Latest Updates
-
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ
ಈ ರಾಶಿಯವರನ್ನು ಮಾತಿನಲ್ಲಿ ಮಿರಿಸಲು ಸಾಧ್ಯವೇ ಇಲ್ಲ!
ಇಡೀ ಜಗತ್ತನೇ ಆಳುತ್ತಿರುವುದು ಮಾತು ಎಂದರೆ ನಿಮಗೆ ಅಚ್ಚರಿ ಎನಿಸಲಾರದು. ಮಾತಿಲ್ಲದೇ ಮನುಷ್ಯನ ಬದುಕು ಊಹಿಸಲು ಅಸಾಧ್ಯ. ಮಾತಿನ ಚತುರತೆ ಬಲ್ಲವರು ಜಗತ್ತನ್ನೇ ಗೆಲ್ಲಬಲ್ಲರು, ಇದಕ್ಕೇ ನಮ್ಮ ಹಿರಿಯರು ಗಾದೆ ಮಾತಿನ ಮೂಲಕ "ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ'' ಎಂದಿದ್ದಾರೆ. ಒಬ್ಬ ಉದ್ಯಮಿಯಿಂದ ಹಿಡಿದು ಬಹುದೊಡ್ಡ ರಾಜಕಾರಣಿಯವರೆಗೆ ಎಲ್ಲರ ಬಂಡವಾಳ ಮಾತು. ನೂರಾರು ವೃತ್ತಿಗಳಿಗೆ ಮಾತಿಲ್ಲದೇ ಬದುಕೇ ಇಲ್ಲ.

ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರಾಶಿಗಳು ಮಾತ್ರ ಅತ್ಯುತ್ತಮ ಮಾತಿನ ಕೌಶಲ್ಯವನ್ನು ಹೊಂದಿದ್ದಾರೆ ಎನ್ನಲಾಗುತ್ತದೆ. ಹಾಗಿದ್ದರೆ ಮಾತಿನ ಮೂಲಕವೇ ಮನೆಕಟ್ಟುವ ಈ ರಾಶಿಗಳು ಯಾವದು, ಇವರ ಮಾತಿನ ರಸಹ್ಯವೇನು, ಇವರಿಗೇ ಏಕೆ ಮಾತು ವರವಾಗಿ ಸಿಕ್ಕಿದೆ ಎಂದು ಕುತೂಹಲವೇ?, ಮುಂದೆ ಲೇಖನ ಓದಿ.

1. ಸಿಂಹ ರಾಶಿ
ಸಿಂಹ ರಾಶಿಯವರು ಅತ್ಯುತ್ತಮ ಸಾರ್ವಜನಿಕ ಭಾಷಣಕಾರರಾಗಿರುತ್ತಾರೆ. ಏಕೆಂದರೆ ಇವರು ಗುಂಪಿನ ಮುಂದೆ ಯಾವುದೇ ಗೊಂದಲ, ಒತ್ತಡ ಇಲ್ಲದೆ ಹಾಯಾಗಿರುತ್ತಾರೆ. ಅಲ್ಲದೇ ಇವರಿಗೆ ಭಾಷಣ ಮಾಡುವುದು ಮತ್ತು ಜನರ ನಡುವೆ ಇರುವುದನ್ನು ಬಹಳ ಇಷ್ಟಪಡುತ್ತಾರೆ. ಸಿಂಹ ರಾಶಿಯವರು ಯಾವುದೇ ಸಂದರ್ಭ ಅಥವಾ ಯಾರೊಬ್ಬರಿಂದ ಪ್ರೇರಣೆ ಹೊಂದಿ ನಾಯಕರಾದವರಲ್ಲ, ಇವರು ಹುಟ್ಟು ನಾಯಕತ್ವ ಗುಣದಲ್ಲಿ ಹುಟ್ಟಿದವರು. ಇವರು ಮನೆಯಲ್ಲೇ ಇರಲಿ ಅಥವಾ ಜನರ ನಡುವೆಯೇ ಇರಲಿ ಮಾತನಾಡುವಾಗ ಉತ್ತಮ ಉದ್ದೇಶ ಹಾಗೂ ಉತ್ಸಾಹವನ್ನು ಬಹಳವಾಗಿ ಹೊಂದಿರುತ್ತಾರೆ. ಇವರು ನೀಡುವ ಸಂದೇಶದ ಮೇಲೆ ಇವರಿಗೆ ತುಂಬಾ ನಂಬಿಕೆ ಇದೆ ಮತ್ತು ಅದನ್ನು ಕೇಳಿದವರು ಸಹ ಇದನ್ನು ಸಮ್ಮತಿಸುತ್ತಾರೆ. ಸಿಂಹ ರಾಶಿಯವರು ಯಾವಾಗಲೂ ಸಿದ್ಧರಾಗಿ ಮತ್ತು ಆತ್ಮವಿಶ್ವಾಸದಿಂದ ಇರುತ್ತಾರೆ, ಅದು ಅವರ ಪ್ರೇಕ್ಷಕರಿಗೂ ನೆಚ್ಚಿನವರಾಗಿರುತ್ತಾರೆ.

2. ಮಿಥುನ ರಾಶಿ
ಯಾವುದೇ ರೀತಿಯ ಸಂವಹನಕ್ಕೆ ಬಂದಾಗ ಮಿಥುನ ರಾಶಿಯವರ ವಾಕ್ಚಾತುರ್ಯ ಅಸಾಧಾರಣವಾಗಿರುತ್ತದೆ. ಇದರಿಂದಲೇ ಸಹಜವಾಗಿ ಇವರು ಉತ್ತಮ ಸಾರ್ವಜನಿಕ ಭಾಷಣಕಾರರಾಗಿರುತ್ತಾರೆ. ಅವರು ಅನೇಕ ವಿಷಯಗಳ ಬಗ್ಗೆ ಬಹಳ ಜ್ಞಾನ ಹೊಂದಿರುತ್ತಾರೆ, ಅದ್ಭುತ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಮತ್ತು ಪ್ರಾಮಾಣಿಕರಾಗಿರುತ್ತಾರೆ.
ಮಿಥುನ ರಾಶಿಯವರು ತಮ್ಮನ್ನು ಒಂದು ಕಡೆಗೆ ಸೀಮಿತಗೊಳಿಸಿಕೊಳ್ಳುವುದಿಲ್ಲ, ಬದಲಾಗಿ ಅವರು ತಮ್ಮ ನೈಜತೆಯ ಜತೆಗೆ ಜನರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಾರೆ. ಪ್ರೇಕ್ಷಕರು ಸಹ ಇವರು ಏನು ಹೇಳುತ್ತಾರೋ ಅದನ್ನು ಕೇಳಬೇಕು ಎಂದು ಬಯಸುತ್ತಾರೆ.

3. ತುಲಾ ರಾಶಿ
ತುಲಾ ರಾಶಿಯವರು ಆಕರ್ಷಕವಾಗಿ ಎಲ್ಲರು ಮೆಚ್ಚುವಂತೆ ಸಂವಹನ ಮಾಡುವ ಚಾತುರ್ಯವನ್ನು ಹೊಂದಿದ್ದಾರೆ. ಇವರ ಭಾಷಣ ಹೃದಯದಿಂದ ಹಾಗೂ ಹಾಸ್ಯಭರಿತವಾಗಿ ಮಾಡುವ ಚಾಕಚಕತ್ಯತೆಯಿಂದ ಮಾಡುವ ಕುಶಲತೆ ಇವರದ್ದಾಗಿದೆ. ಇದರರ್ಥ ಇವರು ಪ್ರೇಕ್ಷಕರ ಮುಂದೆ ಮಾತ್ರ ಹಾಸ್ಯಭರಿತ ಅಥವಾ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಎಂದಲ್ಲ, ಬದಲಾಗಿ ಅವರು ತಮ್ಮ ಮಾತಿನ ನಡುವೆಯೇ ಹಾಸ್ಯವನ್ನು ಬೆರೆಸುವಷ್ಟು ಸಮರ್ಥರು. ಅಲ್ಲದೇ ತುಲಾ ರಾಶಿಯವರ ಹಾಸ್ಯ ಪ್ರಜ್ಞೆ ಹೇಗಿರುತ್ತದೆ ಎಂದರೆ, ಇವರ ಹಾಸ್ಯಭರಿತ ಮಾತಿನಲ್ಲಿ ಯಾರನ್ನೂ ಅವಮಾನಿಸುವ, ಮನನೋಯಿಸುವ ಅಂಶಗಳು ಇರುವುದೇ ಇಲ್ಲ. ಆದರೆ ಎಲ್ರಿಗೂ ಹಿತವೆನಿಸುವ ಮತ್ತು ಆಕರ್ಷಕವಾಗಿರುತ್ತದೆ. ಅವರು ನಿರಾಳವಾಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಕೇವಲ ಸತ್ಯವನ್ನು ಮಾತ್ರ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ, ಮತ್ತೆ ಯಾರೂ ಸಹ ಅವರ ಮಾತನ್ನು ನಂಬಬೇಕು ಎಂದು ಒತ್ತಾಯಿಸುವುದಿಲ್ಲ.

4. ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಸಾರ್ವಜನಿಕ ಭಾಷಣದಲ್ಲಿ ಅತ್ಯದ್ಭುತ ಕುಶಲತೆಯನ್ನು ಹೊಂದಿರುವವರಾಗಿರುತ್ತಾರೆ. ಕಾರಣ ಇವರು ತಾವು ನೀಡುತ್ತಿರುವ ಸಂದೇಶದ ಬಗ್ಗೆ ಮತ್ತು ಪ್ರೇಕ್ಷಕರು ಏನ್ನನು ಬಯಸುತ್ತಾರೆ ಎಂಬುದರ ಬಗ್ಗೆ ಚೆನ್ನಾಗಿ ಅರಿತಿರುತ್ತಾರೆ. ವೃಶ್ಚಿಕ ರಾಶಿಯವರ ಪ್ರತಿಯೊಂದು ಮಾತು ಅಥವಾ ಪ್ರಸ್ತುತಿಯು ಪ್ರೇಕ್ಷಕರಿಗೆ ಹತ್ತಿರವಾಗಿ, ಅವರಿಗೆ ಅನುಗುಣವಾಗಿರುತ್ತದೆ. ಈ ರಾಶಿಯವರ ಮತ್ತೊಂದು ಚಾತುರ್ಯವೆಂದರೆ ಇವರು ಇವರು ಏನ್ನು ಹೇಳಲು ಬಯಸುತ್ತಾರೋ ಅದನ್ನು ಆಸಕ್ತಿದಾಯಕವಾಗಿ ಹಾಗೂ ವಿಶಿಷ್ಟ ರೀತಿಯಲ್ಲಿ ಹೇಳುತ್ತಾರೆ.

5. ಕುಂಭ ರಾಶಿ
ಕುಂಭ ರಾಶಿಯವರು ತಮ್ಮ ಭಾಷಣದಲ್ಲಿ ಬಹಳ ಸೃಜನಶೀಲರಾಗಿರುತ್ತಾರೆ ಮತ್ತು ಪ್ರೇಕ್ಷಕರ ಗಮನವನ್ನು ಇನ್ನಷ್ಟು ಸೆಳೆಯಲು ಆಡಿಯೋ-ದೃಶ್ಯ ಸಾಧನಗಳನ್ನು ಬಳಸಲು ಹಿಂಜರಿಯುವುದಿಲ್ಲ. ಕುಂಭ ರಾಶಿಯವರು ತಾನು ಮಾಡುತ್ತಿರುವ ಭಾಷಣ ಅಥವಾ ಮಾತನಾಡುತ್ತಿರುವ ಬಗ್ಗೆ ಪ್ರೇಕ್ಷಕರ ಗಮನವನ್ನು ಸೆಳೆಯಲು, ಅವರನ್ನು ಉತ್ಸುಕರಾಗಿಡಲು ಇವರ ಬಳಿ ಸಾಕಷ್ಟು ತಂತ್ರಗಳಿವೆ ಹಾಗೂ ಇದಕ್ಕಾಗಿ ಏನು ತಾವು ಬೇಕಾದರೂ ಹೋರಾಡಲು ಸಿದ್ಧರಿರುತ್ತಾರೆ. ಕುಂಭ ರಾಶಿಯವರಿಗೆ ತಮ್ಮ ಸಂದೇಶವನ್ನು ಏನನ್ನು ಪ್ರತಿಯಾಗಿ ನೀಡುತ್ತದೆ ಎಂಬುದರ ಬಗ್ಗೆ ತಿಳಿಯಲು ಅಗತ್ಯ ಆಂತರಿಕ ಬುದ್ಧಿವಂತಿಕೆಯನ್ನು ಹೊಂದಿದ್ದಾರೆ.

6. ಮೇಷ ರಾಶಿ
ಮೇಷ ರಾಶಿಯವರು ಯಾವುದೇ ಸೋಲು ಅಥವಾ ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಆದ್ದರಿಂದ ಇವರು ಸಹ ಉತ್ತಮ ಸಾರ್ವಜನಿಕ ಭಾಷಣಕಾರರಾಗಿ ಗುರುತಿಸಿಕೊಳ್ಳುತ್ತಾರೆ. ಮೇಷ ರಾಶಿಯ ವ್ಯಕ್ತಿಗಗಳು ತಪ್ಪು ಮಾಡಿದಾಗ ಅದರಿಂದ ಕಲಿಯುತ್ತಾರೆ ಮತ್ತು ಸುಧಾರಿಸುತ್ತಾರೆ. ಇವರು ಭಾಷಣವನ್ನು ಅಚ್ಚುಕಟ್ಟಾಗಿ, ಪಾರಂಗತರಂತೆ ಮಾಡುವುದು ಎಂದಿಗೂ ಸಾಧ್ಯವಿಲ್ಲ. ಮೇಷ ರಾಶಿಯವರು ಪ್ರೇಕ್ಷಕರೊಂದಿಗೆ ನಿಕಟ ಸಂಪರ್ಕ ಸಾಧಿಸಲು ತಮ್ಮಲ್ಲಿರುವ ದುರ್ಬಲತೆ ಮತ್ತು ಮಾನವೀಯತೆಯನ್ನು ಹಂಚಿಕೊಳ್ಳಲು ಸಿದ್ಧರಿರಬೇಕು ಎಂದು ಇವರು ತಿಳಿದಿದ್ದಾರೆ.



Click it and Unblock the Notifications











