For Quick Alerts
ALLOW NOTIFICATIONS  
For Daily Alerts

ಪೋಷಕರ ನಿದ್ದೆ ಕೆಡಿಸುತ್ತಿದೆ ಅಪಾಯಕಾರಿಯಾದ ಈ ಸ್ಕಲ್‌ ಬ್ರೇಕರ್‌ ಚಾಲೆಂಜ್‌!

|

ಕೀ ಕೀ ಚಾಲೆಂಜ್ ಆಯ್ತು, ಈಗ ಸ್ಕಲ್‌ ಬ್ರೇಕರ್‌ ಚಾಲೆಂಜ್‌ ಎಂಬ ಅಪಾಯಕಾರಿ ಕ್ರೇಜ್‌ ಸಾಮಾಜಿಕ ತಾಣದಲ್ಲಿ ತುಂಬಾ ಸದ್ದು ಮಾಡುತ್ತಿದೆ. ಅದರಲ್ಲೂ ಹದಿಹರೆಯದವರಲ್ಲಿ ಈ ಚಾಲೆಂಜ್‌ ಕ್ರೇಜ್ ಹೆಚ್ಚಾಗುತ್ತಿರುವುದರಿಂದ ಪೋಷಕರಲ್ಲಿ ಆತಂಕ ಮನೆ ಮಾಡಿದೆ.

 Skull Breaker Challenge

ಹದಿಹರೆಯದ ವಯಸ್ಸೇ ಅಂತಹದ್ದು, ಪೋಷಕರ ಮಾತು ಕೇಳುವುದಕ್ಕಿಂತ ಸ್ನೇಹಿತರ ಪ್ರಭಾವಕ್ಕೆ ಒಳಗಾಗುವುದು ಹೆಚ್ಚು. ಸ್ಕಲ್‌ ಬ್ರೇಕರ್ ಚಾಲೆಂಜ್‌ ಅನ್ನು ತಮಾಷೆಗೆ ಮಾಡುತ್ತಿದ್ದಾರೆ, ಆದರೆ ಸ್ವಲ್ಪ ತಪ್ಪಿದರೂ ಬುರುಡೆ ಒಡೆದು ಹೋಗುವ ಸಾಧ್ಯತೆ ಇದೆ, ಆದರೂ ಈ ಅಪಾಯಕಾರಿ ಚಾಲೆಂಜ್ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ಅಗ್ಯತೆ ಇದೆ.

ತಮಾಷೆಗೆ ಮಾಡುವ ಆಟದಿಂದ ಪ್ರಾಣ ಹೋಗಬಹುದು

ತಮಾಷೆಗೆ ಮಾಡುವ ಆಟದಿಂದ ಪ್ರಾಣ ಹೋಗಬಹುದು

ಈ ಸ್ಕಲ್‌ ಬ್ರೇಕ್ ಚಾಲೆಂಜ್ ಅನ್ನು ಟ್ರಿಪಲ್ ಜಂಪ್‌ ಎಂದು ಕರೆಯುತ್ತಾರೆ. ಮೂರು ಜನ ನಿಂತು ಜಂಪ್‌ ಮಾಡುತ್ತಾರೆ. ಮಧ್ಯದಲ್ಲಿ ನಿಂತವನು ಜಂಪ್‌ ಮಾಡುವಾಗ ಆತ ಬ್ಯಾಲೆನ್ಸ್ ತಪ್ಪಿ ಬೀಳುವಂತೆ ಇನ್ನಿಬ್ಬರು ಒದೆಯುತ್ತಾರೆ, ಆಗ ಮಧ್ಯದಲ್ಲಿ ನಿಂತವನು ನೆಲಕ್ಕೆ ಬೀಳುತ್ತಾನೆ. ಹೀಗೆ ಬೀಳುವಾಗ ತಲೆ ನೆಲಕ್ಕೆ ಬಡೆಯುವ ಸಾಧ್ಯತೆ ಇದೆ.

ಈ ಚಾಲೆಂಜ್ ಬೆಡ್‌ ಮೇಲೆ, ಮರಳಿನ ಮೇಲೆ ಮಾಡಿದರೆ ಪರ್ವಾಗಿಲ್ಲ, ಆದರೆ ಸಿಮೆಂಟ್, ಟೈಲ್ಸ್ ನೆಲದ ಮೇಲೆ ಮಾಡುತ್ತಾರೆ. ಕೆಳಗ್ಗೆ ಬಿದ್ದವನ ಸೊಂಟಕ್ಕೆ ಪೆಟ್ಟು ಬೀಳುವುದು. ಸ್ವಲ್ಪ ತಪ್ಪಿದರೂ ತಲೆ ಬಡೆದು ಒಡೆದು ಹೋಗಬಹುದು. ಇದೇ ಪೋಷಕರ ನಿದ್ದೆ ಕೆಡಿಸಿದೆ.

ಅಪಾಯಕಾರಿಯಾದ ಚಾಲೆಂಜ್ ಸ್ವೀಕರಿಸಲೇಬೇಡಿ

ಅಪಾಯಕಾರಿಯಾದ ಚಾಲೆಂಜ್ ಸ್ವೀಕರಿಸಲೇಬೇಡಿ

ಈಗ ಹದಿಹರೆಯದವರ ಕೈಯಲ್ಲಿ ಮೊಬೈಲ್‌ ಇದ್ದೇ ಇರುತ್ತದೆ. ಮನೆಯಿಂದ ಹೊರಗಡೆ ಅವರು ಏನು ಮಾಡುತ್ತಾರೆ ಎಂದು ಪೋಷಕರು ಸದಾ ಅವರ ಹಿಂದೆ ಇರಲು ಸಾಧ್ಯವಾಗುವುದಿಲ್ಲ. ಸ್ನೇಹಿತರ ಜೊತೆ ಸ್ಕಲ್ ಬ್ರೇಕರ್ ಅಂತ ತಮಾಷೆಗೆ ಮಾಡುವ ಚಾಲೆಂಜ್‌ನಿಂದ ಏನಾದರೂ ಅಪಾಯ ಸಂಭವಿಸಿದರೆ ಅದರಿಂದ ನೋವು ಅನುಭವಿಸುವುದು ನೀವು, ನಿಮ್ಮ ಪೋಷಕರು ಎನ್ನುವುದನ್ನು ಮಕ್ಕಳು ಅರ್ಥ ಮಾಡಿಕೊಂಡರೆ ಒಳ್ಳೆಯದು.

ಟಿಕ್‌ಟಾಕ್‌ನಲ್ಲಿ ಈ ರೀತಿಯ ವೀಡಿಯೋಗಳನ್ನು ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಾಗಿದೆ.

ಪ್ರತಿಕ್ರಿಯಿಸಿದ ಟಿಕ್‌ಟಾಕ್

ಪ್ರತಿಕ್ರಿಯಿಸಿದ ಟಿಕ್‌ಟಾಕ್

ನಾವು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಯಾರಾದರೂ ಮತ್ತೊಬ್ಬರನ್ನು ಪ್ರಭಾವಿಸುವ ಅಪಾಯಕಾರಿ ವೀಡಿಯೋ ಹಾಕಿದ್ದರೆ ಅದನ್ನು ಟಿಕ್‌ಟಾಕ್‌ನಿಂದ ತೆಗೆದುಹಾಕಲಾಗುವುದು. ಅಪಾಯಕಾರಿ ಚಾಲೆಂಜ್‌ಗಳನ್ನು ಬೆಂಬಲಿಸುವುದಿಲ್ಲ ಎಂದಿದೆ.

ಸೋಷಿಯಲ್‌ ಮೀಡಿಯಾದವರ ಪ್ರತಿಕ್ರಿಯೆ

ಸೋಷಿಯಲ್‌ ಮೀಡಿಯಾದವರ ಪ್ರತಿಕ್ರಿಯೆ

ಈ ಅಪಾಯಕಾರಿ ಚಾಲೆಂಜ್‌ ವಿರುದ್ಧ ಕೆಲವರು ಸಾಮಾಜಿಕ ತಾಣದಲ್ಲಿ ಧ್ವನಿ ಎತ್ತಿದ್ದಾರೆ. ಸ್ಕಲ್ ಬ್ರೇಕರ್‌ ಚಾಲೆಂಜ್ ಅನ್ನು ಪೋಷಕರಿಗೆ ತೋರಿಸಿ, ಮಕ್ಕಳಿಗೆ ತಿಳಿ ಹೇಳಲಿ ಎನ್ನುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಈ ಚಾಲೆಂಜ್ ಸ್ವೀಕರಿಸದಂತೆ ಮನವೊಲಿಸುವ ಪ್ರಯತ್ನ ಮಾಡಬೇಕಾಗಿದೆ.

English summary

What is Skull Breaker Challenge and Why You Should Not Try This Tiktok Trend

A new social media trend called the Skull-breaker challenge has become a reason to worry. Here are the reasons why you should not try.
Story first published: Tuesday, February 18, 2020, 12:06 [IST]
X
Desktop Bottom Promotion