For Quick Alerts
ALLOW NOTIFICATIONS  
For Daily Alerts

ಪುರುಷರೇ, ನಿಮಗೂ ಗುಪ್ತ ಸಮಸ್ಯೆ ಉಂಟೆ? ಈ ಲೇಖನ ಓದಿ...

By Deepu
|

ದಂಪತಿಗಳಾದ ಬಳಿಕ ಸಂತಾನಫಲ ಪಡೆಯಲು ಪತಿ ಪತ್ನಿಯರು ಇಬ್ಬರೂ ಸಮಾನರಾಗಿ ಕಾರಣರಾಗಿರುತ್ತಾರೆ. ಇಂದಿನ ದಿನಗಳಲ್ಲಿ ಸಂತಾನ ಪಡೆಯಲು ವಿಫಲರಾದ ದಂಪತಿಗಳಲ್ಲಿ ಪತಿಯಲ್ಲಿನ ತೊಂದರೆಯೇ ಹೆಚ್ಚಿನ ಪಾಲು ಹೊಂದಿದೆ. ಪುರುಷರಲ್ಲಿ ಫಲವತ್ತತೆ ಕಾಣದಿರಲು ಕೆಲವಾರು ಕಾರಣಗಳಿವೆ. ಇದರಲ್ಲಿ ಮುಖ್ಯವಾಗಿರುವುದು ವೀರ್ಯಾಣುಗಳ ಸಂಖ್ಯೆ.

ಸೃಷ್ಟಿಗೆ ಕೇವಲ ಒಂದೇ ವೀರ್ಯಾಣು ಸಾಕಾದರೂ ಪ್ರತಿ ಸೀಸೀ ಪ್ರಮಾಣದಲ್ಲಿ ಕನಿಷ್ಠ ಹದಿನಾಲ್ಕು ಮಿಲಿಯನ್ ನಷ್ಟು ಇದ್ದರೆ ಮಾತ್ರ ಫಲ ಕಂಡುಬರುವುದು ಆ ದೇವರ ಆಟವಾಗಿದೆ. ಪುರುಷರೇ ಕೇಳಿ ಇಲ್ಲಿ, ಈ ಸಂಗತಿಗಳು ನಿಮಗೂ ತಿಳಿದಿರಲಿ!

ವೀರ್ಯಾಣುಗಳ ಸಂಖ್ಯೆ ಪುರುಷರಲ್ಲಿ ಕಾಲಕಾಲಕ್ಕೆ ಬದಲಾಗುತ್ತಾ ಇರುತ್ತದೆ. ಬದಲಾದ ಜೀವನಶೈಲಿ, ಕೆಟ್ಟ ಅಭ್ಯಾಸಗಳಾದ ಧೂಮಪಾನ, ಮದ್ಯಪಾನ, ತಂಬಾಕು ಮೊದಲಾದವು ಈ ಸಂಖ್ಯೆ ಕಡಿಮೆಯಾಗಲು ನೇರವಾಗಿ ಕಾರಣವಾಗಿವೆ. ಪರೋಕ್ಷವಾಗಿ ಮಾನಸಿಕ ಒತ್ತಡ, ಕಂಪ್ಯೂಟರ್ ವಿಕಿರಣ. ಕಾಲಕಾಲಕ್ಕೆ ಸರಿಯಾದ ನಿದ್ದೆ ಇಲ್ಲದಿರುವುದು, ಆಹಾರದಲ್ಲಿ ಬದಲಾವಣೆ, ಕಾಲಕಾಲಕ್ಕೆ ಆಹಾರ ಸೇವಿಸದೇ ಇರುವುದು ಇತ್ಯಾದಿಗಳೂ ಕಾರಣವಾಗುತ್ತವೆ. ಪುರುಷರು ತಪ್ಪದೇ ಓದಲೇ ಬೇಕಾದ ಲೇಖನವಿದು!

ಒಂದು ವೇಳೆ ದಂಪತಿಗಳ ಪೈಕಿ ಪುರುಷನಲ್ಲೇ ದೋಷವಿದೆ ಎಂದು ಕಂಡುಬಂದರೆ ಚಿಂತಿಸುವ ಅಗತ್ಯವಿಲ್ಲ, ಬದಲಿಗೆ ಕೆಳಗಿನ ವಿಧಾನಗಳಲ್ಲೊಂದನ್ನು ಅನುಸರಿಸಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಸಂತಾನಫಲವನ್ನು ಪಡೆಯಬಹುದು. ಬನ್ನಿ, ಈ ಬಗ್ಗೆ ತಜ್ಞರು ಯಾವ ರೀತಿಯ ಸಲಹೆಯನ್ನು ನೀಡುತ್ತಾರೆ ಎಂಬುದನ್ನು ನೋಡೋಣ...

ಸಲಹೆ #1

ಸಲಹೆ #1

ಒಂದು ವೇಳೆ ಪುರುಷ ಸ್ಥೂಲಕಾಯದವನಾಗಿದ್ದರೆ ಇದನ್ನು ಕಡಿಮೆಗೊಳಿಸುವತ್ತ ಚಿತ್ತ ಹರಿಸಬೇಕು. ಎಕೆಂದರೆ ಸ್ಥೂಲಕಾಯ ವೀರ್ಯಾಣುಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸುತ್ತದೆ. ನಿಯಮಿತವಾದ ವ್ಯಾಯಾಮ ಮತ್ತು ಆಹಾರದ ಪ್ರಮಾಣಕ್ಕೆ ಕಡಿವಾಣ ಇದಕ್ಕೆ ಅಗತ್ಯ.

ಸಲಹೆ #2

ಸಲಹೆ #2

ಹಾಲು ಕರೆಯುವ ವಿಧಾನವನ್ನೇ ಹೋಲುವ Jelqing technique ಉಪಯೋಗಿಸಿ ಪುರುಷಾಂಗದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುವ ಮೂಲಕ ವೀರ್ಯಾಣುಗಳ ಸಂಖ್ಯೆಯನ್ನು ಉತ್ತಮಗೊಳಿಸಬಹುದು. ಈ ವಿಧಾನದಲ್ಲಿ ವಾರಕ್ಕೆ ಎರಡರಿಂದ ಐದು ಬಾರಿ ಐದರಿಂದ ಇಪ್ಪತ್ತು ನಿಮಿಷಗಳವೆರೆಗೆ ಸೂಕ್ತವಾದ ಜಾರುಕ ಬಳಸಿ ಹಾಲು ಕರೆಯುವ ವ್ಯಾಯಾಮ ಮಾಡಿದರೆ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಹೆಚ್ಚುತ್ತದೆ ಹಾಗೂ ಉದ್ರೇಕವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳಲೂ ಸಾಧ್ಯವಾಗುತ್ತದೆ.

ಸಲಹೆ #3

ಸಲಹೆ #3

ಇಂದಿನ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರಲ್ಲಿ ಕಂಡುಬರುತ್ತಿರುವ ವೈಫಲ್ಯಕ್ಕೆ ಆಹಾರಕ್ರಮದಲ್ಲಿ ಬದಲಾವಣೆಯೇ ಕಾರಣವಾಗಿದೆ. ಎಷ್ಟು ಎಂದರೆ ಶೇಖಡಾ ಎಂಭತ್ತರಷ್ಟು. ಇವರೆಲ್ಲರೂ ನೈಸರ್ಗಿಕ ಆಹಾರವನ್ನು ತ್ಯಜಿಸಿ ಸಿದ್ಧ ಆಹಾರಗಳತ್ತ ಒಲವು ತೋರಿರುವುದನ್ನು ಸಂಶೋಧನೆಗಳು ಸ್ಪಷ್ಟಪಡಿಸಿವೆ. ಸಂತಾನ ಬೇಕು ಎಂದಿದ್ದರೆ ನಿಮಗೆ ಇಷ್ಟವಿಲ್ಲದಿದ್ದರೂ ಸರಿ, ಆಹಾರಕ್ರಮವನ್ನು ಬದಲಿಸಿ. ಸಾಕಷ್ಟು ತಾಜಾ ತರಕಾರಿ, ಹಣ್ಣು, ಹಾಲು, ಮೊಸರು ಮೊದಲಾದವನ್ನು ಸೇವಿಸಿ.

ಸಲಹೆ #4

ಸಲಹೆ #4

ಪುರುಷರಲ್ಲಿ ನಪುಂಸಕತೆಗೆ ಪುರುಷಾಂಗ ದೃಢವಿಲ್ಲದಿರುವುದೂ ಒಂದು ಕಾರಣ. ಇದನ್ನು ಸರಿಪಡಿಸಲು ಒಂದು ವ್ಯಾಯಾಮವಿದೆ. spinning method ಎಂದು ಕರೆಯಲ್ಪಡುವ ಈ ವಿಧಾನದಲ್ಲಿ ಮಣಿಯನ್ನು ಮುಷ್ಟಿಯಲ್ಲಿ ಹಿಡಿದು ಮುಂದಕ್ಕೆ ಕೊಂಚವೇ ಎಳೆಯುತ್ತಾ ಬಾಗಿಲಿನ ಹಿಡಿ ತಿರಿಸುವಂತೆ ಕೊಂಚವೇ ತಿರಿಸುವುದು. ಮೊದಲು ಎಡಗಡೆಗೂ, ಬಳಿಕ ಬಲಗಡೆಗೂ ತಿರಿಸುವ ಮೂಲಕ ರಕ್ತಸಂಚಾರ ಕಡಿಮೆ ಇದ್ದ ನಾಳಗಳಲ್ಲಿಯೂ ಹೆಚ್ಚಿನ ರಕ್ತ ಸಂಚಾರವಾಗುವ ಮೂಲಕ ಸ್ನಾಯುಗಳು ಉತ್ತಮಗೊಳ್ಳುತ್ತವೆ ಹಾಗೂ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲೂ ನೆರವಾಗುತ್ತದೆ.

ಸಲಹೆ #5

ಸಲಹೆ #5

ಇನ್ನೊಂದು ವ್ಯಾಯಾಮವೆಂದರೆ ಮಣಿಯನ್ನು ಹಿಡಿದು ಕೊಂಚವೇ ಮುಂದಕ್ಕೆ ಸೆಳೆಯುವುದು. ಇದರಿಂದ ರಕ್ತನಾಗಳಲ್ಲಿ ರಕ್ತಸಂಚಾರ ಹೆಚ್ಚುವ ಮೂಲಕ ಅಂಗದ ಆರೋಗ್ಯವೂ ಹೆಚ್ಚುತ್ತದೆ ಹಾಗೂ ವೀರ್ಯಾಣುಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತದೆ. ಪ್ರತಿಯೊಬ್ಬರೂ ವಹಿಸಬೇಕಾದ ಇನ್ನೊಂದು ವಿಶೇಷ ಎಚ್ಚರಿಕೆ ಎಂದರೆ ವೃಷಣಗಳನ್ನು ಸಾಕಷ್ಟು ತಂಪಾಗಿರಿಸಿವುದು. ದೇಹದ ತಾಪಮಾನಕ್ಕಿಂತಲೂ ಇವು ತಂಪಾಗಿರಬೇಕೆಂದೇ ನಿಸರ್ಗ ಇವನ್ನು ದೇಹದ ಹೊರಗಿರಿಸಿವೆ. ಇದನ್ನು ಅರ್ಥಮಾಡಿಕೊಳ್ಳಿ, ವೃಷಣಗಳನ್ನು ಸಾಕಷ್ಟು ತಂಪಾಗಿರಿಸಿ.

ಸಲಹೆ #6

ಸಲಹೆ #6

ಪುರುಷರ ಸಾಮರ್ಥ್ಯ ಮತ್ತು ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವ ಇನ್ನೊಂದು ವಿಧಾನವೆಂದರೆ ಕೆಗೆಲ್ ವ್ಯಾಯಾಮ ಅಥವಾ kegel exercise. ಇದೇನೂ ವಿಶೇಷವಲ್ಲ. ಮೂತ್ರಕ್ಕೆ ಅವಸರವಾದಾಗ ಮೂತ್ರ ಸಿಗುವವರೆಗೂ ತಡೆದು ಹಿಡಿದಿರಿಸುತ್ತೇವಲ್ಲಾ, ಇದೇ ಶಕ್ತಿಯನ್ನು ತಡೆತಡೆದು ಮಾಡಿದರಾಯ್ತು ಅಷ್ಟೇ. ಅಂದರೆ ಮೂತ್ರ ವಿಸರ್ಜನೆ ಪ್ರಾರಂಭಿಸಿದ ಬಳಿಕ ಧಾರೆಯನ್ನು ನಡುವಿನಲ್ಲಿ ಥಟ್ಟನೇ ನಿಲ್ಲಿಸುವುದು. ನಿಲ್ಲಿಸಿದ ಬಳಿಕ ಐದು ಸೆಕೆಂಡ್ ಹಾಗೇ ಇರಿಸಿ ಮತ್ತೆ ಮುಂದುವರೆಸುವುದು ಮತ್ತೊಮ್ಮೆ ತಡೆಹಿಡಿಯುವುದು. ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಇದನ್ನು ನಿತ್ಯವೂ ಅನುಸರಿಸುವ ಮೂಲಕ ಸಾಮರ್ಥ್ಯವೂ ಹೆಚ್ಚುವುದು, ವೀರ್ಯಾಣುಗಳ ಸಂಖ್ಯೆಯೂ ಹೆಚ್ಚುತ್ತದೆ.

ಸಲಹೆ #7

ಸಲಹೆ #7

ಯಾವುದಕ್ಕೂ ಪುರುಷರು ತಮ್ಮ ವೀರ್ಯಾಣುಗಳನ್ನು ಪ್ರಯೋಗಶಾಲೆಯಲ್ಲಿ ತಪಾಸಿಸಿಕೊಂಡು ಅಂಕಿ ಅಂಶಗಳನ್ನು ಪಡೆದು ವೈದ್ಯರಲ್ಲಿ ಸಮಾಲೋಚಿಸುವುದು ಅಗತ್ಯ. ಇದಕ್ಕೆ ಕಾರಣವನ್ನು ವೈದ್ಯರು ಕಂಡುಕೊಂಡು ನಿಮಗೆ ಸೂಕ್ತವಾದ ವಿಧಾನವನ್ನು ಸಲಹೆ ಮಾಡುತ್ತಾರೆ. ಈ ಸಲಹೆ ಸೂಚನೆ, ಬದಲಾವಣೆ ಹಾಗೂ ಅಗತ್ಯವಿರುವ ಔಷಧಿಗಳನ್ನು ತಪ್ಪದೇ ಅನುಸರಿಸುವ ಮೂಲಕ ಮುಂದಿನ ವರ್ಷ ಮನೆಯಲ್ಲಿ ಮುದ್ದುಕಂದನ ಆಗಮನವಾಗಬಹುದು.

English summary

How Men Can Boost Fertility

A man's fertility plays a very important role in pregnancy. A fertile woman can conceive only when a man is not impotent. Both quality as well as the quantity of the sperm cells matter a lot for reproduction.
X
Desktop Bottom Promotion