Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಅಂಡೋತ್ಪತ್ತಿಯ ದಿನಗಳ ಬಗ್ಗೆ ಒಂದಿಷ್ಟು ಅಚ್ಚರಿಯ ಸಂಗತಿಗಳು
ಸಂತಾನವನ್ನು ಬಯಸುವ ದಂಪತಿಗಳಿಗೆ ಅಂಡೋತ್ಪತ್ತಿಯ ದಿನಗಳ ಬಗ್ಗೆ ಅರಿವಿರಬೇಕಾದುದು ತುಂಬಾ ಅವಶ್ಯಕ. ಅಷ್ಟೇ ಅಲ್ಲ, ಯಾವ ದಂಪತಿಗಳು ಈ ಕ್ಷಣಕ್ಕೆ ಮಕ್ಕಳು ಬೇಡವೆಂಬ ನಿರ್ಧಾರ ತಳೆದಿರುತ್ತಾರೆಯೋ ಅವರೂ ಈ ದಿನಗಳ ಬಗ್ಗೆ ಅರಿತುಕೊಂಡಿರುವುದು ಅವಶ್ಯಕ. ಗರ್ಭಾವಸ್ಥೆಗಾಗಿ ಪ್ರತಿ ದಂಪತಿಗಳು ಪೂರ್ವನಿಯೋಜನೆಯನ್ನು ಹಾಕಿಕೊಳ್ಳಬೇಕು.
ಒಂದು ವೇಳೆ ಈಗಲೇ ಮಕ್ಕಳು ಬೇಡವೆನ್ನುವುದಾದರೆ ಸುರಕ್ಷಿತವಾದ ಕ್ರಮಗಳನ್ನು ಅನುಸರಿಸುವ ಮೂಲಕ ಅನಪೇಕ್ಷಿತ ಗರ್ಭಧಾರಣೆ, ಬಳಿಕ ಗರ್ಭಾಪಾತಕ್ಕೆ ಮುಂದಾಗುವುದು ಮೊದಲಾದ ತೊಡಕುಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಎರಡೂ ಸಂದರ್ಭಗಳಿಗೆ ಅಂಡೋತ್ಪತ್ತಿಯಾಗುವ ದಿನಗಳ ಬಗ್ಗೆ ಅರಿತುಕೊಂಡರೆ ತುಂಬಾ ಒಳ್ಳೆಯದು. ಬನ್ನಿ, ಈ ಬಗ್ಗೆ ಕೆಲವು ಅಚ್ಚರಿಯ ಮಾಹಿತಿಗಳನ್ನು ನೋಡೋಣ...

ವೀರ್ಣಾಣುಗಳು ಸುಮಾರು ಮೂರರಿಂದ ಐದು ದಿನಗಳವರೆಗೂ ಜೀವಂತವಿರುತ್ತವೆ
ಮಹಿಳೆಯ ದೇಹವನ್ನು ಪ್ರವೇಶಿಸಿದ ಬಳಿಕ ವೀರ್ಣಾಣುಗಳು ಸುಮಾರು ಮೂರರಿಂದ ಐದು ದಿನಗಳವರೆಗೂ ಜೀವಂತವಿರುತ್ತವೆ. ಆದರೆ ಬಿಡುಗಡೆಯಾದ ಅಂಡಾಣು ಕೇವಲ ಆರರಿಂದ ಹನ್ನೆರಡು ಗಂಟೆಗಳ ಕಾಲ ಮಾತ್ರವೇ ಕಾಯುತ್ತದೆ. ಈ ಸಮಯದಲ್ಲಿ ಫಲಿತಗೊಂಡರೆ ಮಾತ್ರ ಗರ್ಭಾಂಕುರವಾಗಲು ಸಾಧ್ಯ.

ಮಹಿಳೆಯ ಮಾಸಿಕ ಚಕ್ರ
ಒಂದು ವೇಳೆ ಮಹಿಳೆಯ ಮಾಸಿಕ ಚಕ್ರ ಮೂವತ್ತು ಅಥವಾ ಮೂವತ್ತೊಂದು ದಿನಗಳ ಅವಧಿಯಲ್ಲಿ ಪುನರಾವರ್ತನೆಯಾಗುತ್ತಿದ್ದರೆ ಅಂಡೋತ್ಪತ್ತಿಯಾಗುವ ದಿನ ಸುಮಾರು ಹನ್ನೊಂದರಿಂದ ಹದಿನಾಲ್ಕರ ದಿನಗಳ ನಡುವೆ ಇರುತ್ತದೆ. ಈ ದಿನಗಳನ್ನು ಖಚಿತಪಡಿಸಿಕೊಂಡು ಈ ದಿನಗಳಲ್ಲಿ ಕೂಡುವ ಮೂಲಕ ಸಫಲ ಗರ್ಭಧಾರಣೆಯಾಗಲು ಸಾಧ್ಯ.

ಗರ್ಭಕಂಠದಿಂದ ಸ್ರವಿಸುವ ದ್ರವ
ಅಂಡೋತ್ಪತ್ತಿಯಾಗಿರುವ ಇನ್ನೊಂದು ಸ್ಪಷ್ಟ ಸೂಚನೆಯೆಂದರೆ ಗರ್ಭಕಂಠದಿಂದ ಸ್ರವಿಸುವ ದ್ರವ. ಈ ದಿನ ಸ್ರವಿಸುವ ದ್ರವ ಹೆಚ್ಚೂ ಕಡಿಮೆ ಮೊಟ್ಟೆಯ ಬಿಳಿಭಾಗದಷ್ಟು ಗಾಢವಾಗಿರುತ್ತದೆ ಹಾಗೂ ಅಂಟು ಅಂಟಾಗಿರುತ್ತದೆ. ಈ ದ್ರವ ವೀರ್ಯಾಣುಗಳನ್ನು ಗರ್ಭನಾಳದತ್ತ ಕೊಂಡೊಯ್ಯಲು ಅಗತ್ಯವಾಗಿದೆ.

ಲಘುವಾಗಿ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ
ಕೆಲವು ಮಹಿಳೆಯರಿಗೆ ಈ ಸಮಯದಲ್ಲಿ ಅತಿ ಲಘುವಾಗಿ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಎಲ್ಲಾ ಮಹಿಳೆಯರಿಗೂ ಹೀಗೇ ಆಗುತ್ತದಾದರೂ ಈ ಬಗ್ಗೆ ಗಮನ ಕೊಡದ ಕಾರಣ ಅನುಭವಕ್ಕೆ ಬಂದಿರಲಾರದು. ಆದರೆ ಮಾಸಿಕ ಋತುಚಕ್ರದ ದಿನಗಳನ್ನು ಲೆಕ್ಕಹಾಕಿದಾಗ ನಡುವಣ ದಿನಗಳಲ್ಲಿ ಈ ಅನುಭವವಾಗುವುದು ಗಮನಕ್ಕೆ ಬರುತ್ತದೆ. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಈ ನೋವು ಇತರ ಸಮಯಕ್ಕಿಂತಲೂ ಹೆಚ್ಚು ಸ್ಪಷ್ಟವಾಗಿರುತ್ತದೆ.

ಈ ದಿನಗಳಲ್ಲಿ ಧ್ವನಿ ಸಹಾ ಕೊಂಚ ಬದಲಾಗಬಹುದು
ಈ ದಿನಗಳಲ್ಲಿ ಮಹಿಳೆ ನೈಸರ್ಗಿಕವಾಗಿ ಅತ್ಯಾಕರ್ಷಕಳಾಗಿ ಕಾಣುತ್ತಾಳೆ. ಆದರೆ ಮಹತ್ತರ ಬದಲಾವಣೆಗಳು ದೇಹದ ಒಳಭಾಗದಲ್ಲಿ ಆಗುವ ಕಾರಣ ಹೊರಗೆ ಸ್ಪಷ್ಟವಾಗಿ ಕಾಣಬರುವುದಿಲ್ಲ. ಈ ದಿನಗಳಲ್ಲಿ ಧ್ವನಿ ಸಹಾ ಕೊಂಚ ಬದಲಾಗಬಹುದು. ಧ್ವನಿಯ ಸ್ತರವೂ ಇತರ ಸಮಯಕ್ಕಿಂತ ಕೊಂಚ ಹೆಚ್ಚೇ ಇರಬಹುದು.

ವಾಸನೆಗ್ರಹಿಸುವ ಶಕ್ತಿ ಅತಿಯಾಗಿ
ಈ ಸಮಯದಲ್ಲಿ ಮೂಗಿನ ವಾಸನೆಗ್ರಹಿಸುವ ಶಕ್ತಿ ಅತಿಯಾಗಿ ಹೆಚ್ಚುತ್ತದೆ. ಈ ಸಮಯದಲ್ಲಿ ಮಹಿಳೆ ಮೆಚ್ಚುವ ಪರಿಮಳವನ್ನು ಹೊಂದಿರುವ ಪುರುಷ ಆಕೆಯ ಆಕರ್ಷಣೆಯನ್ನು ಪಡೆಯುತ್ತಾನೆ.



Click it and Unblock the Notifications