For Quick Alerts
ALLOW NOTIFICATIONS  
For Daily Alerts

ಧನುರ್ಮಾಸದಲ್ಲಿ ಮದುವೆಯಾಗಬಾರದು, ಏಕೆ?

|

ಡಿಸೆಂಬರ್‌ 16ರಿಂದ ಜನವರಿ 14ರವರೆಗೆ ಧನುರ್ಮಾಸ. ಸೂರ್ಯನು ಜನವರಿ 16ಕ್ಕೆ ಸೂರ್ಯನು ಧನು ರಾಶಿಗೆ ಪ್ರವೇಶಿಸಿದಾಗ ಧನುರ್ಮಾಸ ಆರಂಭ. ಸೂರ್ಯ ಧನು ರಾಶಿಗೆ ಪ್ರವೇಶಿಸಿದಾಗ ಅದು ಶುಭಕಾಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಧಾರ್ಮಿಕ ಕಾರ್ಯಗಳಿಗೆ ಈ ತಿಂಗಳು ತುಂಬಾನೇ ಶ್ರೇಷ್ಠವಂತೆ.

ಆದರೆ ಮದುವೆ ಮುಂತಾದ ಶುಭಕಾರ್ಯಗಳಿಗೆ ಈ ಮಾಸ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಮದುವೆ ಮುಂತಾದ ಶುಭ ಕಾರ್ಯಗಳಿಗೆ ಧನುರ್ಮಾಸ ಏಕೆ ಶುಭವಲ್ಲ ಎಂದು ನೋಡೋಣ ಬನ್ನಿ:

ಗುರು ಬಲ ಕಡಿಮೆ ಇರುತ್ತದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅವಧಿಯಲ್ಲಿ ಸೂರ್ಯನ ಚಲನೆ ನಿಧಾನವಾಗುವುದು ಅಲ್ಲದೆ ಗುರು ಗ್ರಹದ ಪ್ರಭಾವ ತುಂಬಾ ಕಡಿಮೆ ಇರುತ್ತದೆ. ಧನು ರಾಶಿಯ ಅಧಿಪತಿ ಗುರು, ಅದೇ ರಾಶಿಗೆ ಸೂರ್ಯ ಸಂಚಾರವಾಗಲಿದೆ. ಇದರಿಂದ ಸೂರ್ಯ-ಗುರು ಸಂಯೋಗವಾಗಲಿದೆ. ಹೀಗಾದಾಗ ಸೂರ್ಯ ದುರ್ಬಲವಾಗುತ್ತಾನೆ.

ಧನುರ್ಮಾಸದಲ್ಲಿ ಮದುವೆಯಾದರೆ ಸಂಸಾರದಲ್ಲಿ ತೊಂದರೆ
ಆದ್ದರಿಂದ ಈ ಅವಧಿಯಲ್ಲಿ ಮದುವೆಯಾದರೆ ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇರಲ್ಲ, ಇಬ್ಬರ ಬದುಕಿನಲ್ಲಿ ಅನೇಕ ಸವಾಲುಗಳು ಎದುರಾಗುವುದು, ಈ ಕಾರಣಕ್ಕೆ ಧನುರ್ಮಾಸದಲ್ಲಿ ಮದುವೆಯಾಗಬಾರದು ಎಂದು ಹೇಳಲಾಗುವುದು.

ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ
ಕೆಲವು ನಂಬಿಕೆಗಳಿಗೆ ವೈಜ್ಞಾನಿಕ ಪುರಾವೆಗಳನ್ನು ಹುಡುಕಬಾರದು. ಈ ತಿಂಗಳಿನಲ್ಲಿ ಒಂದಾದ ಜೋಡಿ ಚೆನ್ನಾಗಿಯೂ ಬಾಳಬಹುದು. ಆದರೆ ಎಲ್ಲಾ ನಂಬಿಕೆಗಳಿಗೆ ಒಂದು ಅರ್ಥ ಇರುತ್ತದೆ. ಧನುರ್ಮಾಸದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬಾರದು ಎಂಬುವುದು ನಂಬಿಕೆ.

ಹಿಂದೂ ಮದುವೆಯಲ್ಲಿ ಶುಭ ಮುಹೂರ್ತಕ್ಕೆ ಮಹತ್ವ
ಹಿಂದೂ ಮದುವೆಯಲ್ಲಿ ಶುಭ ಮುಹೂರ್ತಕ್ಕೆ ತುಂಬಾನೇ ಮಹತ್ವ ನೀಡಲಾಗುವುದು. ವೈವಾಹಿಕ ಜೀವನ ಎಂಬುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ವೈವಾಹಿಕ ಜೀವನಕ್ಕೆ ಕಾಲಿಡುವಾಗ ಶುಭ ಮುಹೂರ್ತದಲ್ಲಿ ಮದುವೆಯಾಗಬೇಕು, ಆಗ ಬದುಕು ಚೆನ್ನಾಗಿರುತ್ತದೆ ಎಂಬುವುದು ನಮ್ಮಲ್ಲಿರುವ ನಂಬಿಕೆ.

ಧಾರ್ಮಿಕ ವಿಷಯಗಳಲ್ಲಿ, ಹಿಂದೂ ಧರ್ಮದ ತತ್ತ್ವಗಳಲ್ಲಿ ನಂಬಿಕೆ ಇರುವವರು ಹಿಂದೂ ಧರ್ಮದಲ್ಲಿರುವ ನಂಬಿಕೆಗಳ ವಿರುದ್ಧ ಹೋಗಲ್ಲ. ಆದ್ದರಿಂದ ಎಲ್ಲಾ ಶಾಸ್ತ್ರಬದ್ಧವಾಗಿ ಮಾಡುವ ಹಿಂದೂ ಮದುವೆಯಲ್ಲಿ ಶುಭ ಮುಹೂರ್ತಕ್ಕೆ ತುಂಬಾನೇ ಮಹತ್ವವವಿದೆ. ಧನುರ್ಮಾಸದಲ್ಲಿ ಮದುವೆಗೆ ಶುಭ ಮುಹೂರ್ತಗಳಿಲ್ಲ.
ಮದುವೆ ಮಾತ್ರವಲ್ಲ ಮಗುವಿನ ನಾಮಕರಣ, ಮನೆ ಗೃಹ ಪ್ರವೇಶ ಮುಂತಾದ ಶುಭ ಕಾರ್ಯ ಕೂಡ ಮಾಡಲ್ಲ.

ಭಕ್ತಿಗೆ, ಧಾರ್ಮಿಕ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ
ಧನುರ್ಮಾಸ ಭಕ್ತಿಯ ತಿಂಗಳು. ಈ ತಿಂಗಳಿನಲ್ಲಿ ಅನೇಕ ದೇವತಾ ಕಾರ್ಯಗಳನ್ನು ಮಾಡಲಾಗುವುದು. ಬ್ರಾಹ್ಮಿಮುಹೂರ್ತದಲ್ಲಿ ಎದ್ದು ಪೂಜೆ ಕಾರ್ಯಗಳನ್ನು ಮಾಡಿದರೆ ಹೆಚ್ಚಿನ ಶುಭ ಫಲ ಪಡೆಯುವಿರಿ.

English summary

Why Marriages are not Held During Dhanurmasam month

Dhanurmasam:What is the reason marriage not held during Dhanurmasam read on...
X
Desktop Bottom Promotion