For Quick Alerts
ALLOW NOTIFICATIONS  
For Daily Alerts

ಮಹಾ ಶಿವರಾತ್ರಿಯಂದು ರಾಶಿಚಕ್ರದ ಪ್ರಕಾರ ಶಿವನ ಆರಾಧನೆ ಹೇಗಿರಬೇಕು?

|

ಶಿವ ಶಿವಾ ಎನ್ನುತ್ತಾ ಚಳಿಗಾಲ ಮುಗಿದು ಇನ್ನೇನು ಬೇಸಿಗೆ ಆರಂಭವಾಗಬೇಕು ಎನ್ನುವ ಸಮಯದಲ್ಲಿ ಬರುವ ಮಹಾ ಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಆಡಂಬರಗಳಿಂದ ಹೊರಾತಾಗಿರುವ ಶಿವ ನಿಷ್ಕಲ್ಮಶ, ಪ್ರಾಮಾಣಿಕ ಭಕ್ತಿಗೆ ಒಲಿಯುತ್ತಾನೆ ಎಂಬುದು ಭಕ್ತರ ನಂಬಿಕೆ.

ಈ ಸಾಲಿನ (2020) ಶಿವರಾತ್ರಿ ಫೆಬ್ರವರಿ 21ರಂದು ಆಚರಿಸಲಾಗುತ್ತಿದೆ. ಆದರೆ, ಮಹಾ ಶಿವರಾತ್ರಿಯಂದು ಭೂಲೋಕ ಸಂಚಾರದಲ್ಲಿರುವ ಶಿವನ ಪ್ರೀತಿಗೆ ಪಾತ್ರರಾಗುವುದು ಅಷ್ಟು ಸುಲಭದ ಮಾತಲ್ಲ.

maha shivratri 2020

ರಾಶಿಚಕ್ರಗಳ ಪ್ರಕಾರ ಶಿವನನ್ನು ಹೇಗೆ ಪೂಜಿಸಬೇಕು, ಯಾವ ಬಣ್ಣದ ಬಟ್ಟೆ ಧರಿಸಬೇಕು, ಶಿವನಿಗೆ ಏನನ್ನು ಅರ್ಪಿಸಿದರೆ ಅವನ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಯಲು ಪೂರ್ಣ ಲೇಖನ ಓದಿ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಶಿವರಾತ್ರಿಯಂದು ತಿಳಿ ಗುಲಾಬಿ ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಬಿಲ್ವಪತ್ರೆ ಮತ್ತು ಹಾಲು ಅರ್ಪಿಸುವ ಮೂಲಕ ಶಿವನನ್ನು ಪೂಜಿಸಿ. ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ, ಶಿವನಿಗೆ ಹೂವು ಮತ್ತು ಎಲೆಗಳನ್ನು ಅರ್ಪಿಸಿ. ಶಿವನನ್ನು ಪೂಜಿಸಿದ ನಂತರ ‘ಹೃಮನ್ ನಮಹ್ ಶಿವಾಯಾ ಹ್ರಿಯಮ್' ಶ್ಲೋಕ ಭಜಿಸಿ. ಹಬ್ಬದ ದಿನ ಬೆಳಿಗ್ಗೆ 'ಶಿವ ಮಹೀಮಾ' ಮತ್ತು ರಾತ್ರಿ ಜಾಗರಣೆ ವೇಳೆ ಶಿವ ತಾಂಡವ ಶ್ಲೋಕ ಪಠಿಸಿ.

ವೃಷಭ ರಾಶಿ

ವೃಷಭ ರಾಶಿ

ಇಂದು ಕಪ್ಪು ಅಥವಾ ಆಕಾಶ ನೀಲಿ ಬಣ್ಣದ ಧಿರಿಸನ್ನು ಧರಿಸಿ. ಬಿಲ್ವಪತ್ರೆ ಎಲೆ, ತುಳಸಿ ಎಲೆಗಳು ಮತ್ತು ಹಾಲು-ಸಕ್ಕರೆ ಬೆರೆಸಿ ಪೂಜಿಸಿ. ಈ ದಿನ 'ಶಿವ ಮಹಿಮಾ' ಪಠಿಸಿ. ಶಿವನ ಲಿಂಗಕ್ಕೆ ಮುದಾರ್ ಹೂವುಗಳು ಮತ್ತು ಎಲೆಗಳನ್ನು ಅರ್ಪಿಸಿ. ಮಲ್ಲಿಕಾರ್ಜುನನನ್ನು ಧ್ಯಾನಿಸುವಾಗ 'ಓಂ ನಮ ಶಿವ' ಎಂಬ ಮಂತ್ರವನ್ನು ಜಪಿಸಬೇಕು. ಮಹಾಕಲೇಶ್ವರನನ್ನು ಧ್ಯಾನಿಸಿ, ಈ ವೇಳೆ ಶಿವಲಿಂಗಕ್ಕೆ ಜೇನುತುಪ್ಪದೊಂದಿಗೆ ಹಾಲಿನಲ್ಲಿ ಸ್ನಾನ ಮಾಡಿಸಿ ಮತ್ತು ಬಿಲ್ವಪತ್ರೆ ಎಲೆಗಳನ್ನು ಅರ್ಪಿಸಿ. ಮಹಾಕಲೇಶ್ವರವನ್ನು ಜಪಿಸುವಾಗ, 'ಓಂ ನಮೋ ಭಾಗವತ ರುದ್ರೆ' ಎಂಬ ಮಂತ್ರವನ್ನು ಸಾಧ್ಯವಾದಷ್ಟು ಜಪಿಸಿ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಗೆ ಸೇರಿದವರು ಪೂಜೆಯತ್ತ ಗಮನಹರಿಸಲು ಸಾಧ್ಯವಾಗುವುದಿಲ್ಲ. ಆದರೂ ಧೃಢಚಿತ್ತದಿಂದ ಶಿವನ್ನು ಪೂಜಿಸಬೇಕು. ಮಿಥುನ ರಾಶಿಯವರು ಮಹಾಕಾಳೇಶ್ವರದ ದರ್ಶನ ಮಾಡಿದರೆ ಒಳ್ಳೆಯದು. ಇದರಿಂದ ಇಡೀ ವರ್ಷ ಬಿಕ್ಕಟ್ಟಿನಿಂದ ಮುಕ್ತರಾಗುವಿರಿ. ಮಹಾಕಲೇಶ್ವರನನ್ನು ನೋಡಲು ಸಾಧ್ಯವಾಗದವರು ಮಹಾಕಲೇಶ್ವರನನ್ನು ಧ್ಯಾನಿಸಿ. ಈ ವೇಳೆ ಶಿವಲಿಂಗಕ್ಕೆ ಜೇನುತುಪ್ಪ ಹಾಗೂ ಹಾಲಿನಲ್ಲಿ ಸ್ನಾನ ಮಾಡಿ ಮತ್ತು ಬಿಲ್ವಪತ್ರೆ ಎಲೆಗಳನ್ನು ಅರ್ಪಿಸಿ. ಮಹಾಕಲೇಶ್ವರವನ್ನು ಜಪಿಸುವಾಗ, 'ಓಂ ನಮೋ ಭಾಗವತ ರುದ್ರೆ' ಎಂಬ ಮಂತ್ರವನ್ನು ಸಾಧ್ಯವಾದಷ್ಟು ಜಪಿಸಿ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯಯವರು ಶಿವನ ಕೃಪಾಶೀರ್ವಾದಕ್ಕೆ ಒಳಗಾಗಲು 'ಚಂಪಾ' ಹೂವುಗಳನ್ನು ಮತ್ತು 'ಬಿಲ್ವಪತ್ರೆ'ಯನ್ನು ಶಿವನಿಗೆ ಅರ್ಪಿಸಬೇಕು. ಹಳದಿ ಬಣ್ಣದ ಬಟ್ಟೆ ಮಿಥುನ ರಾಶಿಯವರಿಗೆ ಶುಭಕಾರಕವಾಗಿದೆ. 'ಸ್ಕಂದ ಪುರಾಣ' ಪಠಿಸುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಶಿವಲಿಂಗಕ್ಕೆ ಪಂಚಾಮೃತ ಆಭಿಷೇಕ ಮಾಡಿ. ಈ ರೀತಿ ಶಿವನನ್ನು ಆರಾಧಿಸುವುದರಿಂದ ಶಕ್ತಿ, ಅದು ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರು ವೈದ್ಯನಾಥ ಜ್ಯೋತಿರ್ಲಿಂಗನನ್ನು ಪೂಜಿಸಬೇಕು. ಇದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಪೂಜೆ ವೇಳೆ ಗಂಗಾ ನೀರಿನಿಂದ ಪೂಜಿಸಬೇಕು ಮತ್ತು ಬಿಳಿ, ಕೆಂಪು ಹೂಗಳು, ಹಾಲು, ಬಿಲ್ವಪತ್ರೆ ಮತ್ತು ಕೆಂಪು ಹೂವುಗಳನ್ನು ಶಿವಲಿಂಗಕ್ಕೆ ಅರ್ಪಿಸಿ. ಗುಲಾಬಿ ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು.

'ಓಂ ತ್ರಯಂಬಕಂ ಯಜಾಮಹೇ

ಸುಗಂಧಿಂ ಪುಷ್ಠಿ ವರ್ಧನಂ

ಉರ್ವಾರುಕ ಮಿವ ಬಂಧನಾನ್

ಮೃತ್ಯೋರ್‌ ಮುಕ್ಷೀಯಮಾಮೃತಾತ್' ಮಂತ್ರವನ್ನು ಕನಿಷ್ಠ 51 ಬಾರಿ ಪಠಿಸಿ.

ಹೀಗೆ ಶಿವನನ್ನು ಆರಾಧಿಸುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿ

ಶಿವಲಿಂಗಕ್ಕೆ ತುಳಸಿಯೊಂದಿಗೆ ಬೆರೆಸಿದ ನೀರನ್ನು ಅರ್ಪಿಸಿ ಅಥವಾ ತುಪ್ಪ ಮತ್ತು ಹಾಲನ್ನು ಶಿವಲಿಂಗಕ್ಕೆ ಅರ್ಪಿಸಿ. ಬಿಳಿ ಅಥವಾ ಕಿತ್ತಳೆ ಬಟ್ಟೆಗಳನ್ನು ಧರಿಸಿ.

'ಭಾಗವತ ರುದ್ರೆ' ಮಂತ್ರವನ್ನು ಸಾಧ್ಯವಾದಷ್ಟು ಜಪಿಸಿ. ಹೀಗೆ ಶಿವನನ್ನು ಪೂಜಿಸುವುದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಒಡಹುಟ್ಟಿದವರ ಬೆಂಬಲ ಹೆಚ್ಚುತ್ತದೆ. ವರ್ಷವಿಡೀ ವಿವಿಧ ಮೂಲಗಳಿಂದ ಹಣದ ಲಾಭ ಇರುತ್ತದೆ.

ತುಲಾ ರಾಶಿ

ತುಲಾ ರಾಶಿ

ತಮಿಳುನಾಡಿನ ಭಗವಾನ್ ರಾಮ ಸ್ಥಾಪಿಸಿದ ರಾಮೇಶ್ವರ ಜ್ಯೋತಿರ್ಲಿಂಗ ತುಲಾ ರಾಶಿಗೆ ಸಂಬಂಧಿಸಿದೆ. ತುಲಾ ರಾಶಿಯವರು ಈ ದೇವಾಲಯಕ್ಕೆ ಇಂದು ಭೇಟಿ ನೀಡಿ ಶಿವನ ದರ್ಶನ ಪಡೆದರೆ ಒಳ್ಳೆಯದು. ಇಂದು ಈ ಶಿವನನ್ನು ಆರಾಧಿಸಿದರೆ ವಿವಾಹಿತ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ಉಳಿಯುತ್ತದೆ. ಮಕ್ಕಳನ್ನು ಬಯಸುವವರು ಅಥವಾ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಬಯಸುವವರು ಈ ದಿನದಂದು ಉಪವಾಸ ಮಾಡಿದರೆ ಶಿವ ಕೃಪೆಗೆ ಪಾತ್ರರಾಗಬಹುದು. ಹಾಲು ಮತ್ತು ಶುದ್ಧವಾದ ನೀರಿನಲ್ಲಿ ಶಿವಲಿಂಗಕ್ಕೆ ನೈವೇದ್ಯ ಅರ್ಪಿಸಿ.

ಶಿವ ಪಂಚಾಕ್ಷರಿ ಮಂತ್ರ 'ಓಂ ನಮಃ ಶಿವಾಯ' ಅನ್ನು 108 ಬಾರಿ ಪಠಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಕಿತ್ತಳೆ, ಗುಲಾಬಿ ಅಥವಾ ಹಳದಿ ಬಟ್ಟೆಗಳನ್ನು ಧರಿಸಿ.

ಗುಜರಾತ್‌ನ ದ್ವಾರಕಾ ಜಿಲ್ಲೆಯಲ್ಲಿರುವ ನಾಗೇಶ್ವರ ಜ್ಯೋತಿರ್ಲಿಂಗ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ನಿಮಗೆ ಶುಭವಾಗಲಿದೆ ಅಲ್ಲದೇ, ಅಪಘಾತಗಳನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ. ಈ ದಿನ ಜ್ಯೋತಿರ್ಲಿಂಗಕ್ಕೆ ಹಾಲು, ಜೇನುತುಪ್ಪದ ನೈವೇದ್ಯ ಮಾಡಿ. ಸೇವಂತಿಗೆ ಹೂ, ಬಿಲ್ವಪತ್ರೆಯನ್ನು ಅರ್ಪಿಸಿ. "ಗಂ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ. ಶಿವನ ಆರಾಧನೆಯಿಂದ ಅದೃಷ್ಟ ನಿಮ್ಮದಾಗುತ್ತದೆ. ತಂದೆಯಿಂದ ಹಣದ ಲಾಭ ಇರುತ್ತದೆ.

ಧನು ರಾಶಿ

ಧನು ರಾಶಿ

ಶಿವಲಿಂಗಕ್ಕೆ ಗಂಗಾ ನೀರಿನಲ್ಲಿ ಕೇಸರಿಯನ್ನು ಬೆರೆಸಿ ಅರ್ಪಿಸಿ. ಬಿಲ್ವಪತ್ರೆ ಮತ್ತು ಅರಿಶಿನದಿಂದ ಪೂಜೆ ಮಾಡಿ. ಈ ದಿನ ಹಳದಿ ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸಿ ಶುಭಫಲ ನಿಮ್ಮದಾಗುತ್ತದೆ. ಇಂದು ತಪ್ಪದೇ ಉಪವಾಸ ಮಾಡಿ.

"ತತ್ಪುರುಷ್ಯ ವಿದ್ಯಾಮಹ ಮಹಾದೇವಯ ಧೇಮಿ ತನ್ನೋ ರುದ್ರ: ಪ್ರಚೋದಯತ್''

ಈ ಮಂತ್ರದಿಂದ ಶಿವನ್ನು ಪೂಜಿಸಿ. ಇದು ಚಂದ್ರನಿಗೆ ಶಕ್ತಿ ನೀಡುತ್ತದೆ ಮತ್ತು ಶಿವನ ಕೃಪೆಯನ್ನೂ ನೀಡುತ್ತದೆ. ಅಲ್ಲದೆ, ಉಂಟಾಗಬಹುದಾದ ಹಠಾತ್ ಹಾನಿ ಮತ್ತು ಮಾನಸಿಕ ಚಿಂತೆಗಳಿಂದ ಮೋಕ್ಷ ಸಿಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ, ಆಕಸ್ಮಿಕ ಬಿಕ್ಕಟ್ಟುಗಳಿಂದ ರಕ್ಷಣೆ ಸಿಗುತ್ತದೆ.

ಮಕರ ರಾಶಿ

ಮಕರ ರಾಶಿ

ಮಹಾಶಿವರಾತ್ರಿಯಂದು ಗಂಗಾ ನೀರಿನಲ್ಲಿ ಬೆಲ್ಲವನ್ನು ಬೆರೆಸಿ ಜಲಾಭಿಷೇಕ ಮಾಡಿ. ನೀಲಿ ಬಣ್ಣದ ಹೂಗಳು ಮತ್ತು ಕೇಸರಿ ಹಾಲನ್ನು ಅರ್ಪಿಸಿ. ತಿಳಿ ಹಸಿರು ಅಥವಾ ಬಿಳಿ ಬಟ್ಟೆಗಳನ್ನು ಧರಿಸಿ.

ತ್ರೈಯಂಬಕೇಶ್ವರನನ್ನು ಧ್ಯಾನಿಸುವಾಗ 'ಓಂ ನಮ ಶಿವ' ಮಂತ್ರವನ್ನು ಪಠಿಸಿ. ಇದರಿಂದ ಮದುವೆ ವಿಷಯದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ತೊಡೆದುಹಾಕುತ್ತದೆ. ಸುಂದರ ಮತ್ತು ಸಮರ್ಥ ಸಂಗಾತಿಯನ್ನು ಪಡೆಯಬಹುದು. ವಿವಾಹಿತರ ಜೀವನದಲ್ಲಿ ಒತ್ತಡ ಕಡಿಮೆಯಾಗುತ್ತದೆ.

ಕುಂಭ ರಾಶಿ

ಕುಂಭ ರಾಶಿ

ಶಿವನಿಗೆ ಪಂಚಾಮೃತದೊಂದಿಗೆ ಅಭಿಷೇಕ ಮಾಡಿ. ನಂತರ ಕಮಲದ ಹೂವನ್ನು ಅರ್ಪಿಸಿ. ಹಳದಿ ಅಥವಾ ಗುಲಾಬಿ ಬಟ್ಟೆಗಳನ್ನು ಧರಿಸಿ. ಈ ರಾಶಿಚಕ್ರದರು 'ಓಂ ನಮಃ ಶಿವಾಯಾ' ಎಂದು ಜಪಿಸಿ ಈ ಸಮಯದಲ್ಲಿ ಕೇದಾರನಾಥನನ್ನು ಧ್ಯಾನಿಸಿ. ಇದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಶತ್ರುಗಳು ಮತ್ತು ವಿರೋಧಿಗಳ ಭಯವಿರುವುದಿಲ್ಲ.

ಮೀನ ರಾಶಿ

ಮೀನ ರಾಶಿ

ಮಹಾಶಿವರಾತ್ರಿಯ ದಿನ ಶಿವಲಿಂಗಕ್ಕೆ ಕೇಸರಿ ಹಾಲಿನ ಅಭಿಷೇಕ ಮಾಡಿ. ನಂತರ ಶಿವನಿಗೆ ಹಸುವಿನ ತುಪ್ಪ ಮತ್ತು ಜೇನುತುಪ್ಪವನ್ನು ಅರ್ಪಿಸಿ. ಬಿಲ್ವಪತ್ರೆ ಮತ್ತು ಹಳದಿ ಹೂವನ್ನು ಶಿವನಿಗೆ ಅರ್ಪಿಸಿ. ಉಪವಾಸ ಮಾಡಿ, ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಹಳದಿ ಬಟ್ಟೆಗಳನ್ನು ಧರಿಸಿ.

ತತ್ಪುರುಷ್ಯ ವಿದ್ಮಹೇ ಮಹಾದೇವಯ ಧೇಮಿ. ತನ್ನೋ ರುದ್ರ ಪ್ರಚೋದಯಾತ್

ಈ ಮಂತ್ರವನ್ನು ಸಾಧ್ಯವಾದಷ್ಟು ಜಪಿಸಿ. ಶಿವರಾತ್ರಿಯಂದು ಈ ರೀತಿ ಪೂಜಿಸುವುದರಿಂದ ಶನಿ ದುಷ್ಪರಿಣಾಮಗಳು ದೂರವಾಗುತ್ತವೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಸಿಗುತ್ತದೆ.

English summary

Maha Shivratri 2020 Rituals According To Zodiac Signs And Effects On It

Here we are discussing about maha shivratri 2020 rituals according to zodiac signs and effects on it. Maha Shivaratri is an auspicious day for Hindus. Lord Shiva is worshipped on this day. few rituals for different zodiac signs that will be beneficial. Let us see this in detail
X
Desktop Bottom Promotion