For Quick Alerts
ALLOW NOTIFICATIONS  
For Daily Alerts

ನಾಸಾದ 10 ಗಗನಯಾತ್ರಿಗಳಲ್ಲಿ ಭಾರತೀಯ ಮೂಲದ ಅನಿಲ್ ಮೆನನ್

|

ಅಮೆರಿಕ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸಾ ತನ್ನ ಭವಿಷ್ಯದ ಕಾರ್ಯಚರಣೆಗಳಲ್ಲಿ ಕೆಲಸ ಮಾಡಲು ಆಯ್ಕೆ ಮಾಡಲಾದ 10 ಗಗನಯಾತ್ರಿಗಳಲ್ಲಿ ಒಬ್ಬರು ಭಾರತೀಯ ಮೂಲದ ಅನಿಲ್‌ ಮೆನನ್. ಈ ಹುದ್ದೆಗೆ ಸುಮಾರು 12,000ಕ್ಕೂ ಅಧಿಕ ಅರ್ಜಿಗಳು ಬಂದಿದ್ದೆವು, ಅವರಲ್ಲಿ ನಾಸಾ ಸಂಸ್ಥೆಯಲ್ಲಿ ದುಡಿಯಲು ಆಯ್ಕೆ ಮಾಡಿದ್ದು 10 ಜನರನ್ನು ಅಷ್ಟೇ, ಅದರಲ್ಲೊಬ್ಬರು ಅನಿಲ್‌ ಮೆನನ್.

anil menon

ಉಕ್ರೇನಿಯನ್ ಹಾಗೂ ಭಾರತೀಯ ವಲಸಿಗ ದಂಪತಿಯ ಮಗ ಅನಿಲ್‌ ಮೆನನ್‌. ಇವರು 2014ರಲ್ಲಿ ನಾಸಾ ಫ್ಲೈಟ್‌ ಸರ್ಜನ್‌ ಆಗಿ ಕೆಲಸ ಪ್ರಾರಂಭಿಸಿದರು. ನಂತರ ಅಂತರರಷ್ಟ್ರೀಯ ಬಾಹ್ಯಾಕಾಶ ವಿಮಾನ ನಿಲ್ದಾಣದಲ್ಲಿ ಡೆಪ್ಯೂಟಿ ಕ್ರೂ ಸರ್ಜನ್‌ ಆಗಿ ಕೆಲಸ ಮಾಡಿದ ಅನುಭವೂ ಇದೆ.

2018ರಲ್ಲಿ ಸ್ಪೇಸ್‌ ಎಕ್ಸ್‌ನಲ್ಲಿ ಕೆಲಸ ಮಾಡುವಾಗ ಆ ಕಂಪನಿಯ ಮೊದಲ ಮಾನವ ವಿಮಾನಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಾಹ್ಯಾಕಾಶ ಉಡಾವಣೆ ಯೋಜನೆಗಳಲ್ಲಿ ಲೀಡ್‌ ಫ್ಲೈಟ್‌ ಸರ್ಜನ್ ಆಗಿ ಕಾರ್ಯನಿರ್ವಹಿಸಿರುವ ಅನುಭವವೂ ಅವರಿಗಿದೆ. ಈಗ ನಾಸಾ ಘೋಷಣೆ ಮಾಡಿರುವ 10 ತರಬೇತಿ ಗಗನಯಾತ್ರಿಗಳ ಪಟ್ಟಿಯಲ್ಲಿ ಇವರ ಹೆಸರೂ ಇದೆ.

ಆಯ್ಕೆಯಾಗಿರು 10 ಅಭ್ಯರ್ಥಿಗಳ ಗಗನಯಾತ್ರಿ ತರಬೇತಿ 2022ರಲ್ಲಿ ಪ್ರಾರಂಭವಾಗಲಿದೆ.

ನಾಸಾದ ನಿರ್ವಾಹಕರಾದ ಬಿಲ್‌ ನಲ್ಸನ್ 'ನಾವು ನಾಸಾದ 2021 ಗಗನಯಾತ್ರಿ ಅಭ್ಯರ್ಥಿಗಳ ಬ್ಯಾಚ್‌ನ ಹೊಸ Explorers, ಆರ್ಟೆಮಿಸ್‌ನ 10 ಸದಸ್ಯರುನ್ನು ಸ್ವಾಗತಿಸುತ್ತೇವೆ. ತಂಡದಲ್ಲಿ ಪ್ರತಿಯೊಬ್ಬರು ವಿವಿಧ ವಿಷಯ ಪರಿಣಿತರಿದ್ದಾರೆ ಆದರೆ ಒಟ್ಟಿಗೆ ಅವರು ನಮ್ಮ ದೇಶದ ಧರ್ಮವನ್ನು ಪ್ರತಿನಿಧಿಸುತ್ತಾರೆ ಇ ಪ್ಲುರಿಬಸ್ ಯುನಮ್ - ಎಂದು ಹೇಳಿದ್ದಾರೆ.

English summary

Who Is Anil Menon? Know All About NASA's Latest Recruit for Future Moon Mission in Kannada

Anil Menon, an Indian-origin lieutenant colonel in United States Air Force and SpaceX's first flight surgeon, was Latest Recruit for Future Moon Mission. Know more.
Story first published: Wednesday, December 8, 2021, 14:53 [IST]
X
Desktop Bottom Promotion