For Quick Alerts
ALLOW NOTIFICATIONS  
For Daily Alerts

ಹನುಮಾನ್ ಜಯಂತಿ: ಈ ಮಂತ್ರಗಳನ್ನು ಪಠಿಸಿದರೆ ಕಷ್ಟಗಳೆಲ್ಲಾ ದೂರಾಗುವುದು

|

ಆಂಜನೇಯನನ್ನು ಭಕ್ತಿಯಿಂದ ಪೂಜಿಸಿದರೆ ಬದುಕಿನಲ್ಲಿ ಏನೇ ಸವಾಲುಗಳು ಬರಲಿ ಧೈರ್ಯವಾಗಿ ನಿಭಾಯಿಸಬಹುದು ಎಂಬುವುದು ಅವನ ನಂಬಿದ ಭಕ್ತರ ಅಚಲ ನಂಬಿಕೆ. ರಾಮನ ಪರಮ ಭಕ್ತನಾಗಿರುವ ಹನುಮಂತನನ್ನು ನಂಬಿದರೆ ಅವನು ಖಂಡಿತ ಕೈ ಬಿಡಲ್ಲ. ಮಂಗಳವಾರ ಹಾಗೂ ಶನಿವಾರ ಹನುಮಂತನ ಪೂಜೆಗೆ ವಿಶೇಷವಾದ ದಿನಗಳಾಗಿವೆ.

ಪ್ರತೀವರ್ಷ ಮಾರ್ಗಶಿರ ಮಾಸದ ತ್ರಯೋದಶಿಯಂದು ಹನುಮಾನ್‌ ಜಯಂತಿಯನ್ನು ಆಚರಿಸಲಾಗುವುದು. ಪಾಂಚಾಲಿ ಪಂಚ ಪಾಂಡವರ ಶ್ರೇಯೋಭಿವೃದ್ಧಿಗಾಗಿ ಈ ವ್ರತ ಮಾಡಿದ್ದಳು ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ.

ಹನುಮಾನ್ ಜಯಂತಿ ಶುಭ ಮುಹೂರ್ತ 2022

ಹನುಮಾನ್ ಜಯಂತಿ ಶುಭ ಮುಹೂರ್ತ 2022

ಪಂಚಾಗ ಪ್ರಕಾರ ಹನುಮಾನ್ ಜಯಂತಿ ಡಿಸೆಂಬರ್ 5 ಬೆಳಗ್ಗೆ 5:57ಕ್ಕೆ ಪ್ರಾರಂಭವಾಗಿ ಡಿಸೆಂಬರ್ 6 ಬೆಳಗ್ಗೆ 06:47ಕ್ಕೆ ಮುಕ್ತಾಯವಾಗುತ್ತದೆ.

ಹನುಮಾನ್ ಜಯಂತಿ ಪೂಜಾ ವಿಧ

ಈ ದಿ ನ ಭಕ್ತರು ಹನುಮಂತನ ದೇವಾಲಯಕ್ಕೆ ಹೋಗಿ ಸಿಂಧೂರವನ್ನು ಅರ್ಪಿಸುತ್ತಾರೆ. ಹನುಮಂತನಿಗೆ ಕೆಂಪು ವಸ್ತುಗಳು ಹಾಗೂ ಚೆಂಡು ಹೂಗಳನ್ನು ಅರ್ಪಿಸಿ ಪೂಜಿಸಲಾಗುವುದು.

ಈ ದಿನ ನೀವು ಹನುಮಾನ್‌ ಈ ಮಂತ್ರಗಳನ್ನು ಪಠಿಸಿ, ಈ ಮಂತ್ರಗಳು ತುಂಬಾನೇ ಶಕ್ತಿಯುತವಾಗಿದ್ದು ನಿಮ್ಮೆಲ್ಲಾ ಕಷ್ಟಗಳು ದೂರಾಗುವುದು.

ಹನುಮಂತನ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ

ಹನುಮಂತನ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ

* ಆಂಜನೇಯನ ಪೂಜೆ ಪೂಜೆ ಮಾಡುವಾಗ ಕಪ್ಪು ಅಥವಾ ಬಿಳಿ ವಸ್ತ್ರ ಧರಿಸಬೇಡಿ.

* ಈ ದಿನ ನೀವು ಉಪವಾಸ ಮಾಡುವುದಾದರೆ ಉಪ್ಪಿನಂಶ ಸೇವಿಸಬಾರದು.

* ಆಂಜನೇಯ ಪೂಜೆಯನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಮಾಡಿ. ಗಮನ ಬೇರೆ ಕಡೆ ಇದ್ದು ಪೂಜೆ ಮಾಡಿ ಪ್ರಯೋಜನವಿಲ್ಲ. ಪೂಜೆಗೆ ಅಡಚಣೆ ಉಂಟಾಗದಿರಲು ನಿಮ್ಮ ಮೊಬೈಲ್ ಸೈಲೆಂಟ್‌ನಲ್ಲಿಡಿ.

* ಈ ದಿನ ಕೋಪ ಮಾಡಿಕೊಳ್ಳಬೇಡಿ.

* ಈ ದಿನ ಸಾತ್ವಿಕ ಆಹಾರವನ್ನಷ್ಟೇ ಸೇವಿಸಿ

* ಮದ್ಯ-ಮಾಂಸ ಮುಟ್ಟಬಾರದು

* ಮಡಿಯಿಂದ ಪೂಜೆ ಮಾಡಿ.

ಹನುಮಾನ್ ಮೂಲ ಮಂತ್ರ

ಹನುಮಾನ್ ಮೂಲ ಮಂತ್ರ

|| ಓಂ ಶ್ರೀ ಹನುಮಾನ್ ನಮಃ ||

ಅರ್ಥ - ನಾನು ಹನುಮಂತನ ಮುಂದೆ ನಮಸ್ಕರಿಸುತ್ತೇನೆ.

ಪ್ರಯೋಜನಗಳು

ಹನುಮಂತನ ಮೂಲ ಮಂತ್ರ ಪಠಿಸುವ ಮೂಲಕ ನೀವು ಹನುಮಂತನಿಗೆ ಸಂಪೂರ್ಣ ಶರಣಾಗಿದ್ದೇನೆ ಎಂದು ಹೇಳುತ್ತೀರಿ.

* ಈ ಮಂತ್ರ ಹೇಳುವ ಮೂಲಕ ನಿಮ್ಮ ಮಾನಸಿಕ ಹಾಗೂ ದೈಹಿಕ ತೊಂದರೆಗಳು ಕಡಿಮೆಯಾಗುವುದು.

* ವಿದ್ಯಾರ್ಥಿಗಳು ಪ್ರತಿದಿನ ಈ ಮಂತ್ರ ಪಠಿಸಿದರೆ ಕಲಿಕೆಯಲ್ಲಿ ಏಕಾಗ್ರತೆ ಹೆಚ್ಚುವುದು.

* ಕುಟುಂಬದಲ್ಲಿ ಏನಾದರೂ ಸಮಸ್ಯೆಯಿದ್ದರೆ ನಿವಾರಣೆಯಾಗುವುದು.

ಹನುಮಂತ ಬೀಜ ಮಂತ್ರಗಳು ಹೀಗಿವೆ:

ಹನುಮಂತ ಬೀಜ ಮಂತ್ರಗಳು ಹೀಗಿವೆ:

|| ಓಂ ಐಂ ಬ್ರಿಂ ಹನುಮಾನ್,

ಓಮೇ ಶ್ರೀರಾಮ ದೂತಾಯ ನಮಃ: ||

ಅರ್ಥ - ಭಗವಂತ ಶ್ರೀರಾಮನ ಶ್ರೇಷ್ಠ ಸೇವಕ ಮತ್ತು ಸಂದೇಶವಾಹಕನಾದ ಭಗವಂತ ಹನುಮಂತನ ಮುಂದೆ ನಾನು ನಮಸ್ಕರಿಸುತ್ತೇನೆ

ಪ್ರಯೋಜನಗಳು

* ಹನುಮಂತನ ಮಂತ್ರ ಪಠಿಸುವುದರಿಂದ ಶನಿ ಸಾಡೇಸಾತಿಯ ಕೆಟ್ಟ ಪ್ರಭಾವ ತಗ್ಗಿಸಬಹುದು.

* ನಿಮ್ಮಲ್ಲಿ ಸವಾಲುಗಳನ್ನು ಎದುರಿಸುವ ಶಕ್ತಿ ಹೆಚ್ಚುವುದು

* ಮನೆಯಲ್ಲಿ, ಮನಸ್ಸಿನಲ್ಲಿರುವ ನೆಗೆಟಿವ್‌ ಎನರ್ಜಿ ಹೊರ ಹಾಕಲಾಗುವುದು.

* ನಿಮ್ಮಲ್ಲಿ ಧೈರ್ಯ ಹೆಚ್ಚಾಗುವುದು

ಗಾಯತ್ರಿ ಮಂತ್ರ

ಗಾಯತ್ರಿ ಮಂತ್ರ

|| ॐ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ।

ತನ್ನೋ ಹನುಮಾನ್ ಪ್ರಚೋದಯಾತ್ ||

ಅರ್ಥ - ನಾವು ಅಂಜನಿ ದೇವಿಯ ಮಗ ಮತ್ತು ವಾಯು ದೇವರ ಮಗನನ್ನು ಪ್ರಾರ್ಥಿಸುತ್ತೇವೆ. ಭಗವಂತ ಹನುಮಂತನು ನಮ್ಮ ಬುದ್ಧಿಯನ್ನು ಬುದ್ಧಿವಂತಿಕೆ ಮತ್ತು ಜ್ಞಾನದ ಕಡೆಗೆ ನಡೆಸಲಿ.

ಪ್ರಯೋಜನಗಳು

* ಸಂತಾನ ಪ್ರಾಪ್ತಿಗಾಗಿ ಈ ಮಂತ್ರ ಪಠಿಸಿದರೆ ಫಲ ಸಿಗುವುದು

* ಶನಿ ಕಾಟ ಕಡಿಮೆಯಾಗುವುದು

* ನಿಮ್ಮ ವ್ಯಕ್ತಿತ್ವದಲ್ಲಿ ಸದ್ಗುಣಗಳು ಹೆಚ್ಚಾಗುವುದು

* ಹೊರಗಡೆ ಹೋಗುವ ಈ ಮಂತ್ರ ಪಠಿಸುವುದರಿಂದ ರಕ್ಷೆ ಸಿಗುವುದು.

ಹನುಮಾನ್‌ ಮಂತ್ರಗಳು

ಹನುಮಾನ್‌ ಮಂತ್ರಗಳು

ಓಂ ನಮೋ ಭಗವತೇ ಆಂಜನೇಯಾಯ ಮಹಾಬಲಾಯ ಸ್ವಾಹಾ ।

ರಾಮ ಪ್ರಿಯ ನಮಸ್ತುಭ್ಯಂ ಹನುಮಾನ್ ರಕ್ಷ ಸರ್ವದಾ॥

ಶಕ್ತಿಶಾಲಿಯಾದ ಅಂಜನನ ಮಗನಾದ ಹನುಮಂತನಿಗೆ ನಾನು ನಮಸ್ಕರಿಸುತ್ತೇನೆ ಮತ್ತು ಶರಣಾಗುತ್ತೇನೆ.

ಪ್ರಯೋಜನಗಳು

* ಉದ್ಯೋಗದಲ್ಲಿ ಬಡ್ತಿ ಸಿಗುವುದು, ವ್ಯಾಪರದಲ್ಲಿ ಲಭ ಹೆಚ್ಚಾಗಲಿದೆ, ನಿಮ್ಮ ಸ್ಥಿತಿ ಉತ್ತಮವಾಗಲಿದೆ.

* ವೈವಾಹಿಕ ಬದುಕಿನಲ್ಲಿ ಸಮಸ್ಯೆಯಿದ್ದರೆ ದೂರಾಗುವುದು.

English summary

Kannada Hanuman Jayanti 2022: Date, Shubh Muhurat, History, Puja Vidhi and Significance

Kannada Hanuman Jayanti 2022: Date, Shubh Muhurat, History, Puja Vidhi and Significance, Read on
Story first published: Monday, December 5, 2022, 11:12 [IST]
X
Desktop Bottom Promotion