇಳೆ ಗರ್ಭವತಿಗೆ ಎದುರಾದರೆ ಇದು ಗರ್ಭದಲ್ಲಿರುವ ಮಗುವಿಗೆ ಅಥವಾ ನವಜಾತ ಶಿಶುವಿಗೆ ಹರಡಬಹುದೇ?

3.ಕೋವಿಡ್-19 ಸೋಂಕು ಒಂದು ವೇಳೆ ಗರ್ಭವತಿಗೆ ಎದುರಾದರೆ ಇದು ಗರ್ಭದಲ್ಲಿರುವ ಮಗುವಿಗೆ ಅಥವಾ ನವಜಾತ ಶಿಶುವಿಗೆ ಹರಡಬಹುದೇ?

ಉತ್ತರ: ಇದುವರೆಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ, ಕೋವಿಡ್-19 ಗರ್ಭವತಿಯನ್ನಾಗಲೀ ಗರ್ಭದಲ್ಲಿರುವ ಮಗುವಿನ ಮೇಲಾಗಲೀ ಪರಿಣಾಮ ಉಂಟುಮಾಡದು. ಆದರೆ ಗರ್ಭಾವಸ್ಥೆಯಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತದೆ ಹಾಗೂ ಇದರಿಂದಾಗಿ ಕೋವಿಡ್ ಸಹಿತ ಇನ್ನೂ ಹಲವಾರು ಸೋಂಕುಗಳು ಎದುರಾಗುವ ಸಾಧ್ಯತೆ ಇರುತ್ತದೆ.

ಸಾಮಾನ್ಯ ಫ್ಲೂ ಸಹಾ ಹೆಚ್ಚು ಗಂಭೀರವಾಗಬಹುದು. ವಿಶೇಷವಾಗಿ ಗರ್ಭಾವಸ್ಥೆಯ ಮೂರನೆಯ ತ್ರೈಮಾಸಿಕದಲ್ಲಿ ಶ್ವಾಸಕೋಶ ಸಹಿತ ಇತರ ಅಂಗಗಳು ವಾಯುವನ್ನು ಹೀರಿಕೊಳ್ಳುವ ಕ್ಷಮತೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ. ತನ್ಮೂಲಕ ಸೋಂಕು ಎದುರಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಚೀನಾದ ಹುವಾಜಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಇತ್ತೀಚಿನ ವರದಿಯ ಪ್ರಕಾರ, ಕೊರೋನಾ ಸೋಂಕಿಗೆ ಒಳಗಾಗಿದ್ದ ನಾಲ್ವರು ಗರ್ಭವತಿಯರು ಹಾಗೂ ಹೆರಿಗೆಯ ಬಳಿಕ ಮಕ್ಕಳ ಆರೋಗ್ಯದ ಮಾಹಿತಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲಾಯ್ತು. ನಾಲ್ವರೂ ಗರ್ಭವತಿಯರು ಹೆರಿಗೆಗೂ ಮುನ್ನವೇ ಕೊರೋನಾ ಸೋಂಕಿಗೆ ಒಳಗಾಗಿದ್ದುದು ಖಚಿತಗೊಂಡಿದ್ದರೂ ಹುಟ್ಟಿದ ನಾಲ್ಕು ಮಕ್ಕಳಿಗೂ ಈ ಸೋಂಕು ಇಲ್ಲದೇ ಆರೋಗ್ಯವಾಗಿದ್ದವು.

"ಕೇವಲ ಒಂದು ಮಗುವಿನಲ್ಲಿ ಕೊಂಚ ಉಸಿರಾಟದ ತೊಂದರೆಯನ್ನು ಗಮನಿಸಲಾಗಿತ್ತು ಆದರೆ ಸೂಕ್ತ ಚಿಕಿತ್ಸೆಯ ಬಳಿಕ ಕೆಲವೇ ದಿನಗಳಲ್ಲಿ ಮಗು ಚೇತರಿಸಿಕೊಂಡಿತ್ತು. ಇಬ್ಬರು ಮಕ್ಕಳಲ್ಲಿ ಅಲ್ಪ ಮಟ್ಟದ ಚರ್ಮ ಕೆಂಪಗಾಗುವಿಕೆ ಕಾಣಿಸಿಕೊಂಡಿತ್ತು ಆದರೆ ಇವೂ ಹತ್ತು ದಿನಗಳಲ್ಲಿಯೇ ವಿಶೇಷ ಚಿಕಿತ್ಸೆಯ ನೆರವಿಲ್ಲದೇ ಗುಣವಾದವು. ಮೂವರು ಮಕ್ಕಳನ್ನು ವೈರಸ್ ಇರುವಿಕೆಯ ಬಗ್ಗೆ ಪರೀಕ್ಷಿಸಲಾಯಿತು ಹಾಗೂ ಒಂದೂ ಮಗುವಿನಲ್ಲಿ ವೈರಸ್ ಇರಲಿಲ್ಲ" ಎಂದು ವರದಿ ಮಾಡಿದೆ.

ಕೋವಿಡ್-19 ಸೋಂಕು ಇದ್ದರೆ, ಅದು ಮಗುವಿನ ಜನನಕ್ಕೆ ತೊಂದರೆ ಉಂಟು ಮಾಡುತ್ತದೆಯೇ?

ಕೋವಿಡ್-19 ಸೋಂಕು ಇದ್ದರೆ, ಅದು ಮಗುವಿನ ಜನನಕ್ಕೆ ತೊಂದರೆ ಉಂಟು ಮಾಡುತ್ತದೆಯೇ?

ಉತ್ತರ: ಗರ್ಭಾವಸ್ಥೆಯಲ್ಲಿಕೋವಿಡ್-19 ಗೆ ಸೋಕು ಇರುವ ಬಗ್ಗೆ ಖಚಿತ ಮಾಹಿತಿ ತಾಯಂದಿರಲ್ಲಿ ಗರ್ಭಾವಸ್ಥೆಯಲ್ಲಿ ಅಥವಾ ಶಿಶುಗಳ ಹೆರಿಗೆಯಲ್ಲಿ ತೊಂದರೆ ಎದುರಾಗಿರುವ ಪ್ರಕರಣಗಳು ಅಪರೂಪದಲ್ಲಿ ದಾಖಲಿಸಲ್ಪಟ್ಟಿವೆ. ಈ ತಾಯಂದಿರಿಗೆ ಜನಿಸಿದ ಮಕ್ಕಳಿಗೆ ಅಲ್ಪ ಮಟ್ಟಿಗಿನ ಉಸಿರಾಟದ ತೊಂದರೆ ಅಥವಾ ನವಮಾಸ ತುಂಬುವ ಮುನ್ನವೇ ಹೆರಿಗೆಯಾಗಿರುವ ಮಾಹಿತಿ ಇದೆ.

5. ಗರ್ಭವತಿಯರು ಮತ್ತು ಬಾಣಂತಿಯರು ಕೊರೊನಾ ಸೋಂಕು ತಡೆಗಟ್ಟಬಹುದೇ?

5. ಗರ್ಭವತಿಯರು ಮತ್ತು ಬಾಣಂತಿಯರು ಕೊರೊನಾ ಸೋಂಕು ತಡೆಗಟ್ಟಬಹುದೇ?

ಉತ್ತರ: ನೀವು ಸಾರ್ವಜನಿಕ ಸ್ಥಳಗಳಿಂದ ನಿಮ್ಮ ಮನೆ ಅಥವಾ ಕೆಲಸದ ಸ್ಥಳಕ್ಕೆ ಬಂದ ಕೂಡಲೇ ನಿಮ್ಮ ಕೈಗಳನ್ನು ನಿಯಮಿತವಾಗಿ ಮತ್ತು ಪರಿಣಾಮಕಾರಿಯಾಗಿ ತೊಳೆಯುವುದು ಬಹಳ ಮುಖ್ಯ.

6. ಬಾಣಂತಿ ಮಗುವಿಗೆ ಎದೆ ಹಾಲಿನ ಮೂಲಕ ಕೊರೋನಾ ಸೋಂಕು ಹರಡುತ್ತದೆಯೇ?

6. ಬಾಣಂತಿ ಮಗುವಿಗೆ ಎದೆ ಹಾಲಿನ ಮೂಲಕ ಕೊರೋನಾ ಸೋಂಕು ಹರಡುತ್ತದೆಯೇ?

ಉತ್ತರ: ಈ ಬಗ್ಗೆ ಸ್ಪಷ್ಟವಾಗಿ ನೀಡಲಾಗುವ ಮಾಹಿತಿಯ ಕೊರತೆಯಿದೆ, ಆದಾಗ್ಯೂ, ಕೊರೋನವೈರಸ್ ಸೋಂಕಿನ ಹರಡುವಿಕೆಯು ಮುಖ್ಯವಾಗಿ ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನುವಾಗ ಉತ್ಪತ್ತಿಯಾಗುವ ಉಸಿರಾಟದ ಹನಿಗಳ ಮೂಲಕ ಸಂಭವಿಸುತ್ತದೆ ಎಂದು ಭಾವಿಸಲಾಗಿದೆ. ಅಧ್ಯಯನಗಳ ಪ್ರಕಾರ, ಎದೆ ಹಾಲಿನಲ್ಲಿ ವೈರಸ್ ಅಥವಾ ವೈರಾಣು ಪತ್ತೆಯಾಗಿಲ್ಲ. ಆದರೂ, ಕೋವಿಡ್-19 ಸೋಂಕು ಇರುವ ಬಗ್ಗೆ ಖಚಿತಗೊಂಡಿರುವ ತಾಯಂದಿರು ಮಗುವಿಗೆ ಎದೆ ಹಾಲನ್ನು ಊಡಿಸಿದಾಗ ಈ ಮೂಲಕ ವೈರಸ್ ಹರಡಬಹುದೇ ಎಂದು ಸಧ್ಯಕ್ಕೆ ಖಚಿತವಾಗಿ ತಿಳಿದಿಲ್ಲ.

7.ನನಗೆ ಕೊರೋನಾ ಸೋಂಕು ಇರಬಹುದು ಅಎಂಬ ಅನುಮಾನ ಇದ್ದರೆ ನಾನೇನು ಮಾಡಬೇಕು?

7.ನನಗೆ ಕೊರೋನಾ ಸೋಂಕು ಇರಬಹುದು ಅಎಂಬ ಅನುಮಾನ ಇದ್ದರೆ ನಾನೇನು ಮಾಡಬೇಕು?

ಉತ್ತರ: ನೀವು ಗರ್ಭಿಣಿಯಾಗಿದ್ದರೆ ಮತ್ತು ನಿಮ್ಮ ದೇಹದ ತಾಪಮಾನ ಕೊಂಚ ಏರಿದ್ದು ಇತ್ತೀಚಿನ ದಿನಗಳಲ್ಲಿ, ನಿರಂತರ ಕೆಮ್ಮು ಇದ್ದರೆ, ಮೊದಲಿನ 7 ದಿನಗಳ ಕಾಲ ಮನೆಯಲ್ಲಿಯೇ ಇರಲು ಸೂಚಿಸಲಾಗುತ್ತದೆ. ಹೊರಗೆ ಹೋಗುವುದನ್ನು ತಪ್ಪಿಸಿ, ವಿಶೇಷವಾಗಿ ಔಷಧಾಲಯ ಅಥವಾ ಆಸ್ಪತ್ರೆಗೆ ಹೋಗದಿರಿ. ಅಲ್ಲದೆ, ನೀವು ಕೊರೊನಾವೈರಸ್ ಅನ್ನು ಸೂಚಿಸುವ ಲಕ್ಷಣಗಳನ್ನು ಹೊಂದಿರುವಿರಿ ಎಂದು ನಿಮ್ಮ ವೈದ್ಯರಿಗೆ ತಿಳಿಸಿ. ಮುಂದಿನ ಕ್ರಮಗಳನ್ನು ವೈದ್ಯರ ಸಲಹೆಯ ಮೇರೆಗೆ ಪಾಲಿಸಿ.

8. ನನಗೆ ಕೊರೋನಾ ವೈರಸ್ ಸೋಂಕು ಇರುವುದನ್ನು ಹೇಗೆ ಪರೀಕ್ಷಿಸಲಾಗುತ್ತದೆ?

8. ನನಗೆ ಕೊರೋನಾ ವೈರಸ್ ಸೋಂಕು ಇರುವುದನ್ನು ಹೇಗೆ ಪರೀಕ್ಷಿಸಲಾಗುತ್ತದೆ?

ಉತ್ತರ: ಪ್ರಸ್ತುತ, ಕರೋನವೈರಸ್ ಸೋಂಕನ್ನು ಪತ್ತೆಹಚ್ಚುವ ಪ್ರಕ್ರಿಯೆಯು ವೇಗವಾಗಿ ಬದಲಾಗುತ್ತಿದೆ. ಆಸ್ಪತ್ರೆಯ ತುರ್ತು ಪ್ರವೇಶ ಅಗತ್ಯವಿರುವ ತೀವ್ರ ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಮಾತ್ರ ಪರೀಕ್ಷಿಸಲಾಗುತ್ತದೆ.

9.ನನ್ನ ಮಗುವನ್ನೂ ಕರೋನವೈರಸ್‌ಗಾಗಿ ಪರೀಕ್ಷಿಸಲಾಗುತ್ತದೆಯೇ?

9.ನನ್ನ ಮಗುವನ್ನೂ ಕರೋನವೈರಸ್‌ಗಾಗಿ ಪರೀಕ್ಷಿಸಲಾಗುತ್ತದೆಯೇ?

ಉತ್ತರ: ಹೌದು, ನಿಮ್ಮ ಮಗು ಜನಿಸಿದ ಸಮಯದಲ್ಲಿ ನಿಮಗೆ ಕೊರೋನವೈರಸ್ ಸೋಂಕು ಇರುವ ಅನುಮಾನ ಎದುರಾಗಿದ್ದರೆ ಅಥವಾ ದೃಢೀಕರಿಸಿದ್ದರೆ, ನಿಮ್ಮ ಮಗುವನ್ನೂ ಕೊರೋನವೈರಸ್ ಸೋಂಕು ಇರುವಿಕೆಗಾಗ್ ಪರೀಕ್ಷಿಸಲಾಗುತ್ತದೆ.

10. ನನಗೆ ಕೊರೋನವೈರಸ್ ಸೋಂಕು ಇದ್ದರೆ ನನ್ನ ಮಗುವಿನೊಂದಿಗೆ ಇರಲು ನನಗೆ ಸಾಧ್ಯವಾಗುತ್ತದೆಯೇ?

10. ನನಗೆ ಕೊರೋನವೈರಸ್ ಸೋಂಕು ಇದ್ದರೆ ನನ್ನ ಮಗುವಿನೊಂದಿಗೆ ಇರಲು ನನಗೆ ಸಾಧ್ಯವಾಗುತ್ತದೆಯೇ?

ಉತ್ತರ: ಆಸ್ಪತ್ರೆಯ ನಿಯಮಗಳ ಪ್ರಕಾರ ಹಾಗೂ ನಿಮ್ಮ ಆಯ್ಕೆಯ ಆಧಾರದ ಮೇಲೆ ಮತ್ತು ಕೆಲವು ಸಂದರ್ಭಗಳನ್ನು ಅವಲಂಭಿಸಿ ಈ ನಿರ್ಧಾರವನ್ನು ವೈದ್ಯರೇ ಕೈಗೊಳ್ಳುತ್ತಾರೆ. ನಿಮ್ಮ ಮಗು ಆರೋಗ್ಯವಾಗಿದ್ದರೆ ಮತ್ತು ನವಜಾತ ಶಿಶುವಿನ ಘಟಕದಲ್ಲಿ ವಿಶೇಷ ಆರೈಕೆಯ ಅಗತ್ಯವಿಲ್ಲದಿದ್ದರೆ, ನಿಮ್ಮ ಹೆರಿಗೆಯ ನಂತರ ನಿಮ್ಮನ್ನು ಮಗುವಿನ ಒಟ್ಟಿಗೇ ಇರಿಸಲಾಗುತ್ತದೆ.

11.ನನಗೆ ಕೊರೋನವೈರಸ್ ಸೋಂಕು ದೃಢೀಕರಿಸಿದ್ದರೆ ನಾನು ಮಗುವಿಗೆ ಹಾಲೂಡಿಸಬಹುದೇ?

11.ನನಗೆ ಕೊರೋನವೈರಸ್ ಸೋಂಕು ದೃಢೀಕರಿಸಿದ್ದರೆ ನಾನು ಮಗುವಿಗೆ ಹಾಲೂಡಿಸಬಹುದೇ?

ಉತ್ತರ: ಹೌದು. ಈ ಸಮಯದಲ್ಲಿ ವೈರಸ್ ಎದೆಹಾಲಿನ ಮೂಲಕ ಮಗುವಿಗೂ ತಲುಪಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಲುಣಿಸುವ ಮುಖ್ಯ ಅಪಾಯವೆಂದರೆ ನಿಮ್ಮ ಮತ್ತು ನಿಮ್ಮ ಮಗುವಿನ ನಡುವಿನ ನಿಕಟ ಸಂಪರ್ಕ, ಏಕೆಂದರೆ ನಿಮ್ಮ ಸೀನುವಿಕೆ ಅಥವಾ ಸೋರುವ ಮೂಗಿನಿಂದ ವೈರಸ್ ಯುಕ್ತ ದ್ರವದ ಹನಿಗಳನ್ನು ಮಗುವಿಗೂ ಹರಡುವ ಸಾಧ್ಯತೆಗಳಿವೆ ಮತ್ತು ಜನನದ ನಂತರ ನಿಮ್ಮ ಮಗುವಿಗೆ ಸೋಂಕು ತಗಲುವ ಸಾಧ್ಯತೆಗಳಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ನಿಮ್ಮ ಉಸಿರು ಅಥವಾ ಸೀನುವಿಕೆ, ಕೆಮ್ಮು ಮಗುವಿಗೆ ಬಾಧಿಸದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ.

12. ಹಾಲೂಡಿಸುವ ಅನುಮತಿ ಇದ್ದರೆ ನಾನು ಯಾವ ಕ್ರಮ ಮತ್ತು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು?

12. ಹಾಲೂಡಿಸುವ ಅನುಮತಿ ಇದ್ದರೆ ನಾನು ಯಾವ ಕ್ರಮ ಮತ್ತು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು?

ಉತ್ತರ: ನಿಮ್ಮ ಮಗುವನ್ನು, ಸ್ತನದಿಂದ ಹಾಲನ್ನು ಸಂಗ್ರಹಿಸುವ ಉಪಕರಣ ಅಥವಾ ಹಾಲನ್ನು ಊಡಿಸುವ ಬಾಟಲಿಗಳನ್ನು ಸ್ಪರ್ಶಿಸುವ ಮೊದಲು ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಲಭ್ಯವಿದ್ದರೆ, ಸ್ತನ್ಯಪಾನ ಮಾಡುವಾಗ ಫೇಸ್ ಮಾಸ್ಕ್ ಧರಿಸುವುದನ್ನು ಪರಿಗಣಿಸಿ. ಸ್ತನದಿಂದ ಮಗು ಹಾಲು ಕುಡಿಯುತ್ತಿರುವ ಸಮಯದಲ್ಲಿ ನಿಮ್ಮಿಂದ ನಿಮ್ಮ ಮಗುವಿನ ಮೇಲೆ ಕೆಮ್ಮು ಅಥವಾ ಸೀನುವ ಮೂಲಕ ಯಾವುದೇ ದ್ರವ ಸಿಡಿಯದಂತೆ ಎಚ್ಚರಿಕೆ ವಹಿಸಿ. ಪ್ರತಿ ಬಳಕೆಯ ನಂತರ ಉಪಕರಣಗಳನ್ನು ಸ್ವಚ್ಛಗೊಳಿಸುವ ಶಿಫಾರಸುಗಳನ್ನು ಅನುಸರಿಸಿ. ಸಾಧ್ಯವಾದರೆ ನೇರವಾಗಿ ಮಗುವಿಗೆ ಸ್ತನಪಾನ ಮಾಡಿಸುವ ಬದಲು ಆರೋಗ್ಯಕರ ವ್ಯಕ್ತಿಯೊಬ್ಬರು ನಿಮ್ಮ ಎದೆಹಾಲನ್ನು ಉಪಕರಣದಿಂದ ಸಂಗ್ರಹಿಸಿ ಈ ಹಾಲನ್ನು ಬಾಟಲಿಯ ಮೂಲಕ ಮಗುವಿಗೆ ಕುಡಿಸುವ ಕ್ರಮ ಕೈಗೊಳ್ಳಿ.

ಅಂತಿಮವಾಗಿ....

ನೀವು ಗರ್ಭಿಣಿಯಾಗಿದ್ದರೆ, ನೀಮಗೆ ಇತರ ಮಹಿಳೆಯರಿಗಿಂತಲೂ ಸೋಂಕು ಎದುರಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ, ತಜ್ಞರು ಒದಗಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಮತ್ತು ನಿಮ್ಮನ್ನು ಮತ್ತು ನಿಮ್ಮ ಮಗುವನ್ನು ಸಾಂಕ್ರಾಮಿಕ ರೋಗದಿಂದ ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ. ಅದೇ ಸಮಯದಲ್ಲಿ, ನಿರೀಕ್ಷಿತ ತಾಯಂದಿರು ಸೋಂಕು ಪೀಡಿತ ವ್ಯಕ್ತಿಗಳಿಂದ ಆದಷ್ಟೂ ದೂರವಿರಬೇಕು, ನಿಯಮಿತವಾಗಿ ಕೈ ತೊಳೆಯುತ್ತಿರವುದು ಅವಶ್ಯ. ವಿದೇಶ ಪ್ರವಾಸವನ್ನು ಅನಿವಾರ್ಯ ಕಾರಣಗಳಿಲ್ಲದೇ ಮಾಡಲು ಹೋಗದಿರಿ. ಮತ್ತು ಅನುಮಾನಗಳಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಸುರಕ್ಷಿತವಾಗಿರಿ.

English summary

Pregnancy And Coronavirus Covid 19 Guideline For Pregnant

Pregnancy And Coronavirus Covid 19 Guideline For Pregnant, Read on.
X
Desktop Bottom Promotion