ತಬ್ಬಿ ಮುದ್ದಾಡುವ ಮೂಲಕ ಗರ್ಭ ಧರಿಸುವ ಸಾಧ್ಯತೆ ಹೆಚ್ಚುತ್ತದೆಯೇ?

By: Arshad
Subscribe to Boldsky

ಗರ್ಭ ಧರಿಸುವುದಕ್ಕೂ ಆತ್ಮೀಯವಾದ ಮುದ್ದಾಟಕ್ಕೂ ಏನಾದರೂ ಸಂಬಂಧವಿದೆಯೇ? ಗರ್ಭ ಧರಿಸಬೇಕಾದರೆ ಮುದ್ದಾಟ ಅಗತ್ಯವೇ? ತರ್ಕಬದ್ಧವಾಗಿ ಯೋಚಿಸಿದರೆ ಗರ್ಭಾಂಕುರವಾಗಲು ಅಂಡದೊಡನೆ ಒಂದೇ ಒಂದು ವೀರ್ಯಾಣುವಿನ ಮಿಲನವಾದರೆ ಸಾಕು. ಆದರೆ ಇದು ಸಾಧ್ಯವಾಗಬೇಕಾದರೆ ಹತ್ತು ಹಲವು ಅಂಶಗಳೂ ಪೂರಕವಾಗಿರುವಂತೆ ನಿಸರ್ಗವೇ ನಿಯಮವನ್ನು ರೂಪಿಸಿದೆ. ಹೆಚ್ಚು ಅಂಶಗಳು ಇದ್ದಷ್ಟೂ ಗರ್ಭ ಧರಿಸುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ.

ವೀರ್ಯಾಣುಗಳ ಸಂಖ್ಯೆ ಪ್ರತಿ ಸಿಸಿಯಲ್ಲಿ ಸುಮಾರು ನಲವತ್ತು ಮಿಲಿಯನ್ ನಷ್ಟು ಇರುವುದು, ಫಲವತ್ತತೆ ಹೆಚ್ಚಾಗಿರುವ ಅವಧಿ ಮೊದಲಾದ ಅಂಶಗಳ ಜೊತೆಗೇ ಆಕ್ಸಿಟೋಸಿನ್ ಎಂಬ ರಸದೂತವೂ ಪ್ರಮುಖ ಪಾತ್ರ ವಹಿಸುತ್ತದೆ. ಈ ರಸದೂತ ಮುದ್ದಾಟದ ಅವಧಿಯಲ್ಲಿ ಅತಿ ಹೆಚ್ಚು ಸ್ರವಿಸುತ್ತದೆ. ಈ ರಸದೂತ ಸ್ರವಿಸಿದಾಗಲೇ ಪ್ರೀತಿ, ನಿಃಸ್ವಾರ್ಥತೆ, ಅಪ್ಪಟ ಪ್ರೇಮ, ತನ್ನವರೆಂಬ ಭಾವನೆ ಮೊದಲಾದವು ಮನವನ್ನು ಆವರಿಸಿ ಭಾವುಕರಾಗಲು ನೆರವಾಗುತ್ತದೆ.

ಹೀಗೂ ಗರ್ಭ ಧರಿಸುವ ಸಂಭವವಿದೆ! ಯಾವುದಕ್ಕೂ ಎಚ್ಚರವಿರಲಿ...

ಅಷ್ಟೇ ಅಲ್ಲ, ಮನಸ್ಸನ್ನೂ ದೇಹವನ್ನು ಮುದಗೊಳಿಸುವ ಈ ಹಾರ್ಮೋನು ಗರ್ಭಾಂಕುರಗೊಳ್ಳಲೂ ನೆರವಾಗುತ್ತದೆ. ಮುದ್ದಾಟವೇಕೆ ಅವಶ್ಯ? ಅದಕ್ಕೂ ಮೊದಲು ಮಿಲನದ ಬಳಿಕ ಮಹಿಳೆಯರೇಕೆ ಮುದ್ದಾಟನ್ನು ಅಪೇಕ್ಷಿಸುತ್ತಾರೆ? ಇದಕ್ಕೂ ಆಕ್ಸಿಟೋಸಿನ್ ಎಂಬ ರಸದೂತವೇ ಕಾರಣವಾಗಿದೆ. ಬನ್ನಿ, ಗರ್ಭಾಂಕುರಕ್ಕೂ ಈ ಆಕ್ಸಿಟೋನಿಸ್‌ಗೂ ಏನು ಸಂಬಂಧವಿದೆ ಎಂಬುದನ್ನು ನೋಡೋಣ....

ಆಕ್ಸಿಟೋಸಿನ್‌ನ ಪಾತ್ರ

ಆಕ್ಸಿಟೋಸಿನ್‌ನ ಪಾತ್ರ

ಆಕ್ಸಿಟೋಸಿನ್‌ಗೆ ಮನಸ್ಸನ್ನು ಮುದಗೊಳಿಸುವ ಹೊರತಾಗಿ ಇನ್ನೂ ಹಲವಾರು ಕೆಲಸಗಳಿವೆ. ವಿಶೇಷವಾಗಿ ಮಹಿಳೆಯರಲ್ಲಿ ಮಾಸಿಕ ಋತುಚಕ್ರವನ್ನು ಕ್ರಮಬದ್ಧವಾಗಿಸುವುದು ಹಾಗೂ ತನ್ನ ಸಂಗಾತಿಯೊಂದಿಗೆ ಹೃದಯದಾಳದ ಬಂಧನವನ್ನು ಪಡೆಯುವುದು ಇವುಗಳಲ್ಲಿ ಮುಖ್ಯವಾಗಿದೆ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಮಗುವಿನ ತಾಯಿಯಾಗಿ ಕಾಳಜಿ ವಹಿಸುವ ಬಯಕೆಯನ್ನು ಮನದಲ್ಲಿ ಉಂಟುಮಾಡುವುದೂ ಆಗಿದೆ.

ಇತರ ಪಾತ್ರಗಳು

ಇತರ ಪಾತ್ರಗಳು

ಹೆರಿಗೆಯ ಸಮಯದಲ್ಲಿ ತಾಯಿ ಅತ್ಯಂತ ಹೆಚ್ಚಿನ ನೋವನ್ನು ಅನುಭವಿಸುತ್ತಾಳೆ. ಈ ನೋವನ್ನು ಸಹಿಸಲು ಸಾಧ್ಯವಾಗಿಸುವುದು ತನ್ನ ಒಡಲಿನಿಂದ ಜೀವವೊಂದು ಈ ಜಗತ್ತಿಗೆ ಬರುತ್ತಿದೆ ಎಂಬ ಭಾವನೆ. ಈ ಭಾವನೆಯನ್ನು ಮೂಡಿಸುವುದು ಆಕ್ಸಿಟೋಸಿನ್ ನ ಇನ್ನೊಂದು ಪಾತ್ರವಾಗಿದೆ. ಅಲ್ಲದೇ ಹೆರಿಗೆಯ ಸಮಯದಲ್ಲಿ ಜನನಾಂಗ ಮಗುವಿನ ದೇಹವನ್ನು ಹೊರದಬ್ಬಲು ಸಾಧ್ಯವಾಗುವಷ್ಟು ವಿಸ್ತರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಮಗುವಿನ ಜನನದ ಬಳಿಕ ಮಗುವಿಗೆ ಹಾಲೂಡಿಸಲೂ ಈ ರಸದೂತ ನೆರವಾಗುತ್ತದೆ.

ಮುದ್ದಾಟ ಮತ್ತು ಗರ್ಭಾಂಕುರ

ಮುದ್ದಾಟ ಮತ್ತು ಗರ್ಭಾಂಕುರ

ಯಾವಾಗ ಮಹಿಳೆಯೊಬ್ಬಳು ತನ್ನ ಸಂಗಾತಿಯೊಂದಿಗೆ ಹೆಚ್ಚು ಹೆಚ್ಚು ಮುದ್ದಾಟದಲ್ಲಿ ಕಾಲ ಕಳೆಯುತ್ತಾಳೆಯೋ ಆಗ ಹೆಚ್ಚು ಆಕ್ಸಿಟೋಸಿನ್ ಆಕೆಯ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದು ಗರ್ಭಾಂಕುರದ ಸಾಧ್ಯತೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ.

ಆತ್ಮೀಯ ಸ್ಪರ್ಶ

ಆತ್ಮೀಯ ಸ್ಪರ್ಶ

ಪತಿ ಪತ್ನಿಯರ ನಡುವೆ ಆತ್ಮೀಯ ಸ್ಪರ್ಶವಾದಷ್ಟೂ ಈ ಆಕ್ಸಿಟೋಸಿನ್ ಉತ್ಪಾದನೆ ಹೆಚ್ಚುತ್ತದೆ. ಅದರಲ್ಲೂ ಆತ್ಮೀಯವಾಗಿ ತಬ್ಬಿಕೊಂಡಾಗ ದೇಹಗಳು ಅಂಟಿಕೊಂಡಿರುವ ಸಮಯದಲ್ಲಿ ಇಬ್ಬರಿಗೂ ಅತಿ ಮಧುರವಾದ ಭಾವನೆಯನ್ನು ಮೂಡಿಸುತ್ತದೆ. ಇದೇ ಪ್ರಕಾರ ತಾಯಿ ತನ್ನ ಮಗುವನ್ನು ತಬ್ಬಿಕೊಂಡಾಗಲೂ ಅತ್ಯಂತ ಮಧುರ ಭಾವನೆಯನ್ನು ಅನುಭವಿಸುತ್ತಾಳೆ.

ಆಕ್ಸಿಟೋಸಿನ್ ಉತ್ಪಾದನೆಯ ಹೆಚ್ಚಳ ಹೇಗೆ?

ಆಕ್ಸಿಟೋಸಿನ್ ಉತ್ಪಾದನೆಯ ಹೆಚ್ಚಳ ಹೇಗೆ?

ಎಲ್ಲಿಯವರೆಗೆ ಆತ್ಮೀಯ ಸ್ಪರ್ಶವಿರುತ್ತದೆಯೋ, ಆತ್ಮೀಯತೆ, ಮಾನಸಿಕ ನೆಮ್ಮದಿ ಇರುತ್ತದೆಯೋ ಆಗ ಆಕ್ಸಿಟೋಸಿನ್ ಹೆಚ್ಚುತ್ತಾ ಹೋಗುತ್ತದೆ. ತದ್ವಿರುದ್ಧವಾಗಿ ಮಾನಸಿಕ ಒತ್ತಡ, ಉದ್ವೇಗ, ಸಂಬಂಧದಲ್ಲಿ ಬಿರುಕು, ಅನುಮಾನ, ಸಂಶಯ ಮೊದಲಾದವುಗಳಿಂದ ಆಕ್ಸಿಟೋಸಿನ್ ಉತ್ಪಾದನೆ ಕಡಿಮೆಯಾಗುತ್ತದೆ. ಮನೆಯಲ್ಲಿ ಶಾಂತಿಯುತ, ರಕ್ಷಣಾಭಾವನೆ ಹಾಗೂ ತನ್ನ ಹಿತವನ್ನು ಬಯಸುವ ಸಂಗಾತಿಯ ಇರುವಿಕೆಯಿಂದ ಆಕ್ಸಿಟೋಸಿನ್ ಮಟ್ಟ ಅತಿ ಹೆಚ್ಚಾಗಿರುತ್ತದೆ. ಈ ಮಹಿಳೆಯರು ಅತಿ ಸಂತೃಪ್ತ ಜೀವನ ನಡೆಸುತ್ತಾರೆ ಹಾಗೂ ಇವರು ಸುಲಭವಾಗಿ ಗರ್ಭ ಧರಿಸುತ್ತಾರೆ.

ಮುದ್ದಾಟದ ಮಹತ್ವ

ಮುದ್ದಾಟದ ಮಹತ್ವ

ಆಕ್ಸಿಟೋಸಿನ್ ಅಂಶ ದಿನದ ಅವಧಿಯಲ್ಲಿ ಮತ್ತು ಜೀವನದ ವಿವಿಧ ಹಂತಗಳಲ್ಲಿ ಏರುಪೇರಾಗುತ್ತಾ ಇರುತ್ತದೆ. ಆಕ್ಸಿಟೋಸಿನ್ ಪ್ರಮಾಣ ಹೆರಿಗೆಯ ಸಮಯದಲ್ಲಿ ಗರಿಷ್ಟವಾಗಿರುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿದ್ದಾಗಲೂ ಆಕ್ಸಿಟೋಸಿನ್ ಕಡಿಮೆಯಾಗದಂತೆ ನೋಡಿಕೊಳ್ಳುವುದು ಅಗತ್ಯ.

ಮುದ್ದಾಟದ ಮಹತ್ವ

ಮುದ್ದಾಟದ ಮಹತ್ವ

ಜೀವನದಲ್ಲಿ ನೆಮ್ಮದಿ ಪಡೆಯಲು ಹಲವು ರೀತಿಯಲ್ಲಿ ಆಕ್ಸಿಟೋಸಿನ್ ಅಗತ್ಯವಾಗಿದ್ದು ಉತ್ತಮ ಸಂಬಂಧ ಮುಂದುವರೆಸಲು ಹಾಗೂ ಗರ್ಭಾಂಕುರದ ಸಾಧ್ಯತೆ ಹೆಚ್ಚಿಸಲು ಅನಿವಾರ್ಯವೂ ಆಗಿದೆ.

English summary

Does Cuddling Help In Conceiving?

Are cuddling and pregnancy linked? Is it necessary to cuddle in order to conceive? Well, on the surface, getting pregnant may seem to require only a sperm and an egg. But there are so many other factors that can speed up the process or make things easy whether it is conception or pregnancy..
Subscribe Newsletter