Just In
Don't Miss
- Movies
'ಕ್ರಾಂತಿ' ಬೈಕ್ ಪ್ರಚಾರ ಮಾಡಿ ಇದ್ದ ಕೆಲಸ ಹೋಯ್ತು ಎಂದ ಅಭಿಮಾನಿ: ವಿಡಿಯೋ ವೈರಲ್
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೆ.1ಕ್ಕೆ ಸ್ಕಂದ ಷಷ್ಠಿ: ಸಂತಾನ ಭಾಗ್ಯ, ದಾರಿದ್ರ್ಯ ನಿವಾರಣೆಗೆ ಪಾಲಿಸಬೇಕಾದ ಪೂಜಾ ವಿಧಿಗಳೇನು?
ಸ್ಕಂದ ಷಷ್ಠಿ ಉಪವಾಸವನ್ನು ಕಾರ್ತಿಕೇಯ ದೇವರಿಗೆ ಅಂದರೆ ಸುಬ್ರಹ್ಮಣ್ಯ ಸ್ವಾಮಿಗೆ ಸಮರ್ಪಿಸಲಾಗಿದೆ. ಭಾದ್ರಪದ ಶುಕ್ಲ ಪಕ್ಷದ ಷಷ್ಠಿ ದಿನಾಂಕದಂದು ಸ್ಕಂದ ಷಷ್ಠಿ ಆಚರಿಸಲಾಗುತ್ತದೆ ಅಂದರೆ ಈ ದಿನ ಆಚರಿಸಲಾಗುತ್ತಿದೆ. ಸ್ಕಂದ ಷಷ್ಠಿಯನ್ನು ಕಂದ ಷಷ್ಠಿ ಎಂದೂ ಕರೆಯುತ್ತಾರೆ.
ಈ ದಿನ ಕಾರ್ತಿಕೇಯ ದೇವರನ್ನು ನಿಯಮಾನುಸಾರ ಪೂಜಿಸುವುದರಿಂದ ಸುಖ, ಸಮೃದ್ಧಿ, ಸಂತಾನ ಭಾಗ್ಯ ದೊರೆಯುತ್ತದ.

ಸ್ಕಂದ ಷಷ್ಠಿಯ ಪೂಜೆಯ ಶುಭ ಸಮಯ ಯಾವಾಗ?
ಸ್ಕಂದ ಷಷ್ಠಿ ದಿನಾಂಕ - ಸೆಪ್ಟೆಂಬರ್ 1, 2022, ಗುರುವಾರ
ಭಾದ್ರಪದ, ಶುಕ್ಲ ಷಷ್ಠಿ ಆರಂಭ - ಮಧ್ಯಾಹ್ನ 02:49 ಸೆಪ್ಟೆಂಬರ್ 01
ಭಾದ್ರಪದ, ಶುಕ್ಲ ಷಷ್ಠಿ ಮುಕ್ತಾಯ -ಮಧ್ಯಾಹ್ನ 01:51ಕ್ಕೆ ಸೆಪ್ಟೆಂಬರ್ 02
ಸೆಪ್ಟೆಂಬರ್ 1 ರಂದು ಸ್ಕಂದ ಷಷ್ಠಿ ಉಪವಾಸವನ್ನು ಆಚರಿಸಲಾಗುತ್ತದೆ.

ಸ್ಕಂದ ಷಷ್ಠಿಯ ಮಹತ್ವ
ಮುರುಗನು ಷಷ್ಠಿಯ ದಿನದಂದು ಸೊರಪದ್ಮ ಮತ್ತು ಅವನ ಸಹೋದರರಾದ ತಾರಕಾಸುರ ಮತ್ತು ಸಿಂಹಮುಖನನ್ನು ಕೊಂದನು. ಸ್ಕಂದ ಷಷ್ಠಿಯ ಈ ದಿನ ವಿಜಯದ ಸಂಕೇತವಾಗಿದೆ. ಮುರುಗನ್ ವೇಲ್ ಎಂಬ ಆಯುಧವನ್ನು ಬಳಸಿ ಸೂರಪದ್ಮನ ಶಿರಚ್ಛೇದ ಮಾಡಿದನೆಂದು ನಂಬಲಾಗಿದೆ. ಕತ್ತರಿಸಿದ ತಲೆಯಿಂದ ನವಿಲು ಹಾಗೂ ಹುಂಜ ಹೊರಹೊಮ್ಮಿದವು ಎಂಬ ಪೌರಾಣಿಕ ಕತೆಯಿದೆ. ನವಿಲನ್ನು ಕಾರ್ತಿಕೇಯ ತನ್ನ ವಾಹನವನ್ನಾಗಿ ಮಾಡಿದರೆ ಧ್ವಜದ ಸಂಕೇತವಾಗಿ ಹುಂಜವನ್ನು ಬಳಸಿದರು.
ಸ್ಕಂದ ಷಷ್ಠಿಯ ವ್ರತವನ್ನು ಆಚರಿಸುವುದರಿಂದ ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ.

ಪೂಜಾ ವಿಧಿಗಳು:
* ಸ್ಕಂದ ಷಷ್ಠಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ.
* ಹಲಗೆಯ ಮೇಲೆ ಕೆಂಪು ಬಟ್ಟೆಯನ್ನು ಹಾಕಿ ಕಾರ್ತಿಕೇಯನ ವಿಗ್ರಹವನ್ನು ಸ್ಥಾಪಿಸಿ.
* ಮುರುಗನ ಜೊತೆಗೆ ಶಿವ-ಪಾರ್ವತಿ ಹಾಗೂ ಗಣೇಶ ಮೂರ್ತಿಗಳನ್ನೂ ಪ್ರತಿಷ್ಠಾಪಿಸಬೇಕು.
* ಕಾರ್ತಿಕೇಯನ ಮುಂದೆ ಕಲಶವನ್ನು ಇರಿಸಿ.
* ಮೊದಲು ಗಣೇಶನ ಪೂಜೆ ಮಾಡಿ.
* ಸಾಧ್ಯವಾದರೆ ಅಖಂಡ ಜ್ಯೋತಿ ಬೆಳಗಿಸಿ. ಹಾಗೆಯೇ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸಿ.
* ಕಾರ್ತಿಕೇಯನಿಗೆ ನೀರನ್ನು ಅರ್ಪಿಸಿ ಮತ್ತು ಹೊಸ ಬಟ್ಟೆಗಳನ್ನು ಅರ್ಪಿಸಿ.
* ಹೂವುಗಳು ಅಥವಾ ಹೂವಿನ ಹಾರಗಳನ್ನು ಅರ್ಪಿಸುವ ಮೂಲಕ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
* ಪೂಜೆಯ ಕೊನೆಯಲ್ಲಿ ಆರತಿ ಮಾಡಿ.