For Quick Alerts
ALLOW NOTIFICATIONS  
For Daily Alerts

6 ತಿಂಗಳಿನಿಂದ ಕತ್ತಲಾವರಿಸಿದ್ದ ಖಂಡಕ್ಕೆ ಮೊದಲ ಸೂರ್ಯನ ರಶ್ಮಿ ಸ್ಪರ್ಶಿಸಿದ ದೃಶ್ಯ ಫುಲ್ ವೈರಲ್

|

ಜಗತ್ತಿನ ಏಳು ಖಂಡಗಳಲ್ಲಿ ಅಂಟಾರ್ಕ್ಟಿಕಾ ಕೂಡ ಒಂದು. ಆದರೆ ಇದು ಮನುಷ್ಯನ ವಾಸಕ್ಕೆ ಯೋಗ್ಯವಲ್ಲದ ಖಂಡವೆಂದು ಹೇಳಲಾಗುವುದು. ಏಕೆಂದರೆ ಇತರೆ ಕಡೆ ಮೂರು ಕಾಲ (ಮಳೆಗಾಲ, ಚಳಿಗಾಲ, ಬೇಸಿಗೆಕಾಲ) ಅಂತ ಇದ್ದರೆ ಇಲ್ಲಿರುವುದೇ ಎರಡೇ ಕಾಲ, 6 ತಿಂಗಳು ಚಳಿಗಾಲ, 6 ತಿಂಗಳು ಬೇಸಿಕಾಲ.

6 ತಿಂಗಳು ಚಳಿಗಾಲದಲ್ಲಿ ಇಲ್ಲಿ ಸೂರ್ಯನ ರಶ್ಮಿಯೇ ಬೀಳುವುದೇ ಇಲ್ಲ, ಸಂಪೂರ್ಣ ಕತ್ತಲಾವರಿಸಿರುತ್ತದೆ, 6 ತಿಂಗಳ ಸುದೀರ್ಘ ಚಳಿಯ ಮೊದಲ ಸೂರ್ಯನ ರಶ್ಮಿ ಭೂಮಿಯನ್ನು ಸ್ಪರ್ಶಿಸುತ್ತಿರುವ ಫೋಟೋ ತುಂಬಾನೇ ವೈರ್‌ ಆಗಿದೆ.

Antarctica

ಅಂಟಾರ್ಕ್ಟಿಕಾ ಖಂಡವು ಆಸ್ಟ್ರೇಲಿಯಾದಷ್ಟೇ ವಿಸ್ತೀರ್ಣ ಹೊಂದಿರುವ ಕಂಡವಾಗಿದೆ. ಈ ಖಂಡದಲ್ಲಿ ಮೂಲ ನಿವಾಸಿಗಳು ಅಂತ ಯಾರೂ ಇಲ್ಲ. ಕೆಲ ರಾಷ್ಟ್ರಗಳು ಇಲ್ಲಿಗೆ ಹೋಗಿ ತಮ್ಮ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿವೆ. ಅಂಟಾರ್ಕ್ಟಿಕಾ ಕಂಡದಲ್ಲಿ 9 ರಾಷ್ಟ್ರಗಳು ಶಾಶ್ವತ ನೆಲೆಗಳನ್ನು ಹೊಂದಿದ್ದು ಅದರಲ್ಲಿ ಭಾರತವೂ ಒಂದು. ಇಲ್ಲಿ ಭಾರತ ದಕ್ಷಿಣ ಗಂಗೋತ್ರಿ, ಮೈತ್ರಿ ಹಾಗೂ ಭಾರತಿ ಸಂಶೋಧನಾ ಕೇಂದ್ರಗಳು ಇಲ್ಲಿವೆ.

ಇಲ್ಲಿರುವ ಬಾಹ್ಯಾಕಾಶ ಸಂಸೋಧನಾ ತಂಡದ ಸದಸ್ಯರು ತೀವ್ರ ತಂಪಾದ ವಾತಾವರಣದಿಂದ ಇದ್ದಕ್ಕಿದ್ದಂತೆ ತೀವ್ರವಾದ ತಾಪಮಾನವನ್ನು ಅನುಭವಿಸಿರುವುದಾಗಿ ತಿಳಿಸಿದ್ದಾರೆ. ಇಲ್ಲಿಯ ಚಳಿಯಾಗಲಿ, ಬಿಸಿಲಾಗಲಿ ಸಹಿಸಲು ಅಸಾಧ್ಯವಾಗಿದೆ. ಈ ಪ್ರಪಂಚ ಎಷ್ಟೊಂದು ವಿಸ್ಮಯಗಳಿಂದ ಕೂಡಿದೆ ಅಲ್ವಾ?

ಇದೀಗ ರೆಡಿಟ್‌ನಲ್ಲಿ ಶೇರ್‌ ಆಗಿರುವ ಟಿಕ್‌ಟಾಕ್‌ ವೀಡಿಯೋ ತುಂಬಾನೇ ವೈರಲ್‌ ಆಗುತ್ತಿದ್ದು ಕತ್ತಲೆಯಿಂದ ಆವರಿಸುತ್ತಿರುವ ಪ್ರದೇಶಕ್ಕೆ ಸೂರ್ಯನ ರಶ್ಮಿಗಳು ಮುತ್ತಿಕ್ಕುತ್ತಿರುವ ದೃಶ್ಯ ಅಮೋಘವಾಗಿದೆ. ಇನ್ನು ಇಲ್ಲಿ 6 ತಿಂಗಳು ಸೂರ್ಯ ಮುಳುಗುವುದೇ ಇಲ್ಲ...

English summary

South Pole Sunrise After Six Months of Darkness: Photo Goes Viral

Antarctica: south pole sunrises after six month of darkness, read on....
X
Desktop Bottom Promotion