For Quick Alerts
ALLOW NOTIFICATIONS  
For Daily Alerts

  ಕಂದನ ಬಾಯಲ್ಲಿ ಹುಣ್ಣೇ? ಆತಂಕ ಬೇಡ, ಇಲ್ಲಿವೆ ನೋಡಿ ಮನೆಮದ್ದುಗಳು

  By Anuradha
  |

  ಶಿಶುವಿನ ತಾಯಂದಿರಿಗೆ ಅದರ ಎಷ್ಟು ಆರೈಕೆ ಮಾಡಿದರೂ ಕಡಿಮೆಯೆ ಎನ್ನಿಸುವದಲ್ಲವೆ? ತನ್ನದೆಲ್ಲವನ್ನೂ ಬದಿಗೊತ್ತಿ ಹಗಲೂ ರಾತ್ರಿ ಅದರ ಆರೈಕೆ ಮಾಡಿ ಸದೃಢ ವ್ಯಕ್ತಿಯನ್ನಾಗಿ ಮಾಡಲು ಶ್ರಮಿಸುತ್ತಾಳೆ. ಇನ್ನೂ ಮೊಲೆಹಾಲು ಕೊಡಿಯುತ್ತಿರುವ ಕಂದನ ನಾಲಿಗೆಯ ಮೇಲೆ ಬಿಳಿ ಬಣ್ಣದ ಗಾಯಗಳು ಕಂಡು ಬಂದರೆ ಗಾಭರಿಯಾಗುವದು ಸಹಜವಲ್ಲವೆ.

  ಈ ಸಮಸ್ಯೆಯು ಹಾಲುಣಿಸಲ್ಪಡುವ ಅನೇಕ ಎಳೆ ಮಕ್ಕಳಲ್ಲಿ ೨ ವರುಷದ ವೆರೆಗೂ ಕಾಣಿಸಲ್ಪಡಬಹುದು. ಇದು ಕ್ಯಾಂಡಿಡಾ ಆಲ್ಬಿಕನ್ಸ್ ಎನ್ನುವ ಯೀಸ್ಟ್ ಅಥವಾ ಫಂಗಸ್ ನ ಅತಿಯಾದ ಬೆಳವಣಿಗೆಯಿಂದ ಕಾಣುವ ಗಾಯಗಳಾಗಿದೆ. ಇದು ಬಾಯಿಯ ಬದಿಯಲ್ಲಿ ಅಥವಾ ನಾಲಗೆಯ ಮೇಲೆ ಕೂಡ ಕಾಣಬಹುದು. ಇದರಿಂದಾಗಿ ನಾಲಗೆಯ ಮೇಲೆ ಮತ್ತು ಗಂಟಲಲ್ಲಿ ಕೆಂಪು ಬಣ್ಣದ ಗಾಯಗಳಾಗುತ್ತವೆ. ನಮ್ಮ ದೇಹದಲ್ಲಿ ಸ್ವಲ್ಪಮಟ್ಟಿಗೆ ಯೀಸ್ಟ್ ಇದ್ದೇ ಇರುತ್ತದೆ. ಮಗುವಿನ ಜೀರ್ಣಕ್ರಿಯೆಯಲ್ಲಿ ಏನಾದರೂ ಏರು ಪೇರಾದರೆ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ಆಂಟಿಬಯೋಟಿಕ್‌ನ ಬಹಳವಾದ ಸೇವನೆಯಿಂದ ಆಗುತ್ತದೆ. mಮಗು ಜನನದ ಪ್ರಕ್ರಿಯೆಯಲ್ಲಿ ತಾಯಿಯ ಗರ್ಭದ್ವಾರದಲ್ಲಿ ಯೀಸ್ಟಿನ ಸಂಪರ್ಕಕ್ಕೆ ಬರುತ್ತದೆ. ಕೆಲವೊಮ್ಮೆ ಕಡಿಮೆ ರೋಗನಿರೋಧಕತೆಯಿರುವ ಮಕ್ಕಳಲ್ಲಿ ಈ ತರಹದ ಹುಣ್ಣು ಕಾಣಿಸಿಕೊಳ್ಳಬಹುದು.

  ಮೊದಲು ಈ ಹುಣ್ಣಿನ ಲಕ್ಷಣಗಳೇನೆಂದು ತಿಳಿದುಕೊಳ್ಳೋಣ ಬನ್ನಿ.

  * ಕಂದನ ನಾಲಿಗೆಯ ಮೇಲೆ ಬಿಳಿ ಅಥವ ಕೆಂಪು ಬಣ್ಣದ ಗಾಯಗಳು ಕಂಡು ಬರುವವು.

  * ಮೊದಲು ನಾಲಿಗೆಯನ್ನು ನಿಮ್ಮ ಬೆರಳುಗಳಿಂದ ನಿಧಾನವಾಗಿ ಸ್ವಚ್ಛಗೊಳಿಸಿ ನೋಡಿ, ಬಿಳಿಯ ಬಣ್ಣ ಮಾಯವಾದರೆ ಅದು ಕೇವಲ ಹಾಲು ಕುಡಿದು ಉಳಿದಿರುವ ಅದರ ಶೇಷ ಭಾಗವಷ್ಟೆ. ಒಂದುವೇಳೆ ಕಲೆ ಹೋಗದಿದ್ದರೆ, ಅದು ಬಾಯಿ ಹುಣ್ಣು ಆಗಿರುವ ಸಾಧ್ಯತೆಗಳಿವೆ.

  * ಈ ಸಂದರ್ಭದಲ್ಲಿ ಮಗು ಹಾಲು ಕುಡಿಯಲು ರಗಳೆ ಮಾಡಬಹುದು, ಅದಕ್ಕಾಗುವ ನೋವಿನಿಂದ ಕೊಂಚ ರಚ್ಚೆ ಕೂಡ ಹಿಡಿಯಬಹುದು.  ಸಾಧ್ಯವಾದಷ್ಟು ಬೇಗನೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವದು ಒಳ್ಳೆಯದು. ಆದರೆ ಕೆಲವೂಮ್ಮೆ ನಿಮಗೆ ತಕ್ಷಣವೇ ವೈದ್ಯರ ಬಳಿ ಹೋಗಲು ಅನುಕೂಲವಾಗಲಿಕ್ಕಿಲ್ಲ, ಆ ಸಂದರ್ಭದಲ್ಲಿ ಉಪಯೋಗಿಸಬಹುದಾದ ಕೆಲವು ಗೃಹೋಪಯೋಗಿ ಟಿಪ್ಸ್ ಓದಿ ನೋಡಿ. ವೈದ್ಯರ ಭೇಟಿಯ ನಂತರವೂ ನೀವು ಈ ಗೃಹೋಪಯೋಗಿ ವಿಧಾನವನ್ನು ದಿನಕ್ಕೆರಡು ಮೂರು ಬಾರಿ ಪುನರಾವರ್ತಿಸಿದರೆ ಬೇಗ ಪರಿಹಾರ ಸಿಗಬಹುದು....

  ಬೇಕಿಂಗ್ ಸೋಡ

  ಬೇಕಿಂಗ್ ಸೋಡ

  ಬೇಕಿಂಗ್ ಸೋಡ ಅತ್ಯಂತ ಪರಿಣಾಮಕಾರಿ ಶೀಲಿಂಧ್ರ ಸಂಹಾರಿ. ಇದರ ಸಹಾಯದಿಂದ ಬಾಯಿಯಲ್ಲಿನ ಜಲಜನಕತ್ವ(ಪಿ ಎಚ್ ಮಟ್ಟ)ವನ್ನು ಸರಿಯಾಗಿ ನಿಭಾಯಿಸಬಹುದು. ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಚಿಟುಗೆ ಬೇಕಿಂಗ್ ಸೋಡ ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಸ್ವಚ್ಛವಾದ ಬೆರಳಿನಿಂದ ಅಥವ ಮೆತ್ತಗಿನ ಹತ್ತಿಯಿಂದ ಮಗುವಿನ ನಾಲಿಗೆಗೆ ಸವರಿ.

  ಹಸಿ ಬೆಳ್ಳುಳ್ಳಿ

  ಹಸಿ ಬೆಳ್ಳುಳ್ಳಿ

  ನಮಗೆಲ್ಲ ತಿಳಿದಿರುವಂತೆ ಬೆಳ್ಳುಳ್ಳಿ ಸರ್ವಕಾಲಿಕ ಔಷಧಿ. ಇದರಲ್ಲಿ ಭರಪೂರಿತವಾದ ಆಂಟಿಬ್ಯಾಕ್ಟಿರಿಯಲ್ ಹಾಗು ಆಂಟಿಫಂಗಲ್ ಗುಣಗಳಿವೆ. ಒಂದೆಸಳು ಬೆಳ್ಳುಳ್ಳಿ ತೆಗೆದುಖೊಂಡು ಚೆನ್ನಾಗಿ ಜಜ್ಜಿಕೊಳ್ಳಿ. ಅದರ ರಸವನ್ನು ನಿಧಾನಕ್ಕೆ ಹಸುಳೆಯ ನಾಲಿಗೆಗೆ ಸವರಿ.

  ವಿಟಮಿನ್ ಸಿ

  ವಿಟಮಿನ್ ಸಿ

  ವಿಟಮಿನ್ ಸಿ ಅತ್ಯಂತ ಒಳ್ಳೆಯ ರೋಗನಿರೋಧಕತೆ ಹೊಂದಿದೆ. ಮೊಲೆಯೂಡಿಸುವ ತಾಯಿ ಇದ್ದರೆ, ತಾಯಿಯೇ ಕೆಲವು(ವೈದ್ಯರ ಸಲಹೆಯ ಮೇರೆಗೆ) ವಿಟಮಿನ್ ಸಿ ಗುಳಿಗೆ ತೆಗೆದುಕೊಂಡರೆ ಕಂದನಿಗೆ ಹಾಲಿನ ಮುಖಾತರ ಸರಬರಾಜಾಗಿ ಶಿಲೀಂಧ್ರದ ಸೋಂಕು ಬೇಗನೆ ಗುಣವಾಗುವದು.

  ಕ್ರಾನ್‌ಬೆರಿ

  ಕ್ರಾನ್‌ಬೆರಿ

  ಒಂದೆರಡು ಕ್ರಾನ್‌ಬೆರಿ ಹಣ್ಣುಗಳನ್ನು ಚೆನ್ನಾಗಿ ಗ್ರೈಂಡ್ ಮಾಡಿ ಅದರ ರಸ ಶೇಖರಿಸಿಟ್ಟುಕೊಳ್ಳಿ. ಮಗುವಿಗೆ ಕಾಲಕಾಲಕ್ಕೆ ಎರೆಡೆರದು ಚಮಚಗಳಷ್ಟು ಕುಡಿಸುತ್ತಿರಿ. ಹಣ್ಣು ಸಿಗದಿದ್ದರೆ, ಮಾರುಕಟ್ಟೆಯಲ್ಲಿನ ಸಕ್ಕರೆರಹಿತ ಪ್ಯಾಕೇಜ್ಡ್ ಜೂಸ್ ಆದರೂ ತೊಂದರೆಯಿಲ್ಲ.

  ಚಕ್ಕೆ

  ಚಕ್ಕೆ

  ಚಕ್ಕೆ ಒಂದು ಒಳ್ಳೆಯ ಆಂಟಿ ಫಂಗಲ್ ಏಜೆಂಟ್. ಒಂದು ತುಂಡು ಚಕ್ಕೆಯನ್ನು ಅರ್ಧ ಲೋಟ ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿಕೊಳ್ಳಿ. ಸಂಪೂರ್ಣ ತಣ್ಣಗಾದ ಬಳಿಕ, ಈ ರಸವನ್ನು ಆಗಿಂದಾಗ ಮಗುವಿಗೆ ಕುಡಿಸಿ.

  ಪ್ರೋ-ಬಯೊಟಿಕ್ ಆಹಾರಗಳು

  ಪ್ರೋ-ಬಯೊಟಿಕ್ ಆಹಾರಗಳು

  ಪ್ರೋ-ಬಯೊಟಿಕ್‌ನಲ್ಲಿ ಆರೋಗ್ಯಕ್ಕೆ ಸಹಾಯಕವಾದ ಒಳ್ಳೆಯ ಬ್ಯಾಕ್ಟೀರಿಯಾಗಳಿರುತ್ತವೆ. ಇದರ ಸೇವನೆಯಿಂದ ಬಾಯಿ ಮತ್ತು ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ದ್ವಿಗುಣಗೊಂಡು ಶಿಲೀಂಧ್ರ ಸಂಹಾರ ಮಾಡುತ್ತವೆ. ಕಂದನಿಗೆ ಆವಾಗಾವಾಗ ಸ್ವಲ್ಪ ಸ್ವಲ್ಪವೇ ಮೊಸರು ಅಥವಾ ಯೋಗರ್ಟ್‌ನ್ನು ತಿನ್ನಿಸುತ್ತಿರಿ.

  ಲವಂಗದ ಎಣ್ಣೆ

  ಲವಂಗದ ಎಣ್ಣೆ

  ಲವಂಗದ ಎಣ್ಣೆಯನ್ನು ಕಂದನ ನಾಲಿಗೆಗೆ ನಿಧಾನಕ್ಕೆ ಸವರುತ್ತಾಇರಿ. ಇದು ಅತ್ಯಂತ ಪರಿಣಾಮಕಾರಿ ಆಂಟಿ ಫಂಗಲ್ ಎಣ್ಣೆ.

  ಟೀ ಟ್ರೀ ಆಯಿಲ್

  ಟೀ ಟ್ರೀ ಆಯಿಲ್

  ಇದು ಕೂಡ ಲವಂಗದ ಎಣ್ಣೆಯಷ್ಟೇ ಪರಿಣಾಮಕಾರಿ ಆಂಟಿ ಫಂಗಲ್ ಎಣ್ಣೆ. ಈ ಎಣ್ಣೆಯನ್ನು ಶಿಶುವಿನ ನಾಲಿಗೆಗೆ ನಿಧಾನಕ್ಕೆ ಸವರುತ್ತಾಇರಿ.

  ಲ್ಯಾವೆಂಡರ್ ಎಣ್ಣೆ

  ಲ್ಯಾವೆಂಡರ್ ಎಣ್ಣೆ

  ಲ್ಯಾವೆಂಡರ್ ಎಣ್ಣೆಯು ಒಳ್ಳೆಯ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.ಈ ಎಣ್ಣೆಯನ್ನು ಸವರುವದರಿಂದ ಮಗುವಿನ ರಚ್ಚೆ ಸ್ವಲ್ಪ ಕಡಿಮೆಯಾಗಬಹುದು.

  ಮಿರ್ಹ(ರಾಳದ) ಎಣ್ಣೆ

  ಮಿರ್ಹ(ರಾಳದ) ಎಣ್ಣೆ

  ಮಿರ್ಹ ಎಣ್ಣೆಯು ಸಂಪೂರ್ಣ ದಂತ ಮತ್ತು ವಸಡುಗಳ ರಕ್ಷಕನಾಗಿ ಕೆಲಸ ಮಾಡುತ್ತದೆ. ಈ ಎಣ್ಣೆಯನ್ನು ಸವರುವದರಿಂದ ಮಗುವಿಗ ಸ್ವಲ್ಪ ಆರಾಮೆನ್ನಿಸಬಹುದು.

  ಒರೆಗ್ಯಾನೋದ ಎಣ್ಣೆ

  ಒರೆಗ್ಯಾನೋದ ಎಣ್ಣೆ

  ಒರೆಗ್ಯಾನೋ ಯೀಸ್ಟನ್ನು ನಾಶಮಾಡುತ್ತದೆ. ಸ್ವಚ್ಚವಾದ ಕೈಗಳಿಂದ ಕಂದನ ನಾಲಿಗೆಗೆ ಲೇಪಿಸಿ. ಒಳ್ಳೆಯ ಪರಿಹಾರ ಸಿಗುವದು.

  ಕೊಬ್ಬರಿ ಎಣ್ಣೆ

  ಕೊಬ್ಬರಿ ಎಣ್ಣೆ

  ಕೊಬ್ಬರಿ ಎಣ್ಣೆಯ ಉಪಯೋಗಗಳು ಒಂದಲ್ಲ ಎರಡಲ್ಲ ಹಲವಾರಲ್ಲವೆ? ಒಂದೆರಡು ಹನಿ ಎಣ್ಣೆಯನ್ನು ಸೋಂಕಿರುವ ಸ್ಥಳದಲ್ಲಿ ಲೇಪಿಸಿರಿ, ಮಗುವಿಗ ಸ್ವಲ್ಪ ನೋವು ಕಡಿಮೆಯಾಗುವದು.

  ಬ್ರೆಸ್ಟ್ ಪಂಪುಗಳನ್ನು ಮತ್ತು ಪ್ಯಾಸಿಫಾಯರ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವದು

  ಬ್ರೆಸ್ಟ್ ಪಂಪುಗಳನ್ನು ಮತ್ತು ಪ್ಯಾಸಿಫಾಯರ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವದು

  ನಾವು ಎಷ್ಟೇ ಸ್ವಚ್ಛತೆ ಕಾಪಾಡಿಕೊಂಡರೂ ನಮಗೇ ತಿಳಿಯದಂತೆ ಬ್ಯಾಕ್ಟೀರಿಯ ಮತ್ತು ಫಂಗಸ್ ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಬ್ರೆಸ್ಟ್ ಪಂಪುಗಳನ್ನು ಮತ್ತು ಪ್ಯಾಸಿಫಾಯರ್‌ಗಳನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ಪ್ರತಿದಿನ ಸ್ಟರಿಲೈಸ್ ಮಾಡುತ್ತಿರಬೇಕು. ಇದರಿಂದ ಮಗುವಿಗೆ ಆಗುವ ಸೋಂಕನ್ನು ಅರ್ಧದಷ್ಟಾದರು ತಡೆಯಬಹುದು.

  ಅಲೋವೆರ(ಲೋಳೆ ಸರ)

  ಅಲೋವೆರ(ಲೋಳೆ ಸರ)

  ಅಲೋವೆರ ಸೌಂದರ್ಯವರ್ಧಕವೂ ಹೌದು ಮತ್ತು ಆರೋಗ್ಯವರ್ಧಕವೂ ಹೌದು. ಇದರ ಉಪಯೋಗಗಳು ಒಂದಲ್ಲ ಎರಡಲ್ಲ. ಅಲೋವೆರ ಎಲೆಯನ್ನು ಮಧ್ಯಕ್ಕೆ ಕತ್ತರಿಸಿ, ಅದರ ರಸವನ್ನು ಶೇಖರಿಸಿಟ್ಟುಕೊಳ್ಳಿ. ನಂತರ ಸೋಂಕಿರುವ ಸ್ಥಳದಲ್ಲಿ ಚೆನ್ನಾಗಿ ಲೇಪಿಸಿ.

  ಬೇವಿನ ಎಲೆಗಳು

  ಬೇವಿನ ಎಲೆಗಳು

  ಬೇವು ಅತ್ಯಂತ ಒಳ್ಳೆಯ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರ ನಿವಾರಕವಾಗಿದೆ. ಕೆಲವು ಎಲೆಗಳನ್ನು ತೆಗೆದುಕೊಂಡು ಮಿಕ್ಸರನಲ್ಲಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ನ್ನು ಸೋಂಕಾದ ಸ್ಥಳಕ್ಕೆ ಸವರಿ. ಇಲ್ಲವೆ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸ್ವಲ್ಪ ಜೇನುತುಪ್ಪವನ್ನು ಕಲೆಸಿ ಮಗುವಿಗೆ ಕುಡಿಸಿ, ಪರಿಹಾರ ಕಂಡುಕೊಳ್ಳಿ.

   ಹಾಲು ಮತ್ತು ಅರಿಶಿಣದ ಪೇಸ್ಟ್

  ಹಾಲು ಮತ್ತು ಅರಿಶಿಣದ ಪೇಸ್ಟ್

  ಅರಿಶಿಣವಂತು ಒಳ್ಳೆಯ ಆಂಟಿಸೆಪ್ಟಿಕ್, ಆಂಟಿ ಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣ ಹೊಂದಿದೆ. ಸ್ವಲ್ಪ ಹಾಲಿನ(ಮೊಲೆಯೂಡಿಸುತ್ತಿದ್ದರೆ, ಎದೆಹಾಲು ತೆಗೆದು ಅದಕ್ಕೆ ಬೆರೆಸಿ) ಜೊತೆಗೆ ಬೆರೆಸಿ ಪೇಸ್ಟ್ ಮಾಡಿಕೊಂದು ಅದನ್ನು ಸೋಂಕಾದ ಸ್ಥಳಕ್ಕೆ ಲೇಪಿಸಿ.

  ಸೇಬಿನ ರಸ ಮತ್ತು ಜೇನು

  ಸೇಬಿನ ರಸ ಮತ್ತು ಜೇನು

  ಸೇಬಿನ ರಸ ಬಾಯಿಯಲ್ಲಿನ ಆಮ್ಲೀಯತೆಯನ್ನು ತಟಸ್ಥಗೊಳಿಸುವದರಲ್ಲಿ ಸಹಾಯ ಮಾಡುತ್ತದೆ. ಸ್ವಲ್ಪ ಸೇಬಿನ ರಸ ಮತ್ತು ಜೇನುತುಪ್ಪವನ್ನು ಬೆರೆಸಿಕೊಳ್ಳಿ. ನಂತರ ಸೋಂಕಿರುವ ಸ್ಥಳಕ್ಕೆಲ್ಲ ಸಿಧಾನವಾಗಿ ಲೇಪಿಸಿ. ಒಂಡು ಎಚ್ಚರಿಕೆಯೆಂದರೆ, ಇದನ್ನು ಕೇವಲ ಒಂದು ವರ್ಷ ಮೇಲ್ಪಟ್ಟ ಮಗುವಿನಲ್ಲಿ ಮಾತ್ರ ಉಪಯೋಗಿಸಿಕೊಳ್ಳಿ.

  ಲಿಂಬೆ ರಸ ಮತ್ತು ಲೇಮನ್ ಗ್ರಾಸ್ ಎಣ್ಣೆ

  ಲಿಂಬೆ ರಸ ಮತ್ತು ಲೇಮನ್ ಗ್ರಾಸ್ ಎಣ್ಣೆ

  ಲಿಂಬೆ ರಸ ಮತ್ತು ಲೇಮನ್ ಗ್ರಾಸ್ ಎಣ್ಣೆ ಮಿಶ್ರಣಕ್ಕೆ ಬಹಳ ಪ್ರಬಲ ಆಂಟಿ ಫಂಗಲ್ ಗುಣವಿದೆ. ಇದನ್ನು ಅನೇಕ ಏಡ್ಸ್ ರೋಗಿಗಳಲ್ಲೂ ಕೂಡ ಬಳಸಲಾಗುತ್ತದೆ. ಇದರಿಲ್ಲಿನ ಆಮ್ಲೀಯತೆ ಫಂಗಸ್ ಬೆಳೆಯಲು ಬಿಡುವದಿಲ್ಲ. ಲಿಂಬೆ ರಸ ಮತ್ತು ಲೇಮನ್ ಗ್ರಾಸ್ ಎಣ್ಣೆಯನ್ನು ತಲಾ ಒಂದೊಂದು ಹನಿಯಂತೆ ಬೆರೆಸಿಕೊಳ್ಳಿ. ನಂತರ ಕಂದನಿಗೆ ಸೋಂಕಾದ ಸ್ಥಳಗಳಲ್ಲಿ ಲೇಪಿಸಿ.

  ಬಿಸಿ ಹಾಲು ಮತ್ತು ಹರಳೆಣ್ಣೆ

  ಬಿಸಿ ಹಾಲು ಮತ್ತು ಹರಳೆಣ್ಣೆ

  ಹರಳೆಣ್ಣೆಯು ಅತ್ಯುತ್ತಮ ಆಂಟಿ ಫಂಗಲ್‌ಆಗಿ ಕೆಲಸ ಮಾಡುವದು. ಆದರೆ ಇದರ ಸೇವನೆಯಿಂದ ಶಿಶುವಿಗೆ ಭೇದಿಯಾಗಬಹುದು.ಆದ್ದರಿಂದ ಸ್ವಲ್ಪ ಬೆಚ್ಚಗಿನ ಹಾಲಿನ ಜೊತೆಗೆ ಬೆರೆಸಿ ಸೋಂಕಿರುವ ಸ್ಥಳದಲ್ಲಿ ಲೇಪಿಸಿ, ಪರಿಹಾರ ಕಂಡುಕೊಳ್ಳಿ.

  ಅಗಸೆ ಬೀಜಗಳು

  ಅಗಸೆ ಬೀಜಗಳು

  ಅಗಸೆ ಹಿರಿಯರ ಆರೋಗ್ಯಕ್ಕೆ, ಕೊಲೆಸ್ಟರಾಲ್ ನಿಭಾಯಿಸಲಿಕ್ಕೆ ಹೇಗೆ ಸೂಕ್ತವೋ, ಹಾಗೆಯೆ ಶಿಲೀಂಧ್ರ ನಿವಾರಣೆಗೂ ಉಪಯುಕ್ತವಾಗಿದೆ. ಈ ಬೀಜಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಆರಿಸಿ ಅದನ್ನು ಶಿಶಿವಿಗೆ ಕುಡಿಸುವದರಿಂದ ಫಂಗಸ್ ಸೋಂಕು ಕಡಿಮೆಯಾಗುವದು.

  ಬೆಚ್ಚಗಿನ ನೀರು

  ಬೆಚ್ಚಗಿನ ನೀರು

  ಸರ್ವರೋಗಪರಿಹಾರಕ ನೀರನ್ನು ಮರೆಯಲು ಸಾಧ್ಯವೇ? ನೀರನ್ನು ಚೆನ್ನಾಗಿ ಕುದಿಸಿ, ಆರಿಸಿ ಶಿಶುವಿಗೆ ದಿನಪೂರ್ತಿ ಸ್ವಲ್ಪ ಸ್ವಲ್ಪವೆ ಕುಡಿಸುತ್ತಿರಿ. ಇದರಿಂದ ಮಗುವಿಗೆ ನಿರ್ಜಲೀಕರಣವಾಗುವದನ್ನು ತಡೆಯಬಹುದು.

  ಮೊಲೆತೊಟ್ಟುಗಳ ಅರೈಕೆ

  ಮೊಲೆತೊಟ್ಟುಗಳ ಅರೈಕೆ

  ಮೊಲೆತೊಟ್ಟುಗಳು ಸ್ವಚ್ಛವಾಗಿರದಿದ್ದರೆ, ಅಥವ ಏನಾದರೂ ಸೋಂಕಿಗೆ ಒಳಗಾಗಿದ್ದರೆ, ಮಗುವಿಗೂ ಕೂಡ ಸೋಂಕಾಗುವದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಮೊಲೆತೊಟ್ಟನ್ನು ಚೆನ್ನಾಗಿ ಆರೈಕೆ ಮಾಡಿಕೊಳ್ಳಿ, ಮತ್ತು ಪ್ರತಿ ಬಾರಿ ಹಾಲುಣಿಸುವಾಗ ಸ್ವಚ್ಛಗೊಳಿಸುವದನ್ನು ಮರೆಯಬೇಡಿ.

  ಬ್ಲಾಕ್ ವಾಲ್ನಟ್

  ಬ್ಲಾಕ್ ವಾಲ್ನಟ್

  ಬ್ಲಾಕ್ ವಾಲ್ನಟ್ ಕೂಡ ಒಳ್ಳೆಯ ಆಂಟಿ ಫಂಗಲ್‌ಆಗಿ ಕೆಲಸ ಮಾಡುವದು. ಇದು ಬಾಯಿಯಲ್ಲಿನ ಯಾವದೇ ತರಹದ ಲೋಳೆ ಪದಾರ್ಥವನ್ನು ನಿವಾರಿಸುವದು.ಬ್ಲಾಕ್ ವಾಲ್ನಟ್‌ನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಆ ನೀರನ್ನು ಮಗುವಿಗೆ ಕುಡಿಸುತ್ತಿರಬೇಕು.

   ಆಲಿವ್ ಗಿಡದ ಎಲೆಗಳು

  ಆಲಿವ್ ಗಿಡದ ಎಲೆಗಳು

  ಆಲಿವ್ ಎಣ್ಣೆ ಎಷ್ಟು ಆರೋಗ್ಯಕರವೋ, ಅಷ್ಟೇ ಆಲಿವ್ ಎಲೆಗಳು ಕೂಡ ಉಪಯುಕ್ತವಾಗಿವೆ. ಈ ಎಲೆಗಳು ಬಾಯಿಹುಣ್ಣಿಗೆ ರಾಮಬಾಣಾವಾಗಿವೆ.

  ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಈ ನೀರನ್ನು ಶಿಶುವಿಗೆ ದಿನಪೂರ್ತಿ ಸ್ವಲ್ಪ ಸ್ವಲ್ಪವೇ ಕುಡಿಸುತ್ತಿರಿ.

   ಕಲ್ಲಂಗಡಿಯ ತೊಗಟೆ

  ಕಲ್ಲಂಗಡಿಯ ತೊಗಟೆ

  ಕಲ್ಲಂಗಡಿಯ ತಿಂದಮೇಲೆ ನಾವು ಹಿಂದೆ ಮುಂದೆ ನೋಡದೆ ಅದರ ಸಿಪ್ಪೆಯನ್ನು ಬೀಸಾಡುತ್ತೇವಲ್ಲವೆ? ಆದರೆ ಸಿಪ್ಪೆಯಲ್ಲಿರುವ ಆಂಟಿ ಫಂಗಲ್ ಗುಣ ನಿಮಗೆ ಗೊತ್ತಿತ್ತಾ? ಸಿಪ್ಪೆಯನ್ನು ಸ್ವಲ್ಪ ಬಿಳಿಯ ತಿರುಳಿನೊಂದಿಗೆ ಮಗುವಿನ ಸೋಂಕಾದ ಸ್ಥಳಾಗಳಲ್ಲಿ ನಿಧಾನಕ್ಕೆ ಉಜ್ಜಿ, ಇದರಿಂದ ಬೇಗನೆ ಪರಿಹಾರ ಸಿಗುವದರಲ್ಲಿ ಸಂಶಯವೇ ಇಲ್ಲ.

  ಗ್ರೀನ್ ಟೀ

  ಗ್ರೀನ್ ಟೀ

  ಈಗಿಗಂತೂ ಎಲ್ಲರ ಬಾಯಲ್ಲೂ ಗ್ರೀನ್ ಟೀಯ ಉಪಯೋಗಗಳ ವರ್ಣನೆಯೇ ಕೇಳಿ ಬರುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಶೀಘ್ರವಾಗಿ ಫಂಗಸ್‌ನಿಂದ ಪರಿಹಾರ ಒದಗಿಸಿಕೊಡುತ್ತವೆ. ಸ್ವಲ್ಪ ನೀರಿನಲ್ಲಿ ಗ್ರೀನ್ ಟೀಯ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ತಣ್ಣಗಾದ ಮೇಲೆ ಮಗುವಿಗೆ ದಿನವಿಡೀ ಸ್ವಲ್ಪ ಸ್ವಲ್ಪವೇ ಕುಡಿಸುತ್ತಿರಿ, ಬೇಗನೆ ಪರಿಹಾರ ಸಿಗುವದು.

  ಮಜ್ಜಿಗೆ

  ಮಜ್ಜಿಗೆ

  ಮಜ್ಜಿಗೆ ಕೂಡ ಸರ್ವಕಾಲಿಕ ಸರ್ವರೋಗನಿವಾರಕವಾಗಿದೆಯಲ್ಲವೆ? ದಿನಕ್ಕೆರಡು ಬಾರಿ ಮಗುವಿಗೆ ಒಂದೆರಡು ಚಮಚದಷ್ಟು ಮಜ್ಜಿಗೆಯನ್ನು ಕುಡಿಸುತ್ತಿರಿ.ಬಹಳ ಕುಡಿಸಿದರೆ ಶೀತವಾದೀತು ಎಚ್ಚರಿಕೆ.

  ಬೋರಿಕ್ ಆಸಿಡ್

  ಬೋರಿಕ್ ಆಸಿಡ್

  ಬೋರಿಕ್ ಆಸಿಡ್‌ ಇರುವ ಅನೇಕ ಮೌತ್ ವಾಶ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ದೊಡ್ಡ ಮಕ್ಕಳಿಗೆ ಅದರಿಂದ ಗಾರ್ಗಲ್ ಮಾಡಿಸಬಹುದು. ಆದರೆ ಎಳೆ ಮಕ್ಕಳಿಗೆ ನೀವೆ ಸ್ವಲ್ಪ ನೀರಿನೊಂದಿಗೆ ಬೆರೆಸಿ ನಿಧಾನಕ್ಕೆ ಬಾಯಿಯನ್ನು ತೊಳೆಯಿರಿ. ಮಗು ನುಂಗದಂತೆ ನೋಡಿಕೊಳ್ಳಿ, ಇಲ್ಲವಾದರೆ ಭೇದಿಯಾದೀತು!!

  ಜೆನ್ಶಿಯನ್ ವಯೊಲೆಟ್

  ಜೆನ್ಶಿಯನ್ ವಯೊಲೆಟ್

  ಜೆನ್ಶಿಯನ್ ವಯೊಲೆಟ್ ಅನೇಕ ಪ್ರಯೋಗಾಲಯಗಳಲ್ಲಿ ಅನೇಕ ಬಾರಿ ಬಣ್ಣದ ಏಜೆಂಟ್‌ಆಗಿ ಬಳಸಲಾಗುತ್ತದೆ.ಆದರೆ ಇದಕ್ಕಿರುವ ಆಂಟಿ ಫಂಗಲ್ ಗುಣವು ಬಾಯಿಹುಣ್ಣನ್ನು ಬೇಗನೆ ಕಡಿಮೆಗೊಳಿಸುವದು. ಮಗುವಿನ ಬಾಯಿಗೆ ಸೋಂಕಾದ ಸ್ಥಳದಲ್ಲೆಲ್ಲ ಒಂದು ಹತ್ತಿಯ ತುಂಡಿನಿಂದ ನಿಧಾನಕ್ಕೆ ಲೇಪಿಸಿ ಪರಿಹಾರ ಕಂಡುಕೊಳ್ಳಬಹುದು.

  ಗ್ರೇಪ್ ಫ್ರುಟ್

  ಗ್ರೇಪ್ ಫ್ರುಟ್

  ಗ್ರೇಪ್ ಫ್ರುಟ್‌ಗಿರುವ ಆಮ್ಲೀಯತೆಯು ಶಿಲೀಂಧ್ರವನ್ನು ಬೇಗನೆ ನಾಶಪಡಿಸುತ್ತದೆ. ಮಗುವಿಗೆ ಕೆಲವು ಚಮಚದಷ್ಟು ರಸವನ್ನು ಕುಡಿಸಲು ಪ್ರಯತ್ನಿಸಿ, ಇದು ಸ್ವಲ್ಪ ಹುಳಿ ಮತ್ತು ಕಹಿ ಬೆರೆತಿರುವ ರುಚಿಯಾಗಿರುವದರಿಂದ, ಮಗುವಿನಿಂದ ನಿಮಗೆ ಸಹಕಾರ ಸಿಗಲಿಕ್ಕಿಲ್ಲ. ಆಗ, ನೀವು ಗ್ರೇಪ್ ಫ್ರುಟ್‌ನ ಬೀಜದ ಎಣ್ಣೆಯನ್ನು ನಿಧಾನಕ್ಕೆ ಲೇಪಿಸಿ ಪರಿಹಾರ ಕಾಂಡುಕೊಳ್ಳಬಹುದು.

  ಈ ಮೇಲೆ ತಿಳಿಸಿದ ಪರಿಹಾರಗಳಲ್ಲಿ ನಿಮಗೆ ಅನುಕೂಲಕರವಾದ ಒಂದನ್ನು ಮಾತ್ರ ಪಾಲಿಸಿ, ಇಲ್ಲವೆಂದರೆ ಹಲವಾರು ಪ್ರಯೋಗಗಳನ್ನು ಮಾಡಿ ಪಾಪ ಕಂದನನ್ನು ಸುಸ್ತು ಮಾಡಿ ಹಾಕೀರಿ ಜೋಕೆ ಮತ್ತೆ!!

  English summary

  30 Home Remedies For Oral Thrush In Infants & Kids

  Your little one is so small and vulnerable that any discomfort to your baby can be very worry some to you. Finding a white patch in your baby’s mouth can be terrifying especially if you do not know what to expect. The white patch in your baby’s mouth can be anything from milk residue to oral thrush. But you need to be sure before you can decide on the way to best deal and resolve the issue. Read on and you will learn how to differentiate a case of Oral thrush from the other cases. We shall also tell you some home remedies that can help prevent. Cure and deal with the oral thrush.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more