For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯದ ಪ್ರಕಾರ, ಈ ಆರು ರಾಶಿಗಳು ಜೀವನದಲ್ಲಿ ಬದಲಾವಣೆಯನ್ನೇ ಬಯಸುವುದಿಲ್ಲ!

|

ನಮ್ಮ ಜೀವನ ಎಂದಿಗೂ ಒಂದೇ ಬಗೆಯಲ್ಲಿ ಇರುವುದಿಲ್ಲ. ಬದಲಾವಣೆ ಎನ್ನುವುದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅದಕ್ಕೆ ಸರಿಯಾಗಿ ನಾವು ಹೊಂದಿಕೊಂಡು ಹೋಗಬೇಕು. ಕೆಲವರು ತಮ್ಮ ಜೀವನವು ಒಂದೇ ಸ್ಥಿರತೆಯಲ್ಲಿ ಇರಬೇಕು ಎಂದು ಬಯಸುತ್ತಾರೆ. ಅವರು ಅಂದುಕೊಂಡಿರುವುದಕ್ಕಿಂತ ಕೊಂಚ ಬದಲಾವಣೆ ಉಂಟಾದರೂ ಅದನ್ನು ಸಹಿಸಿಕೊಳ್ಳುವುದಿಲ್ಲ. ಬದಲಾವಣೆಯಿಂದ ಉಂಟಾಗುವ ಪರಿಸ್ಥಿತಿಗಳನ್ನು ನಿಭಾಯಿಸುವ ಶಕ್ತಿಯೂ ಅವರಲ್ಲಿ ಇರುವುದಿಲ್ಲ. ಅಂತವರಿಗೆ ಬದಲಾವಣೆ ಎದುರಾಯಿತು ಎಂದರೆ ಆತಂಕ ಹಾಗೂ ಗೊಂದಲಗಳು ಉಂಟಾಗುವುದು ಸಾಮಾನ್ಯ.

ಯಾರು ಜೀವನವನ್ನು ಸದಾ ಸುಖದಲ್ಲಿಯೇ ಕಳೆಯುತ್ತಿರುತ್ತಾರೆ, ಅಂತವರು ಸಹ ತಮ್ಮ ಜೀವನ ಹೀಗೆ ಮುಂದುವರಿಯಬೇಕು ಎಂದು ಬಯಸುತ್ತಾರೆ. ಅವರ ಆರ್ಥಿಕ ಸ್ಥಿತಿ ಅಥವಾ ಪರಿಸ್ಥಿತಿಗಳಲ್ಲಿ ಬದಲಾವಣೆ ಉಂಟಾದರೆ ದುಃಖಕ್ಕೆ ಒಳಗಾಗುತ್ತಾರೆ. ಆ ಬದಲಾವಣೆಯು ಅವರಿಗೆ ಬೇಸರದ ಜೀವನ ಎನ್ನುವ ಭಾವನೆಯನ್ನು ಮೂಡಿಸುವ ಸಾಧ್ಯತೆಗಳು ಹೆಚ್ಚು. ಇನ್ನೂ ಕೆಲವರು ಸಾಮಾನ್ಯ ಸ್ಥಿತಿಯಲ್ಲಿ ಇದ್ದರೂ ಯಾವುದೇ ಏರಿಳಿತವನ್ನು ಬಯಸುವುದಿಲ್ಲ. ಜೀವನದಲ್ಲಿ ದೊಡ್ಡ ಸ್ಥಾನ ದೊರೆತರೆ ಅಥವಾ ಅವರು ಇರುವ ಸ್ಥಿತಿಗಿಂತ ಕೆಳಗೆ ಹೋದರೆ ಮಾನಸಿಕ ಸ್ಥಿತಿಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಅವರು ಪ್ರಸ್ತುತವಾಗಿ ಹೇಗಿದ್ದಾರೋ ಹಾಗೇ ಮುಂದುವರಿಯಲು ಬಯಸುವರು. ಅವರ ಮನಸ್ಸಿನಲ್ಲಿ ಪ್ರಸ್ತುತವಾಗಿ ಏನನ್ನು ಪಡೆದಿದ್ದೇವೆಯೋ ಅದೆಲ್ಲವೂ ಸರಿಯಾಗಿದೆ ಎನ್ನುವ ಮನಃಸ್ಥಿತಿ ಇರುತ್ತದೆ.

Zodiac Signs

ಜ್ಯೋತಿಷ್ಯ ಶಾಸ್ತ್ರದ ಕೆಲವು ಲೆಕ್ಕಾಚಾರ ಹಾಗೂ ಗ್ರಹಗತಿಗಳ ಅನುಸಾರ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರು ಸ್ವಭಾವತಃ ಬದಲಾವಣೆಯನ್ನು ಬಯಸದ ವ್ಯಕ್ತಿಗಳಾಗಿರುತ್ತಾರೆ. ಅವರು ತಮ್ಮ ಜೀವನ ಹೇಗೇ ಇದ್ದರೂ ಹಾಗೇ ಮುಂದುವರಿಯಲಿ ಎಂದು ಬಯಸುವರು. ಬದಲಾವಣೆಯ ಬಗ್ಗೆ ಯೋಚನೆ ಅಥವಾ ಆಸೆಯನ್ನು ಸಹ ಹೊಂದಿರುವುದಿಲ್ಲ. ಅವರ ಮನಸ್ಸು ಸದಾ ಸ್ಥಿರತೆಯಿಂದ ಕೂಡಿರುತ್ತದೆ. ಅವರ ನಿಲುವನ್ನು ಬದಲಾಯಿಸುವುದು ಸಹ ಅತ್ಯಂತ ಕಷ್ಟದ ಸಂಗತಿ ಎಂದು ಹೇಳಲಾಗುವುದು. ಅನಿವಾರ್ಯ ಪರಿಸ್ಥಿತಿ ಎದುರಾದಾಗ ಮಾತ್ರ ಬದಲಾವಣೆಗೆ ಕೊಂಚ ಮನಸ್ಸು ಮಾಡುವ ಸಾಧ್ಯತೆಗಳಿರುತ್ತವೆ ಅಷ್ಟೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಸಾಲಿನಲ್ಲಿ ನಿಮ್ಮ ರಾಶಿಚಕ್ರ ಇದೆಯೇ? ಎನ್ನುವುದನ್ನು ಪರಿಶೀಲಿಸಿ.

1. ವೃಷಭ: ಏಪ್ರಿಲ್ 20-ಮೇ 20

1. ವೃಷಭ: ಏಪ್ರಿಲ್ 20-ಮೇ 20

ಭೂಮಿಯ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಗಳು ಇವರು. ಸ್ವಭಾವದಲ್ಲಿ ಮೃದು ಹಾಗೂ ಶಾಂತಿ ಪ್ರಿಯರು ಎನ್ನಬಹುದು. ವೃಷಭ ರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದವರು ಹುಟ್ಟಿನಿಂದಲೇ ಶಕ್ತಿಯುತವಾದ ಮತ್ತು ಸ್ಥಿರವಾದ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ಇವರಲ್ಲಿ ಇರುವ ಒಂದು ದೊಡ್ಡ ನ್ಯೂನತೆಯ ಸಂಗತಿ ಎಂದರೆ ಅವರು ಬದಲಾವಣೆಗೆ ಒಗ್ಗಿಕೊಳ್ಳದಿರುವುದು. ಅವರು ಏನು ಪಡೆದಿದ್ದಾರೆ ಹಾಗೂ ಏನನ್ನು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಯಾವುದೇ ಚಿಂತೆ ಇರುವುದಿಲ್ಲ. ಅವರಿಗೆ ಏನು ದೊರೆತಿದೆಯೋ ಅದರಲ್ಲಿಯೇ ಸಂತೋಷವನ್ನು ಕಂಡುಕೊಳ್ಳುತ್ತಾರೆ. ತಮಗೆ ಇದ್ದ ಅನುಕೂಲ ಹಾಗೂ ವಿಷಯಗಳಲ್ಲಿಯೇ ತೃಪ್ತಿಪಡುವುದರಿಂದ ಅವರಲ್ಲಿ ವಿಶ್ವಾಸದ ಗುಣಮಟ್ಟವೂ ಉತ್ತಮವಾಗಿ ಇರುತ್ತದೆ. ಅಭಿವೃದ್ಧಿ ಹೊಂದುವ ವಿಷಯ ಎದುರಾದರೆ ಅವರು ಮೊದಲು ಸಾಮರ್ಥ್ಯ, ವಿಶ್ರಾಂತಿ, ಅನುಕೂಲ ಮತ್ತು ಆತ್ಮವಿಶ್ವಾಸದ ಗುಣಮಟ್ಟವನ್ನು ಮೊದಲು ನೋಡುತ್ತಾರೆ. ನಂತರ ಅಗತ್ಯವಿದೆ ಎಂದಾಗ ಬದಲಾವಣೆ ಹೊಂದುವ ಚಿಂತನೆ ನಡೆಸುತ್ತಾರೆ. ಇವುಗಳ ಹೊರತಾಗಿ ಅನಗತ್ಯವಾಗಿ ಪದೇ ಪದೇ ಬದಲಾವಣೆಗೆ ಚಿಂತನೆ ನಡೆಸುವುದಿಲ್ಲ.

2. ಕರ್ಕ: ಜೂನ್21-ಜುಲೈ22

2. ಕರ್ಕ: ಜೂನ್21-ಜುಲೈ22

ಕರ್ಕ ರಾಶಿಯವರು ಸಾಮಾನ್ಯವಾಗಿ ತಮ್ಮ ಭಾವನೆ ಹಾಗೂ ಇತರರ ಭಾವನೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಭಾವನೆಗಳು ಹಾಗೂ ಮಾನಸಿಕ ಸ್ಥಿತಿಯ ಹೊರತಾಗಿ ಯಾವುದೂ ಮುಖ್ಯವಲ್ಲ ಎನ್ನುವುದು ಅವರ ಭಾವನೆ. ಮಾನಸಿಕವಾಗಿ ಏನನ್ನು ಕಂಡುಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರ ನಿರ್ಧಾರಗಳು ಹಾಗೂ ಭಾವನೆಗಳು ನಿಂತಿರುತ್ತವೆ. ಭಾವನಾತ್ಮಕ ಜೀವಿಗಳಾದ ಇವರು ಮನಸ್ಸಿಗೆ ಹಿತವೆನಿಸದ ಅಥವಾ ಕಿರಿಕಿರಿಯನ್ನು ಉಂಟುಮಾಡುವ ಯಾವುದೇ ಸಂಗತಿ ಎದುರಾದರೂ ಅದರ ಬಗ್ಗೆ ಆಸಕ್ತಿ ಹಾಗೂ ಬದಲಾವಣೆಯನ್ನು ಹೊಂದಲು ಬಯಸುವುದಿಲ್ಲ. ಭಾವನೆಗಳಿಗೆ ಅಥವಾ ಮನಸ್ಸಿಗೆ ನೋವುಂಟು ಮಾಡುವ ಬದಲಾವಣೆಯನ್ನು ಹೊಂದುವುದು ವ್ಯರ್ಥ ಎನ್ನುವ ನಿಲುವು ಅವರದ್ದಾಗಿರುತ್ತದೆ. ಭಾವನಾತ್ಮಕವಾಗಿ ಘಾಸಿಯಾದರೆ ಅಥವಾ ನೋವನ್ನು ಅನುಭವಿಸಿದರೆ ಅದನ್ನು ಸಹಿಸಿಕೊಳ್ಳುವುದು ಅವರಿಗೆ ಕಷ್ಟವಾಗುವುದು. ಈ ನಿಟ್ಟಿನಲ್ಲಿ ಅವರು ಬದುಕಿನಲ್ಲಿ ಬದಲಾವಣೆಯನ್ನು ಹೊಂದಲು ಬಯಸುವುದಿಲ್ಲ.

3. ಸಿಂಹ: ಜುಲೈ 23- ಆಗಸ್ಟ್22

3. ಸಿಂಹ: ಜುಲೈ 23- ಆಗಸ್ಟ್22

ಸಿಂಹ ರಾಶಿಯ ಅಡಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಸಾಹಸಿಗಳು ಮತ್ತು ಹೆಚ್ಚು ಆಕರ್ಷಣೆಯನ್ನು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಆದರೆ ಇವರು ಜೀವನದಲ್ಲಿ ಬದಲಾವಣೆ ಎದುರಾಗುತ್ತಿದೆ ಎಂದಾಗ ಹೆಚ್ಚು ಚಿಂತೆಗೆ ಒಳಗಾಗುತ್ತಾರೆ. ಜೊತೆಗೆ ಒಂದು ಬಗೆಯ ಭಯಭೀತರಾಗುವರು. ಇದು ಸ್ವಲ್ಪ ಆಶ್ಚರ್ಯದ ಸಂಗತಿ ಎನಿಸಬಹುದು, ಆದರೆ ಸತ್ಯ. ಇವರು ಹುಟ್ಟಿನಿಂದಲೇ ಒಂದು ಮಟ್ಟದಲ್ಲಿ ಸುಖಿಷ್ಟರಾಗಿ ಬೆಳೆದಿರುತ್ತಾರೆ. ಅದು ಅವರಿಗೆ ಉತ್ತಮ ಅನುಭವ ಹಾಗೂ ಸಂತೋಷವನ್ನು ನೀಡಿರುತ್ತದೆ. ಅಂತಹ ಅನುಕೂಲತೆಗಳಲ್ಲಿ ಬದಲಾವಣೆ ಉಂಟಾಗುತ್ತಿದೆ ಎಂದಾಗ ಅದನ್ನು ಅವರು ಬಯಸುವುದಿಲ್ಲ. ಹಾಗಾಗಿ ಅವರಿಗೆ ಬದಲಾವಣೆ ಎನ್ನುವುದು ಒಂದು ರೀತಿಯ ಬೆದರಿಕೆಯ ಸಂಗತಿ. ಅದಕ್ಕಾಗಿಯೇ ಅವರು ಜೀವನದಲ್ಲಿ ಅತಿಯಾದ ಬದಲಾವಣೆಯನ್ನು ಬಯಸುವುದಿಲ್ಲ.

4. ತುಲಾ: ಸಪ್ಟೆಂಬರ್ 23- ಅಕ್ಟೋಬರ್ 22

4. ತುಲಾ: ಸಪ್ಟೆಂಬರ್ 23- ಅಕ್ಟೋಬರ್ 22

ಬದಲಾವಣೆಯನ್ನು ದ್ವೇಷಿಸುವ ಚಿಹ್ನೆಗಳಲ್ಲಿ ತುಲಾ ರಾಶಿಯೂ ಒಂದು. ಈ ರಾಶಿಯ ಅಡಿಯಲ್ಲಿ ಜನಿಸುವವರು ಜೀವನದಲ್ಲಿ ಸದಾ ಸಮತೋಲನವನ್ನು ಕಂಡುಕೊಳ್ಳುವರು. ಹಾಗಾಗಿ ಬದಲಾವಣೆ ಎಂದರೆ ಅವರಿಗೊಂದು ತಡೆಗೋಡೆಯಂತೆ ಕಾಣಿಸುವುದು. ಬದಲಾವಣೆ ಎನ್ನುವುದು ನಾವು ಹೊಂದಿರುವ ವ್ಯವಸ್ಥೆಯನ್ನು ಹಾಳು ಮಾಡುವುದು ಎನ್ನುವ ಭಾವನೆ ಇವರಲ್ಲಿ ಆಳವಾಗಿ ಇರುತ್ತದೆ. ಇವರು ತಮ್ಮ ಸುತ್ತಲು ಏನು ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಅದನ್ನು ಸೂಕ್ತ ರೀತಿಯಲ್ಲಿ ಗೌರವಿಸುತ್ತಾರೆ. ಆದರೆ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಅಥವಾ ತಮಗಾಗಿ ಬದಲಾವಣೆಯನ್ನು ತಂದುಕೊಳ್ಳುವುದಿಲ್ಲ. ಇವರು ಏನನ್ನು ಪಡೆದುಕೊಂಡಿರುತ್ತಾರೆ ಅದನ್ನೇ ಜೀವನ ಪೂರ್ತಿ ಹೊಂದಲು ಬಯಸುತ್ತಾರೆ. ಹಾಗಾಗಿ ಬದಲಾವಣೆ ಎನ್ನುವುದನ್ನು ಬಹಳ ದೂರ ಇರಬೇಕು ಎಂದು ಬಯಸುವರು.

5. ಮಕರ: ಡಿಸೆಂಬರ್ 22- ಜನವರಿ 19

5. ಮಕರ: ಡಿಸೆಂಬರ್ 22- ಜನವರಿ 19

ಮಕರ ರಾಶಿಯವರು ಸಾಮಾನ್ಯವಾಗಿ ಸಾಂಪ್ರದಾಯಿಕ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವರು. ಇವರು ಬದಲಾವಣೆಯ ಮೂಲಕ ಜೀವನದ ಮೌಲ್ಯ ಹಾಗೂ ಸ್ಥಿತಿ ಬದಲಾಗುವುದನ್ನು ಬಯಸರು. ತಮ್ಮದೇ ಆದ ಗುರಿ ಹಾಗೂ ನಿರೀಕ್ಷೆಯ ಮೂಲಕ ಜೀವನವನ್ನು ನಿರ್ವಹಿಸುತ್ತಾರೆ. ಆ ಸಂಗತಿಗಳಿಗೆ ಅನುಗುಣವಾಗಿಯೇ ತಮ್ಮ ಜೀವನವನ್ನು ನಡೆಸಲು ಬಯಸುವರು. ಅವರು ಅಂದುಕೊಂಡಿದ್ದು ನಡೆಯದೆ ಇದ್ದರೆ ಅಥವಾ ಅವರ ಗುರಿ ಸಾಧನೆಯಲ್ಲಿ ವಿಫಲತೆ ಕಂಡುಬಂದರೆ ಅತ್ಯಂತ ಬೇಸರಕ್ಕೆ ಒಳಗಾಗುತ್ತಾರೆ. ಅವರಿಗೆ ಜೀವನದಲ್ಲಿ ಏನು ನಡೆಯುವುದು ಎನ್ನುವುದನ್ನು ತಿಳಿದುಕೊಳ್ಳಲು ಕಷ್ಟವಾಗುವುದು. ಹಾಗಾಗಿ ಭವಿಷ್ಯದಲ್ಲಿ ಬದಲಾವಣೆ ಎದುರಾಗುವುದನ್ನು ಅವರು ಇಷ್ಟ ಪಡುವುದಿಲ್ಲ. ಜೊತೆಗೆ ಆದ ಬದಲಾವಣೆಗಳಿಗೂ ಅಷ್ಟು ಬೇಗ ಹೊಂದಿಕೊಳ್ಳುವುದು ಕಷ್ಟ.

6. ಮೀನ: ಫೆಬ್ರವರಿ19- ಮಾರ್ಚ್ 20

6. ಮೀನ: ಫೆಬ್ರವರಿ19- ಮಾರ್ಚ್ 20

ಮೀನ ರಾಶಿಯವರನ್ನು ಕಾಡುವ ದೊಡ್ಡ ಸಂಗತಿ ಎಂದರೆ ಜೀವನದಲ್ಲಿ ಅನುಭವಿಸಿದ ಭೂತಕಾಲದ ಸಂಗತಿಗಳು. ಜೀವನದಲ್ಲಿ ಹಿಂದೆ ನಡೆದ ಸಂಗತಿಯು ಭವಿಷ್ಯದಲ್ಲಿ ಎದುರಾಗಬಾರದು ಎಂದು ಬಯಸುತ್ತಾರೆ. ಕಲ್ಪನಾ ಜೀವಿಗಳು, ಕನಸುಗಾರರು ಎಂದು ಸಹ ಇವರನ್ನು ಗುರುತಿಸಲಾಗುತ್ತದೆ. ಇವರು ಇದ್ದ ಸ್ಥಿತಿಗಿಂತ ಉತ್ತಮ ಸ್ಥಿತಿಯಲ್ಲಿ ಹೋದರೂ ಇವರಿಗೆ ಹೊಂದಿಕೊಳ್ಳಲು ಹಾಗೂ ಅ ವಿಷಯಗಳನ್ನು ಸ್ವೀಕರಿಸಲು ಕಷ್ಟವಾಗುತ್ತದೆ. ಅದಕ್ಕಾಗಿ ಅವರು ಅನಗತ್ಯವಾಗಿ ಉಂಟಾಗುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ಬಯಸುವುದಿಲ್ಲ. ಬದಲಾವಣೆಯನ್ನು ಇವರು ಸಾಮಾನ್ಯವಾಗಿ ದ್ವೇಷಿಸುತ್ತಾರೆ.

English summary

Zodiac Signs Who Want Everything to Stay the Same, as per astrology

Some people would prefer that certain things in their live would always remain the same. However, if there's one thing we can be sure of in life, it's change. We are constantly in a stage of growth and alteration, and if it isn't us, it's the world around us. Your life is uprooted again and again, and there's absolutely nothing you can do to stop it. Of course, you can try to minimize change, but the people around you are one thing you just can't control.
X
Desktop Bottom Promotion