For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ ಹುಲಿ ದಿನ 2019: ಇತಿಹಾಸ ಮತ್ತು ಮಹತ್ವ

|
International Tiger Day : ಅಂತರಾಷ್ಟ್ರೀಯ ಹುಲಿ ದಿನದ ಹಿಂದಿನ ಮಹತ್ವ ಹಾಗು ಇತಿಹಾಸ | Oneindia Kannada

ಜುಲೈ 29ರಂದು ವಿಶ್ವದೆಲ್ಲೆಡೆಯಲ್ಲಿ ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತಿದ್ದು, ಹುಲಿ ಸಂರಕ್ಷಣೆಗಾಗಿ ಮತ್ತು ಪ್ರಕೃತಿದತ್ತವಾದ ಹುಲಿಗಳ ರಕ್ಷಣೆ ಮಾಡುವುದು ಇದರ ಪ್ರಮುಖ ಧ್ಯೇಯವಾಗಿದೆ. ಅಂತಾರಾಷ್ಟ್ರೀಯ ಹುಲಿ ದಿನವನ್ನು ವಿಶ್ವ ಹುಲಿ ದಿನ'ಎಂದು ಕೂಡ ಕರೆಯಲಾಗುತ್ತದೆ. ಅಂತಾರಾಷ್ಟ್ರೀಯ ಹುಲಿ ದಿನ ಮತ್ತು ಅದನ್ನು ಹೇಗೆ ಆಚರಿಸಲಾಗುತ್ತದೆ ಎಂದು ನಾವು ಈ ಮೂಲಕ ತಿಳಿದುಕೊಳ್ಳುವ.

ಡಬ್ಲ್ಯೂ ಡಬ್ಲ್ಯೂ ಎಫ್ ನ ಪ್ರಕಾರ ವಿಶ್ವದೆಲ್ಲೆಡೆಯಲ್ಲಿ ಈಗ ಕೇವಲ 3900 ಹುಲಿಗಳು ಮಾತ್ರ ಬದುಕುಳಿದಿದೆ. 20ನೇ ಶತಮಾನದ ಆರಂಭದ ಬಳಿಕ ಶೇ. 95ರಷ್ಟು ಹುಲಿ ಸಂತತಿಯು ನಷ್ಟವಾಗಿದೆ ಎಂದು ಹೇಳಲಾಗಿದೆ. ಅದರಲ್ಲೂ ಏಶ್ಯಾದಲ್ಲಿ ಹುಲಿಗಳು ಅತಿಯಾಗಿ ವಿನಾಸದ ಅಂಚಿಗೆ ಹೋಗಿದೆ ಎಂದು ಹೇಳಲಾಗುತ್ತದೆ.

Tiger

ಬೆಕ್ಕಿನ ಕುಟುಂಬದಲ್ಲಿ ಹುಲಿಗಳು ಅತೀ ದೊಡ್ಡ ಜೀವಿಯಾಗಿದೆ ಮತ್ತು ಭೂಮಿ ಮೇಲಿರುವ ಅತ್ಯಂತ ಪ್ರಮುಖ ಪ್ರಾಣಿಯಾಗಿದೆ. ಒಂದು ಶತಮಾನಕ್ಕೆ ಮೊದಲು ಭೂಮಿ ಮೇಲೆ ಸುಮಾರು ಒಂದು ಲಕ್ಷ ಹುಲಿಗಳು ಸುತ್ತಾಡುತ್ತಲಿದ್ದವು. ವಿಶ್ವದೆಲ್ಲಡೆಯಲ್ಲಿ ಸುಮಾರು13 ರಾಷ್ಟ್ರಗಳು ಹುಲಿ ಸಂರಕ್ಷಣೆಗಾಗಿ ಮಹತ್ವದ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಮತ್ತು 2022ರ ವೇಳೆಗೆ ಈ ಸಂಖ್ಯೆಯನ್ನು ದ್ವಿಗುಣ ಮಾಡಲು ಈ ಸರ್ಕಾರಗಳು ನಿರ್ಧಾರ ಮಾಡಿವೆ. ಇದನ್ನು ಟಿಎಕ್ಸ್ 2 ಗುರಿ ಎಂದು ಹೇಳಲಾಗುತ್ತದೆ.

ಅಂತಾರಾಷ್ಟ್ರೀಯ ಹುಲಿ ದಿನ: ಇತಿಹಾಸ
2010ರಲ್ಲಿ ರಷ್ಯಾದಲ್ಲಿ ನಡೆದ ಸೇಂಟ್ ಪೀಟರ್ಸ್ ಬರ್ಗ್ ಹುಲಿ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಹುಲಿ ದಿನವನ್ನು ಆರಂಭಿಸಲಾಯಿತು. ಅಳಿವಿನಂಚಿನಲ್ಲಿ ಇರುವಂತಹ ಹುಲಿಗಳ ಸಂರಕ್ಷಣೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ಹುಲಿಗಳ ಸಂರಕ್ಷಣೆಗಾಗಿ ಕಾರ್ಯಕ್ರಮಗಳನ್ನು ಕೂಡ ರೂಪಿಸಬೇಕಾಗಿತ್ತು. ಹುಲಿ ಸಂಖ್ಯೆ ಇರುವಂತಹ ರಾಷ್ಟ್ರಗಳು ಹುಲಿಗಳ ಸಂಖ್ಯೆಯನ್ನು 2020ರ ವೇಳೆಗೆ ದ್ವಿಗುಣ ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳಲಾಯಿತು.
ಡಬ್ಲ್ಯೂ ಡಬ್ಲ್ಯೂಎಫ್, ಐಎಫ್ ಎಡಬ್ಲ್ಯೂ ನಂತಹ ಕೆಲವೊಂದು ಸಂಘಟನೆಗಳು ಪ್ರತಿ ವರ್ಷ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದಿದೆ.

ಹುಲಿ ಸಂತತಿ ಕಡಿಮೆ ಆಗಲು ಕಾರಣಗಳು
ಹುಲಿ ಬೇಟಿ ಮತ್ತು ಕಾನೂನು ಬಾಹಿರ ಮಾರಾಟವು ಇದಕ್ಕೆ ಪ್ರಮುಖ ಕಾರಣ. ಚೀನಾದ ಸಾಂಪ್ರದಾಯಿಕ ಔಷಧಿಗಳಲ್ಲಿ ಹುಲಿಯ ದೇಹದ ಪ್ರತಿಯೊಂದು ಅಂಗಗಳನ್ನು ಬಳಸುವ ಕಾರಣದಿಂದಾಗಿ ಇದಕ್ಕೆ ಅತಿಯಾದ ಬೇಡಿಕೆ ಇದೆ. ಕಾನೂನು ಬಾಹಿರ ವ್ಯಾಪಾರದಲ್ಲಿ ಇದಕ್ಕೆ ಹೆಚ್ಚು ಬೆಲೆ ಸಿಗುವುದು.

ಆವಾಸಸ್ಥಾನ ನಾಶ
ಇಂದಿನ ದಿನಗಳಲ್ಲಿ ಜನಸಂಖ್ಯೆಯು ವಿಪರೀತ ಬೆಳೆಯುತ್ತಿರುವ ಕಾರಣದಿಂದಾಗಿ ಕಾಡುಗಳು ನಾಶವಾಗುತ್ತಲಿದೆ. ಕೃಷಿ, ಕೈಗಾರಿಕೆ ಇತ್ಯಾದಿಗಳಿಗೆ ಕಾಡುಗಳನ್ನು ನಾಶ ಮಾಡಲಾಗುತ್ತಿದೆ. ಇದರಿಂದಾಗಿ ಶೇ.93ರಷ್ಟು ಹುಲಿಗಳ ಆವಾಸಸ್ಥಾನ ನಾಶವಾಗಿವೆ.

ಹವಾಮಾನ ವೈಪರೀತ್ಯ
ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟವು ಏರುತ್ತಿರುವ ಕಾರಣದಿಂದಾಗಿ ರಾಯಲ್ ಬೆಂಗಾಳ್ ಹುಲಿಗಳಿಗೆ ಆವಾಸಸ್ಥಾನವಾಗಿರುವ ಸುಂದರಬನಗಳು ನಾಶವಾಗುತ್ತಲಿದೆ. ಕೆಲವೊಂದು ಕಾಯಿಲೆಗಳು ಕೂಡ ಇದಕ್ಕೆ ಕಾರಣವಾಗಿದೆ. ಕೆಲವೊಂದು ಪ್ರಾಣಿಗಳು ಸಾವನ್ನಪ್ಪುತ್ತಿದೆ ಮತ್ತು ಇದಕ್ಕೆ ಯಾವುದೇ ಕಾರಣಗಳು ತಿಳಿದುಬರುತ್ತಿಲ್ಲ. ಫೆಲೈನ್ ಪನ್ಲ್ಯುಕೋಪೆನಿಯಾ, ಕ್ಷಯ ಇತ್ಯಾದಿ ರೋಗಗಳು ಪ್ರಾಣಿಗಳಲ್ಲಿ ಹಬ್ಬುತ್ತಲಿದೆ. ರಣಥಂಬೋರ್ ಹುಲಿ ರಕ್ಷಿತಾರಣ್ಯದಲ್ಲಿ ಇರುವಂತಹ ಭಾರತೀಯ ವನ್ಯಜೀವಿ ಸಂಸ್ಥೆ(ಡಬ್ಲ್ಯೂಐಐ) ಹೇಳುವ ಪ್ರಕಾರ ಕಳೆದ ಕೆಲವೊಂದು ವರ್ಷಗಳಲ್ಲಿ ಹುಲಿ ಸಂತತಿಯು ಗಣನೀಯವಾಗಿ ಇಳಿಕೆಯಾಗುತ್ತಲಿದೆ.

ಆವಾಸಸ್ಥಾನದ ತೊಂದರೆ
ದೊಡ್ಡ ಪ್ರಾಣಿಗಳಿಗೆ ತಮ್ಮ ಆವಾಸಸ್ಥಾನದಲ್ಲಿ ಯಾವುದೇ ರೀತಿಯ ತೊಂದರೆ ಹಾಗೂ ಶಬ್ಧ ಬರದೇ ಇರಬೇಕು. ಆದರೆ ಅರಣ್ಯ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಕೆಲವೊಂದು ಕೈಗಾರಿಕಾ ಚಟುವಟಿಕೆಗಳು ಹುಲಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಹುಲಿಗಳು ಭೂಮಿಯ ನೈಸರ್ಗಿಕ ಆವಾಸಸ್ಥಾನದ ಭಾಗ
ಹುಲಿಗಳಿಗೆ ಕೂಡ ಇತಿಹಾಸ ಮತ್ತು ಸಂಪ್ರದಾಯವಿದೆ. ಅವುಗಳು ವಾಸಿಸುವ ಪ್ರದೇಶಗಳಲ್ಲಿ ಇದು ತುಂಬಾ ಮಹತ್ವದ್ದಾಗಿರುತ್ತದೆ ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ. ಪರಿಸರದಲ್ಲಿ ಏಕತೆಯನ್ನು ಕಾಪಾಡಿಕೊಂಡು ಇವು ಅರಣ್ಯ ರಕ್ಷಿಸುವುದು ಮಾತ್ರವಲ್ಲದೆ ಈ ಪ್ರದೇಶಕ್ಕೆ ಹೆಚ್ಚಿನ ರಕ್ಷಣೆ ಮತ್ತು ಬಂಡವಾಳ ತಿರುವುದು. ಇವುಗಳನ್ನು ಒಂದು ಕೊಡೆಯ ಜೀವಿಗಳು ಎಂದು ಹೇಳಬಹುದಾಗಿದೆ. ಯಾಕೆಂದರೆ ಇವುಗಳು ಬದುಕುಳಿದರೆ ಆಗ ಇನ್ನಿತರ ಹಲವಾರು ಜೀವಿಗಳು ಕೂಡ ಇಲ್ಲಿ ವಾಸ ಮಾಡುತ್ತವೆ.

English summary

International Tiger Day 2019: History and Significance

International Tiger Day is observed on 29 July every year to raise awareness about the conservation of tiger and to promote the protection of natural habitat of tigers. International Tiger Day is also known as Global Tiger Day. Let us read more about International Tiger Day and how it is celebrated.According to WWF around 3,900 wild tigers are left in the world. Since the beginning of the 20th century, over 95% of the world's tiger population is lost.
X
Desktop Bottom Promotion