Just In
Don't Miss
- Sports
IND vs AUS: ಬಾರ್ಡರ್-ಗವಾಸ್ಕರ್ ಮೊದಲ ಟೆಸ್ಟ್ ಪಂದ್ಯಕ್ಕಾಗಿ ನಾಗ್ಪುರಕ್ಕೆ ಬಂದಿಳಿದ ಟೀಂ ಇಂಡಿಯಾ
- Movies
ಮತ್ತೆ ಟಾಪ್ ಒನ್ ಸ್ಥಾನಕ್ಕೆ ಬಂದ 'ಪುಟ್ಟಕ್ಕನ ಮಕ್ಕಳು'
- News
ಇದೇ ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ: ಬಸವರಾಜ ಬೊಮ್ಮಾಯಿ
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಆಮೆಯನ್ನು ಏಕೆ ಮತ್ತು ಎಂಥಾ ಆಮೆಯನ್ನು ಇಡಬೇಕು ಗೊತ್ತಾ?
ಆಮೆ ದೀರ್ಘಾಯುಷ್ಯ ಮತ್ತು ಶಾಂತಿಯನ್ನು ಸೂಚಿಸುವ ಆಧ್ಯಾತ್ಮಿಕ ಜೀವಿ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಅಷ್ಟೇ ಅಲ್ಲದೆ ಆಮೆ ಬುದ್ಧಿವಂತಿಕೆ, ಸಹಿಷ್ಣುತೆಯ. ಆಮೆಯ ಚಿಪ್ಪು ರಕ್ಷಣೆ ಮಾಡಿದರೆ, ಅದರ ಜೀವನ ಚಕ್ರವು ದೀರ್ಘಾಯುಷ್ಯವನ್ನು ಪ್ರತಿನಿಧಿಸುತ್ತದೆ.
ಮನೆಯಲ್ಲಿ ಆಮೆಯ ಪ್ರತಿಮೆಯನ್ನು ಇಡುವುದರಿಂದ ಮನೆಯ ಸದಸ್ಯರ ದೀರ್ಘಾಯುಷ್ಯ ಬಯಸಬಹುದು ಹಾಗೂ ಮನೆಯ ನಕಾರಾತ್ಮಕ ಶಕ್ತಿಗಳಿಂದ ನಿಮ್ಮ ಮನೆಯನ್ನು ಅಮೆ ರಕ್ಷಿಸುತ್ತದೆ. ಅದಕ್ಕಾಗಿ ಹಲವರು ಮನೆಯಲ್ಲಿ ಆಮೆಯ ವರ್ಣಚಿತ್ರ, ಆಮೆಯ ಛಾಯಾಚಿತ್ರಗಳು ಅಥವಾ ಮನೆಯ ಸುತ್ತಲೂ ಆಮೆಯ ಚಿಪ್ಪಿನ ತುಂಡನ್ನು ಇಡುತ್ತಾರೆ. ಬುದ್ಧಿವಂತಿಕೆ, ರಕ್ಷಣೆ ಮತ್ತು ದೀರ್ಘಾಯುಷ್ಯವನ್ನು ಆಹ್ವಾನಿಸುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ ಆಮೆಯನ್ನು ಮನೆಯಲ್ಲಿ ಏಕೆ ಇಡಬೇಕು, ಇದನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಯಾವ ಲೋಹದ ಆಮೆ ಇಟ್ಟರೆ ಮನೆಗೆ ಶುಭ ಮುಂದೆ ತಿಳಿಯೋಣ:

1. ಮನೆಯಲ್ಲಿ ಆಮೆಯನ್ನು ಏಕೆ ಇಡಬೇಕು?
* ಮನೆಯಲ್ಲಿ ಜೀವಂತ ಆಮೆ ಅಥವಾ ಆಮೆಯ ಪ್ರತಿಮೆಯನ್ನು ಇಡುವುದರಿಂದ ಹಲವಾರು ಪ್ರಯೋಜನಗಳಿವೆ. ಆಮೆಯ ಪ್ರತಿಮೆಗಳು ಧನಾತ್ಮಕತೆಯನ್ನು ಆಕರ್ಷಿಸುತ್ತವೆ ಮತ್ತು ನಕಾರಾತ್ಮಕ ಶಕ್ತಿಯಿಂದ ಮನೆಯನ್ನು ರಕ್ಷಿಸುತ್ತವೆ.
* ವಾಸ್ತು ಪ್ರಕಾರ, ನೀವು ಆಮೆಯ ಆಕೃತಿಯನ್ನು ನೀರಿನಲ್ಲಿ ಇಟ್ಟರೆ ಅದು ಧನಾತ್ಮಕ ಪರಿಣಾಮವನ್ನು ದ್ವಿಗುಣಗೊಳಿಸುತ್ತದೆ.
* ಮಲಗುವ ಕೋಣೆಯಲ್ಲಿ ಆಮೆಯ ಪ್ರತಿಮೆಯನ್ನು ಇಡುವುದು ನಿದ್ರಾಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
* ಕೃತಕ ಜಲಪಾತ ಅಥವಾ ಮೀನಿನ ತೊಟ್ಟಿಯ ಬಳಿ ನೀವು ಯಾವುದೇ ರೀತಿಯ ಆಮೆಯ ಆಕೃತಿಯನ್ನು ಇರಿಸಬಹುದು, ಅದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ನಿಮ್ಮ ವೃತ್ತಿಜೀವನದ ಯಶಸ್ಸಿಗೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಆಮೆ ಇಟ್ಟರೆ ಖಂಡಿತ ಯಶಸ್ವಿಯಾಗುತ್ತೀರಿ ಎನ್ನುತ್ತದೆ ವಾಸ್ತು ಶಾಸ್ತ್ರ.

2. ಲೋಹದ ಆಮೆ
ಲೋಹದ ಆಮೆಯನ್ನು ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಉತ್ತರದಲ್ಲಿ ಆಮೆಯನ್ನು ಇಟ್ಟರೆ, ಇದು ಮಕ್ಕಳ ಜೀವನದಲ್ಲಿ ಅದೃಷ್ಟವನ್ನು ತರುತ್ತದೆ ಮತ್ತು ಅವರ ಏಕಾಗ್ರತೆಯ ಮಟ್ಟವನ್ನು ಸುಧಾರಿಸುತ್ತದೆ. ಅಲ್ಲದೆ, ಆಮೆಯನ್ನು ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಅವರ ಮನಸ್ಸು ಇನ್ನಷ್ಟು ಚುರುಕಾಗುತ್ತದೆ.

3. ಹೆಣ್ಣು ಆಮೆ
ಅನೇಕ ವಿಧದ ಆಮೆ ಪ್ರತಿಮೆಗಳಿವೆ ಅವುಗಳಲ್ಲಿ ಹೆಣ್ಣು ಆಮೆ ಮಕ್ಕಳು ಮತ್ತು ಕುಟುಂಬವನ್ನು ಸಂಕೇತಿಸುತ್ತದೆ. ನೀವು ಈ ಆಮೆಯನ್ನು ನಿಮ್ಮ ಮನೆಯಲ್ಲಿ ಇಟ್ಟರೆ ಕುಟುಂಬದಲ್ಲಿ ಉದ್ಭವಿಸುವ ಯಾವುದೇ ವಿವಾದಗಳನ್ನು ತಪ್ಪಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

4. ಮರದ ಆಮೆ
ವಾಸ್ತು ಶಾಸ್ತ್ರದ ಪ್ರಕಾರ, ಮರದ ಆಮೆಯನ್ನು ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ನಿಗ್ರಹಿಸುತ್ತದೆ. ಇದು ನಿಮ್ಮ ಪ್ರೀತಿಪಾತ್ರರ ಜೀವನವನ್ನು ಸಂತೋಷ, ಅದೃಷ್ಟ ಮತ್ತು ಯಶಸ್ಸಿನಿಂದ ತುಂಬುತ್ತದೆ.

5. ಕ್ರಿಸ್ಟಲ್ ಆಮೆ
ಸ್ಫಟಿಕ ಆಮೆಗಳು ನೈಋತ್ಯ ಮತ್ತು ವಾಯುವ್ಯ ದಿಕ್ಕಿಗೆ ಸೂಕ್ತವಾಗಿವೆ. ಫೆಂಗ್ ಶೂಯಿ ಪ್ರಕಾರ, ಅವುಗಳನ್ನು ನೈಋತ್ಯ ದಿಕ್ಕಿನಲ್ಲಿ ಕ್ರಿಸ್ಟಲ್ ಆಮೆ ಇಡುವುದರಿಂದ ನಿಮ್ಮ ಜೀವನದಲ್ಲಿ ಹಣ ಹರಿವು ಹೆಚ್ಚಾಗುತ್ತದೆ, ಅಷ್ಟೇ ಅಲ್ಲದೆ ವಾಯುವ್ಯ ದಿಕ್ಕು ನಿಮಗೆ ಖ್ಯಾತಿಯನ್ನು ತರುತ್ತದೆ. ಇದು ನಿಮ್ಮ ಜೀವಿತಾವಧಿಯನ್ನು ಕೂಡ ಹೆಚ್ಚಿಸುತ್ತದೆ.

6. ಮರದ ಆಮೆ
ನಿಮ್ಮ ಮನೆಯ ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಮರದ ಆಮೆಯನ್ನು ಇಡುವುದರಿಂದ ನಿಮ್ಮ ಮನೆಯ ಸದಸ್ಯರ ನಡುವೆ ಸಾಮರಸ್ಯ, ಶಾಂತಿ, ಪ್ರಶಾಂತತೆ ಮತ್ತು ಸಂಪತ್ತು ನೆಲೆಸುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

7. ಆಮೆ ಇಡಲು ಉತ್ತಮ ದಿನ
ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಮನೆಯಲ್ಲಿ ಆಮೆಯ ಪ್ರತಿಮೆಗಳನ್ನು ಇಡಲು ಉತ್ತಮ ದಿನಗಳು ಎಂದು ಪರಿಗಣಿಸಲಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಮಂಗಳಕರ ಸಮಯವದಲ್ಲಿ ಕೇಸರಿ ಅಥವಾ ಹಳದಿ ಹೂವುಗಳನ್ನು ಆಮೆಯ ಪ್ರತಿಮೆಗೆ ಅರ್ಪಿಸಿದರೆ ಶುಭವಾಗುತ್ತದೆ.

8. ಆಮೆಯನ್ನು ಹೀಗೆ ಇಟ್ಟರೂ ನಿಮಗೆ ಶುಭಫಲ ಸಿಗುತ್ತದೆ
ನಿಮಗೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಆಮೆಯ ಪ್ರತಿಮೆಯನ್ನು ನೀರಿನಲ್ಲಿ ಇಡಬೇಕು. ನೀವು ಕೆಲವು ವರ್ಣರಂಜಿತ ಕಲ್ಲುಗಳನ್ನು ಕೂಡ ನೀರಿನಲ್ಲಿ ಸೇರಿಸಬಹುದು.
ಮನೆಯ ಪ್ರವೇಶ ದ್ವಾರದಲ್ಲಿ ಆಮೆಯನ್ನು ಇಡುವುದರಿಂದ ನಿಮ್ಮ ಮನೆಯನ್ನು ನಕಾರಾತ್ಮಕ ಶಕ್ತಿಯಿಂದ ಈ ಆಮೆ ರಕ್ಷಿಸುತ್ತದೆ.