For Quick Alerts
ALLOW NOTIFICATIONS  
For Daily Alerts

ಪಾರ್ಟಿ ಮೂಡ್‌ನಲ್ಲಿ ಜೂ. ಯಶ್, ಮ್ಯೂಸಿಕ್‌ಗೆ ಸಕತ್ ಸ್ಟೆಪ್

|

ಯಶ್‌ ಹಾಗೂ ರಾಧಿಕಾ ಪಂಡಿತ್‌ ಮಕ್ಕಳ ಚಟುವಟಿಕೆಯ ವೀಡಿಯೋ ಹಾಗೂ ಫೋಟೋವನ್ನು ಆಗಾಗ ಹಾಕುತ್ತಲೇ ಇರುತ್ತಾರೆ. ಯಶ್-ರಾಧಿಕಾ ಪಂಡಿತ್‌ ಮಗಳು ಐರಾ ಅಂತೂ ಈಗಾಗಲೇ ಸೆಲೆಬ್ರಿಟಿ ಕಿಡ್ ಆಗಿದ್ದಾಳೆ.

ಆಕೆಯ ತುಂಟಾಟ, ಚೂಟಿತನ ಹಾಗೂ ಕ್ಯೂಟ್ ಎಕ್ಸ್‌ಪ್ರೆಶನ್‌ನಿಂದಾಗಿ ಈಗಾಗಲೇ ಸಾಕಷ್ಟು ಫ್ಯಾನ್ಸ್ ಹೊಂದಿದ್ದಾಳೆ. ಐರಾ ಕೇಕ್ ಮಾಡಿದ್ದು, ತಲೆ ಬೋಳಿಸಿದಾಗ ಅಪ್ಪನ ಪ್ರಶ್ನಾರ್ಥಕವಾಗಿ ನೋಡಿದ ನೋಟ, ತಮ್ಮನಿಗೆ ಜೋಗುಳ ಹಾಡಿದ್ದು ಎಲ್ಲವೂ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಇದೀಗ ಐರಾ ಜೊತೆ ತಮ್ಮನೂ ಸೇರಿಕೊಂಡಿದ್ದಾನೆ.

ಹೌದು ಜೂನಿಯರ್‌ ಐಶ್‌ ಈಗಷ್ಟೇ ನಿಲ್ಲಲು ಪ್ರಯತ್ನಿಸುತ್ತಿದ್ದಾನೆ, ಆದರೆ ಮ್ಯೂಸಿಕ್‌ ಕೇಳಿದ ತಕ್ಷಣ ಕುಣಿಯುವ ಕ್ಯೂಟ್‌ ವೀಡಿಯೋವನ್ನು ತಂದೆ ಯಶ್‌ ಶೇರ್ ,ಮಾಡಿದ್ದಾರೆ. ಮ್ಯೂಸಿಕ್‌ ಜೊತೆ ತಾನು ಪಾರ್ಟಿ ಮೂಡ್‌ನಲ್ಲಿ ಕುಣಿಯುತ್ತಿರುವ ಜೂ. ಯಶ್‌ ನೋಡಲು ಸಕತ್ ಮುದ್ದಾಗಿದೆ ಅಲ್ವಾ?

ಮಕ್ಕಳ ಪ್ರತಿಯೊಂದು ಚಟುವಟಿಕೆಗಳು ಅವರ ತುಂಟಾಟಗಳು ತುಂಬಾ ಮುದ್ದಾಗಿರುತ್ತವೆ. ಎಷ್ಟೇ ಟೆನ್ಷನ್‌ ಇದ್ದರೂ ಮಕ್ಕಳ ಆಟ ನೋಡುತ್ತಿದ್ದರೆ ಒಂದ ಕ್ಷಣ ನಮ್ಮನ್ನು ನಾವು ಮರೆಯುತ್ತೇವೆ. ಮಕ್ಕಳ ಮುದ್ದಾಟ ನೋಡಿ ಪ್ರತಿಯೊಬ್ಬ ತಂದೆ- ತಾಯಿ ಸಕತ್ ಖುಷಿ ಪಡುತ್ತಾರೆ. ಇಲ್ಲಿ ಯಶ್ ಕೂಡ ಮಗನ ಕುಣಿತ ನೋಡಿ ಜೋಶ್‌ನಿಂದ ಕಿರುಚುವುದು ಕೇಳುತ್ತದೆ.

English summary

Yash Shares a Super Adorable Video of His Son Dancing in Car

Here are Yash and Radhika Pandit son cute dance video, have a look
X