For Quick Alerts
ALLOW NOTIFICATIONS  
For Daily Alerts

ಮಗುವಿನ ಹೆದರಿಕೆಯನ್ನು ದೂರ ಮಾಡುವುದು ಹೇಗೆ?

By Super
|

ಕೆಲವು ಮಕ್ಕಳಲ್ಲಿ ಮಿತಿಮೀರಿದ ಹೆದರಿಕೆ ಇರುತ್ತದೆ. ಕತ್ತಲು ಕಂಡರೆ ಭಯ, ಹೊರಗಡೆ ಹೋಗಲು ಭಯ, ಪ್ರಯಾಣ ಮಾಡಲು ಭಯ ಈ ರೀತಿ ಚಿಕ್ಕ -ಪುಟ್ಟ ವಿಷಯಗಳಿಗೆ ಭಯ ಪಡುವ ಮಕ್ಕಳನ್ನು ನಾವು ಕಾಣುತ್ತೇವೆ. ಕೆಲ ಮಕ್ಕಳ ಮನಸ್ಸಿನಲ್ಲಿ ದೊಡ್ಡವರು ಹೇಳಿ-ಹೇಳಿಯೇ ಭಯ ಹುಟ್ಟಿಸಿರುತ್ತಾರೆ. ಮಕ್ಕಳ ಮನಸ್ಸಿನಲ್ಲಿ ಭಯ ಒಳ್ಳೆಯದಲ್ಲ. ಆ ಭಯ ಅವರ ಭವಿಷಯಕ್ಕೆ ತೊಂದರೆ ತರಬಹುದು.

ಆದ್ದರಿಂದ ನಿಮ್ಮ ಮಗು ದೆವ್ವ ಮತ್ತು ಭೂತ, ಕತ್ತಲು ಅಂತ ಹೆದರಿಕೊಂಡಾಗ ನೀವು ಮಾಡಬೇಕಾದ ಕೆಲಸಗಳು

  1. dfg fg dfg sdf
  2. d fgdf gdsf gsdf gdf
  3. df dfsg sdf gdsf
  • dsf gsfd gdsf gf g
  • df gdf gdsf gsdf gds

1. ನಿಮ್ಮ ಮಕ್ಕಳ ಹೆದರಿಕೆಯ ಬಗ್ಗೆ ಅರಿಯಿರಿ: ಚಿಕ್ಕ ಮಕ್ಕಳು ಇನ್ನೂ ತಮ್ಮ ಸುತ್ತಲಿನ ಜಗತ್ತನ್ನು ಅರಿಯುವ ಪ್ರಯತ್ನದಲ್ಲಿರುತ್ತಾರೆ. ಹಾಗಾಗಿ ಅವರು ನಿಜ ಜೀವನದಲ್ಲಿ ಕೇಳುವ ಸಂಗತಿಗಳನ್ನು ಮತ್ತು ನೋಡುವ ವಿಷಯಗಳನ್ನು ತಮ್ಮ ಮನಸ್ಸಿನಲ್ಲಿ ಒಂದು ಅಮೂರ್ತ ಚಿತ್ರಣವನ್ನಾಗಿ ರೂಪಿಸಿಕೊಳ್ಳುತ್ತಾರೆ. ಇದು ಕತ್ತಲೆಯ ಕೋಣೆ ನೋಡಿ ಹೆದರುವುದು ಕತ್ತಲೆಯ ಕೋಣೆಯಲ್ಲಿ ದೆವ್ವವನ್ನೋ ಭೂತವನ್ನೋ ಕಲ್ಪಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಮಕ್ಕಳು ಬೇರೆ ಬೇರೆ ವರ್ಷಗಳಲ್ಲಿ, ವಿವಿಧ ವಿಷಯಗಳ ಬಗ್ಗೆ, ಭಿನ್ನ ತೀವ್ರತೆಯ ಹೆದರಿಕೆಗಳಿಗೆ ಒಳಗಾಗಬಹುದು. ಹೀಗಾಗಿ ಹೆದರಿಕೆಯನ್ನು ಇಲ್ಲವಾಗಿಸಲು ಯಾವುದೇ ಒಂದು ಕಟ್ಟಕಡೆಯ ಮಾರ್ಗವೆಂದಿಲ್ಲ. ಇದು ನಿಮ್ಮ ಮಕ್ಕಳ ಬೆಳವಣಿಗೆಯ ಹಂತ ಮತ್ತು ಅವರು ಒತ್ತಡವನ್ನು ಸಹಿಸುವ ಸಾಧ್ಯತೆಗಳನ್ನು ಅವಲಂಬಿಸಿದೆ.

How to Help Your Child Overcome Fears

2. ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ: ನಿಮ್ಮ ಮಾತು ನಿಮ್ಮ ಮಕ್ಕಳಿಗೆ ಬಹಳ ಸಹಕಾರಿ. ನಿಮ್ಮ ಮಗು ಅದರ ಹೆದರಿಕೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ರೀತಿಯಲ್ಲಿ ಮಾತನಾಡಿ. ಯಾವುದರ ಬಗ್ಗೆ ಹೆದರಿಕೆ ಮತ್ತು ಯಾಕೆ ಹೆದರಿಕೆ ಎಂಬುದನ್ನು ಕೇಳಿ. ಅದಕ್ಕೇನನ್ನಿಸುತ್ತದೆ ಎಂಬುದನ್ನು ಮುಕ್ತವಾಗಿ ಹಂಚಿಕೊಳ್ಳಲಿ. ನೀವು ನಿಮ್ಮ ಮಗುವಿನ ಹೆದರಿಕೆಯ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ ಎಂದು ನಿಮ್ಮ ಮಾತು ಹೇಳುವಂತಿರಲಿ. ನೀವು ನಿಮ್ಮ ಬಾಲ್ಯದಲ್ಲಿ ಹೇಗೆ ಬೇರೆ ಬೇರೆ ವಿಷಯಗಳ ಬಗ್ಗೆ ಹೆದರಿಕೊಂಡಿದ್ದಿರಿ ಎಂದು ತಿಳಿಸಿ. ನಿಮ್ಮ ಮಗುವಿನ ಹೆದರಿಕೆಯ ಬಗ್ಗೆ ನೀವು ತೋರುವ ಕಾಳಜಿ ನಿಮ್ಮ ಮತ್ತು ನಿಮ್ಮ ಮಗುವಿನ ಸಂಬಂಧವನ್ನು ಗಟ್ಟಿ ಮಾಡುವ ಜೊತೆಗೆ ನನ್ನ ಹೆದರಿಕೆಯ ಬಗ್ಗೆ ನಿಜವಾಗಿಯೂ ಕೇಳುವವರಿದ್ದಾರೆ ಎಂದು ಅದಕ್ಕೆ ಅನ್ನಿಸುತ್ತದೆ.

3. ಸರಿಯಾದ ಸಂದೇಶವನ್ನು ನೀಡಿ: "ನೀನೇನು ಇನ್ನೂ ಸಣ್ಣ ಮಗುವಾ", "ಹೆದರಬಾರದು ಅಂದ್ರೆ ಹೆದರಬಾರದು ಅಷ್ಟೇ" ಅಥವಾ "ನಿನ್ನ ಗೆಳೆಯನನ್ನು ನೋಡಿ ಕಲಿ ಅವನು ನಿನ್ನ ಹಾಗೆ ಹೆದರುತ್ತಾನಾ" ಮುಂತಾದ ಮಾತುಗಳನ್ನಾಡಬೇಡಿ. ಹೀಗೆ ಮಾತನಾಡುವುದರಿಂದ ಮಗು ಹೆದರಿಕೆಯ ಬಗ್ಗೆ ಮಾತನಾಡುವುದು ತಪ್ಪು ಎಂದು ಭಾವಿಸಿ ನಿಮ್ಮೊಂದಿಗೆ ಮತ್ತೆಂದೂ ಏನನ್ನೂ ಹೇಳುವುದಿಲ್ಲ. ಹೆದರಿಕೆ ಸಹಜ ಮತ್ತು ಏನೇ ಅನ್ನಿಸಿದರೂ ತಂದೆ ತಾಯಿಯ ಬಳಿ ಹೇಳಬೇಕು ಎಂದು ಮನವರಿಕೆ ಮಾಡಿಸಿ.

4. ಹೆದರಿಕೆಯನ್ನು ಕಡೆಗಣಿಸಬೇಡಿ: ಒಂದು ವೇಳೆ ನಿಮ್ಮ ಮಗು ನಿಮ್ಮ ಯಾವುದೇ ಸಂಬಂಧಿಯ ಬಗ್ಗೆ ಅಥವಾ ನಿಮ್ಮ ಮನೆಯಲ್ಲಿರುವ ಕೆಲಸದವರು ಅಥವಾ ಮತ್ಯಾರ ಬಗ್ಗೆಯಾದರೂ ಹೆದರಿಕೆಯ ಮಾತನಾಡಿದರೆ ಖಂಡಿತವಾಗಿ ಕಡೆಗಣಿಸಬೇಡಿ. ಬದಲಿಗೆ ನಿಮ್ಮ ಮಗುವಿನೊಂದಿಗೆ ಮಾತನಾಡಿ ಹೆದರಿಕೆಯ ಮೂಲ ಕಾರಣವನ್ನು ಕಂಡುಹಿಡಿಯಿರಿ. ಮಗು ಹೆದರಿಕೊಂಡಿರುವ ವ್ಯಕ್ತಿ ನಿಮ್ಮ ಮಗುವಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ ಎಂದು ಅನ್ನಿಸಿದರು ಅವರ ಬಗ್ಗೆ ಸ್ವಲ್ಪ ಲಕ್ಷ್ಯ ಕೊಡಿ.

fgfdg fds gdfsg fd dfg dfg d gdf
df gfsd gfd d sfgsfd gsdf gdf gd

5. ನಿಮ್ಮ ಮಗುವಿನ ಹೆದರಿಕೆಯ ಬಗ್ಗೆ ಅಣಕ ಮಾಡಬೇಡಿ: ನಿಮ್ಮ ಮಗುವಿನ ಹೆದರಿಕೆಯ ಬಗ್ಗೆ ಅಣಕ ಮಾಡುವುದು ಇತರರ ಬಳಿ ಹೇಳಿ ತಮಾಷೆ ಮಾಡುವುದು ಹೆದರಿಕೆಯನ್ನು ಸ್ವಲ್ಪವೂ ಕಡಿಮೆ ಮಾಡದು ಬದಲಿಗೆ ಮಕ್ಕಳ ಆತಂಕ ಹೆಚ್ಚಿ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಮುಂದೆ ನಿಮ್ಮ ಮಗು ಫೋಬಿಯಾ (ಹೆದರಿಕೆಯ ಮುಂದುವರಿದ ಭಾಗ) ವನ್ನು ಹೊಂದಬಹುದು. ಹೆದರಿಕೆ ಕೇವಲ ನಿಮ್ಮ ಪ್ರೀತಿ ಮತ್ತು ಆರೈಕೆಯಿಂದ ದೂರವಾಗುತ್ತದೆ ಎಂದು ನೆನಪಿಡಿ. ಕಡೆಗಣನೆ ನಿಮ್ಮ ಮಗುವಿನಲ್ಲಿ ಋಣಾತ್ಮಕ ಭಾವನೆಗಳನ್ನಷ್ಟೇ ಬೆಳೆಸಬಲ್ಲುದು.

dfgdfgdfgfd dfgdfgdfg
dfgf dgdsf gsfdg dfg fd gdf dfgfdgfd

6. ನಿಮ್ಮ ಮಗು ಹೆದರುವ ಕೆಲಸಗಳನ್ನೇ ಮಾಡಲು ಬಲವಂತ ಮಾಡಬೇಡಿ: ಹೆದರಿಕೆಯ ಕೆಲಸಗಳನ್ನು ಮಾಡು ಎಂದು ಬಲವಂತ ಮಾಡುವುದು ಮಕ್ಕಳ ಮನಸ್ಥಿತಿಯನ್ನು ಇನ್ನಷ್ಟು ಕೆಡಿಸುತ್ತದೆ. ನಿಮಗೆ ನೀವು ಹೆದರುವ ಹುಳವನ್ನು ಕೈಯಲ್ಲಿ ಹಿಡಿ ಎಂದು ಬಲವಂತ ಮಾಡಿದರೆ ಅಥವಾ ನಿಮಗಿಷ್ಟವಿಲ್ಲದ ಬಂಗೀ ಜಂಪಿಂಗ್ ಮಾಡಲು ಒತ್ತಾಯಿಸಿದರೆ ಹೇಗನ್ನಿಸುತ್ತದೆ ಎಂದು ಕಲ್ಪಿಸಿಕೊಳ್ಳಿ. ನಿಮ್ಮ ಮಗುವಿಗೆ ಹೆದರಿಕೆಯಿಂದ ಹೊರಬರಲು ಸಮಯ ಕೊಡಿ. ನಿಮ್ಮ ಪ್ರೀತಿ ಮತ್ತು ಧೈರ್ಯ ತುಂಬಿದ ಮಾತುಗಳಿಂದ ಇದನ್ನು ಸಾಧ್ಯವಾಗಿಸಿ.

7. ಧೈರ್ಯದಿಂದ ವರ್ತಿಸಿ ಮಾದರಿಯಾಗಿ: ನಿಮ್ಮ ಮಗು ನಿಮ್ಮನ್ನು ಗಮನಿಸುತ್ತಿದ್ದು ನಿಮ್ಮನ್ನೇ ಬಹಳವಾಗಿ ಹಿಂಬಾಲಿಸುತ್ತದೆ ಎಂದು ನೆನಪಿಡಿ. ನೀವೇ ಹೆದರಿ ಕಿರುಚಾಡಿದರೆ ನಿಮ್ಮ ಮಗು ಕೂಡಾ ಅದನ್ನೇ ಮಾಡುತ್ತದೆ. ನಿಮಗೆ ಯಾವುದಾದರೂ ಸನ್ನಿವೇಶ ಅಪಾಯಕಾರಿ ಅಲ್ಲ ಎಂದಾದರೆ ತನಗೂ ಅಲ್ಲ ಎಂದು ಮಕ್ಕಳು ತಿಳಿಯುತ್ತಾರೆ. ಮಗು ಏನಾದರೂ ಅಪಾಯಕಾರಿ ವಿಷಯಗಳನ್ನು ಮಾಡುತ್ತದೆ ಎಂದಾದರೆ ನಿಲ್ಲು, ಮಾಡಬೇಡ, ಏಯ್ ನಿಲ್ಸು ಎಂದು ಕಿರುಚಾಡುವ ಬದಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ನಿಧಾನವಾಗಿ ತಿಳಿಸಿಕೊಡಿ.

8. ನಿಮ್ಮ ಮಗುವನ್ನು ಹೆದರಿಕೆ ಹುಟ್ಟಿಸುವ ಪಾತ್ರಗಳಿಂದ ದೂರವಿಡಿ: ಮಕ್ಕಳು ನೈಜತೆ ಮತ್ತು ಕಲ್ಪನೆಗಳ ಮಧ್ಯೆ ವ್ಯತ್ಯಾಸ ತಿಳಿಯಲಾರವು. ದೂರದರ್ಶನದಲ್ಲಿ ನೋಡುವ ಕೆಲವು ಭಯಾನಕ ಪಾತ್ರಗಳು ಮಕ್ಕಳಲ್ಲಿ ಹೆದರಿಕೆ ಹುಟ್ಟಿಸುತ್ತವೆ. ಇಂತಹ ಕಾರ್ಯಕ್ರಮಗಳನ್ನು ನೋಡದಂತೆ ಮಾಡಿ ಮತ್ತು ಇಂತಹ ಪಾತ್ರಗಳನ್ನು ಹೇಗೆ ಮಾಡುತ್ತಾರೆ ಚಲನಚಿತ್ರ ಮತ್ತು ಕಾರ್ಟೂನ್ ಗಳ ನೈಜತೆ ಬಗ್ಗೆ ತಿಳಿಸಿ.

9. ಮಗು ಹೆದರುವ ಕೋಣೆ, ಪ್ರದೇಶ, ಮನೆಗೆ ನೀವೇ ಮಗುವನ್ನು ಕರೆದುಕೊಂಡು ಹೋಗಿ: ಎಲ್ಲಾ ಬಾಗಿಲುಗಳನ್ನು ತೆರೆದು ಮಂಚದ ಕೆಳಗೆ ಕಪಾಟಿನ ಹಿಂದೆ ಎಲ್ಲಾ ಹೀಗೆ ಸ್ಥಳಗಳನ್ನು ತೋರಿಸಿ ಅಲ್ಲಿ ಹೆದರುವಂಥದ್ದು ಏನೂ ಇಲ್ಲ ಎಂದು ಖಾತರಿ ಮಾಡಿ. ಯಾವುದೇ ಸದ್ದು ಅಥವಾ ಚಿತ್ರದ ಬಗ್ಗೆ ಹೆದರಿಕೆ ಉಂಟಾಗಿದ್ದಲ್ಲಿ ಮಗು ಅದನ್ನು ಏನೆಂದು ಭಾವಿಸಿರಬಹುದು ಮತ್ತು ಅದು ಹಾಗೆ ಅಲ್ಲ ಎಂದು ಅವನಿಗೆ/ಅವಳಿಗೆ ಮನವರಿಕೆ ಆಗುವ ರೀತಿಯಲ್ಲಿ ತಿಳಿಸಿ.

10. ನೀವು ನಿಮ್ಮ ಮಗುವನ್ನು ಪ್ರೀತಿಸುತ್ತೀರಿ ಮತ್ತು ನೀವು ನಿಮ್ಮ ಮಗುವನ್ನು ಯಾವುದೇ ಸಂದರ್ಭದಲ್ಲಿ ಒಂಟಿಯಾಗಿ ಬಿಡುವುದಿಲ್ಲ ಎಂದು ಅದಕ್ಕೆ ಮನವರಿಕೆ ಮಾಡಿ ಕೊಡಿ.

ಸಲಹೆಗಳು:

ಪಿ.ಜಿ (ಪೇರೆಂಟಲ್ ಗೈಡೆನ್ಸ್) ದರ್ಜೆಯ ಚಲನಚಿತ್ರಗಳನ್ನು ಮಕ್ಕಳಿಗೆ ತೋರಿಸದಿರಿ. ಒಂದು ಚಲನಚಿತ್ರ ಪಿ.ಜಿ ದರ್ಜೆಯನ್ನು ಹೊಂದಿದ್ದರೆ ಅದರ ಕಾರಣವನ್ನು ತಿಳಿದುಕೊಳ್ಳಿ. ಅವರು ದೊಡ್ಡವರಾಗುವವರೆಗೆ ಇಂತಹ ಚಲನಚಿತ್ರಗಳನ್ನು ನೋಡದಂತೆ ತಡೆಯಿರಿ.

ಲ್ಯಾವೆಂಡರ್ ಸುಗಂಧ ದ್ರವ್ಯವನ್ನು ಕೋಣೆಯಲ್ಲಿ ಸ್ಪ್ರೆ ಮಾಡಿ ಇದರಿಂದ ಹೆದರಿಕೆ ದೂರವಾಗುತ್ತದೆ ಎಂದು ಹೇಳಿ. ಲ್ಯಾವೆಂಡರ್ ಬೇಗ ಶಾಂತಗೊಳಿಸುವ ಮೂಲಿಕೆಯಾದ್ದರಿಂದ ಬೇಗ ಪ್ರಭಾವ ಬೀರುತ್ತದೆ. ಮಗು ನೀವು ಮಾಡುವ ಕೆಲಸವನ್ನು ನೋಡುತ್ತಿರುವುದರಿಂದ ಹೆದರಿಕೆಯನ್ನು ಮರೆತು ಬಿಡುತ್ತದೆ.

ಆಕರ್ಷಕ ಕಪ್ಪಿನಲ್ಲಿ ಬಿಸಿ ಬಿಸಿ ಹಾಲು ಜೊತೆಗೆ ಕೆಫೇನ್ ಇಲ್ಲದ ಚಹಾ ಕೊಡಿ.

ಒಳ್ಳೆಯ ಗುಣವಿರುವ ಕಾರ್ಟೂನ್ ಪಾತ್ರಗಳ ಚಲನಚಿತ್ರ ಮತ್ತು ಕಥೆಗಳನ್ನು ನೀವು ಓದಿ ಮತ್ತು ನಿಮ್ಮ ಮಗುವಿಗೂ ಅದನ್ನು ಓದಿ ಆನಂದಿಸಲು ಹೇಳಿ. ಇದೂ ದೆವ್ವ ಭೂತಗಳು ಒಳ್ಳೆಯ ಗುಣ ಹೊಂದಿವೆ ಎಂದು ಮನವರಿಕೆ ಮಾಡಿ ಕೊಡುವಲ್ಲಿ ಸಹಾಯಕ.

ಎಚ್ಚರಿಕೆ:

ನಿಮ್ಮ ಮನೆಯಲ್ಲಿರುವ ಎಲ್ಲಾ ಹೆದರಿಕೆ ಹುಟ್ಟಿಸುವ ಪರಿಕರಗಳನ್ನು ತೆಗೆದಿಡಿ.

ಕೆಲವು ಬಾರಿ ಕಾರಣವಿಲ್ಲ ಕೆಲವು ಹೆದರಿಕೆಗಳು ಯಾವುದೋ ಹಳೆಯ ಹಿಂಸೆಯ ಕಾರಣದಿಂದ ಅಥವಾ ಗಾಯದಿಂದ ಆಗಿರಬಹುದು. ಇದಕ್ಕಾಗಿ ಸೂಕ್ತ ವೈದ್ಯಕೀಯ ಸಹಾಯ ಪಡೆಯಿರಿ.

Read more about: ಮಗು ಭಯ baby fear
English summary

How to Help Your Child Overcome Fears | ನಿಮ್ಮ ಮಗುವಿನ ಹೆದರಿಕೆಯನ್ನು ನೀವೇ ದೂರ ಮಾಡಿ

Young children are still discovering the world that they live in. Their imagination is developing and hence whatever they see/ hear in real life can result in formation of scary mental images. Thus, leading to a fear of darkness, imagining a monster in the dark room.
X
Desktop Bottom Promotion