For Quick Alerts
ALLOW NOTIFICATIONS  
For Daily Alerts

ಪ್ರತಿಯೊಬ್ಬ ಮಹಿಳೆಯರೂ ತಿಳಿಯಲೇಬೇಕಾದ ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳು

|

ಕ್ಯಾನ್ಸರ್ ಎಂದರೆ ಅದರಿಂದ ಭೀತಿ ಉಂಟಾಗುವುದು. ಅದರಲ್ಲೂ ಮಹಿಳೆಯರು ಕ್ಯಾನ್ಸರ್ ಹೆಸರು ಕೇಳಿದ ತಕ್ಷಣವೇ ಬೆಚ್ಚಿ ಬೀಳುವರು. ಮಹಿಳೆಯರಲ್ಲಿ ಹಲವಾರು ರೀತಿಯ ಕ್ಯಾನ್ಸರ್ ಗಳು ಕಾಣಿಸಿಕೊಳ್ಳುವುದು. ಇದರಲ್ಲಿ ಮುಖ್ಯವಾಗಿ ಗರ್ಭಕಂಠದ ಕ್ಯಾನ್ಸರ್. ಇದು ಮುಂದುವರಿದ ಹಂತಕ್ಕೆ ತಲುಪುವ ತನಕ ಇದರ ಯಾವುದೇ ಚಿಹ್ನೆಗಳು ಅಥವಾ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಮಹಿಳೆಯರಲ್ಲಿ ಕಾಣಿಸಿಕೊಳ್ಳುವಂತಹ ಮಾರಣಾಂತಿಕ ಕಾಯಿಲೆ ಇದು ಎಂದು ಪರಿಗಣಿಸಲಾಗಿದೆ. ಆದರೆ ಕೆಲವೊಂದು ಆರಂಭಿಕ ಚಿಹ್ನೆಗಳ ಬಗ್ಗೆ ತಿಳಿದುಕೊಂಡರೆ ಇದನ್ನು ಪತ್ತೆ ಮಾಡಿಕೊಂಡು ಚಿಕಿತ್ಸೆ ನೀಡಬಹುದು. ದ ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಪ್ರಕಾರ 2017ರಲ್ಲಿ ಸುಮಾರು 13 ಸಾವಿರ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಗಿದೆ ಮತ್ತು 4200ಕ್ಕಿಂತ ಹೆಚ್ಚಿನ ಜನರು ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಮೃತಪಟ್ಟಿದ್ದಾರೆ ಎಂದು ಇದು ಹೇಳಿದೆ. ಇದರ ಪ್ರಮುಖ ವಿಚಾರವೆಂದರೆ ಗರ್ಭಕಂಠದ ಕ್ಯಾನ್ಸರ್ ನ್ನು ತಡೆಯಬಹುದಾದ ಕ್ಯಾನ್ಸರ್ ಆಗಿದೆ....

ಅಸಾಮಾನ್ಯ ಯೋನಿ ರಕ್ತಸ್ರಾವ

ಅಸಾಮಾನ್ಯ ಯೋನಿ ರಕ್ತಸ್ರಾವ

ಗರ್ಭಕಂಠದ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವಂತಹ ಮಹಿಳೆಯರಲ್ಲಿ ಅಸಾಮಾನ್ಯ ರಕ್ತಸ್ರಾವವು ಕಾಣಿಸಿಕೊಳ್ಳುವುದು. ಇದು ಲೈಂಗಿಕ್ರಿಯೆ ವೇಳೆ, ಹಸ್ತಥುನ ಮತ್ತು ಋತುಬಂಧ ಅಥವಾ ಶ್ರೋಣಿಯ ಪರೀಕ್ಷೆ ವೇಳೆ ಕಾಣಿಸಿಕೊಳ್ಳಬಹುದು. ಇದನ್ನು ಯಾವತ್ತಿಗೂ ಕಡೆಗಣಿಸಬಾರದು ಮತ್ತು ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ.

ಮೂತ್ರ ವಿಸರ್ಜನೆ ವೇಳೆ ನೋವು

ಮೂತ್ರ ವಿಸರ್ಜನೆ ವೇಳೆ ನೋವು

ಕೆಲವೊಂದು ಪ್ರಕರಣಗಳಲ್ಲಿ ಮಹಿಳೆಯರಿಗೆ ಮೂತ್ರ ವಿಸರ್ಜನೆ ವೇಳೆ ನೋವಿನ, ಬಿಗಿಯಾದ, ಕುಟುಕುವ ಭಾವನೆಯಾಗುವುದು. ಇದು ಗರ್ಭಕಂಠದ ಕ್ಯಾನ್ಸರ್ ನ ಲಕ್ಷಣಗಳು. ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯರು ತಮ್ಮಲ್ಲಿ ಹಲವಾರು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುವುದು ಎಂದು ದೂರು ನೀಡುವರು. ಮೂತ್ರ ವಿಸರ್ಜನೆ ವೇಳೆ ನೋವಿನ ಬಗ್ಗೆ ಪ್ರತಿಯೊಬ್ಬ ಗರ್ಭಕಂಠದ ಕ್ಯಾನ್ಸರ್ ರೋಗಿಯು ದೂರು ನೀಡುವರು.

ಶ್ರೋಣಿಯ ನೋವು

ಶ್ರೋಣಿಯ ನೋವು

ಮಹಿಳೆಯರು ಯಾವಾಗಲೂ ಕಡೆಗಣಿಸುವಂತಹ ಶ್ರೋಣಿಯ ನೋವು ಕೂಡ ಇದರ ಒಂದು ಭಾಗವಾಗಿದೆ. ಮಹಿಳೆಯರು ಹೆಚ್ಚಾಗಿ ಈ ನೋವನ್ನು ಕಡೆಗಣಿಸುವರು. ಯಾಕೆಂದರೆ ಇದು ಋತುಚಕ್ರದ ನೋವು ಅಥವಾ ಸೆಳೆತ ಎಂದು ಭಾವಿಸುವರು. ಋತುಚಕ್ರದ ವೇಳೆ ನೋವು ಕಾಣಿಸಿಕೊಂಡರೆ ಆಗ ನೀವು ಇದರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಆದರೆ ಬೇರೆ ಸಮಯದಲ್ಲಿ ನೋವು ಕಾಣಿಸಿಕೊಂಡರೆ ಆಗ ಇದನ್ನು ನೀವು ತುಂಬಾ ಗಂಭೀರವಾಗಿ ಪರಿಗಣಿಸಬೇಕು. ಕೆಲವೊಂದು ಸಂದರ್ಭದಲ್ಲಿ ಶ್ರೋಣಿಯ ನೋವು ಗರ್ಭಕಂಠದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಇದನ್ನು ಕಡೆಗಣಿಸಬೇಡಿ. ನೀವು ವೈದ್ಯರನ್ನು ಭೇಟಿ ಮಾಡಿ ಅವರಿಂದ ಸರಿಯಾದ ಮಾಹಿತಿ ಪಡೆದುಕೊಳ್ಳಿ. ನೋವನ್ನು ಕಡೆಗಣಿಸಬೇಡಿ.

ಲೈಂಗಿಕ ಕ್ರಿಯೆ ವೇಳೆ ಸಮಸ್ಯೆ

ಲೈಂಗಿಕ ಕ್ರಿಯೆ ವೇಳೆ ಸಮಸ್ಯೆ

ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿರುವಂತಹ ಮಹಿಳೆಯರಿಗೆ ಲೈಂಗಿಕ ಕ್ರಿಯೆ ವೇಳೆ ತುಂಬಾ ನೋವಾಗುವುದು ಮತ್ತು ಅಹಿತಕರವಾಗಿರುವುದು. ಆದರೆ ಇದನ್ನು ನೀವು ಹಾಗೆ ಅಂದಾಜು ಮಾಡಿಕೊಳ್ಳಬೇಡಿ. ವೈದ್ಯರನ್ನು ಭೇಟಿ ಮಾಡಿ ಗರ್ಭಕಂಠದ ಕ್ಯಾನ್ಸರ್ ಸಮಸ್ಯೆ ಇದೆಯಾ ಎಂದು ತಿಳಿಯಿರಿ.

ದೀರ್ಘ ಸಮಯ ಮತ್ತು ಅತಿಯಾದ ಋತುಚಕ್ರ

ದೀರ್ಘ ಸಮಯ ಮತ್ತು ಅತಿಯಾದ ಋತುಚಕ್ರ

ಋತುಚಕ್ರವು 508 ದಿನಗಳ ತನಕ ಹೋಗುವುದು ಮತ್ತು ಇದು ಅದಕ್ಕಿಂತಲೂ ಹೆಚ್ಚು ಸಮಯ ತನಕ ಹೋಗಬಹುದು. ಇದು ಗರ್ಭಕಂಠದ ಕ್ಯಾನ್ಸರ್ ನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಇದರ ಹೊರತಾಗಿ ಸಾಮಾನ್ಯಕ್ಕಿಂತ ಹೆಚ್ಚಿನ ರಕ್ತಸ್ರಾವವಾಗುತ್ತಲಿದ್ದರೆ, ಗಂಟೆಗೊಂದು ಸ್ಯಾನಿಟರಿ ಪ್ಯಾಡ್ ಬದಲಾಯಿಸಿಕೊಳ್ಳುತ್ತಿದ್ದರೆ ಆಗ ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ವೈದ್ಯರನ್ನು ಭೇಟಿ ಮಾಡಿ, ಅವರಿಗೆ ನಿಮ್ಮ ಸಮಸ್ಯೆ ಬಗ್ಗೆ ಸರಿಯಾಗಿ ತಿಳಿಸಿ.

Most Read: ಗರ್ಭಾವಸ್ಥೆಯಲ್ಲಿ ಬೆಡ್ ರೆಸ್ಟ್ ಏಕೆ ಹೇಳುತ್ತಾರೆ?

ಪದೇ ಪದೇ ಮೂತ್ರ ವಿಸರ್ಜನೆ

ಪದೇ ಪದೇ ಮೂತ್ರ ವಿಸರ್ಜನೆ

ನಿಮಗೆ ಸಾಮಾನ್ಯಕ್ಕಿಂತಲೂ ಪದೇ ಪದೇ ಮೂತ್ರ ವಿಸರ್ಜನೆ ಆಗುತ್ತಲಿದ್ದರೆ ಆಗ ಇದು ಗರ್ಭಕಂಠದ ಕ್ಯಾನ್ಸರ್ ಲಕ್ಷಣವಾಗಿ ಇರಲೂಬಹುದು. ಪದೇ ಪದೇ ಮೂತ್ರ ವಿಸರ್ಜನೆ ಮಾಡುವಂತೆ ನಿಮಗೆ ಒಂದು ವಾರ ಕಾಲ ಆದರೆ ಆಗ ನೀವು ಪರೀಕ್ಷೆ ಮಾಡಿಸಿಕೊಳ್ಳಬೇಕು.

ಅಸಾಮಾನ್ಯ ಯೋನಿ ವಿಸರ್ಜನೆ

ಅಸಾಮಾನ್ಯ ಯೋನಿ ವಿಸರ್ಜನೆ

ಯೋನಿ ವಿಸರ್ಜನೆ ಎನ್ನುವುದು ಸಾಮಾನ್ಯವಾಗಿರುವುದು. ಆದರೆ ವಿಸರ್ಜನೆ ಸಮಯದಲ್ಲಿ ಬದಲಾವಣೆ ಆಗಬಹುದು. ಇದನ್ನು ನೀವು ಗಮನಿಸಬೇಕು. ಇದು ಗರ್ಭಕಂಠದ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳು ಆಗಿರಬಹುದು.

English summary

Signs of Cervical Cancer Every Woman Should Know

Cervical cancer is one of the most common forms of cancer in women. There are no specific signs and symptoms of this cancer until it has reached its advance stage. It is considered to be the most deadly disease in women. But still, it is important to know the early signs of this life-taking disease. The American Cancer Society estimates almost 13,000 new cases of cervical cancer were diagnosed in 2017, and just over 4,200 women died from cervical cancer.
X
Desktop Bottom Promotion