Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಪುರುಷರೇ ಕೇಳಿ ಇಲ್ಲಿ, ಈ ಸಂಗತಿಗಳು ನಿಮಗೂ ತಿಳಿದಿರಲಿ!
ಸಂತಾನ ಪ್ರಾಪ್ತಿಯಾಗಬೇಕಾದರೆ ಪುರುಷರಲ್ಲಿ ವೀರ್ಯವು ತುಂಬಾ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪುರುಷರಲ್ಲಿ ವೀರ್ಯವು ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗದೆ ಇದ್ದರೆ ಅದರಿಂದ ಬಂಜೆತನ ಉಂಟಾಗಬಹುದು. ಅದರಲ್ಲೂ ಕೆಲವರಲ್ಲಿ ತೆಳುವಾದ ವೀರ್ಯವು ಅವರಲ್ಲಿ ಭೀತಿಯನ್ನು ಉಂಟು ಮಾಡುತ್ತದೆ ವೀರ್ಯವು ತುಂಬಾ ನೀರಾಗಿದ್ದರೆ ಅದರಲ್ಲಿ ಏನಾದರೂ ಸಮಸ್ಯೆ ಇದೆ ಎಂದು ಕೆಲವು ಪುರುಷರು ಭಾವಿಸುತ್ತಾರೆ. ಪುರುಷರ ಫಲವತ್ತತೆ ಹೆಚ್ಚಿಸುವ ವಿಟಮಿನ್‌ಗಳು
ವೀರ್ಯವು ದಪ್ಪವಾಗಿರಲು ಅಥವಾ ತೆಳುವಾಗಿರಲು ಹಲವಾರು ಕಾರಣಗಳು ಇದೆ. ವೀರ್ಯಕ್ಕಿಂತ ಮೊದಲು ಬರುವಂತಹ ಅಂಟಿಕೊಳ್ಳುವಂತಹ ದ್ರವವು ವೀರ್ಯ ಎಂದು ಹೆಚ್ಚಿನ ಪುರುಷರು ಭಾವಿಸಿದ್ದಾರೆ. ಆದರೆ ಇದು ವೀರ್ಯವಲ್ಲ. ಇದು ಕೇವಲ ಲೂಬ್ರಿಕೆಂಟ್ ನಂತೆ ಕೆಲಸ ಮಾಡುತ್ತದೆ. ವೀರ್ಯಾಣುಗಳ ಸಂಖ್ಯೆ ವೃದ್ಧಿಸುವ ವಿಧಾನಗಳು
ಕೆಲವು ಸಂದರ್ಭಗಳನ್ನು ಹೊರತುಪಡಿಸಿದರೆ ನೀರಿನಂತಿರುವ ವೀರ್ಯವು ಬಂಜೆತನದ ಲಕ್ಷಣವಲ್ಲ. ಇದಕ್ಕೆ ನಿಖರ ಕಾರಣ ತಿಳಿದುಕೊಳ್ಳಲು ವೈದ್ಯರನ್ನು ಭೇಟಿಯಾಗಿ ಅವರಿಂದ ಸರಿಯಾದ ಮಾಹಿತಿ ಪಡೆದುಕೊಳ್ಳಿ. ಇದರ ಹಿಂದಿರುವ ಸತ್ಯವನ್ನು ತಿಳಿದುಕೊಳ್ಳುವ.....

ವಾಸ್ತವ #1
ವೀರ್ಯದ ಸಂಖ್ಯೆ ಕಡಿಮೆ ಇರುವಂತಹ ಪುರುಷರಲ್ಲಿ ನೀರಿನಂತಹ ವೀರ್ಯವು ಸಾಮಾನ್ಯವಾಗಿರುತ್ತದೆ. ಆದರೆ ನೀರಿನಂತಹ ವೀರ್ಯವು ಯಾವಾಗಲೂ ಬಂಜೆತನವನ್ನು ಉಂಟುಮಾಡುತ್ತದೆ ಎಂದಲ್ಲ.

ವಾಸ್ತವ #2
ಆಹಾರ ಕ್ರಮವು ವೀರ್ಯವು ದಪ್ಪಗಿರಲು ಕಾರಣವಾಗಿರುತ್ತದೆ. ನಿಮ್ಮ ಆಹಾರ ಕ್ರಮದಲ್ಲಿ ಪ್ರೋಟೀನ್ ಪ್ರಮಾಣ ಕಡಿಮೆಯಾಗಿದ್ದರೆ ನೀರಿನಂತಹ ವೀರ್ಯವು ಬರುವುದು. ಪ್ರೋಟೀನ್ ವೀರ್ಯವನ್ನು ದಪ್ಪಗಾಗಿಸುತ್ತದೆ.

ವಾಸ್ತವ #3
ಮಧುಮೇಹ, ವೃಷಣದಲ್ಲಿ ಕಾಣಿಸುವಂತಹ ಸೋಂಕು ಮತ್ತು ಕೆಲವೊಂದು ಮಾತ್ರೆಗಳು ವೀರ್ಯದ ಸಂಖ್ಯೆ ಕುಂಠಿತವಾಗಲು ಕಾರಣವಾಗಬಹುದು. ಪುರುಷರೇ, ಮದುವೆಯ ನಂತರ ಕಾಫಿಯ ಚಟದಿಂದ ದೂರವಿರಿ!

ವಾಸ್ತವ #4
ಕೆಲವೊಂದು ಸಂದರ್ಭದಲ್ಲಿ ವೀರ್ಯನಾಳಗಳಲ್ಲಿ ಉಂಟಾಗಿರುವ ತಡೆಯಿಂದ ವೀರ್ಯದ ಸಂಖ್ಯೆಯು ಕಡಿಮೆಯಾಗಲು ಕಾರಣವಿರಬಹುದು.

ವಾಸ್ತವ #5
ವೀರ್ಯದ ದಪ್ಪಗಿಂತ ಅದರ ವಾಸನೆಯು ಎಚ್ಚರಿಕೆಯ ಕರೆಗಂಟೆಯಾಗಿದೆ. ವೀರ್ಯವು ಕೆಟ್ಟ ವಾಸನೆ ಉಂಟು ಮಾಡುತ್ತಾ ಇದ್ದರೆ ಅದು ಸೋಂಕಿನ ಪರಿಣಾಮವೆಂದು ತಿಳಿದುಕೊಳ್ಳಬಹುದು.

ವಾಸ್ತವ #6
ವೀರ್ಯವು ನೀರಿನಂತೆ ಆಗಲು ಮತ್ತೊಂದು ಪ್ರಮುಖ ಕಾರಣವೆಂದರೆ ಆಗಾಗ ವೀರ್ಯವು ಹೊರಬರುವುದು. ಅತಿಯಾಗಿ ವೀರ್ಯವು ಹೊರಬಂದರೆ ಆಗ ಅದು ದಪ್ಪಗಾಗಿ ಇರುವುದಿಲ್ಲ. ದೇಹವು ವೀರ್ಯವನ್ನು ತಯಾರಿಸಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.



Click it and Unblock the Notifications