For Quick Alerts
ALLOW NOTIFICATIONS  
For Daily Alerts

ಹೊಟ್ಟೆಯೊಳಗೆ ಮಗುವಿನ ಚಲನವಲನ- ಗಾಬರಿ ಪಡಬೇಡಿ

By Manu
|

ಗರ್ಭವತಿಯಾದ ಬಳಿಕ ಹತ್ತು ಹಲವು ಕನಸುಗಳು ಗರ್ಭಿಣಿಯ ಮನಸ್ಸಿನಲ್ಲಿ ಮೂಡುತ್ತವೆ. ಇವು ಆಕೆ ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳುವಂತಹದ್ದಾಗಿದ್ದು ಅದರಲ್ಲೂ ಒಡಲ ಮಗುವಿನ ಚಲನೆಯನ್ನು ಅನುಭವಿಸಿದಾಗ ಮಾತ್ರ ಈ ಆನಂದ ವ್ಯಕ್ತಪಡಿಸಲು ಸಾಧ್ಯವಾಗದಷ್ಟು ಹೆಚ್ಚು ತೃಪ್ತಿಯನ್ನು ನೀಡುತ್ತದೆ. 6 ತಿಂಗಳ ಗರ್ಭಾವಸ್ಥೆ: ದೇಹದ ಬದಲಾವಣೆ

ಸಾಮಾನ್ಯವಾಗಿ ಮಗು ಕಾಲನ್ನು ನೀಳವಾಗಿಸಿಕೊಳ್ಳಲು ಯತ್ನಿಸುವಾಗ ಹೊಟ್ಟೆಯ ಒಳಗಿನಿಂದ ಒದ್ದಂತೆ ಅನ್ನಿಸುತ್ತದೆ. ಪ್ರಥಮ ಗರ್ಭಿಣಿಗೆ ಇದು ಹೊಸ ಅನುಭವವಾಗಿದ್ದು ಈ ಅನುಭವವನ್ನು ಯಾವ ತಿಂಗಳಲ್ಲಿ ಪಡೆಯಬಹುದು ಎಂಬ ಅರಿವಿರುವುದಿಲ್ಲ. ಪ್ಲಾಸೆಂಟಾ ಎಂದರೇನು? ಗರ್ಭಾವಸ್ಥೆಯಲ್ಲಿ ಇದರ ಪ್ರಾಮುಖ್ಯತೆ ಏನು?

ಹಿರಿಯರು ಅಥವಾ ವೈದ್ಯರು ಈ ಬಗ್ಗೆ ಮೊದಲೇ ಕೊಂಚ ವಿವರ ನೀಡಿದ್ದರೆ ಉತ್ತಮ. ಇಲ್ಲದಿದ್ದರೆ ಏನೋ ತೊಂದರೆಯಾಗಿರಬಹುದು ಎಂದು ವೃಥಾ ಚಿಂತೆಗೊಳಗಾಬಹುದು. ಬನ್ನಿ, ಈ ಸಮಯದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡೋಣ....


ಮಾಹಿತಿ #1

ಮಾಹಿತಿ #1

ಎರಡನೆಯ ಅಥವಾ ನಂತರದ ಹೆರಿಗೆಯ ಅನುಭವದಲ್ಲಿ ಗರ್ಭಿಣಿಗೆ ಈ ಅನುಭವ ಪ್ರಥಮ ಹೆರಿಗೆಗಿಂತಲೂ ಕೊಂಚ ಮೊದಲೇ ಗಮನಕ್ಕೆ ಬರುತ್ತದೆ. ಸೂಲಗಿತ್ತಿಯರ ಅನುಭವದ ಪ್ರಕಾರ ಸರಿಸುಮಾರು ಹದಿಮೂರನೇ ವಾರದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಅನುಭವ ಮೊದಲೇ ಅನುಭವಿಸಿದ್ದ ಕಾರಣ ಈ ಹೆರಿಗೆಯಲ್ಲಿ ಈ ಬಗ್ಗೆ ಇರುವ ಅರಿವು ಚಿಕ್ಕ ಅನುಭವವನ್ನೂ ಗಮನಕ್ಕೆ ತರುತ್ತದೆ.

ಮಾಹಿತಿ #2

ಮಾಹಿತಿ #2

ಸಾಮಾನ್ಯವಾಗಿ 18-24 ವಾರಗಳ ಅವಧಿಯಲ್ಲಿ ಈ ಅನುಭವ ಅತಿ ಹೆಚ್ಚಾಗಿ ಆಗುತ್ತದೆ.

ಮಾಹಿತಿ #3

ಮಾಹಿತಿ #3

ಆದರೆ ಇದು ಎಲ್ಲಾ ಗರ್ಭಿಣಿಯರಲ್ಲಿ ಏಕಸಮಾನವಾಗಿರುವುದಿಲ್ಲ. ಗರ್ಭಿಣಿಯ ಆರೋಗ್ಯ ಮತ್ತು ಆಹಾರವನ್ನು ಅನುಸರಿಸಿ ಕೊಂಚ ಹಿಂದೆ ಮುಂದಾಗಬಹುದು.

ಮಾಹಿತಿ #4

ಮಾಹಿತಿ #4

ಅನುಭವ ಪಡೆಯಲು ಪ್ರಾರಂಭವಾದ ಬಳಿಕ ಈ ಅನುಭವ ಯಾವ ಹೊತ್ತಿನಲ್ಲಿ ಆಯಿತು ಎಂಬ ಮಾಹಿತಿಯನ್ನು ಬರೆದಿಟ್ಟುಕೊಳ್ಳಲು ವೈದ್ಯರು ಸಲಹೆ ಮಾಡುತ್ತಾರೆ. ಇದರಿಂದ ಮಗುವಿನ ಆರೋಗ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಮಾಹಿತಿ #5

ಮಾಹಿತಿ #5

ಸಾಮಾನ್ಯವಾಗಿ ಗರ್ಭಿಣಿ ಊಟ ಮಾಡಿದ ಬಳಿಕ ಅಥವಾ ದ್ರವಾಹಾರವನ್ನು ಸೇವಿಸಿದ ಬಳಿಕ ಈ ಅನುಭವ ಹೆಚ್ಚಾಗಿದ್ದಂತೆ ಅನ್ನಿಸುತ್ತದೆ. ಕೆಲವೊಮ್ಮೆ ದೈಹಿಕ ಚಟುವಟಿಕೆಯ ಬಳಿಕ ಅಥವಾ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆ ಇದ್ದಾಗಲೂ ಈ ಅನುಭವ ಹೆಚ್ಚಾಗಿ ಆಗುತ್ತದೆ.

ಮಾಹಿತಿ #6

ಮಾಹಿತಿ #6

36ನೆಯ ವಾರದ ಬಳಿಕ ಸಾಮಾನ್ಯವಾಗಿ ಈ ಅನುಭವ ಇಲ್ಲವಾಗುತ್ತದೆ. ಇದರಿಂದ ವೈದ್ಯರು ಹೆರಿಗೆಯ ಸಮಯವನ್ನು ನಿಖರವಾಗಿ ಹೇಳಲು ಸಾಧ್ಯವಾಗುತ್ತದೆ.

ಮಾಹಿತಿ#7

ಮಾಹಿತಿ#7

ಗರ್ಭಿಣಿ ಮಲಗುವ ಭಂಗಿ ಮಗುವಿನ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಆದ್ದರಿಂದ ಯಾವ ಭಂಗಿಯಲ್ಲಿ ಪವಡಿಸುವುದು ಸೂಕ್ತ ಎಂಬುದನ್ನು ವೈದ್ಯರಿಂದ ಅಥವಾ ಅನುಭವಿ ಸೂಲಗಿತ್ತಿಯರ ಸಲಹೆ ಪಡೆದು ಅದೇ ಪ್ರಕಾರ ಮಲಗಬೇಕು. ಹೊಟ್ಟೆಯ ಮೇಲಿನ ಒತ್ತಡ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

English summary

Facts About Baby Kicks

Pregnancy opens up a new world of experiences to any woman and some of them could be sweet and memorable for a lifetime. During pregnancy, it is common to experience certain sensations which could be due to the baby moving inside the womb. Generally, first time moms do not know when to expect those baby kicks. Here are some facts about the movements of your baby...
X
Desktop Bottom Promotion