Just In
- 11 min ago
ಗರುಡ ಪುರಾಣ ಪ್ರಕಾರ ಈ 4 ಗುಣಗಳಿದ್ದರೆ ಆ ವ್ಯಕ್ತಿ ಖಂಡಿತ ಯಶಸ್ವಿಯಾಗುತ್ತಾನೆ
- 1 hr ago
ಆರೋಗ್ಯಕರ ಸ್ತನದ ಲಕ್ಷಣಗಳೇನು? ಸ್ತನಗಳು ಹೇಗಿದ್ದರೆ ನಿರ್ಲಕ್ಷ್ಯ ಮಾಡಲೇಬಾರದು?
- 5 hrs ago
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕು(UTI): ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- 9 hrs ago
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
Don't Miss
- Movies
Lakshana Serial: ಆಫೀಸ್ಗೆ ಎಂಟ್ರಿ ಕೊಟ್ಟ ಲಕ್ಷಣ:ಶ್ವೇತಾಗೆ ಶಾಕ್
- News
ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರಿಂದ ಚುನಾಯಿತ ಸರ್ಕಾರಗಳಿಗೆ ತೊಂದರೆ : ಅರವಿಂದ್ ಕೇಜ್ರಿವಾಲ್
- Sports
ಕೆಎಲ್ ರಾಹುಲ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Shukra Gochar 2022 : ಕುಂಭ ರಾಶಿಗೆ ಶುಕ್ರ ಸಂಚಾರ: ಈ ಅವಧಿ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗಲ್ಲ
ಶುಕ್ರನು ಜನವರಿ 22ಕ್ಕೆ ಕುಂಭ ರಾಶಿಗೆ ಪ್ರವೇಶಿಸಲಿದೆ. 23 ದಿನಗಳವರೆಗೆ ಕುಖಭ ರಾಶಿಯಲ್ಲಿದ್ದು ನಂತರ ಮೀನ ರಾಶಿಗೆ ಸಂಚರಿಸಲಿದೆ. ಶುಕ್ರ ಕುಂಭ ರಾಶಿಯಲ್ಲಿರುವ ಅದರ ಪ್ರಭಾವ 12 ರಾಶಿಗಳ ಮೇಲಿರುತ್ತದೆ. ಈ ಸಂಚಾರ ಕೆಲವರಿಗೆ ಶುಭವಾಗಿದೆ, ಇನ್ನು ಕೆಲವರು ಜಾಗ್ರತೆವಹಿಸಬೇಕು. ಈ ಸಂಚಾರ ನಿಮ್ಮ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡೋಣ:

ಮೇಷ ರಾಶಿ
ಮೇಷ ರಾಶಿಯವರಲ್ಲಿ ಈ ಸಂಚಾರದ ಅವಧಿಯಲ್ಲಿ 11ನೇ ಮನೆಯಲ್ಲಿ ಇರಲಿದೆ. ಈ ಸಂಪತ್ತು, ಆಸೆ, ಅಣ್ಣ, ಸಹೋದರಿ ಮತ್ತು ಚಿಕ್ಕಪ್ಪನ ಮನೆಯಾಗಿದೆ. ಶುಕ್ರನ ಈ ಸ್ಥಾನ ಆರ್ಥಿಕವಾಗಿ ಅನುಕೂಲಕರವಾಗಿದೆ. ಈ ಸಮಯದಲ್ಲಿ ನಿಮ್ಮ ಅನೇಕ ಆಸೆಗಳು ಈಡೇರುತ್ತವೆ ಮತ್ತು ಅದೇ ಸಮಯದಲ್ಲಿ ಈ ಸಮಯವು ಉಳಿತಾಯ ಮತ್ತು ಹೂಡಿಕೆಗೆ ಉತ್ತಮವಾಗಿದೆ. ಶುಕ್ರನು ನಿಮ್ಮ ಹನ್ನೊಂದನೇ ಮನೆಯಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಈ ಅವಧಿಯು ಅನುಕೂಲಕರವಾಗಿರುತ್ತದೆ. ವೈಯಕ್ತಿಕ ಜೀವನದದಲ್ಲಿ ಶುಕ್ರನ ಅನುಗ್ರಹದಿಂದ ದಂಪತಿಗಳು ಈ ಸಮಯವನ್ನು ಪೂರ್ಣವಾಗಿ ಆನಂದಿಸುತ್ತಾರೆ. ಶುಕ್ರನ ಅಂಶದಿಂದಾಗಿ ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಪಡೆಯುವಿರಿ.
ಪರಿಹಾರ: ಯಾವಾಗಲೂ ನಿಮ್ಮ ಜೊತೆ ಬೆಳ್ಳಿಯ ತುಂಡನ್ನು ಇಟ್ಟುಕೊಳ್ಳಿ.

ವೃಷಭ ರಾಶಿ
ಶುಕ್ರನು ಈ ಸಂಚಾರದ ಸಮಯದಲ್ಲಿ ನಿಮ್ಮ 10ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಯಶಸ್ಸು ಸಾಧಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು. ಈ ಅವಧಿಯಲ್ಲಿ ಆರೋಗ್ಯವನ್ನು ನಿರ್ಲಕ್ಷಿಸದಂತೆ ಸಲಹೆ ನೀಡಲಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಆರೋಗ್ಯಕರ ಜೀವನಶೈಲಿಗಾಗಿ, ಸಮತೋಲಿತ ಆಹಾರವನ್ನು ತೆಗೆದುಕೊಳ್ಳಿ, ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ಯೋಗ ಮಾಡಿ.
ನೀವು ಹೊಸ ವಾಹನವನ್ನು ಖರೀದಿಸಲು, ಮನೆಯನ್ನು ನವೀಕರಿಸಲು ಅಥವಾ ಮನೆಗೆ ಐಷಾರಾಮಿ ವಸ್ತುಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ.
ಪರಿಹಾರ: ಶುಕ್ರವಾರ ಲಕ್ಷ್ಮಿ ಪೂಜೆ ಮಾಡಿ.

ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಬುಧ ನಿಮ್ಮ 9ನೇ ಮನೆಯಲ್ಲಿ ಇರಲಿದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಇಚ್ಛಿಸುವ ವಿದ್ಯಾರ್ಥಿಗಳು ಈ ಅವಧಿಯಲ್ಲಿ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಬಹುದು. ನಿಮ್ಮಲ್ಲಿ ಕೆಲವರು ಈ ಅವಧಿಯಲ್ಲಿ ಕೆಲಸಕ್ಕಾಗಿ ಅಥವಾ ರಜೆಯ ಉದ್ದೇಶಗಳಿಗಾಗಿ ದೂರದ ಅಥವಾ ವಿದೇಶಗಳಿಗೆ ಪ್ರಯಾಣಿಸುವ ಅದೃಷ್ಟವನ್ನು ಪಡೆಯಬಹುದು.
ಕುಂಭ ರಾಶಿಯಲ್ಲಿ ಶುಕ್ರನ ಸಂಚಾರವು ತಂದೆ ಮತ್ತು ಗುರುಗಳೊಂದಿಗೆ ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ. ನಿಮ್ಮ ಆಸಕ್ತಿಯು ಆಧ್ಯಾತ್ಮಿಕ ಚಟುವಟಿಕೆಗಳ ಕಡೆಗೆ ಹೆಚ್ಚುವುದು. ನಿಮ್ಮ ಹವ್ಯಾಸಗಳಿಂದ ಲಾಭಗಳಿಸುತ್ತೀರಿ. ಈ ಅವಧಿಯಲ್ಲಿ ಕಿರಿಯ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವೂ ಸುಧಾರಿಸುತ್ತದೆ.
ಪರಿಹಾರ: ಶುಕ್ರವಾರದಂದು ಲಕ್ಷ್ಮಿಗೆ ಕಮಲದ ಹೂವನ್ನು ಅರ್ಪಿಸಿ ದೇವಿಯನ್ನು ಪೂಜಿಸಿ.

ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಶುಕ್ರ ಈ ಅವಧಿಯಲ್ಲಿ ಬುಧ 8ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಏಕೆಂದರೆ ಕುಂಭ ರಾಶಿಯಲ್ಲಿ ಶುಕ್ರನ ಸಂಚಾರವು ಯುಟಿಐ, ಯಾವುದೇ ರೀತಿಯ ಅಲರ್ಜಿ ಮತ್ತು ಜನನಾಂಗದ ಸೋಂಕು ಇತ್ಯಾದಿಗಳನ್ನು ಉಂಟುಮಾಡಬಹುದು. ನಿಮ್ಮ ತಾಯಿಯ ಆರೋಗ್ಯದಲ್ಲಿ ಕ್ಷೀಣಿಸುವ ಸಾಧ್ಯತೆಯಿರುವುದರಿಂದ ಅವರ ಆರೋಗ್ಯದ ಬಗ್ಗೆಯೂ ನೀವು ಜಾಗರೂಕರಾಗಿರಬೇಕು.
ಈ ಅವಧಿ ಆರ್ಥಿಕವಾಗಿ ಒಳ್ಳೆಯದಿದೆ. ಉಳಿತಾಯ ಮಾಡಲು ಸಾಧ್ಯವಾಗುವುದು.
ಪರಿಹಾರ: ಪ್ರತಿದಿನ ಮಹಿಷಾಸುರ ಮರ್ದಿನಿ ಪಾರಾಯಣ ಮಾಡಿ.

ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಈ ಅವಧಿಯಲ್ಲಿ ಶುಕ್ರನು 7ನೇ ಮನೆಯಲ್ಲಿ ಇರಲಿದೆ. ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಈ ಸಮಯವು ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನೀವು ಅನೇಕ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಮತ್ತೊಂದೆಡೆ, ಉದ್ಯೋಗಿಗಳಿಗೆ ಈ ಸಮಯವು ಫಲಪ್ರದವಾಗಲಿದೆ. ಮದುವೆಯಾಗ ಬಯಸುವವರಿಗೆಈ ಸಮಯವು ಅನುಕೂಲಕರವಾಗಿರುತ್ತದೆ ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.
ಪರಿಹಾರ: ನಿಮ್ಮ ಮಲಗುವ ಕೋಣೆಯಲ್ಲಿ ಗುಲಾಬಿ ಬಣ್ಣದ ಸ್ಫಟಿಕ ಶಿಲೆಯನ್ನು ಇರಿಸಿದರೆ ಒಳ್ಳೆಯದು.

ಕನ್ಯಾ ರಾಶಿ
ಶುಕ್ರನು ಈ ಸಂಚಾರ ಅವಧಿಯಲ್ಲಿ 6ನೇ ಮನೆಯಲ್ಲಿ ಇರಲಿದೆ. ಅಂತಹ ಪರಿಸ್ಥಿತಿಯಲ್ಲಿ, ಕುಂಭ ರಾಶಿಯಲ್ಲಿ ಶುಕ್ರನ ಸಂಕ್ರಣವು ನಿಮಗೆ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.
ಆರೋಗ್ಯದ ದೃಷ್ಟಿಯಿಂದ, ಕನ್ಯಾ ರಾಶಿಯವರಿಗೆ ಈ ಸಮಯವು ಅನುಕೂಲಕರವಾಗಿಲ್ಲ. ಇದಲ್ಲದೆ, ನೀವು ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅವರ ದಿನನಿತ್ಯದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಹಣ ಹೆಚ್ಚು ಖರ್ಚಾಗಲಿದೆ.
ಪರಿಹಾರ: ಅಂಧ ಸಂಸ್ಥೆಗಳಿಗೆ ದೇಣಿಗೆ ನೀಡಿ.

ತುಲಾ ರಾಶಿ
ಶುಕ್ರನು ಈ ಅವಧಿಯಲ್ಲಿ ತುಲಾ ರಾಶಿಯವರ 5ನ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ, ಮಕ್ಕಳ ಕಡೆಯಿಂದ ಸಂತೋಷ ಸಿಗಲಿದೆ, ಈ ಅವಧಿ ಸಂಬಂಧಗಳಲ್ಲಿ ಮಾಧುರ್ಯತೆ ಹೆಚ್ಚುತ್ತದೆ.
ನೀವು ಕಲಾವಿದರು ಮತ್ತು ರಂಗ ಕಲಾವಿದರಾಗಿದ್ದರೆ, ಈ ಅವಧಿಯಲ್ಲಿ ನಿಮಗೆ ಅನೇಕ ಅವಕಾಶಗಳು ಸಿಗುತ್ತವೆ ಮತ್ತು ನೀವು ಪ್ರಶಂಸೆಗೆ ಅರ್ಹರಾಗುತ್ತೀರಿ. ಈ ಸಾಗಣೆಯ ಸಮಯದಲ್ಲಿ, ತುಲಾ ರಾಶಿಯವರು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ, ಒಟ್ಟಾರೆಯಾಗಿ, ಈ ಸಮಯವು ನಿಮಗೆ ಉತ್ತಮವಾಗಿದೆ.
ಪರಿಹಾರ: ಶುಕ್ರವಾರದಂದು ಕೆನೆ ಅಥವಾ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಶುಕ್ರ 4ನೇ ಮನೆಯಲ್ಲಿ ಇರಲಿದೆ. ಶುಕ್ರನ ಈ ಸಂಕ್ರಮಣವು ನಿಮಗೆ ಐಷಾರಾಮಿ ವಸ್ತುಗಳನ್ನು ಒದಗಿಸುತ್ತದೆ. ನೀವು ಐಷಾರಾಮಿ ವಾಹನ ಅಥವಾ ಇನ್ನಾವುದೇ ಐಷಾರಾಮಿ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಮನೆ ನವೀಕರಣಕ್ಕೆ ತುಂಬಾ ಹಣ ಖರ್ಚು ಮಾಡಬಹುದು. ವ್ಯವಹಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿದೆ. ಈ ಸಮಯದಲ್ಲಿ ನೀವು ಶುಕ್ರ ದೇವನ ವಿಶೇಷ ಆಶೀರ್ವಾದ ಹೊಂದಿರುವುದರಿಂದ ಆರ್ಥಿಕವಾಗಿ ಯಾವುದೇ ಚಿಂತೆಯಿಲ್ಲ.
ಪರಿಹಾರ: ಶುಕ್ರವಾರ ಲಕ್ಷ್ಮಿಗೆ ಬಿಳಿ ಹೂವುಗಳನ್ನು ಅರ್ಪಿಸಿ ಪೂಜಿಸಿ.

ಧನು ರಾಶಿ
ಧನು ರಾಶಿಯವರಲ್ಲಿ ಶುಕ್ರ 3ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಹವ್ಯಾಸವನ್ನು ಪೂರೈಸಲು ಮತ್ತು ನಿಮ್ಮ ಕೌಶಲ್ಯಗಳನ್ನುಹೆಚ್ಚಿಸಲು ನೀವು ಹಣವನ್ನು ಖರ್ಚು ಮಾಡುತ್ತೀರಿ. ಕಥೆ ಅಥವಾ ಕಾದಂಬರಿ ಬರೆಯುವವರು, ಕವಿಗಳು, ಪತ್ರಕರ್ತರು, ಲೇಖಕರು ಅಥವಾ ಬ್ಲಾಗರ್‌ಗಳಂತಹ ಬರವಣಿಗೆಯ ಕ್ಷೇತ್ರದಲ್ಲಿ ಇರುವವರಿಗೆ ಊ ಅವಧಿ ಅನುಕೂಲಕರವಾಗಿದೆ. ಈ ಸಂಚಾರದ ಸಮಯದಲ್ಲಿ, ನೀವು ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚು ಒಲವು ತೋರುತ್ತೀರಿ. ನೀವು ದೂರದ ಪ್ರಯಾಣ ಮತ್ತು ತೀರ್ಥಯಾತ್ರೆಗೆ ಹೋಗಲು ಯೋಜಿಸಬಹುದು.
ಪರಿಹಾರ: ಪ್ರತಿದಿನ ಶುಕ್ರ ಮಂತ್ರವನ್ನು ಪಠಿಸಿ.

ಮಕರ ರಾಶಿ
ಈ ಸಂಚಾರ ಅವಧಿಯಲ್ಲಿ ಶುಕ್ರ ನಿಮ್ಮ 2ನೇ ಮನೆಯಲ್ಲಿ ಇರಲಿದೆ. ಇದು ಸಂಪತ್ತು, ಕುಟುಂಬ, ಉಳಿತಾಯ ಮತ್ತು ಮಾತಿನ ಮನೆಯಾಗಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಳ ಕಂಡು ಬರುವುದು. ವೃತ್ತಿಪರ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಈ ಅವಧಿ ಹಣದ ಹೂಡಿಕೆಗೆ ಅನುಕೂಲಕರವಾಗಿದೆ. ಅಲ್ಲದೆ, ಈ ಸಮಯದಲ್ಲಿ ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ.
ಪರಿಹಾರ: ಪ್ರತಿದಿನ 108 ಬಾರಿ 'ಓಂ ಶುಂ ಶುಕ್ರಾಯ ನಮಃ' ಜಪಿಸಿ.

ಕುಂಭ ರಾಶಿ
ಶುಕ್ರ ಕುಂಭ ರಾಶಿಗೆ ಸಂಚರಿಸಲಿದೆ. ಈ ಸಂಚಾರ ನಿಮಗೆ ಅತ್ಯುತ್ತಮವಾಗಿದೆ. ಈ ಅವಧಿಯಲ್ಲಿ ನೀವು ನಿಮ್ಮ ಆರೋಗ್ಯ ಹಾಗೂ ಸೌಂದರ್ಯದ ಕಡೆಗೆ ಗಮನ ಹರಿಸುತ್ತೀರಿ, ಈ ಅವಧಿ ಪ್ರೇಮಿಗಳಿಗೆ, ವೈವಾಹಿಕ ಜೀವನಕ್ಕೆ ಅನುಕೂಲಕರವಾಗಿದೆ. ಆರ್ಥಿಕವಾಗಿ ಈ ಸಂಚಾರ ನಿಮಗೆ ಅನುಕೂಲಕರವಾಗಿದೆ.
ಪರಿಹಾರ: ಪ್ರತಿದಿನ ಶ್ರೀಗಂಧದ ಸುಗಂಧದ್ರವ್ಯ ಬಳಸಿ.

ಮೀನ ರಾಶಿ
ಈ ಸಂಚಾರದ ಅವಧಿಯಲ್ಲಿ ಶುಕ್ರ ನಿಮ್ಮ 12ನೇ ಮನೆಯಲ್ಲಿ ಇರಲಿದೆ. ಶುಕ್ರ ಶುಭ ಗ್ರಹವಾಗಿದ್ದರೂ, ಶುಕ್ರನನ್ನು ಗುರುವಿನ ಶತ್ರು ಎಂದು ಪರಿಗಣಿಸಲಾಗಿದೆ, ಆದ್ದರಿಂದ ಕುಂಭ ರಾಶಿಯಲ್ಲಿ ಶುಕ್ರನ ಸಂಚಾರವು ನಿಮಗೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು, ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಅಲ್ಲದೆ, ಈ ಸಮಯದಲ್ಲಿ ನಿಮ್ಮ ಖರ್ಚುಗಳು ಕೂಡ ಹೆಚ್ಚಾಗಬಹುದು. ಅನಗ್ಯತವಾಗಿ ಹಣ ಖರ್ಚು ಮಾಡದಂತೆ ಎಚ್ಚರವಹಿಸಿ. ಅಲ್ಲದೆ ನಿಮ್ಮ ವ್ಯಕ್ತಿತ್ವಕ್ಕೆ ಕಳಂಕ ಉಂಟಾಗದಂತೆ ಜಾಗ್ರತೆವಹಿಸಿ.
ಪರಿಹಾರ: ಶುಕ್ರವಾರದಂದು ಯಾವುದೇ ದೇವಸ್ಥಾನಕ್ಕೆ ಹೋಗಿ ಬಿಳಿ ಸಿಹಿತಿಂಡಿಗಳನ್ನು ದಾನ ಮಾಡಿ.