For Quick Alerts
ALLOW NOTIFICATIONS  
For Daily Alerts

ಕಾಮಾಕ್ಷಿ ದೀಪ ಎಷ್ಟು ಹಚ್ಚಬೇಕು? ಅದೃಷ್ಟ ಒಲಿಯಲು ಯಾವ ದಿಕ್ಕಿನಲ್ಲಿ ಹಚ್ಚಬೇಕು?

|

ಮನೆಯೆಂದರೆ ಬೆಳಗ್ಗೆ-ಸಂಜೆ ದೇವರಿಗೆ ದೀಪ ಹಚ್ಚಿದರೆ ವಿಶೇಷವಾದ ಕಳೆ. ದೇವರ ಮನೆಯಲ್ಲಿ ದೀಪ ಬೆಲಗುದಾಗ ಮನಸ್ಸಿಗೆ ಅದೇನೋ ತೃಪ್ತಿ, ಸಮಧಾನ. ಆ ದೇವರಮುಂದೆ ಕಣ್ಮುಚ್ಚಿ ಕೂರುವ ಆ ಕ್ಷಣ ಎಲ್ಲವನ್ನು ಮರೆತು ದೇವರ ಧ್ಯಾನದಲ್ಲಿ ಮಗ್ನರಾಗುತ್ತೇವೆ.

Kamakshi deepam, how many Kamakshi deepam, which direction Kamakshi deepam

ದೀಪ ಜ್ಞಾನದ ಸಂಕೇತ, ಕತ್ತಲನ್ನು ಹೋಗಲಾಡಿಸುವ ದೀಪದ ಬೆಳಕು ನಮ್ಮಲ್ಲಿ ಹಾಗೂ ನಮ್ಮ ಬದುಕಿನಲ್ಲಿರುವ ಅಂದಕಾರವನ್ನು ಹೋಗಲಾಡಿಸುತ್ತೆ ಎಂಬ ನಂಬಿಕೆ. ಯಾವುದೇ ಶುಭ ಕಾರ್ಯ ಮಾಡುವ ಮುನ್ನ ದೇವರಿಗೆ ದೀಪ ಹಚ್ಚುತ್ತೇವೆ. ಮನೆಯಲ್ಲಿ ಬೆಳಗ್ಗೆ ದೀಪ ಬೆಳಗ್ಗಿ ಇತರ ಕೆಲಸದತ್ತ ಗಮನ ನೀಡುತ್ತೇವೆ. ದೇವರಿಗೆ ದೀಪ ಹಚ್ಚುವುದು ಹಿಂದೂ ಧರ್ಮದ ಸಂಪ್ರದಾಯ.

ನಾವು ದೇವರಿಗೆ ದೀಪ ಹಚ್ಚುವಾಗ ಎಷ್ಟು ದೀಪ ಹಚ್ಚಬೇಕು, ಎಷ್ಟು ಬತ್ತಿ ಹಾಕಬೇಕು ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಾ ಇರುತ್ತರೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

 ಎಷ್ಟು ದೀಪವನ್ನು ಹಚ್ಚಬೇಕು?

ಎಷ್ಟು ದೀಪವನ್ನು ಹಚ್ಚಬೇಕು?

ನೀವು ಹೆಚ್ಚು ದೀಪ ಬೆಳಗಿದಷ್ಟೂ ಮನೆ ಮತ್ತಷ್ಟು ಬೆಳಕಿನಿಂದ ಕೂಡಿರುತ್ತದೆ. ದೀಪಾವಳಿಯಲ್ಲಿ ಮನೆಯಲ್ಲಿ ತುಂಬಾ ದೀಪ ಹಚ್ಚುತ್ತೇವೆ. ಆದರೆ ಸಾಮಾನ್ಯವಾಗಿ ಒಂದು ಅಥವಾ ಎರಡು ದೀಪ ಬೆಳಗಲಾಗುವುದು. ಹಿಂದೂ ಧರ್ಮದಲ್ಲಿ ತ್ರಿಮೂರ್ತಿಗಳೆಂದು ಶಿವ, ವಿಷ್ಣು, ಬ್ರಹ್ಮನನ್ನು ಪೂಜಿಸಲಾಗುವುದು. ಅದೇ ರೀತಿ ತ್ರಿಶಕ್ತಿಗಳಾಗಿ ದುರ್ಗೆ, ಲಕ್ಷ್ಮಿ, ಸರಸ್ವತಿಯನ್ನು ಪೂಜಿಸಲಾಗುವುದು. ಆದ್ದರಿಂದ ಮನೆಯಲ್ಲಿ ಸೂರ್ಯ ಹುಟ್ಟುವ ಮುನ್ನ ಒಂದು ದೀಪವನ್ನು ಬೆಳಗುವುದು ಒಳ್ಳೆಯದು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು, ಲಕ್ಷ್ಮಿ ಮನೆಗೆ ಆಗಮಿಸುತ್ತಾಳೆ.

ಒಂದು ಅಥವಾ ಎರಡು ದೀಪವನ್ನು ಹಚ್ಚಲೇಬೇಕು

ಒಂದು ಅಥವಾ ಎರಡು ದೀಪವನ್ನು ಹಚ್ಚಲೇಬೇಕು

ಮನೆಯಲ್ಲಿ ಒಂದು ಅಥವಾ ಎರಡು ದೀಪವನ್ನು ಹಚ್ಚಲೇಬೇಕು, ಇನ್ನು ದೀಪಕ್ಕೆ ಎರಡು ಬತ್ತಿ ಹಾಕಿ, ನಂತರ ದೀಪ ಹಚ್ಚಬೇಕು.

ದೇವರ ದೀಪವನ್ನು ಯಾವ ದಿಕ್ಕಿನಲ್ಲಿ ಬೆಳಗಬೇಕು?

ದೇವರ ದೀಪವನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿಮ ಕಡೆಗೆ ಬೆಳಗಬೇಕು.

 ಯಾವ ಸಮಯದಲ್ಲಿ ದೀಪವನ್ನು ಹಚ್ಚಿದರೆ ಒಳ್ಳೆಯದು

ಯಾವ ಸಮಯದಲ್ಲಿ ದೀಪವನ್ನು ಹಚ್ಚಿದರೆ ಒಳ್ಳೆಯದು

ಜ್ಯೋತಿಷ್ಯ ಪ್ರಕಾರ 4-6 ದೇವತಾ ಕಾಲ, 6-11 ಮಾನವ ಕಾಲ, 11ರಿಂದ 4ರವರೆಗೆ ಪಿತೃ ಸಂಚಾರ ಕಾಲ, ನಂತರ ಅಸುರ ಕಾಲ. ದೇವರ ದೀಪವನ್ನು ದೇವಕಾಲದಲ್ಲಿ ಅಂದರೆ 6 ಗಂಟೆಯ ಒಳಗಡೆ ಹಚ್ಚುವುದು ಒಳ್ಳೆಯದು, ಅದು ಎಲ್ಲರಿಗೆ ಸಾಧ್ಯವಾಗುವುದಿಲ್ಲ, ಆದ್ದರಿಂದ ನಿತ್ಯ ಜೀವನದಲ್ಲಿ ಮಾನವ ಕಾಲದಲ್ಲಿ ದೀಪ ಹಚ್ಚಲಾಗುವುದು. ಇನ್ನು ಅಸುರ ಕಾಲದಲ್ಲಿ ಋಣಾತ್ಮಕ ಶಕ್ತಿಯನ್ನು ತಡೆಯಲು 5 ಗಂಟೆಯ ನಂತರ ದೀಪವನ್ನು ಹಚ್ಚಲಾಗುವುದು.

ಬೆಳಗ್ಗೆ ಎದ್ದಾಗ ಮೆದುಳು ಫ್ರೆಷ್‌ ಆಗಿರುತ್ತೆ, ಹೊಟ್ಟೆ ಖಾಲಿರುತ್ತೆ, ಸ್ನಾನವಾದ ಬಳಿಕ ಬೆಳಗ್ಗೆ ದೀಪ ಹಚ್ಚಿದರೆ ಒಳ್ಳೆಯದು.

ದೇವರ ಫೋಟೋದ ಜೊತೆ ಪಿತೃಗಳ ಫೋಟೋ ಇಟ್ಟು ಪೂಜಿಸಬಹುದೇ?

ದೇವರ ಫೋಟೋದ ಜೊತೆ ಪಿತೃಗಳ ಫೋಟೋ ಇಟ್ಟು ಪೂಜಿಸಬಹುದೇ?

ನೀವು ಪಿತೃಗಳ ಫೋಟೋಗೆ ದೀಪ ಹಚ್ಚುವುದು, ಪೂಜಿಸುವುದು ಮಾಡಬಹುದು, ಆದರೆ ಅವರ ಫೋಟೋಗಳನ್ನು ದೇವರ ಫೋಟೋಗಳ ಜೊತೆ, ದೇವರ ಕೋಣೆಯಲ್ಲಿ ಇಡಬೇಡಿ. ಅವರ ಫೋಟೋಗಳನ್ನು ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿ ಇಟ್ಟು ಪೂಜಿಸಿ.

ದೇವರ ಫೋಟೋಗಳನ್ನು ಯಾವ ಕಡೆ ಇಡಬೇಕು?

ದೇವರ ಫೋಟೋಗಳನ್ನು ಪೂರ್ವ ಅಥವಾ ಪಶ್ಚಿಮಕ್ಕೆ ಇಡಬಹುದು, ಆದರೆ ದೇವರ ಫೋಟೋಗಳನ್ನು ಇಡುವ ಸ್ಥಳದ ಸಮೀಪ ಬಾತ್‌ರೂಂ ಗೋಡೆ ಇರಬಾರದು.

ಕಾಮಾಕ್ಷಿ ದೀಪವನ್ನು ನೀವೇ ಖರೀದಿಸಿ ಬಳಸಬಾರದು

ಕಾಮಾಕ್ಷಿ ದೀಪವನ್ನು ನೀವೇ ಖರೀದಿಸಿ ಬಳಸಬಾರದು

ತಾಮ್ರದ ಕಾಮಾಕ್ಷಿ ದೀಪವನ್ನು ನೀವೇ ಖರೀದಿಸಬಾರದು. ನಿಮ್ಮ ಕುಟುಂಬದವರು ಅಥವಾ ಸ್ನೇಹಿತರು ನೀಡಬೇಕು, ಅದರಲ್ಲಿ ದೀಪವನ್ನು ಹಚ್ಚಬೇಕು. ದೀಪನ್ನು ನೆಲದಲ್ಲಿ ಇಡಬಾರದು. ಪಾತ್ರೆಯಲ್ಲಿ ಅಕ್ಕಿ ಹಾಕಿ ಅದರಲ್ಲಿ ಅಥವಾ ಎಲೆಯ ಮೇಲೆ, ಪಾತ್ರೆಯ ಮೇಲೆ ಇಡಬೇಕು. ಇದರಿಂದ ದೀಪ ನಿಮಗೆ ಅದೃಷ್ಟವನ್ನು ತರುವುದು. ಕಾ,ಆಕ್ಷಿ ದೀಪಕ್ಕೆ ಅರಿಶಿಣ, ಕುಂಕುಮ ಅರ್ಪಿಸಿ ಪೂಜಿಸಬೇಕು.

English summary

How many Kamakshi Deepam to light at home in kannada

How many Kamakshi deepam to light at home, which direct have to light lamp, read on....
Story first published: Monday, September 26, 2022, 18:20 [IST]
X
Desktop Bottom Promotion