For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ 2021: ನಿಮ್ಮ ರಾಶಿ ಪ್ರಕಾರ ಯಾವ ವಸ್ತುಗಳನ್ನು ದಾನ ಮಾಡಿದರೆ ಒಳಿತಾಗುವುದು

|

ಅಕ್ಷಯ ತೃತೀಯ ಹಿಂದೂಗಳಿಗೆ ತುಂಬಾ ವಿಶೇಷವಾದ ದಿನವಾಗಿದೆ. ಈ ದಿನ ಐಶ್ವರ್ಯ ಪ್ರಾಪ್ತಿಗಾಗಿ ವಿಷ್ಣು, ಲಕ್ಷ್ಮೀ, ಕುಬೇರನನ್ನು ಪೂಜಿಸಲಾಗುವುದು. ಅಲ್ಲದೆ ಈ ದಿನ ಚಿನ್ನ, ಆಸ್ತಿ, ವಾಹನ ಖರೀದಿಗೆ ಹೀಗೆ ಏನಾದರೂ ಸಂಪತ್ತು ಖರೀದಿಗೆ ಶ್ರೇಷ್ಠವಾದ ದಿನವಾಗಿದೆ, ಈ ದಿನ ದಾನಕ್ಕೂ ಕೂಡ ತುಂಬಾ ಮಹತ್ವವನ್ನು ಪಡೆದಿದೆ.

ಈ ದಿನ ದಾನ ಮಾಡುವುದರಿಂದ ಬದುಕಿನಲ್ಲಿ ಒಳಿತಾಗುವುದು ಎಂಬ ನಂಬಿಕೆ ಇದೆ. ನಾವಿಲ್ಲಿ ನಿಮ್ಮ ರಾಶಿಗೆ ಅನುಗುಣವಾಗಿ ಈ ದಿನ ಯಾವ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗಿದೆ ನೋಡಿ:

ಮೇಷ ರಾಶಿ

ಮೇಷ ರಾಶಿ

ನೀವು ಈ ದಿನ ಧಾನ್ಯಗಳು, ಕೆಂಒಉ ಹೂಗಳು, ಕೆಂಪು ಬಟ್ಟೆ, ತಾಮ್ರ ಇವುಗಳನ್ನು ದಾನ ಮಾಡುವುದರಿಂದ ಯಾವುದೇ ದೋಷವಿದ್ದರೆ ಪರಿಹಾರವಾಗುತ್ತದೆ ಹಾಗೂ ಶುಭ ಉಂಟಾಗುವುದು.

ವೃಷಭ ರಾಶಿ

ವೃಷಭ ರಾಶಿ

ದನಗಳಿಗೆ ಮೇವು, ವಜ್ರ, ಅಕ್ಕಿ, ಸುಗಂಧ ದ್ರವ್ಯ, ಬಟ್ಟೆ ಇವುಗಳನ್ನು ದಾನ ಮಾಡಿ. ಇದರಿಂದ ಅವಾಹಿತರಿಗೆ ವಿವಾಹಕ್ಕೆ ಏನಾದರೂ ದೋಷವಿದ್ದರೆ ಅದು ನಿವಾರಣೆಯಾಗುವುದು.

ಮಿಥುನ ರಾಶಿ

ಮಿಥುನ ರಾಶಿ

ಧಾನ್ಯಗಳು, ಚಿನ್ನ-ಹರಳು, ಹಸಿರು ಬಟ್ಟೆ, ತರಕಾರಿ, ಮನಿ ಪ್ಲ್ಯಾಂಟ್‌ ಇವುಗಳನ್ನು ದಾನ ಮಾಡಿ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಒಳ್ಳೆಯದಾಗುತ್ತದೆ, ಏಕಾಗ್ರತೆ ಹೆಚ್ಚುವುದು.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರು ಸಕ್ಕರೆ,ಅಕ್ಕಿ, ತುಪ್ಪ, ಹಾಲು, ಮೊಸರು, ನೀರು, ಬೆಳ್ಳಿ, ಮುತ್ತು ಹಾಗೂ ಬಿಳಿ ಬಟ್ಟೆ ಇವುಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗುವುದು.

ಸಿಂಹ ರಾಶಿ

ಸಿಂಹ ರಾಶಿ

ಕೆಂಪು ಬಟ್ಟೆ, ಸಿಂಧೂರ, ಮೇಣದ ಬತ್ತಿ, ಕರ್ಪೂರ, ತಾಮ್ರ ಹಾಗೂ ಪಾತ್ರೆಗಳು ಇವುಗಳನ್ನು ದಾನ ಮಾಡಬಹುದು. ಇದರಿಂದ ಖ್ಯಾತಿ ಹೆಚ್ಚುವುದು.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರು ತರಕಾರಿಗಳು, ಗಿಡ, ಹಸಿರು ಬಟ್ಟೆ, ಹಸರು ಬಳೆ, ಪುಸ್ತಕ ಹಾಗೂ ಕಲಿಕೆಗೆ ಸಂಬಂಧಿಸಿದ ವಸ್ತುಗಳು, ಬೀಜ, ಆಹಾರ ವಸ್ತುಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ನೀವು ವಿದೇಶಕ್ಕೆ ಹೋಗಲು ಬಯಸಿದ್ದರೆ ಆ ಇಚ್ಛೆ ನೆರವೇರುವುದು. ಇನ್ನು ಬರವಣಿಗೆ, ನಿರ್ದೇಶನ, ಸಂಗೀತ ಈ ಕ್ಷೇತ್ರದಲ್ಲಿರುವವರಿಗೆ ತುಂಬಾ ಒಳಿತಾಗುತ್ತದೆ.

ತುಲಾ ರಾಶಿ

ತುಲಾ ರಾಶಿ

ಸುಗಂಧ ದ್ರವ್ಯ, ಹಾಲಿನ ಉತ್ಪನ್ನಗಳು, ನೀಲಿ ಬಟ್ಟೆ, ನೀಲಿ ಬಣ್ಣದ ಬಳೆ, ಸೌಂದರ್ಯವರ್ಧಕಗಳು, ಶ್ರೀಗಂಧದ ಪುಡಿ ಇವುಗಳನ್ನು ದಾನ ಮಾಡಬಹುದು. ಇದರಿಂದ ದಾಂಪತ್ಯ ಚೆನ್ನಾಗಿರುತ್ತದೆ, ಸಹಭಾಗಿತ್ವದಲ್ಲಿ ವ್ಯವಹಾರ ಮಾಡುತ್ತಿದ್ದರೆ ಅದರಿಂದ ಒಳಿತಾಗುತ್ತದೆ, ಸಿನಿಮಾ, ಗ್ಲಾಮರ್‌ ಕ್ಷೇತ್ರದಲ್ಲಿ ಇರುವವರ ಮೇಲೆ ಏನಾದರೂ ಆಪಾದನೆ ಇದ್ದರೆ ಅದು ದೂರವಾಗುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಸಿಂಧೂರ, ಕೆಂಪು ಬಳೆ, ಸೌಂದರ್ಯವರ್ಧಕಗಳು, ಶ್ರೀಗಂಧ, ಕೆಂಪು ಬಟ್ಟೆ, ಕೆಂಪು ಹೂಗಳು ಇವುಗಳನ್ನು ಯಾರಿಗಾದರೂ ನೀಡಿ. ಹೀಗೆ ಮಾಡುವುದರಿಂದ ಏನಾದರೂ ದೋಷವಿದ್ದರೆ ಅದು ದೂರವಾಗುವುದು.

ಧನು ರಾಶಿ

ಧನು ರಾಶಿ

ನೀವು ಧರ್ಮ ಗ್ರಂಥಗಳು, ಪುಸ್ತಕ, ಹಳದಿ ಬಟ್ಟೆ, ಪಾತ್ರೆಗಳು, ಅಕ್ಕಿ, ಕಡಲೆ ಬೇಳೆ ಇವುಗಳನ್ನು ದಾನ ಮಾಡಬೇಕು. ಇದರಿಂದ ವೃತ್ತಿ ಬದುಕಿನಲ್ಲಿ ಪ್ರಗತಿ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಶ್ರಮ ತಕ್ಕಂತೆ ಉತ್ತಮ ಫಲಿತಾಂಶ ಲಭಿಸುವುದು.

ಮಕರ ರಾಶಿ

ಮಕರ ರಾಶಿ

ಎಣ್ಣೆ, ಕಬ್ಬಿಣದ ಪಾತ್ರೆಗಳು, ಕಪ್ಪು ಬಟ್ಟೆ, ಚಪ್ಪಲಿ, ಪೆನ್ನು ಇಂಥ ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಧಾರ್ಮಿಕ ಹಾಗೂ ರಾಜಕೀಯ ಬದುಕಿನಲ್ಲಿ ಒಳಿತಾಗುವುದು.

ಕುಂಭ ರಾಶಿ

ಕುಂಭ ರಾಶಿ

ಸಾಸಿವೆಯೆಣ್ಣೆ, ಎಳನೀರು, ಕೊಡೆ, ಹೊದಿಕೆ, ಶೂ, ಏಳು ಬಗೆಯ ಧಾನ್ಯಗಳು ಈ ರೀತಿಯ ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಕೋರ್ಟ್ ಕೇಸ್‌ಗಳಿದ್ದರೆ ಅದರಲ್ಲಿ ಜಯ ಸಿಗುವುದು, ವಿದೇಶ ಪ್ರಯಾಣದ ಯೋಗ ಕೂಡಿ ಬರುವುದು.

ಮೀನ ರಾಶಿ

ಮೀನ ರಾಶಿ

ಕಡಲೆ ಬೇಳೆ, ಚಿನ್ನ, ಕೇಸರಿ, ಪುಸ್ತಕ, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಅರಿಶಿಣ ಇವುಗಳನ್ನು ದಾನ ಮಾಡಬೇಕು. ಇದರಿಂದ ವೃತ್ತಿ ಬದುಕಿನಲ್ಲಿ ಏಳಿಗೆ ಉಂಟಾಗುವುದು, ವಿದ್ಯಾರ್ಥಿಗಳಿಗೂ ಒಳ್ಳೆಯದಾಗುವುದು.

English summary

What People Of Each Zodiac Sign Should Donate On Akshaya Tritiya For Good Luck

What people of each zodiac sign should donate on Akshaya Tritiya for good luck, read on..
X