For Quick Alerts
ALLOW NOTIFICATIONS  
For Daily Alerts

ಮಗುವಿಗೆ ಡೈಪರ್ ಬಳಸುತ್ತಿದ್ದೀರಿ ಎಂದಾದರೆ, ಈ ಸಲಹೆಗಳ ಬಗ್ಗೆ ಗಮನ ಕೊಡಿ

By Jaya Subramanya
|

ಪುಟ್ಟ ಮಗುವಿನ ಕಾಳಜಿಯನ್ನು ತಾಯಿಯಾದವಳು ನಾನಾ ಬಗೆಯಲ್ಲಿ ಮಾಡಬೇಕಾಗುತ್ತದೆ. ಏನೂ ತಿಳಿಯದ ಕಂದಮ್ಮನಿಗೆ ತನ್ನಮ್ಮನೇ ಬೆಚ್ಚನೆಯ ಆಸರೆಯಾಗಿರುತ್ತಾಳೆ. ಅಮ್ಮ ತನ್ನ ಬಳಿ ಇಲ್ಲ ಎಂದೊಡನೆ ಮಗು ಅಳಲು ಪ್ರಾರಂಭಿಸುತ್ತದೆ. ಅಜ್ಜಿ, ಅಜ್ಜ, ಅಪ್ಪ, ದೊಡ್ಡಪ್ಪ, ದೊಡ್ಡಮ್ಮ ಹೀಗೆ ಯಾರು ಎತ್ತಿಕೊಂಡು ಸಮಾಧಾನ ಮಾಡಿದರೂ ಮಗು ಅಳುವುದನ್ನು ನಿಲ್ಲಿಸುವುದೇ ಇಲ್ಲ. ಅಮ್ಮನ ಮುಖ ಕಂಡೊಡನೆ ಕೇಕೆ ಹಾಕಲು ಆರಂಭಿಸುತ್ತದೆ.

ತನ್ನನ್ನು ಮುದ್ದಾಡು ಎಂದು ಅಮ್ಮನಿಗೆ ತನ್ನ ಬಾಲ ಭಾಷೆಯಿಂದ ಸಂಜ್ಞೆ ಮಾಡುತ್ತದೆ. ಹೀಗೆ ಅಮ್ಮ ಮಗುವಿನ ಸಂಬಂಧ ಎನ್ನುವಂತಹದ್ದು ಅದೊಂದು ಬೆಲೆ ಕಟ್ಟಲು ಸಾಧ್ಯವಾಗದೇ ಇರುವ ಕಾಣಿಕೆಯಾಗಿದೆ. ಮಗುವಿನ ತ್ವಚೆ ತುಂಬಾ ಎಳಸಾಗಿದ್ದು, ಮಗುವಿನ ಕಾಳಜಿಯ ವಿಷಯದಲ್ಲಿ ತಾಯಿ ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ನಿಮ್ಮ ಮಗುವಿನ ನೀವು ಡೈಪರ್ ಹಾಕುತ್ತೀರಿ ಎಂದಾದಲ್ಲಿ ಇದರಿಂದ ಒಮ್ಮೊಮ್ಮೆ ಮಗುವಿನ ಪೃಷ್ಠ ಭಾಗದಲ್ಲಿ ಗುಳ್ಳೆ, ತುರಿಕೆಗಳು ಉಂಟಾಗುವ ಸಂಭವಿರುತ್ತದೆ.

ಹಸು ಗೂಸುಗಳಿಗೆ ಸಾಮಾನ್ಯವಾಗಿ ಕಾಡುವ 8 ತ್ವಚೆಯ ಸಮಸ್ಯೆಗಳು

ಬಿಸಿ, ತೇವ, ಯೀಸ್ಟ್ಇ ಲ್ಲವೇ ಫಂಗಸ್ ರಚನೆಯಿಂದ ಮಗುವಿನ ಈ ಭಾಗದಲ್ಲಿ ಅಸಹನೀಯ ತೊಂದರೆ ಉಂಟಾಗುತ್ತದೆ. ಮಗುವಿನ ಈ ತೊಂದರೆಯನ್ನು ನಿವಾರಿಸಲು ನೀವು ಮಾರುಕಟ್ಟೆಯಲ್ಲಿ ದೊರೆಯುವ ಬೇರೊಂದು ಉತ್ಪನ್ನಗಳನ್ನು ಬಳಸುವ ಬದಲಿಗೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ. ಈ ಸಲಹೆಗಳು ನೈಸರ್ಗಿಕವಾಗಿದ್ದು ನಿಮ್ಮ ಮಗುವಿಗೆ ಯಾವುದೇ ರೀತಿಯ ಹಾನಿಯುಂಟಾಗದಂತೆ ಕಾಪಾಡುತ್ತದೆ....

ಬಿಸಿ ನೀರ ಸ್ನಾನ

ಬಿಸಿ ನೀರ ಸ್ನಾನ

ಮಗುವಿಗೆ ಡೈಪರ್ ಹಾನಿಯಿಂದ ತೊಂದರೆ ಉಂಟಾಗಿದೆ ಎಂದಾದಲ್ಲಿ ಇದೊಂದು ಸಮಾಧಾನ ಉಂಟುಮಾಡುವಂತಹ ವಿಷಯವಾಗಿದೆ. ಉಗುರು ಬೆಚ್ಚನೆಯ ನೀರಿನಲ್ಲಿ ಮಗುವನ್ನು 10-15 ನಿಮಿಷ ಹಾಗೆಯೇ ಬಿಟ್ಟು ಬಿಡಿ. ದಿನದಲ್ಲಿ ಮೂರು ಬಾರಿ ಹೀಗೆ ಮಾಡಿ. ಮಗುವಿಗೆ ಉಂಟಾಗಿರುವ ಕಿರಿಕಿರಿ ಮಾಯವಾಗುತ್ತದೆ. ಡೈಪರ್ ಸ್ಥಳವನ್ನು ಸ್ನಾನದ ನಂತರ ಸಂಪೂರ್ಣ ಒಣಗಿಸಿ.

ಎದೆಹಾಲು

ಎದೆಹಾಲು

ಡೈಪರ್ ಹಾನಿಯನ್ನು ತಡೆಗಟ್ಟಲು ಎದೆಹಾಲನ್ನು ಬಳಸಬಹುದಾಗಿದೆ. ಎದೆಹಾಲು ಇನ್‌ಫೆಂಕ್ಶನ್ ಅನ್ನು ನಿವಾರಿಸಲು ಸೂಕ್ತವಾಗಿದೆ. ಇದರಲ್ಲಿರುವ ಪೋಷಕ ಅಂಶಗಳು ಮಗುವಿಗೆ ರೋಗನಿರೋಧಕ ಶಕ್ತಿಯನ್ನು ನೀಡುತ್ತವೆ. ಉರಿ ಇರುವ ಭಾಗದಲ್ಲಿ ಎದೆಹಾಲನ್ನು ಸಿಂಪಡಿಸಿ. ಡೈಪರ್ ಹಾಕುವ ಮುನ್ನ ಅದು ಸಂಪೂರ್ಣ ಒಣಗಲಿ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಅಲ್ಕಲೈನ್ ಸ್ವಭಾವವನ್ನು ಹೊಂದಿರುವ ಬೇಕಿಂಗ್ ಸೋಡಾ ಮೂತ್ರದ ಸೋಂಕಿನಿಂದ ಉಂಟಾಗಿರುವ ನವೆಯನ್ನು ದೂರಮಾಡುತ್ತದೆ. 2 ಚಮಚಗಳಷ್ಟು ಬೇಕಿಂಗ್ ಸೋಡಾವನ್ನು ಉಗುರು ಬೆಚ್ಚನೆಯ ನೀರಿನಲ್ಲಿ ಮಿಶ್ರ ಮಾಡಿ. ಹತ್ತಿಯ ಉಂಡೆಯನ್ನು ಬಳಸಿಕೊಂಡು ಈ ದ್ರಾವಣದಲ್ಲಿ ಅದನ್ನು ಅದ್ದಿಕೊಂಡು ಗುಳ್ಳೆಗಳ ಮೇಲೆ ಹಚ್ಚಿ. ನಂತರ ಸ್ವಚ್ಛಗೊಳಿಸಿ.

ಮೋಸರು

ಮೋಸರು

ಮೋಸರು ಮತ್ತು ಬೇಕಿಂಗ್ ಸೋಡಾ - 1-2 ಚಮಚ

ಆಲೀವ್ ಆಯಿಲ್ 3-4 ಹನಿ

ಮೋಸರು ಅನ್ನು ಗುಳ್ಳೆಗಳ ಮೇಲೆ ಹಚ್ಚಿ. ಹಾಗೆಯೇ ಕೆಲವು ನಿಮಿಷ ಬಿಡಿ. ಒಣಗಿದ ನಂತರ ಇದನ್ನು ತೊಳೆಯಿರಿ. ಗುಳ್ಳೆಗಳ ಮೇಲೆ ಬೇಕಿಂಗ್ ಸೋಡಾ ಹಚ್ಚಿ ಗಂಟೆಗಳ ಕಾಲ ಹಾಗೆಯೇ ಬಿಡಿ. ಆಸಿಡಿಕ್ ಹಾನಿಯಿಂದ ಸಂರಕ್ಷಿಸಲು ಅಲೀವ್ ಆಯಿಲ್ ಹಚ್ಚಿ.

ಓಟ್‌ಮೀಲ್

ಓಟ್‌ಮೀಲ್

ಇದು ನೈಸರ್ಗಿಕವಾಗಿ ಡೈಪರ್ ಹಾನಿಯನ್ನು ತಡೆಗಟ್ಟುತ್ತದೆ. ಹುಡಿಮಾಡಿದ ಓಟ್‌ಮೀಟ್ ಅನ್ನು ಸ್ನಾನದ ನೀರಿಗೆ ಬೆರೆಸಿಕೊಂಡು ಇದನ್ನು ಬಳಸಬಹುದಾಗಿದೆ. ನಿಮ್ಮ ಮಗುವನ್ನು 10-15 ನಿಮಿಷ ನೀರಿನಲ್ಲಿ ಬಿಡಿ. ನಂತರ ಅವರನ್ನು ದ್ರಾವಣದಲ್ಲಿ ಕುಳ್ಳಿರಿಸಿ. ದಿನದಲ್ಲಿ ಎರಡು ಬಾರಿ ಇದನ್ನು ಅನುಸರಿಸಿ.

 ಬಿಳಿ ವಿನೇಗರ್

ಬಿಳಿ ವಿನೇಗರ್

ಗುಳ್ಳೆಗಳನ್ನು ಹೋಗಲಾಡಿಸಲು ಬಿಳಿ ವಿನೇಗರ್ ಅನ್ನು ಕೂಡ ನಿಮಗೆ ಬಳಸಬಹುದಾಗಿದೆ. ಒಂದು ಚಮಚ ಬಿಳಿ ವಿನೇಗರ್ ಅನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ. ನಂತರ ಉರಿತ ಇರುವ ಭಾಗಕ್ಕೆ ಹಚ್ಚಿ.

ತೆಂಗಿನೆಣ್ಣೆ

ತೆಂಗಿನೆಣ್ಣೆ

ತ್ವಚೆಯ ಸಮಸ್ಯೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ತೆಂಗಿನೆಣ್ಣೆ ಕಾರ್ಯನಿರ್ವಹಿಸುತ್ತದೆ. 2 ಚಮಚ ತೆಂಗಿನೆಣ್ಣೆಯೊಂದಿಗೆ 3-5 ಚಮಚ ಟಿ ಟ್ರಿ ಆಯಿಲ್ ಅನ್ನು ಮಿಶ್ರ ಮಾಡಿ. ಇದನ್ನು ತ್ವಚೆಗೆ ಹಚ್ಚಿ ಮತ್ತು ಸ್ವಲ್ಪ ಕಾಲ ಹಾಗೆಯೇ ಬಿಡಿ. ದಿನದಲ್ಲಿ ಹಲವಾರು ಬಾರಿ ಈ ವಿಧಾನವನ್ನು ಅನುಸರಿಸಿ.

ಜೋಳ

ಜೋಳ

ಗುಳ್ಳೆಗಳ ಮೇಲೆ ಜೋಳ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಗುವಿನ ಕೆಳಭಾಗವನ್ನು ಸ್ವಚ್ಛಮಾಡಿ. ಜೋಳದ ಹುಡಿಯನ್ನು ಮಗುವಿನ ಗುಳ್ಳೆಗಳ ಮೇಲೆ ಸವರಿ. ಇದು ಗುಳ್ಳೆಗಳು ಒಣಗಲು ಸಹಾಯ ಮಾಡುತ್ತದೆ ಮತ್ತು ಉರಿ ಇದ್ದರೆ ಅದನ್ನು ಕಡಿಮೆ ಮಾಡುತ್ತದೆ.

ಆಲೀವ್ ಆಯಿಲ್

ಆಲೀವ್ ಆಯಿಲ್

ತುರಿಕೆ ಮತ್ತು ನವೆಯನ್ನು ಹೋಗಲಾಡಿಸಲು ಆಲೀವ್ ಆಯಿಲ್ ಸಹಕಾರಿಯಾಗಿದೆ. ನೀರಿನೊಂದಿಗೆ ಅಲೀವ್ ಆಯಿಲ್ ಅನ್ನು ಸಮಪ್ರಮಾಣದಲ್ಲಿ ಬೆರೆಸಿ ದ್ರಾವಣ ಸಿದ್ಧಪಡಿಸಿ. ನಂತರ ಮಗುವಿನ ಆ ಭಾಗಕ್ಕೆ ಹಚ್ಚಿ.

ಶಿಯಾ ಬಟರ್

ಶಿಯಾ ಬಟರ್

ಡೈಪರ್ ಹಾನಿಯಿಂದ ಉಂಟಾಗಿರುವ ಯೀಸ್ಟ್ ಅನ್ನು ನಿವಾರಿಸಲು ಇದು ಸಹಕಾರಿಯಾಗಿದೆ. ಇದು ಆಂಟಿಫಂಗಲ್ ಆಗಿದ್ದು ವೆಜಿಟೇಬಲ್ ಕೊಬ್ಬನ್ನು ಒಳಗೊಂಡಿದೆ. ನಿಮ್ಮ ಹಸ್ತವನ್ನು ಬಳಸಿಕೊಂಡು ಇದನ್ನು ಬೆಚ್ಚಗಾಗಿಸಿ. ನಂತರ ಮಗುವಿನ ಪೃಷ್ಠ ಭಾಗಕ್ಕೆ ಹಚ್ಚಿ.

ಅಲೊವೇರಾ ಜೆಲ್

ಅಲೊವೇರಾ ಜೆಲ್

ಇದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಮಗುವಿನ ಡೈಪರ್ ಹಾನಿಯ ಸಮಸ್ಯೆಯನ್ನು ನಿವಾರಿಸುತ್ತದೆ. ಈ ದ್ರಾವಣವನ್ನು ತೆಗೆದುಕೊಂಡು ಮಗುವಿನ ಪೃಷ್ಠಕ್ಕೆ ಹಚ್ಚಿ.

ಇಪ್ಸಮ್ ಸಾಲ್ಟ್

ಇಪ್ಸಮ್ ಸಾಲ್ಟ್

ಗುಳ್ಳೆ ನವೆಯನ್ನು ಹೋಗಲಾಡಿಸಲು ಇದು ಪರಿಣಾಮಕಾರಿಯಾಗಿದೆ. ಈ ಉಪ್ಪು 1 ಚಮಚ ಮತ್ತು ಬೇಕಿಂಗ್ ಸೋಡಾ 1-2 ಚಮಚಗಳಷ್ಟು ತೆಗೆದುಕೊಳ್ಳಿ. ಇದನ್ನು ಉಗುರು ಬೆಚ್ಚನೆಯ ನೀರಿನಲ್ಲಿ ಮಿಶ್ರ ಮಾಡಿ ಮತ್ತು ಮಗುವಿನ ಹಿಂಬದಿಗೆ ಇದನ್ನು ಹಚ್ಚಿ 10 ನಿಮಿಷ ಹಾಗೆಯೇ ಬಿಡಿ. ದಿನದಲ್ಲಿ 2-3 ಬಾರಿ ಹೀಗೆ ಮಾಡಿ.

ಬೀಸ್ ವ್ಯಾಕ್ಸ್

ಬೀಸ್ ವ್ಯಾಕ್ಸ್

ಬೀಸ್ ವ್ಯಾಕ್ಸ್ ಕೂಡ ಡೈಪರ್ ಹಾನಿಯನ್ನು ತಡೆಗಟ್ಟಲು ಉಪಯೋಗಕಾರಿಯಾಗಿದೆ.

ಬೀಸ್‌ ವ್ಯಾಕ್ಸ್ -1/8 ಕಪ್

ತೆಂಗಿನೆಣ್ಣೆ - 2/3 ಕಪ್

ಜಿಂಕ್ ಆಕ್ಸೈಡ್ ಪೌಡರ್ - 3/4 ಚಮಚ

ಜಿಂಕ್ ಅಕ್ಸೈಡ್ ಬ್ಯಾಕ್ಟೀರಿಯಾ ವಿರೋಧಿಯಾಗಿದ್ದು ಒದ್ದೆಯಿಂದ ಉಂಟಾದ ಹಾನಿಯಿಂದ ಸಂರಕ್ಷಿಸುತ್ತದೆ. ಬೀಸ್‌ ವ್ಯಾಕ್ಸ್ ಮತ್ತು ತೆಂಗಿನೆಣ್ಣೆಯನ್ನು ಜೊತೆಯಾಗಿ ಕಾಯಿಸಿ ಮತ್ತು ಇದಕ್ಕೆ ಜಿಂಕ್ ಆಕ್ಸೈಡ್ ಹುಡಿಯನ್ನು ಹಾಕಿ. ಬ್ಲೆಂಡರ್ ಬಳಸಿ ಇದನ್ನು ಜೊತೆಯಾಗಿ ಮಿಶ್ರ ಮಾಡಿ ಮತ್ತು ಒಂದು ಪಾತ್ರೆಗೆ ಹಾಕಿ. ತಣ್ಣಗಾಗಲು ಬಿಡಿ ನಂತರ ಹಚ್ಚಿ.

ಕ್ರ್ಯಾನ್‌ಬೆರ್ರಿ ಜ್ಯೂಸ್

ಕ್ರ್ಯಾನ್‌ಬೆರ್ರಿ ಜ್ಯೂಸ್

ಗುಳ್ಳೆಗಳು ಮತ್ತು ನವೆಗಳ ಮೇಲೆ ಇದನ್ನು ಹಚ್ಚಬಹುದಾಗಿದೆ. ಇದನ್ನು ಮಿಕ್ಸಿಯಲ್ಲಿ ಅರೆದು ಜ್ಯೂಸ್‌ನಂತೆ ತಯಾರಿಸಿ ಮಗುವಿನ ಪೃಷ್ಠದ ಮೇಲೆ ಹಚ್ಚಿ.

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ಇದರಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಅಂಶಗಳು ಗುಳ್ಳೆಗಳನ್ನು ಪರಿಣಾಮಕಾರಿಯಾಗಿ ನಾಶಮಾಡುತ್ತವೆ. ಒಂದು ಚಮಚದಷ್ಟು ಆಪಲ್ ಸೀಡರ್ ವಿನೇಗರ್ ಅನ್ನು ತಣ್ಣೀರಿನಲ್ಲಿ ಬೆರೆಸಿಕೊಳ್ಳಿ. ಇದನ್ನು ನವೆಯಾಗಿರುವ ಸ್ಥಳದಲ್ಲಿ ಹಚ್ಚಿ.

 ತಂಪು ಗಾಳಿ

ತಂಪು ಗಾಳಿ

ನಿಮ್ಮ ಮಗುವಿನ ಕೆಳಭಾಗವು ಗಾಳಿಗೆ ಒಡ್ಡಿಕೊಳ್ಳಲಿ. ಈ ಭಾಗ ಹೆಚ್ಚು ಬಿಗಿಯಾಗಿದ್ದರೆ ನಿಮ್ಮ ಮಗುವಿಗೆ ಸಂಕಟ ಉಂಟಾಗುವ ಸಾಧ್ಯತೆ ಇರುತ್ತದೆ. ಮನೆಯಲ್ಲಿರುವಾಗ ಆದಷ್ಟು ಡೈಪರ್ ಬದಲಿಗೆ ಬಟ್ಟೆಯನ್ನು ಬಳಸಿ.

ಬಟ್ಟೆಯ ವೈಪ್ಸ್

ಬಟ್ಟೆಯ ವೈಪ್ಸ್

ಬಟ್ಟೆಯ ವೈಪ್‌ಗಳನ್ನು ಬಳಸಿ ಮಗುವಿಗೆ ಉಂಟಾಗುವ ಕಿರಿಕಿರಿಯನ್ನು ನಿಮಗೆ ತಪ್ಪಿಸಿಕೊಳ್ಳಬಹುದಾಗಿದೆ. ಆದಷ್ಟು ಮೆತ್ತಗಿನ ವೈಪ್‌ಗಳನ್ನು ಬಳಸಿಕೊಂಡು ಈ ಭಾಗವನ್ನು ಉರಿತ, ನವೆಯಿಂದ ಸಂರಕ್ಷಿಸಿ.

English summary

Amazing Home Remedies To Treat Diaper Rash In Babies

Nature provides us with some incredible ingredients that can cure the rashes significantly. In addition, there are also some easy home remedies that can be administered to the babies. After all, you would want your baby to be safe. So, go the extra mile and follow these home remedies for diaper rashes in babies.
X
Desktop Bottom Promotion