Just In
Don't Miss
- News
Mood Of The Nation ಸಮೀಕ್ಷೆ: ಈಗ ಚುನಾವಣೆ ನಡೆದರೂ ಗೆಲ್ಲೋದು ಎನ್ಡಿಎ
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Movies
ಬಾಂಬೆ ಹೈಕೋರ್ಟ್ ನಲ್ಲಿ ಹಿನ್ನಡೆ: ಸಂಕಷ್ಟದಲ್ಲಿ ಸೋನು ಸೂದ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನವಜಾತ ಶಿಶುವಿನ ಆರೈಕೆಯ ಬಗ್ಗೆ ಪ್ರತಿಯೊಬ್ಬ ಪೋಷಕರು ತಿಳಿಯಲೇಬೇಕಾದ ಸಂಗತಿಗಳು
ಮಕ್ಕಳ ಆರೈಕೆ ಎನ್ನುವುದು ಅಷ್ಟು ಸುಲಭದ ಕೆಲಸವಲ್ಲ, ಅದಕ್ಕೆ ತುಂಬಾ ಜವಾಬ್ದಾರಿ ಹಾಗೂ ಏಕಾಗ್ರತೆ, ತಾಳ್ಮೆ ಬೇಕು. ಇದರಿಂದಾಗಿ ಮಗುವಿನ ಜನನದ ಬಳಿಕ ಪೋಷಕರು ತುಂಬಾ ಎಚ್ಚರಿಕೆ ವಹಿಸುವರು. ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ಯಾವುದೇ ಕುಂದುಕೊರತೆ ಆಗದಂತೆ ನೋಡಿಕೊಳ್ಳುವರು. ಆದರೆ ಮೊದಲ ಸಲ ಪೋಷಕರಾಗುವಂತಹವರು ಯಾವುದು ತಪ್ಪು ಹಾಗೂ ಯಾವುದು ಸರಿ ಎಂದು ತಿಳಿಯಲು ಸಮರ್ಥರಾಗಿ ಇರುವುದಿಲ್ಲ. ನವಜಾತ ಶಿಶು ತುಂಬಾ ಸೂಕ್ಷ್ಮ ಹಾಗೂ ಕೋಮಲವಾಗಿರುವ ಕಾರಣದಿಂದಾಗಿ ಅತ್ಯಧಿಕ ಗಮನ ಹರಿಸಬೇಕಾಗುತ್ತದೆ. ಗರ್ಭಧಾರಣೆ ಸಂದರ್ಭದಲ್ಲಿ ಮಗುವಿನ ಲಾಲನೆ ಪಾಲನೆ ಬಗ್ಗೆ ತಾಯಿಯು ತಿಳಿದುಕೊಳ್ಳುವರು. ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವ ಬಗ್ಗೆ ಈಗಲೂ ನಿಮಗೆ ಗೊಂದಲವಿದ್ದರೆ ಆಗ ನೀವು ಕೆಲವೊಂದು ಆರೈಕೆಯ ಕ್ರಮಗಳನ್ನು ತಿಳಿಯಬೇಕು. ಇದನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ. ತಿಳಿಯಲು ತಯಾರಾಗಿ....
ಮಗುವಿಗೆ ಹಾಲುಣಿಸುವ ಭಂಗಿ ತಿಳಿಯಿರಿ
ನವಜಾತ ಶಿಶುವಿಗೆ ಮಗುವಿನ ಹಾಲು ಮಾತ್ರ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುವುದು. ಇದರಿಂದ ಮಗು ಸರಿಯಾಗಿ ಹಾಲು ಸೇವಿಸುತ್ತಿದೆಯಾ ಎಂದು ದೃಢಪಡಿಸಿಕೊಳ್ಳಬೇಕು. ಯಾಕೆಂದರೆ ಎದೆಹಾಲು ಮಾತ್ರ ಮಗುವಿಗೆ ಪೋಷಕಾಂಶ ಒದಗಿಸುವ ವಿಧಾನವಾಗಿದೆ. ಎದೆಹಾಲಿನಿಂದ ಮಗುವಿನ ಬೆಳವಣಿಗೆ ಆಗುವುದು. ವೈದ್ಯರು ಸೂಚಿಸಿರುವಂತಹ ಸರಿಯಾದ ಪ್ರಮಾಣದಲ್ಲಿ ಮಗುವಿಗೆ ಹಾಲು ನೀಡಿ. ಮಗುವಿಗೆ ಸರಿಯಾದ ರೀತಿಯಲ್ಲಿ ದಿನದಲ್ಲಿ ಹಲವು ಬಾರಿ ಹಾಲನ್ನು ನೀಡಿ. ಎರಡನೇಯದಾಗಿ ಮಗುವಿಗೆ ಹಾಲು ನೀಡುವ ಭಂಗಿ ಸರಿಯಾಗಿ ಇದೆಯಾ ತಿಳಿಯಿರಿ. ಮಗುವಿಗೆ ಹಾಲುಣಿಸುವ ಭಂಗಿಯು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಮಗು ತೇಗು ಬರುವಂತೆ ಮಾಡಿದ ಬಳಿಕ ಮಲಗುವುದನ್ನು ಅಭ್ಯಾಸ ಮಾಡಿಸಿಕೊಳ್ಳಿ.
Most Read: ಮಗುವಿನ ಗ್ಯಾಸ್ಟ್ರಿಕ್ ಸಮಸ್ಯೆಯ ಲಕ್ಷಣಗಳು ಮತ್ತು ಚಿಕಿತ್ಸೆಗಳು
ನಿಮ್ಮ ಕೈಗಳು ಸ್ವಚ್ಛವಾಗಿರಲಿ
ಮಗುವಿನ ಚರ್ಮ ಹಾಗು ಪ್ರತಿರೋಧಕ ವ್ಯವಸ್ಥೆಯು ಬೇಗನೆ ಕೀಟಾಣು ಮತ್ತು ಸೋಂಕಿಗೆ ಒಳಗಾಗುವುದು. ಕೈ ತೊಳೆಯದೆ ಮಗುವನ್ನು ಮುಟ್ಟಲು ಹೋಗಬೇಡಿ. ಮಗುವಿಗೆ ಕೀಟಾಣುವಿನಿಂದ ತೊಂದರೆ ಆಗದಂತೆ ತಡೆಯಲು ನೀವು ಆದಷ್ಟು ಮಟ್ಟಿಗೆ ಕೈಗಳನ್ನು ಸರಿಯಾಗಿ ತೊಳೆಯಿರಿ. ಬೇರೆಯವರು ಕೂಡ ಮಗುವನ್ನು ಮುಟ್ಟುವ ಮೊದಲು ಕೈಗಳನ್ನು ತೊಳೆಯಲು ಹೇಳಿ. ಹೊರಗಿನಿಂದ ಬಂದ ವ್ಯಕ್ತಿಗಳಿಗೆ ನೇರವಾಗಿ ಮಗುವನ್ನು ಮುಟ್ಟಲು ಬಿಡಬೇಡಿ. ಯಾಕೆಂದರೆ ಹೊರಗಡೆ ತುಂಬಾ ಕೀಟಾಣುಗಳು ಇರುವುದು ಮತ್ತು ಇದು ನಿಮ್ಮ ಮಗುವಿಗೆ ತುಂಬಾ ಹಾನಿ ಉಂಟು ಮಾಡಬಹುದು. ಇದರಿಂದ ಸರಿಯಾಗಿ ಕೈ ತೊಳೆಯಲು ಅವರಿಗೆ ಹೇಳಿ.
ಮಗುವಿನ ಉತ್ಪನ್ನಗಳನ್ನು ಅತಿಯಾಗಿ ಬಳಸಬೇಡಿ
ಮಗುವಿನ ಆರೈಕೆಯಲ್ಲಿ ಮಗುವಿಗಾಗಿ ತಯಾರಿಸಲ್ಪಟ್ಟಿರುವ ಕೆಲವೊಂದು ಉತ್ಪನ್ನಗಳು ಕೂಡ ಮಹತ್ವದ ಪಾತ್ರ ವಹಿಸುವುದು. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಗುವಿನ ಉತ್ಪನ್ನಗಳು ಲಭ್ಯವಿದೆ. ಇದು ತ್ವಚೆ ಹಾಗೂ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಆದರೆ ಈ ಉತ್ಪನ್ನಗಳನ್ನು ಅತಿಯಾಗಿ ಬಳಸಿಕೊಂಡರೆ ಆಗ ಮಗುವಿನ ಮೇಲೆ ಮತ್ತು ಚರ್ಮಕ್ಕೆ ಹಾನಿ ಆಗುವ ಸಾಧ್ಯತೆಗಳು ಇವೆ. ಈ ಉತ್ಪನ್ನಗಳನ್ನು ಆದಷ್ಟು ಮಟ್ಟಿಗೆ ಕಡೆಗಣಿಸಿ ಅಥವಾ ಇದರ ಬಳಕೆ ಕಡಿಮೆ ಮಾಡಿ. ನೀವು ಬಳಸುವಂತಹ ಉತ್ಪನ್ನಗಳು ಮಗುವಿನ ಚರ್ಮಕ್ಕಾಗಿ ಮಾಡಲ್ಪಟ್ಟಿರುವುದು ಎಂದು ನೀವು ತಿಳಿಯಿರಿ. ಮಗುವಿಗೆ ಯಾವುದೇ ಸಮಸ್ಯೆಯಾಗುತ್ತಲಿದ್ದರೆ ಆಗ ನೀವು ತಕ್ಷಣವೇ ಇಂತಹ ಉತ್ಪನ್ನಗಳ ಬಳಕೆ ಮಾಡುವುದನ್ನು ನಿಲ್ಲಿಸಿಬಿಡಿ.
Most Read: 30 ವರ್ಷದೊಳಗಿನ ಮಹಿಳೆಯರಲ್ಲಿ ಏಕೆ ಬಂಜೆತನ ಕಾಡುವುದು?
ಸರಿಯಾಗಿ ತಯಾರಾಗಿ
ನವಜಾತ ಮಗುವಿನ ಆರೈಕೆ ಮಾಡಲು ಗರ್ಭಧಾರಣೆಯ ಸಮಯವು ನಿಮಗೆ ತಯಾರು ಮಾಡಿಕೊಳ್ಳಲು ಅವಕಾಶ ನೀಡುವುದು. ಆದಷ್ಟು ಮಟ್ಟಿಗೆ ನೀವು ಪುಸ್ತಕಗಳನ್ನು ಓದಿಕೊಳ್ಳಿ. ಇದರೊಂದಿಗೆ ಹಿರಿಯರಿಂದ ಸರಿಯಾದ ಮಾರ್ಗದರ್ಶನ ಪಡೆಯಿರಿ. ಇದರಿಂದ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲು ನೆರವಾಗುವುದು ಮತ್ತು ತಪ್ಪುಗಳನ್ನು ತಡೆಯಬಹುದು. ಗರ್ಭಧಾರಣೆಯ ಮೊದಲ ದಿನದಿಂದಲೇ ನೀವು ನವಜಾತ ಮಗುವಿನ ಆರೈಕೆ ಬಗ್ಗೆ ತಯಾರಿ ಮಾಡಿಕೊಳ್ಳಿ. ನೀವು ಅತ್ಯುತ್ತಮ ವಿಧಾನದಿಂದ ಮಗುವಿನ ಆರೈಕೆ ಮಾಡಲು ತಯಾರು ಮಾಡಿಕೊಳ್ಳಿ. ನಿಮಗೆ ಯಾವುದೇ ಸಮಸ್ಯೆಯಾಗುತ್ತಲಿದ್ದರೆ ಅಥವಾ ಮಗು ನಿರಂತರವಾಗಿ ಅಳುತ್ತಿದ್ದರೆ ಆಗ ವೈದ್ಯರನ್ನು ಭೇಟಿ ಮಾಡಿ. ವೈದ್ಯರನ್ನು ಸಂಪರ್ಕಿಸದೆ ಯಾವುದೇ ರೀತಿಯ ಔಷಧಿ ಮಗುವಿಗೆ ನೀಡಬೇಡಿ.