For Quick Alerts
ALLOW NOTIFICATIONS  
For Daily Alerts

ಪ್ರವಾಹ ಭೀತಿ: ಹೆಚ್ಚಿನ ಅಪಾಯ ತಡೆಯಲು ಪಾಲಿಸಬೇಕಾದ ಮುನ್ನೆಚ್ಚರಿಕೆಗಳಿವು

|

ಒಂದು ಕಡೆ ಕೊರೊನಾ ಭೀತಿ, ಮತ್ತೊಂದೆಡೆ ಪ್ರಕೃತಿಯ ರೌದ್ರಾವತಾರ, ಇದರಿಂದ ಮನುಷ್ಯ ತತ್ತರಿಸಿ ಹೋಗಿದ್ದಾನೆ. ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕರ್ನಾಟಕದ ಬಹುತೇಕ ಸ್ಥಳಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಪಾಯ ಇರುವ ಜನರು ಸ್ಥಳಾಂತಾರವಾಗುವಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಕೊಡಗು, ಚಿಕ್ಕ ಮಗಳೂರು, ಉತ್ತರ ಕನ್ನಡ, ಬೆಳಗಾವಿ ಮುಂತಾದ ಕಡೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಪ್ರವಾಹ ಭೀತಿ: ಅಪಾಯ ತಡೆಯಲು ಪಾಲಿಸಬೇಕಾದ ಮುನ್ನೆಚ್ಚರಿಕೆಗಳಿವು | How To Prepare For A Flood Boldsky Kannada

ಪ್ರವಾಹ ಪರಿಸ್ಥಿತಿಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ, ಆದರೆ ಸ್ವಲ್ಪ ಮುನ್ನೆಚ್ಚರಿಕೆವಹಿಸಿದರೆ ದೊಡ್ಡ ಅನಾಹುತಗಳನ್ನು ತಪ್ಪಿಸಬಹುದಾಗಿ. ಪ್ರವಾಹದಂತಹ ಪರಿಸ್ಥಿತಿ ಉಂಟಾದಾಗ ಈ ಟಿಪ್ಸ್ ಪಾಲಿಸುವುದು ಒಳ್ಳೆಯದು:

ಮೊದಲಿಗೆ ಸ್ಥಳಾಂತರವಾಗಬೇಕು, ಅದಕ್ಕಾಗಿ ಈ ಪ್ಲ್ಯಾನ್ ಮಾಡಿಕೊಳ್ಳಿ

ಮೊದಲಿಗೆ ಸ್ಥಳಾಂತರವಾಗಬೇಕು, ಅದಕ್ಕಾಗಿ ಈ ಪ್ಲ್ಯಾನ್ ಮಾಡಿಕೊಳ್ಳಿ

ನೀರಿನ ಮಟ್ಟ ಏರುತ್ತಿದೆ ಎಂದು ತಿಳಿಯುತ್ತಿದ್ದಂತೆ ಮನೆಯಲ್ಲಿರುವ ವಸ್ತುಗಳನ್ನು ಎತ್ತರದ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ನಂತರ ಮನೆಯಿಂದ ಹೊರಡುವಾಗ ತೆಗೆದುಕೊಂಡು ಹೋಗಲು ಅಗ್ಯತವಾದ ವಸ್ತುಗಳನ್ನು ಪ್ಯಾಕ್‌ ಮಾಡಬೇಕು.

ಬ್ಯಾಟರಿ ಇರುವ ರೇಡಿಯೋ, ಫ್ಲ್ಯಾಷ್‌ಲೈಟ್, ಆಹಾರ, ಶುದ್ಧ ನೀರು ಹಾಗೂ ಮಳೆಯ ರಕ್ಷಣೆಗೆ ಉಡುಪು ಇವುಗಳನ್ನು ಜೋಡಿಸಬೇಕು.

 • ಅಗ್ಯತದ ದಾಖಲೆಗಳಿದ್ದರೆ ಅದನ್ನು ಜೊತೆಗೆ ಕೊಂಡೊಯ್ಯಿರಿ, ಇಲ್ಲಾ ಅದು ನೀರು ಬರದಂಥ ಜಾಗದಲ್ಲಿ ಸುರಕ್ಷಿತವಾಗಿ ಇಡಿ. ಚಿನ್ನಾಭರಣ ಜೊತೆಯಲ್ಲಿ ಕೊಂಡೊಯ್ಯುವುದು ಸೂಕ್ತವಲ್ಲ, ಆದ್ದರಿಂದ ಮನೆ ಖಾಲಿ ಮಾಡುವ ಅದನ್ನು ಸುರಕ್ಷಿತವಾದ ಕಡೆ ಇಡಿ. ಎಲೆಕ್ಟ್ರಿಕ್‌ ವಸ್ತುಗಳನ್ನು ಎತ್ತರದ ಸ್ಥಳಗಳಲ್ಲಿ ಇಡಿ.
 • ಬೇಕಾದ ಬಟ್ಟೆಗಳು, ಔಷಧಗಳು, ಮಹಿಳೆಯರಿಗೆ ಅಗ್ಯತವಾದ ಸ್ಯಾನಿಟರಿ ಪ್ಯಾಡ್ ಎಲ್ಲವನ್ನು ಕೊಂಡೊಯ್ಯಿರಿ.
 • ದೂರದ ಸುರಕ್ಷಿತ ಸ್ಥಳಗಳಲ್ಲಿ ಟೆಂಟ್ ಹಾಕಲು ಬೇಕಾದ ಸಾಮಗ್ರಿ ನಿಮ್ಮ ಬಳಿ ಇರಲಿ.
 • ಮನೆಯಿಂದ ಹೊರಡುವ ಮುನ್ನ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ. ಗ್ಯಾಸ್‌ ಆಫ್‌ ಮಾಡಿ.
 • ಮನೆಯ ಗೋಡೆಗಳ ಸುತ್ತ ವಾಟರ್‌ಫ್ರೂಫ್ ಕಾಂಪೌಂಡ್‌ ಅಥವಾ ಮರಳಿನ ಚೀಲವಿದ್ದರೆ ಮನೆ ಕುಸಿಯದಂತೆ ರಕ್ಷಣೆ ಮಾಡಬಹುದು.
 • ಮನೆಗೆ ನೀರು ತುಂಬಿದೆ ಆದರೆ ಅಪಾಯವಿಲ್ಲ, ಅಲ್ಲೇ ವಾಸಿಸಬಹುದು ಎಂದಾದರೆ ಮನೆಯ ಟಾಯ್ಲೆಟ್, ಬಾತ್‌ರೂಂ, ಡ್ರೈನೇಜ್ ಹೋಲ್ ಇವುಗಳಿಗೆ ಮರಳು ಚೀಲ ಹಾಕಿ, ಇದರಿಂದ ಬ್ಲಾಕ್ ಆಗುವುದನ್ನು ತಪ್ಪಿಸಬಹುದು.
 ರಭಸದಲ್ಲಿ ಹರಿಯುವ ನೀರಿನಲ್ಲಿ ನಡೆಯಬೇಡಿ

ರಭಸದಲ್ಲಿ ಹರಿಯುವ ನೀರಿನಲ್ಲಿ ನಡೆಯಬೇಡಿ

ನೀರಿನ ರಭಸ ಅಧಿಕವಿದ್ದರೂ ಜನರು ಅದನ್ನು ದಾಟಿ ಅತ್ತ ಕಡೆ ಹೋಗುವ ಸಾಹಸ ಮಾಡುವುದೇ ಹೆಚ್ಚಿನ ಅನಾಹುತಕ್ಕೆ ಕಾರಣವಾಗಿದೆ. ಎಲ್ಲಿ ನೀರಿನ ರಭಸ ಕಡಿಮೆ ಇರುತ್ತದೆಯೋ ಅಲ್ಲಿ ಮಾತ್ರ ನಡೆದುಕೊಂಡು ಹೋಗಿ, ಮಂಡಿಕ್ಕಿಂತ ಹೆಚ್ಚಿನ ನೀರು ಇದ್ದರೆ ನಡೆಯುವ ಸಾಹಸಕ್ಕೆ ಕೈ ಹಾಕಬೇಡಿ. ಇನ್ನು ಮಕ್ಕಳನ್ನು ಹಿಡಿದುಕೊಂಡು ಅಂಥ ನೀರಿನಲ್ಲಿ ನಡೆಯುವ ಪ್ರಯತ್ನ ಮಾಡಲೇಬೇಡಿ.

ಪ್ರವಾಹದಲ್ಲಿ ಡ್ರೈವ್‌ ಮಾಡುವುದು

ಪ್ರವಾಹದಲ್ಲಿ ಡ್ರೈವ್‌ ಮಾಡುವುದು

ನಾವು ಸಾಕಷ್ಟು ಘಟನೆ ನೋಡುತ್ತೇವೆ, ನೀರಿನ ರಭಸಕ್ಕೆ ಗಾಡಿಗಳು ಕೊಚ್ಚಿಕೊಂಡು ಹೋಗುವುದು. ನೀವು ಅದೇ ದಾರಿಯಲ್ಲಿ ಓಡಾಡುತ್ತಿದ್ದರೂ ಆ ಭಾಗದಲ್ಲಿ ನಿರು ತುಂಬಿದರೆ ರಸ್ತೆ ಗುಂಡಿಯಾಗಿರಬಹುದೇ ಇಲ್ಲವೇ ಎಂಬ ಅಂದಾಜು ಇರುವುದಿಲ್ಲ. ಇಂಥ ಕಡೆ ಡ್ರೈವ್ ಮಾಡುವುದು ತುಂಬಾ ಅಪಾಯಕಾರಿ. 6 ಅಡಿಗಿಂತ ಎತ್ತರ ನೀರಿನ ಮಟ್ಟವಿದ್ದರೆ ಅದರಲ್ಲಿ ಕಾರು, ಬೈಕ್ ಚಲಾಯಿಸಿದರೆ ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚು. ನೀರಿನ ಮಟ್ಟ ಎರಡು ಅಡಿಯಷ್ಟು ಇದ್ದರೆ ದೊಡ್ಡ ಗಾಡಿಗಳು ಚಲಿಸುತ್ತವೆ.

ಪ್ರವಾಹ ಕಡಿಮೆ ಆದ ಬಳಿಕ ಏನು ಮಾಡಬೇಕು?

ಪ್ರವಾಹ ಕಡಿಮೆ ಆದ ಬಳಿಕ ಏನು ಮಾಡಬೇಕು?

 • ಜಿಲ್ಲಾಧಿಕಾರಿಗಳು ಹಾಗೂ ಹವಾಮಾನ ಇಲಾಖೆಯಿಂದ ಸೂಚನೆ ಬರುವವರೆಗೆ ಹಿಂತಿರುಗಬೇಡಿ, ಇದ್ದ ಸ್ಥಳದಲ್ಲಿಯೇ ಇರಿ.
 • ಮನೆಗೆ ಹಿಂತಿರುಗಿದ ತಕ್ಷಣ ವಿದ್ಯುತ್‌ ಸ್ವಿಚ್‌ ಹಾಕಬೇಡಿ. ಮನೆ ಸಂಪೂರ್ಣ ಒಣಗುವವರೆಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ.
 • ಯಾವುದೇ ವಸ್ತುಗಳನ್ನು ಸಂಪೂರ್ಣ ಸ್ವಚ್ಛ ಮಾಡದೆ ಬಳಸಲು ಹೋಗಬೇಡಿ.
 • ಇನ್ನು ಮನೆಗೆ ಹೋಗುವ ಮುನ್ನ ಮನೆ ಕುಸಿಯುವ ಪರಿಸ್ಥಿತಿ ಇದೆಯೇ ಎಂದು ಪರಿಶೀಲಿಸುವುದು ಒಳ್ಲೆಯದು
 • ಮನೆಯ ಗಿಡಗಳು, ಗಾಜಿನ ವಸ್ತುಗಳು ಒಡೆದಿವೆಯೇ ನೋಡಿ, ಒಡೆದಿದ್ದರೆ ನೀರು ಇನ್ನೂ ಮನೆಯೊಳಗಡೆ ಇದ್ದರೆ ಓಡಾಡುವುದು ಅಪಾಯ.
 • ಪ್ರವಾಹ ಬಂದ ಮೇಲೆ ಬಾವಿ ನೀರನ್ನು ಹಾಗೇ ಬಳಸಬೇಡಿ, ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ನೀರನ್ನು ಚೆನ್ನಾಗಿ ಕುದಿಸಿ ಬಳಸಬೇಕು. ಶುದ್ಧವಾದ ನೀರನ್ನು ಅಡುಗೆಗೆ ಬಳಸಬೇಕು.
 • ಅಲ್ಲದೆ ಪ್ರವಾಹದಿಂದ ಎಷ್ಟೆಲ್ಲಾ ಹಾನಿಯುಂಟಾಯಿತು ಎಂಬ ದಾಖಲೆಗಾಗಿ ವೀಡಿಯೋ ಹಾಗೂ ಫೋಟೋ ತೆಗೆದಿಟ್ಟುಕೊಳ್ಳುವುದು ಒಳ್ಳೆಯದು.
English summary

Flood Precaution: Things You Need To Do In Case Of Floods in Kannada

flood precaution,here are tips what you must do in case of floods, Read on,
X