Just In
Don't Miss
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಾಧುಗಳ ಕೇಶವಿನ್ಯಾಸದ ಹಿಂದಿರುವ ರಹಸ್ಯ
ಹಿಂದೂ ಧರ್ಮದಲ್ಲಿ ಧ್ಯಾನ ಹಾಗೂ ಆಧ್ಯಾತ್ಮಕ್ಕೆ ಹೆಚ್ಚಿನ ಮಹತ್ವವಿದ್ದು, ಹಿಂದಿನಿಂದಲೂ ಸಾಧು, ಸಂತರು ಧಾನ್ಯ ಹಾಗೂ ಆಧ್ಯಾತ್ಮದ ಮೂಲಕವಾಗಿ ಸಿದ್ಧಿ ಪಡೆಯುತ್ತಲಿದ್ದರು. ಸಾಧುಗಳು ಹೆಚ್ಚಾಗಿ ಮನೆಮಠ, ಸಂಸಾರ ತ್ಯಜಿಸಿ ಯಾವುದಾದರೂ ದೇವಾಲಯ ಅಥವಾ ಹಿಮಾಲಯದ ತಪ್ಪಲಿನಲ್ಲಿ ಧ್ಯಾನ ಮಗ್ನರಾಗುವರು. ಸಾಧುಗಳಲ್ಲೂ ಹಲವಾರು ವಿಧಗಳು ಇವೆ. ಆದರೆ ಪ್ರತಿಯೊಬ್ಬ ಸಾಧುವಿನಲ್ಲೂ ನಾವು ಕಾಣುವಂತಹ ಸಾಮಾನ್ಯ ಲಕ್ಷಣವೆಂದರೆ ಅವರು ಬಿಟ್ಟಿರುವಂತಹ ಕೂದಲು. ಇದು ಎಲ್ಲರನ್ನು ಆಕರ್ಷಿಸುವುದು ಕೂಡ. ಉದ್ದಗಿನ ಕೂದಲು ಬಿಟ್ಟುಕೊಂಡಿರುವ ಸಾಧುಗಳ ಸಾಧನೆಯಲ್ಲಿ ತೊಡಗಿಕೊಳ್ಳುವರು. ಸಾಧುಗಳ ಕೂದಲಿನ ಹಿಂದಿರುವ ರಹಸ್ಯದ ಬಗ್ಗೆ ನಾವು ಇನ್ನಷ್ಟು ತಿಳಿದುಕೊಳ್ಳುವ.

ಸಾಧುಗಳು ಎಂದರೆ ಯಾರು?
ಹಿಂದೂ ಧರ್ಮದಲ್ಲಿ ಸಾಧುಗಳು ಎಂದರೆ ಧಾರ್ಮಿಕ ತಪಸ್ವಿ ಮತ್ತು ಪವಿತ್ರ ವ್ಯಕ್ತಿ. ಸಾಧುಗಳು ಮೋಕ್ಷ ಸಾಧನೆಗಾಗಿ ಧ್ಯಾನ ಮಾಡುವರು. ಸಾಧುಗಳು ಯಾವಾಗಲೂ ಕಾವಿ ಬಟ್ಟೆ ಧರಿಸುವರು ಮತ್ತು ಇದು ಅವರ ಸನ್ಯಾಸತ್ವದ ಸಂಕೇತವಾಗಿದೆ.

ಸಾಧುವಿನ ಚಿತ್ರವನ್ನು ಊಹಿಸಿಕೊಳ್ಳುವುದೇ ವಿಭಿನ್ನ
ಸಾಧುವಿನಂತೆ ವೇಷ ಹಾಕಿಕೊಳ್ಳಿ ಎಂದು ನೀವು ಯಾರಿಗಾದರೂ ಹೇಳಿಕೊಂಡಿದ್ದೀರಾ? ಹಾಗಾದರೆ ನೀವು ಈಗ ಸಾಧುವಿನ ಚಿತ್ರವನ್ನು ಮನಸ್ಸಿನಲ್ಲಿಯೇ ಊಹಿಸಿಕೊಳ್ಳಿ. ಕಾವಿ ಬಟ್ಟೆ, ರುದ್ರಾಕ್ಷಿ ಸರ, ಹಣೆ ಮೇಲೆ ಕುಂಕುಮ ಅಥವಾ ಶ್ರೀಗಂಧದ ತಿಲಕ, ಕೈಯಲ್ಲಿ ಕಮಂಡಲ ಮತ್ತು ಉದ್ದಗಿನ ಕೂದಲು ಅವರನ್ನು ಬೇರೆ ಜನರಿಗಿಂತ ತುಂಬಾ ಭಿನ್ನವಾಗಿ ಕಾಣಿಸುವಂತೆ ಮಾಡುವುದು.

ಸಾಧುಗಳ ಕೂದಲಿನ ರಹಸ್ಯ ಬಹಿರಂಗ
ಪ್ರತಿಯೊಬ್ಬರು ಸಾಧುಗಳ ಕೂದಲಿನ ಶೈಲಿಯ ಬಗ್ಗೆ ಅಚ್ಚರಿಗೊಳಗಾಗಿರಬಹುದು ಅಥವಾ ಅವರು ಇದನ್ನು ಹೇಗೆ ಪಡೆಯುತ್ತಾರೆ ಎನ್ನುವ ಪ್ರಶ್ನೆ ಮೂಡಿರಬಹುದು. ಇದರ ರಹಸ್ಯವನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಮಹಾಕುಂಭದ ವೇಳೆ ಕೆಲವೊಂದು ಅಖಾಡಗಳಿಗೆ ಭೇಟಿ ನೀಡಿದ ವೇಳೆ ಕೆಲವೊಂದು ವಿಚಾರಗಳು ಗಮನಕ್ಕೆ ಬಂದಿದೆ ಮತ್ತು ನಾವು ಊಹಿಸಿರುವುದು ಮತ್ತು ಅಲ್ಲಿ ಕಂಡಿರುವುದು ತುಂಬಾ ಭಿನ್ನವಾಗಿತ್ತು.

ಸಾಧುಗಳ ಕೂದಲಿನ ಬಗ್ಗೆ ಇದ್ದ ತಪ್ಪು ಗ್ರಹಿಕೆ
ಸಾಧುಗಳು ತಮ್ಮ ಕೂದಲನ್ನು ತುಂಬಾ ಅಸಾಮಾನ್ಯ ಮತ್ತು ಅಸ್ವಚ್ಛತೆಯಿಂದ ಬೆಳೆಸುವರು ಮತ್ತು ಅವರಿಗೆ ಇದರ ಬಗ್ಗೆ ಯಾವುದೇ ಚಿಂತೆ ಇರುವುದಿಲ್ಲ ಎಂದು ಮೊದಲು ನಾವು ಭಾವಿಸಿಕೊಂಡಿದ್ದೆವು ಅಲ್ಲವೆ. ಆದರೆ ಈ ಗ್ರಹಿಕೆಗಿಂತಲೂ ಅದ್ಭುತವಾದ ವಿಚಾರಗಳು ಇಲ್ಲಿವೆ. ಕೂದಲ ಆರೈಕೆಯಲ್ಲಿ ಅವರು ನಮಗಿಂತಲೂ ಕಟ್ಟುನಿಟ್ಟು.

ಸಾಧುಗಳ ಕೂದಲನ್ನು ಹೇಗೆ ಬಾಚುತ್ತಾರೆ ಗೊತ್ತಾ
ಸಾಧುವೊಬ್ಬರು ಮತ್ತೊಬ್ಬ ಸಾಧುವಿನ ಕೂದಲನ್ನು ಬಾಚುತ್ತಿರುವುದನ್ನು ನೋಡಿದರೆ ಯಾರಿಗಾದರೂ ಖಂಡಿತವಾಗಿಯೂ ಅಚ್ಚರಿಯಾದೀತು. ಸಾಧುಗಳು ಉದ್ದಗಿನ ಸೂಜಿಯನ್ನು ಹಿಡಿದುಕೊಂಡು ಕೂದಲನ್ನು ಬಾಚುತ್ತಾ ಅದನ್ನು ಹಾಗೆ ಸುರುಳಿ ಮಾಡಿಕೊಂಡು ಕೂದಲಿನ ಕೊನೆಗೆ ಚುಚ್ಚುತ್ತಾರೆ. ಈ ಮೂಲಕ ನಾವು ನೋಡುವ ಸಾಧುಗಳ ಕೂದಲ ವಿನ್ಯಾಸಕ್ಕೆ ಕೂದಲು ರೂಪುಗೊಳ್ಳುತ್ತಾ ಬರುತ್ತದೆ. ತಲೆಯ ಮೇಲೆ ಒಂದು ಬನ್ ಆಕಾರವನ್ನು ಕೂದಲಿಗೆ ನೀಡಲಾಗುತ್ತಿತ್ತು. ಸಾಧುಗಳ ಕೂದಲಿನ ಶೈಲಿಯನ್ನು ಮೀರುವುದಕ್ಕೆ ಖಂಡಿತವಾಗಿಯೂ ನಮಗೆ ಸಾಧ್ಯವಿಲ್ಲ.

ಸಾಧುಗಳ ಕೂದಲನ್ನು ವಿನ್ಯಾಸಕ್ಕೆ ತರಲು ತುಂಬಾ ಸಮಯ ತಾಳ್ಮೆ ಅಗತ್ಯ
ಸಾಧುಗಳಿಗೆ ತಮ್ಮ ಕೂದಲನ್ನು ವಿನ್ಯಾಸಗೊಳಿಸಲು ಹಲವಾರು ಗಂಟೆಗಳು ಬೇಕಾಗುವುದು ಮತ್ತು ಅವರಿಗೆ ಇದು ತುಂಬಾ ನೋವಿನಿಂದಲೂ ಕೂಡಿರುತ್ತದೆ. ಕೂದಲನ್ನು ವಿನ್ಯಾಸಗೊಳಿಸುವ ವೇಳೆ ತುಂಬಾ ಸಮಯದ ತನಕ ತಲೆಯನ್ನು ಬಗ್ಗಿಸಿಡಬೇಕು. ಈ ಭಂಗಿಯಲ್ಲಿ ಕುಳಿತುಕೊಂಡರೆ ಮಾತ್ರ ಆಗ ದಪ್ಪಗಿನ ಕೂದಲು ಮಾಡಲು ಸಾಧ್ಯ. ಅಂತಿಮವಾಗಿ ಅದನ್ನು ಸುರುಳಿಯಾಗಿ ಸುತ್ತಿಕೊಳ್ಳಲು ಆಗುವುದು. ಇದಕ್ಕೆ ಸಾಕಷ್ಟು ತಾಳ್ಮೆ ಅಗತ್ಯ.

ತಮ್ಮದೇ ಶಾಂಪೂ ತಯಾರಿಸುವ ಸಾಧುಗಳು
ಸೂಜಿ ಮತ್ತು ದಾರ ಬಳಸಿಕೊಂಡು ಇದನ್ನು ಸುತ್ತುವ ಕ್ರಮವೆಂದರೆ ಅದರು ದಿನವಿಡಿ ಹಾಗೆ ಉಳಿಯಬೇಕು ಮತ್ತು ಪರಸ್ಪರ ಒಂದಕ್ಕೊಂದು ತಾಗಿಕೊಂಡು ಹಾಳಾಗಬಾರದು ಎನ್ನುವುದು. ಇದು ತುಂಬಾ ಬಿಡಿಬಿಡಿಯಾಗಿದೆ ಎಂದು ಅನಿಸಿದರೂ ಅದು ತುಂಬಾ ಉತ್ತಮವಾಗಿಯೇ ಇರುತ್ತದೆ. ಅವರು ತಮ್ಮದೇ ಆಗಿರುವಂತಹ ಕೆಲವೊಂದು ಶಾಂಪೂ ತಯಾರಿಸಿಕೊಂಡು ಅದನ್ನು ಬಳಕೆ ಮಾಡಿಕೊಳ್ಳುವರು. ಇದರಿಂದ ಕೂದಲು ತುಂಬಾ ಶುದ್ಧ ಹಾಗೂ ಉದ್ದವಾಗಿರುವುದು.

ತಿಂಗಳ ಕಾಲ ಹಾಗೆ ಇರಬಹುದು!
ಒಂದು ಸಲ ಸಾಧುಗಳು ಕೂದಲು ಕಟ್ಟಿಕೊಂಡರೆ ಅದನ್ನು ಮತ್ತೆ ಒಂದು ತಿಂಗಳ ಕಾಲ ಮುಟ್ಟಬೇಕೆಂದಿಲ್ಲ. ಅಷ್ಟು ಸಮಯದ ತನಕ ಅದು ಹಾಗೆ ಉಳಿಯುವುದು. ಅವರು ಕೂದಲನ್ನು ತೊಳೆಯುವುದಿಲ್ಲ ಮತ್ತು ಅದರ ಪೋಷಣೆಗೆ ಸರಿಯಾಗಿ ಎಣ್ಣೆ ಹಾಕುವ ಬಗ್ಗೆ ಕೆಲವೊಮ್ಮೆ ಯೋಚನೆ ಮಾಡಲ್ಲ.

ಕೂದಲಿನ ಶೈಲಿ ಟ್ರೆಂಡ್ ಆಗುತ್ತಿದೆಯಾ?
ಸಾಧುಗಳ ಕೂದಲಿನ ಶೈಲಿಯು ಇಂದಿನ ದಿನಗಳಲ್ಲಿ ಟ್ರೆಂಡ್ ಆಗುತ್ತಿದೆ. ಇತ್ತೀಚೆಗೆ ಯುವಕರು ಹಾಗೂ ಹಲವಾರು ವಿದೇಶಿಗಳು ಇದೇ ರೀತಿಯ ಕೂದಲ ಶೈಲಿಯನ್ನು ಹೊಂದುತ್ತಿದ್ದಾರೆ. ಅಲ್ಲದೇ ಈ ರೀತಿಯ ಶೈಲಿಯನ್ನು ಅವರು ತುಂಬಾ ಇಷ್ಟಪಡುತ್ತಿದ್ದಾರೆ ಸಹ. 21ನೇ ಶತನಮಾನದಲ್ಲಿ ಭಾರತೀಯ ಸಂಸ್ಕೃತಿಯನ್ನು ವಿದೇಶಿಗರು ಅನುಕರಣೆ ಮಾಡುತ್ತಿರುವುದು. ಅದು ಕೂಡ ಕೂದಲಿನ ಶೈಲಿಯನ್ನು ಅನುಕರಿಸುತ್ತಿರುವುದು ನಮಗೂ ಹೆಮ್ಮೆಯ ವಿಚಾರವಲ್ಲವೇ?
ಮುಂದಿನ ಸಲ ಸಾಧುವನ್ನು ನೋಡುವಾಗ ಅದರ ಕೂದಲಿನ ಶೈಲಿ ಹಾಗೂ ಅದರ ಭಾರವನ್ನು ಅವರು ಹೊರುತ್ತಿರುವ ಬಗ್ಗೆ ಖಂಡಿತವಾಗಿಯೂ ನೀವು ಗಮನಿಸಿ.