Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಜನವರಿಯಲ್ಲಿದೆ ಈ 4 ಪ್ರಮುಖ ಗ್ರಹಗಳ ಸಂಚಾರ
ಎಲ್ಲರಿಗೆ ಹೊಸ ವರ್ಷದ ಶುಭಾಶಗಳು...
ಜ್ಯೋತಿಷ್ಯದಲ್ಲಿ ಗ್ರಹ ಸಂಚಾರಕ್ಕೆ ತುಂಬಾನೇ ಮಹತ್ವವಿದೆ, ಪ್ರತಿಯೊಂದು ಗ್ರಹ ಸಂಚಾರವೂ ನಮ್ಮ ರಾಶಿಯ ಮೇಲೆ ಪ್ರಭಾವ ಬೀರುವುದು. ಡಿಸೆಂಬರ್‌ನಲ್ಲಿ ಮಕರ ರಾಶಿಗೆ ಬುಧನ ಸಂಚಾರವಾಗಿದೆ, ಡಿ. 30ರಿಂದ ಧನು ರಾಶಿಯಲ್ಲಿ ಬುಧ ವಕ್ರೀಯವಾಗಿ ಚಲಿಸುತ್ತಿದ್ದಾನೆ ಅದರ ಪ್ರಭಾವ ರಾಶಿಗಳ ಮೇಲಿದೆ.
ಈ ತಿಂಗಳಿನಲ್ಲಿ 4 ಗ್ರಹಗಳ ಸಂಚಾರವಿದೆ. ಯಾವೆಲ್ಲಾ ಗ್ರಹಗಳ ಸಂಚಾರವಿದೆ ಎಂದು ತಿಳಿಯೋಣ ಬನ್ನಿ:

ಜನವರಿ 14ಕ್ಕೆ ಸೂರ್ಯ ಸಂಕ್ರಮಣ
ಜನವರಿ 14ಕ್ಕೆ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಮಕರ ರಾಶಿಯಲ್ಲಿ ಸೂರ್ಯ ಮೊದಲ ಮನೆಯಲ್ಲಿ ಇರಲಿದೆ. ಧಾರ್ಮಿಕ ದೃಷ್ಟಿಯಿಂದ ಈ ದಿನ ತುಂಬಾ ಮಹತ್ವವಾದ ದಿನವಾಗಿದೆ. ಈ ಶುಭ ದಿನದಂದು ಸಂಕ್ರಾಂತಿಯನ್ನು ಆಚರಿಸಲಾಗುವುದು.

ಮಕರದಲ್ಲಿ ಬುಧನ ವಕ್ರೀಯ ಚಲನೆ
ಮಕರದಲ್ಲಿ ಸೂರ್ಯ ಸಂಕ್ರಮಣ ಜನವರಿ 14ರಂದು ಆಗುವುದು, ಅದೇ ದಿನ ಮಕರದಲ್ಲಿ ಬುಧ ವಕ್ರೀಯವಾಗಿ ಚಲಿಸುತ್ತಾನೆ. ಸೂರ್ಯನ ನೇರ ಚಲನೆ, ಬುಧನ ಚಕ್ರೀಯ ಚಲನೆ ರಾಶಿಗಳ ಮೇಲೆ ಪ್ರಭಾವ ಬೀರಲಿದೆ.

ಧನು ರಾಶಿಯಲ್ಲಿ ಮಂಗಳ ಗ್ರಹದ ಸಂಚಾರ
ಜನವರಿ 16ರಂದು ಧನು ರಾಶಿಗೆ ಮಂಗಳ ಗ್ರಹದ ಪ್ರವೇಶವಾಗಲಿದೆ. ಮಂಗಳನು ಮೇಷ ಹಾಗೂ ವೃಶ್ಚಿಕ ರಾಶಿಗಳಿಗೆ ಅಧಿಪತಿ. ಈ ಸಮಯದಲ್ಲಿ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಲು ಒಳ್ಳೆಯದು.

ಧನು ರಾಶಿಯಲ್ಲಿ ಶುಕ್ರನ ನೇರ ಸಂಚಾರ
ಧನು ರಾಶಿಯಲ್ಲಿ ವಕ್ರೀಯವಾಗಿ ಚಲಿಸುತ್ತಿದ್ದ ಶುಕ್ರ ಜನವರಿ 29ರಿಂದ ಮತ್ತೆ ನೇರವಾಗಿ ಚಲಿಸಲಾರಂಭಿಸುವುದು. ಇದರಿಂದ ಶುಕ್ರ ವಕ್ರೀಯವಾಗಿದ್ದಾಗ ಎದುರಾದ ಸಮಸ್ಯೆಗಳು ಶುಕ್ರನ ನೇರ ಸಂಚಾರದಿಂದ ದೂರವಾಗುವುದು.



Click it and Unblock the Notifications
