For Quick Alerts
ALLOW NOTIFICATIONS  
For Daily Alerts

ಶನಿವಾರದ ದಿನ ಭವಿಷ್ಯ (12-10-2019)

|

ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯತ ಹಾಕಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಗೊಂದಲ ಹಾಗೂ ತೊಂದರೆಗಳು ಇಲ್ಲವಾದಂತೆ ಆಗುತ್ತದೆ. ಈ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದರಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.ವಾಹನ, ಮನೆಯ ಮೇಲೆ ಬೀಳುವ ದೃಷ್ಟಿಯನ್ನು ಗಾಳಿ ಆಂಜನೇಯ ಸ್ವಾಮಿ ದೂರ ಮಾಡುತ್ತಾನೆಂಬ ನಂಬಿಕೆಯಿಂದಲೇ ಪ್ರತೀ ನಿತ್ಯ ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ. ಆಂಜನೇಯ ವಾಯುಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ: 21 ಮಾರ್ಚ್ 19 ಏಪ್ರಿಲ್

ಮೇಷ: 21 ಮಾರ್ಚ್ 19 ಏಪ್ರಿಲ್

ನೀವು ಇಂದು ಜಾಗರೂಕರಾಗಿರಬೇಕು. ನಕ್ಷತ್ರಗಳು ಹಾಗೂ ಗ್ರಹಗತಿಗಳು ನಿಮಗೆ ಅನುಕೂಲಕರವಾದ ಸ್ಥಿತಿಯನ್ನು ಒದಗಿಸುತ್ತವೆ. ಸಣ್ಣ ಏರಿಳಿತ ಉಂಟಾಗುವುದನ್ನು ನೀವು ಗಮನಿಸಬಹುದು. ಕುಟುಂಬದಲ್ಲಿ ಸಣ್ಣ ವಾದಗಳು ಉಂಟಾಗಬಹುದು. ಪೋಷಕರು ಸಹ ನಿಮ್ಮ ವಿಷಯದ ಬಗ್ಗೆ ಚಿಂತಿತರಾಗುತ್ತಾರೆ. ಶೀಘ್ರದಲ್ಲಿಯೇ ವಿಷಯಗಳು ತಣ್ಣಗಾಗುತ್ತವೆ. ಹಾಗಾಗಿ ಅತಿಯಾಗಿ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಕೋಪವನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಅಧಿಕಾರಿಗಳು ನಿಮಗೆ ಉತ್ತಮ ಸಹಕಾರ ನೀಡುವುದರಿಂದ ವೃತ್ತಿ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣವನ್ನು ಅನುಭವಿಸುವಿರಿ. ಕಾರ್ಪೋರೇಟ್ ಉದ್ಯೋಗಿಗಳಿಗೆ ಸಾಮಾನ್ಯವಾದ ದಿನ. ನಿಮ್ಮ ಬಜೆಟ್ ಅನ್ನು ನೀವು ಬುದ್ಧಿವಂತಿಕೆಯಿಂದ ನಿರ್ವಹಿಸಬೇಕು. ಹಣಕಾಸಿಗೆ ಸಂಬಂಧಿಸಿದಂತೆ ವಿಷಯಗಳು ಸುಗಮವಾಗಿ ಸಾಗುವುದು. ಸಂಜೆಯ ಹೊತ್ತಿಗೆ ಪ್ರಣಯದ ವಿಹಾರವನ್ನು ಅನುಭವಿಸುವಿರಿ. ಅನಗತ್ಯ ಸಂಗತಿಗಳಿಗೆ ಹೆಚ್ಚಿನ ಶ್ರಮ ವಹಿಸುವುದರಿಂದ ಆರೋಗ್ಯ ಹದಗೆಡುವುದು. ಮನಸ್ಸನ್ನು ಉತ್ತಮವಾಗಿರಿಸಿಕೊಳ್ಳಲು ಉತ್ತಮ ನಡಿಗೆಯಿಂದ ದಿನವನ್ನು ಪ್ರಾರಂಭಿಸಿ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 27

ಅದೃಷ್ಟ ಸಮಯ: ಸಂಜೆ 6:25 ರಿಂದ 9:30 ರವರೆಗೆ

ವೃಷಭ: 20 ಏಪ್ರಿಲ್-20 ಮೇ

ವೃಷಭ: 20 ಏಪ್ರಿಲ್-20 ಮೇ

ಒಟ್ಟಾರೆ ವಿಷಯಗಳು ಸುಗಮವಾಗಿರುತ್ತವೆ. ಆದರೆ ನೀವು ಕೆಲಸದ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಕೆಲಸವನ್ನು ಮುಂದೂಡುವ ಪ್ರಯತ್ನವನ್ನು ಮಾಡದಿರಿ. ತಾಳ್ಮೆಯಿಂದ ವಿಷಯವನ್ನು ನಿರ್ವಹಿಸಬೇಕು. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರಶಸ್ತಿಯನ್ನು ನೀಡಲಾಗುವುದು. ಅದು ನಿಮ್ಮ ಸಹೋದ್ಯೋಗಿಗಳಿಗೆ ಅಸೂಯೆಯನ್ನು ಹುಟ್ಟಿಸಬಹುದು. ಹೊಸ ವ್ಯವಹಾರದ ಪ್ರಾರಂಭದಲ್ಲಿ ನೀವು ಅಡೆತಡೆಯನ್ನು ಅನುಭವಿಸಬೇಕಾಗುವುದು. ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಅಡಚಣೆಯನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನಿಮ್ಮ ಸಂಗಾತಿಯು ಎರಡನೇ ಮೂಲದಿಂದ ಹಣವನ್ನು ಸಂಪಾದಿಸಲು ಯೋಜನೆಯನ್ನು ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವವರು ತುಲನಾತ್ಮಕವಾಗಿ ನಿರಾಳತೆಯನ್ನು ಪಡೆದುಕೊಳ್ಳುವರು. ಕೆಲಸದ ಬದಲಾವಣೆಯನ್ನು ಮನಸ್ಸಿನಲ್ಲಿ ತಂದುಕೊಳ್ಳುವಿರಿ. ಕುಟುಂಬಕ್ಕೆ ಸಂಬಂಧಿಸಿದಂತೆ ಇಂದು ಉತ್ತಮವಾದ ದಿನ. ಮಕ್ಕಳು ಮತ್ತು ಪೋಷಕರೊಂದಿಗೆ ಗುಣಮಟ್ಟದ ದಿನವನ್ನು ಕಳೆಯುವಿರಿ. ಮಕ್ಕಳು ಚಟುವಟಿಕೆಯಿಂದ ಕೂಡಿರುತ್ತಾರೆ. ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲಬಹುದು. ಅಧಿಕ ನೀರನ್ನು ಸೇವಿಸಿ.

ಅದೃಷ್ಟ ಬಣ್ಣ: ಕೆನ್ನೇರಳೆ ಬಣ್ಣ

ಅದೃಷ್ಟ ಸಂಖ್ಯೆ: 32

ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 7:30 ರವರೆಗೆ

ಮಿಥುನ: 21 ಮೇ-20 ಜೂನ್

ಮಿಥುನ: 21 ಮೇ-20 ಜೂನ್

ನಿಮಗೆ ಸಾಮಾನ್ಯವಾದ ದಿನ. ಎಲ್ಲೆಡೆಯೂ ಬದ್ಧತೆಯನ್ನು ಹೊಂದಿರುತ್ತೀರಿ. ನಿಮ್ಮ ಪ್ರೀತಿಪಾತ್ರರ ಮುಂದೆ ನಿಮ್ಮ ತಪ್ಪನ್ನು ಒಪ್ಪಿಕೊಳ್ಳುವಿರಿ. ಅದು ನಿಮಗೆ ನಿರಾಳತೆಯ ಭಾವನೆಯನ್ನು ಮೂಡಿದುತ್ತದೆ. ನಿಮ್ಮ ಪ್ರಾಮಾಣಿಕತೆ ನಿಮಗೆ ಉತ್ತಮ ಪ್ರತಿಫಲವನ್ನು ನೀಡುವುದು. ಸಂಬಂಧದಲ್ಲಿ ಇರುವವರು ಹಣಕಾಸಿನ ವಿಷಯದಲ್ಲಿ ಒಳ್ಳೆಯ ಸುದ್ದಿಯನ್ನು ಪಡೆದುಕೊಳ್ಳುವರು. ನವವಿವಾಹಿತರಿಗೆ ಇಂದು ಆಶ್ಚರ್ಯದ ದಿನವಾಗುವುದು. ಅವರು ಪ್ರೀತಿಯ ಗಾಳಿಯಲ್ಲಿ ತೇಲುವರು. ವಿಮಾ ಕ್ಷೇತ್ರದಲ್ಲಿ ಇರುವವರಿಗೆ ಪ್ರಯೋಜನಕಾರಿ ದಿನವಾಗಿರುತ್ತದೆ. ವ್ಯವಹಾರದಲ್ಲಿ ತ್ವರಿತ ಬೆಳವಣಿಗೆಯು ನಿಮ್ಮ ದಿನವನ್ನು ಹಾಳು ಮಾಡುತ್ತದೆ. ನೀವು ದೊಡ್ಡ ಲಾಭವನ್ನು ಪಡೆದುಕೊಳ್ಳುವಿರಿ. ನಿಮ್ಮ ಸಂಗಾತಿಯು ನಿಮಗೆ ಅಭಿನಂದಿಸಬಹುದು. ನಿಮಗೆ ವಿಶೇಷ ಭಾವನೆ ಮೂಡುವುದು. ಧರ್ಮ ಮತ್ತು ಆಧ್ಯಾತ್ಮಿಕತೆಯ ಕಡೆಗೆ ಒಲವನ್ನು ತೋರುವಿರಿ. ಆರೋಗ್ಯದಲ್ಲಿ ಸುಧಾರಣೆಯು ನಿಮಗೆ ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ.

ಅದೃಷ್ಟ ಬಣ್ಣ: ಬೀಜ್

ಅದೃಷ್ಟ ಸಂಖ್ಯೆ: 34

ಅದೃಷ್ಟ ಸಮಯ: ಸಂಜೆ 5:30 ರಿಂದ 10:10 ರವರೆಗೆ

ಕರ್ಕ: 21 ಜೂನ್ 22 ಜುಲೈ

ಕರ್ಕ: 21 ಜೂನ್ 22 ಜುಲೈ

ಹವಾಮಾನವು ಪ್ರತಿಕೂಲವಾದ ಕಾರಣ ನೀವು ಆಲಸ್ಯ ಅನುಭವಿಸುವ ನಿರೀಕ್ಷೆಯಿದೆ. ಸಂಬಂಧದ ವಿಷಯದಲ್ಲಿ ಸನ್ನಿವೇಶಗಳು ಸುಧಾರಿಸುತ್ತವೆ. ನಿಮ್ಮ ಸಂಗಾತಿಯೊಂದಿಗಿನ ಸಣ್ಣ ವಾದವು ಒಂದು ಮನಸ್ಸಿಗೆ ಬೇಸರವನ್ನು ಉಂಟುಮಾಡುತ್ತದೆ. ಆದರೆ ಸಮಸ್ಯೆಯನ್ನು ವಿಂಗಡಿಸಲು ಮಕ್ಕಳು ಸಹಾಯ ಮಾಡುತ್ತಾರೆ. ಹಣಕಾಸಿನ ಸುಧಾರಣೆ ವಿಶ್ರಾಂತಿ ನೀಡುವುದು. ನಿಮ್ಮ ಪ್ರೀತಿ ಪಾತ್ರರು ನಿಮಗೆ ದುಬಾರಿ ಉಡುಗೊರೆಯನ್ನು ನೀಡಿ ಆಶ್ಚರ್ಯಪಡಬಹುದು. ನಿಮಗೆ ಅದು ವಿಶೇಷವೆನಿಸುತ್ತದೆ. ನಿಮ್ಮ ಸ್ನೇಹಿತನೊಂದಿಗೆ ಶಾಪಿಂಗ್ ಹೋದರೆ ಒತ್ತಡ ನಿವಾರಣೆಯಾಗುವುದು. ಹೂಡಿಕೆಗೆ ಅನುಕೂಲಕರ ಸಮಯವಲ್ಲ. ಉದ್ಯಮಿಗಳು ಕೆಲಸದ ಮುಂಭಾಗದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ದೀರ್ಘಾವಧಿಯ ನಿರ್ಧಾರಗಳನ್ನು ಒಂಟಿಯಾಗಿ ತೆಗೆದುಕೊಳ್ಳುವುದನ್ನು ತಪ್ಪಿಸಿ. ಏಕೆಂದರೆ ನೀವು ದೊಡ್ಡ ತೊಂದರೆಯಲ್ಲಿ ಇಳಿಯಬಹುದು. ನಿಮ್ಮ ದಿನಚರಿಯನ್ನು ನೀವು ಯೋಗ ಮತ್ತು ಧ್ಯಾನದೊಂದಿಗೆ ಪ್ರಾರಂಭಿಸಬೇಕು.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 31

ಅದೃಷ್ಟ ಸಮಯ: ಬೆಳಿಗ್ಗೆ 5:20 ರಿಂದ ಮಧ್ಯಾಹ್ನ 3:05 ರವರೆಗೆ.

ಸಿಂಹ: 23 ಜುಲೈ - 22 ಆಗಸ್ಟ್

ಸಿಂಹ: 23 ಜುಲೈ - 22 ಆಗಸ್ಟ್

ನಿಮ್ಮ ಸ್ಪರ್ಧಿಗಳು ನಿಮಗೆ ನಿರಾಸೆಯನ್ನು ಉಂಟುಮಾಡಬಹುದು. ಕೆಲಸದಲ್ಲಿ ಯಶಸ್ಸು ಸಾಧಿಸಲು ಹೆಚ್ಚಿನ ಶ್ರಮವಹಿಸಬೇಕಾಗುವುದು. ಇಂದು ನಿಮಗೆ ನಿಧಾನವಾದ ದಿನ ಎಂದು ನಿರೀಕ್ಷಿಸಲಾಗಿದೆ. ಉದ್ಯೋಗಕ್ಕೆ ಹೊಸದಾಗಿ ಸೇರಿಕೊಂಡವರಿಗೆ ಕಚೇರಿ ರಾಜಕಾರಣವನ್ನು ನಿಭಾಯಿಸಲು ಕಷ್ಟವಾಗುತ್ತದೆ. ಕುಟುಂಬ ವ್ಯವಹಾರದಲ್ಲಿರುವವರು ಲಾಭ ಗಳಿಸುತ್ತಾರೆ. ಕಾರ್ಪೊರೇಟ್ ವಲಯದ ಜನರು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ತೊಡಗುತ್ತಾರೆ. ನೀವು ಇಷ್ಟಪಡದ ಜನರ ಮೇಲೆ ನಿಮ್ಮ ಶ್ರಮ ಮತ್ತು ಶಕ್ತಿಯನ್ನು ವ್ಯರ್ಥ ಮಾಡುವುದನ್ನು ತಪ್ಪಿಸಿ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸವು ನಿಮ್ಮನ್ನು ಆಕ್ರಮಿಸಿಕೊಂಡಿರುತ್ತದೆ. ಸಮಯಕ್ಕೆ ಸರಿಯಾಗಿ ಹಣವನ್ನು ಹಿಂದಿರುಗಿಸದ ಜನರಿಗೆ ಹಣ ಎರವಲು ನೀಡದಿರಿ. ವೈಯಕ್ತಿಕ ವಿಷಯದಲ್ಲಿ ಸಂಗತಿಗಳು ಸುಗಮವಾಗಿರುತ್ತವೆ. ಏಕೆಂದರೆ ನಿಮ್ಮ ಪರಸ್ಪರ ತಿಳುವಳಿಕೆ ಅದ್ಭುತಗಳನ್ನು ಮಾಡುತ್ತದೆ. ಮಕ್ಕಳು ಹೊಸ ಯೋಜನೆಯೊಂದಿಗೆ ನಿರತರಾಗಿರುತ್ತಾರೆ. ನೀವು ಮಾತನಾಡುವ ಮೊದಲು ಯೋಚಿಸಿ ಅಥವಾ ನಿಮ್ಮನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿ. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಸಾಮಾನ್ಯ ದಿನ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 25

ಅದೃಷ್ಟ ಸಮಯ: ಮಧ್ಯಾಹ್ನ 2:15 ರಿಂದ 6:10 ರವರೆಗೆ

ಕನ್ಯಾರಾಶಿ: 23 ಆಗಸ್ಟ್ - 22 ಸೆಪ್ಟೆಂಬರ್

ಕನ್ಯಾರಾಶಿ: 23 ಆಗಸ್ಟ್ - 22 ಸೆಪ್ಟೆಂಬರ್

ಹೊಸ ಒಪ್ಪಂದವು ನಿಮ್ಮ ಹಾದಿಗೆ ಬರುತ್ತವೆ. ಹಾಗಾಗಿ ಇಂದು ಉದ್ಯಮಿಗಳಿಗೆ ಲಾಭದಾಯಕ ದಿನವೆಂದು ನಿರೀಕ್ಷಿಸಲಾಗಿದೆ. ಜಂಟಿ ವ್ಯವಹಾರದಲ್ಲಿರುವವರಿಗೆ ಹೆಚ್ಚುವರಿ ಲಾಭ ಉಂಟಾಗುವುದು. ನಿಮ್ಮ ಕಠಿಣ ಪರಿಶ್ರಮವು ನಿಮಗೆ ಪ್ರತಿಫಲವನ್ನು ನೀಡುವುದು. ಇದರಿಂದ ನಿಮಗೆ ನಿರಾಳ ಭಾವನೆಯನ್ನು ಮೂಡಿಸುತ್ತದೆ. ನಿಮ್ಮ ಸಕಾರಾತ್ಮಕ ಸ್ವಭಾವವು ವಿಷಯಗಳನ್ನು ಸರಳವಾಗಿಸುವುದು. ನೀವು ಮಹೋನ್ನತ ಫಲಿತಾಂಶವನ್ನು ಪಡೆಯುತ್ತೀರಿ. ಯೋಜನೆಗೆ ಸಂಬಂಧಿಸಿದ ಯಾವುದಾದರೂ ಪ್ರಮುಖ ವಿಷಯದ ಬಗ್ಗೆ ನಿಮ್ಮ ಸಹೋದ್ಯೋಗಿಗಳಿಗೆ ನೀವು ಸೂಚಿಸಬಹುದು. ನಿಮ್ಮ ಕುಟುಂಬ ಮತ್ತು ಆತ್ಮೀಯರೊಂದಿಗೆ ಸಮಯ ಕಳೆಯಬಹುದು. ಅವರಿಗೆ ವಿಶೇಷ ಭಾವನೆ ಮೂಡಿಸುತ್ತದೆ. ಇಂದು ಅತಿಯಾದ ಖರ್ಚಿನ ದಿನ. ನಿಮ್ಮ ಭಾವನೆಗಳನ್ನು ಪ್ರೀತಿ ಪಾತ್ರರಿಗೆ ತಿಳಿಸುವ ಮೂಲಕ ಅವರನ್ನು ಮದುವೆಗೆ ಆಗುವುದಾಗಿ ಹೇಳುವಿರಿ. ಸ್ಪರ್ಧೆಯು ಕಠಿಣವಾಗಿರುವುದರಿಂದ ದಿನವು ವಿದ್ಯಾರ್ಥಿಗಳಿಗೆ ಒತ್ತಡವನ್ನುಂಟು ಮಾಡುತ್ತದೆ. ನೀವು ಸೋದರ ಸಂಬಂಧಿಗಳೊಂದಿಗೆ ರಜಾದಿನಗಳನ್ನು ಆನಂದಿಸುವಿರಿ. ಪೋಷಕರ ಆರೋಗ್ಯವು ಉತ್ತಮಗೊಳ್ಳುತ್ತದೆ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಮಧ್ಯಾಹ್ನ 1:20 ರಿಂದ 7:25 ರವರೆಗೆ

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ಇಂದು ನಿಧಾನವಾದ ದಿನ ಎಂದು ನಿರೀಕ್ಷಿಸಲಾಗಿದೆ. ದೀರ್ಘಕಾಲದ ಅನಾರೋಗ್ಯವು ನಿಮ್ಮನ್ನು ಆಕ್ರಮಿಸಿಕೊಂಡಿರುವುದರಿಂದ ನೀವು ಕಿರಿಕಿರಿಯನ್ನು ಅನುಭವಿಸುವಿರಿ. ಹೃದಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಜಾಗರೂಕರಾಗಿರಬೇಕು. ಕೆಲಸದ ಮೇಲಿನ ನಿಮ್ಮ ಹೈಪರ್ ಸ್ವಭಾವದ - ಮುಂಭಾಗವು ನಿಮ್ಮ ಸಂಬಂಧವನ್ನು ಕಹಿಯಾಗಿ ಮಾಡುತ್ತದೆ. ನಿಮ್ಮ ಬಜೆಟ್ ಅನ್ನು ಮೇಲ್ವಿಚಾರಣೆ ಮಾಡಬೇಕು. ಇದು ಹಣಕಾಸಿನ ಮುಂಭಾಗದಲ್ಲಿ ಸಾಮಾನ್ಯ ದಿನವಾಗಿರುತ್ತದೆ. ಕಾರ್ಪೊರೇಟ್ ವಲಯದಲ್ಲಿರುವವರು ಕೆಲಸದಿಂದ ವಿಶ್ರಾಂತಿ ಪಡೆಯಲು ಯೋಜಿಸಬಹುದು. ನೀವು ಆಪ್ತ ಸಂಬಂಧಿ / ಸ್ನೇಹಿತರಿಗೆ ಸಾಲ ನೀಡಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಸಮನ್ವಯದ ಕೊರತೆಯನ್ನು ಹೊಂದಬಹುದು. ಅದು ಸಣ್ಣ ವಾದಕ್ಕೆ ಕಾರಣವಾಗುತ್ತದೆ. ಶಕ್ತಿಯುತವಾಗಿರಲು ವ್ಯಾಯಾಮದಿಂದ ದಿನವನ್ನು ಪ್ರಾರಂಭಿಸಿ.

ಅದೃಷ್ಟ ಬಣ್ಣ: ಸ್ಕಾರ್ಲೆಟ್

ಅದೃಷ್ಟ ಸಂಖ್ಯೆ: 29

ಅದೃಷ್ಟ ಸಮಯ: ಬೆಳಿಗ್ಗೆ 7:15 ರಿಂದ 12:45 ರವರೆಗೆ

ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

ನಿಮ್ಮ ನಕ್ಷತ್ರಗಳು ಅನುಕೂಲಕರವಾಗಿರುವುದರಿಂದ ಒಟ್ಟಾರೆ ವಿಷಯಗಳು ಸಕಾರಾತ್ಮಕವಾಗಿರುತ್ತವೆ. ನಿಮ್ಮ ಪ್ರೀತಿಪಾತ್ರರ ಜೊತೆ ನೀವು ಸಮಯವನ್ನು ಆನಂದಿಸುವಿರಿ. ನಿಮ್ಮ ಬಾಸ್ ಬೆಂಬಲಿಸುವ ಕಾರಣ ನೀವು ಕೆಲಸದ ಮೇಲೆ ಯಶಸ್ಸನ್ನು ಸಾಧಿಸುವಿರಿ. ಕೆಲಸಕ್ಕೆ ಸಂಬಂಧಿಸಿದ ಪ್ರಯಾಣವು ನಿಮ್ಮನ್ನು ಆಕ್ರಮಿಸಿಕೊಂಡಿರುತ್ತದೆ. ವೇತನ ಹೆಚ್ಚಳವು ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ನೀವು ಹೆಚ್ಚಿನ ಹೂಡಿಕೆಗಾಗಿ ಯೋಜಿಸಬಹುದು. ಆದಾಯವು ನಿರೀಕ್ಷೆಗಿಂತ ಹೆಚ್ಚಿನದಾಗಿರುವುದರಿಂದ ವ್ಯಾಪಾರಸ್ಥರಿಗೆ ದಿನವು ಲಾಭದಾಯಕವಾಗಿರುತ್ತದೆ. ಹಣಕಾಸಿನ ಲಾಭಗಳು ಇಂದು ಆಶ್ಚರ್ಯಕರವಾಗಿರುತ್ತದೆ. ನೀವು ಪ್ರಬುದ್ಧವಾಗಿ ವಿಷಯಗಳನ್ನು ನಿರ್ವಹಿಸುವ ಕಾರಣ ಕುಟುಂಬದ ಮುಂಭಾಗ ಸುಗಮವಾಗಿರುತ್ತದೆ. ನಿಮ್ಮ ಸಂಗಾತಿ ಸಣ್ಣ ಸಂಗತಿಗಳಿಗೆ ಕೋಪಗೊಳ್ಳಬಹುದು. ಆದರೆ ನೀವು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುತ್ತೀರಿ. ಮಕ್ಕಳು ಶೈಕ್ಷಣಿಕ ರಂಗದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾರೆ. ನಿಮ್ಮ ಜೀವನವನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ನಿಮ್ಮಲ್ಲಿ ಕೆಲವರು ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 26

ಅದೃಷ್ಟ ಸಮಯ: ಬೆಳಿಗ್ಗೆ 5:20 ರಿಂದ ಮಧ್ಯಾಹ್ನ 12:30 ರವರೆಗೆ.

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ಇಂದು ನಿಮಗೆ ಬಿಡುವಿಲ್ಲದ ದಿನವಾಗುವುದು. ನಿಮ್ಮ ಸಂಗಾತಿಯು ನಿಮ್ಮನ್ನು ಅನುಮಾನಿಸುವ ಕಾರಣ ಮನಸ್ಸಿಗೆ ಸಾಕಷ್ಟು ಬೇಸರ ಉಂಟಾಗಬಹುದು. ನಿಮಗಾಗಿ ಕೆಲವು ಗಂಭೀರ ಸಮಸ್ಯೆಗಳನ್ನು ನೀವು ರಚಿಸಿದ್ದೀರಿ. ಅನಾರೋಗ್ಯಕ್ಕೆ ಆರ್ಥಿಕ ಬಿಕ್ಕಟ್ಟು ಪ್ರಮುಖ ಕಾರಣವಾಗಬಹುದು. ನಿಮ್ಮ ಜೀವನದ ಮೇಲೆ ನೀವು ಗಮನ ಹರಿಸಬೇಕಾದರೆ ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ಬಿಟ್ಟು ಬಿಡಿ. ನಿಮ್ಮ ಮೌಲ್ಯಮಾಪನ ವರದಿ ಮತ್ತು ಮುಖ್ಯಸ್ಥರೊಂದಿಗಿನ ನಿಮ್ಮ ಒಡನಾಟವು ಅದ್ಭುತಗಳನ್ನು ಮಾಡುತ್ತದೆ. ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ದಿನ. ಉತ್ತಮ ಫಲಿತಾಂಶಗಳಿಗಾಗಿ ಹಿರಿಯರ ಸಲಹೆಯನ್ನು ಸಹ ಪಡೆಯಿರಿ. ಪೋಷಕರ ಆರೋಗ್ಯವು ಹದಗೆಡಬಹುದು. ಇದು ಕುಟುಂಬಕ್ಕೆ ಆತಂಕದ ಸಂಗತಿಯಾಗುವುದು. ಮಕ್ಕಳು ಶೈಕ್ಷಣಿಕ ರಂಗದಲ್ಲಿ ಆತ್ಮವಿಶ್ವಾಸದಿಂದ ಸ್ವತಂತ್ರರಾಗಿರುತ್ತಾರೆ. ಅಪರಿಚಿತರಿಗೆ ಸಲಹೆ ನೀಡಬೇಡಿ. ಆರೋಗ್ಯವು ಸಾಮಾನ್ಯ ಎಂದು ನಿರೀಕ್ಷಿಸಲಾಗಿದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 41

ಅದೃಷ್ಟ ಸಮಯ: ಬೆಳಿಗ್ಗೆ 10:30 ರಿಂದ 7:15 ರವರೆಗೆ

ಮಕರ: 22 ಡಿಸೆಂಬರ್ - 19 ಜನವರಿ

ಮಕರ: 22 ಡಿಸೆಂಬರ್ - 19 ಜನವರಿ

ಇಂದು ಸ್ವಲ್ಪ ಸಮಯದ ನಂತರ ವಿಷಯಗಳು ಸಾಮಾನ್ಯವಾಗುತ್ತವೆ ಎಂದು ನಿರೀಕ್ಷಿಸಲಾಗಿದೆ. ನಿಮ್ಮ ಹಿಂದಿನ ಹೂಡಿಕೆ ಫಲಪ್ರದವಾಗುವುದರಿಂದ ಹಣಕಾಸಿನ ದೃಷ್ಟಿಯಿಂದ ವಿಷಯಗಳು ಪ್ರಯೋಜನಕಾರಿಯಾಗುತ್ತವೆ. ಹಣಕಾಸಿನ ವಿಷಯದಲ್ಲಿ ನೀವು ಯಾರನ್ನಾದರೂ ಮೆಚ್ಚಿಸುವ ಪ್ರಯತ್ನ ಮಾಡಬಹುದು. ದುಬಾರಿ ಖರೀದಿಗೆ ಉಳಿತಾಯದ ಹಣವನ್ನು ಬಳಸಿಕೊಳ್ಳುವಿರಿ. ವ್ಯವಹಾರದ ಮುಂಭಾಗದಲ್ಲಿ ವಿಷಯಗಳು ಸಾಮಾನ್ಯವಾಗುತ್ತವೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ವಿಶ್ವಾಸದ ಕೊರತೆ ಇರಬಹುದು. ನಿಮ್ಮ ಪ್ರೀತಿಯ ವ್ಯಕ್ತಿಯೊಂದಿಗೆ ದೀರ್ಘ ಪ್ರಯಾಣ ಕೈಗೊಳ್ಳಬಹುದು. ಅದು ನಿಮಗೆ ರೋಮಾಂಚನವನ್ನು ಸೃಷ್ಟಿಸುತ್ತದೆ. ನಿಮ್ಮ ಸಂಗಾತಿ ಕೆಲವು ಪ್ರಮುಖ ವಿಷಯಗಳ ಬೆಂಬಲ ಮತ್ತು ತಿಳುವಳಿಕೆಯನ್ನು ಹೊಂದಿರುತ್ತಾರೆ. ಸಂಜೆಯ ಹೊತ್ತಿಗೆ ನೀವು ಕೆಲವು ಕುಟುಂಬ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಆರೋಗ್ಯವು ಸಾಮಾನ್ಯವಾಗಿರುತ್ತದೆ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 37

ಅದೃಷ್ಟ ಸಮಯ: ಮಧ್ಯಾಹ್ನ 2:25 ರಿಂದ 6:45 ರವರೆಗೆ

ಕುಂಭ: 20 ಜನವರಿ -18 ಫೆಬ್ರವರಿ

ಕುಂಭ: 20 ಜನವರಿ -18 ಫೆಬ್ರವರಿ

ಇಂದು ಒಟ್ಟಾರೆ ಸಂತೋಷದಾಯಕ ದಿನವಾಗಿರುತ್ತದೆ. ಆದರೆ ಕೆಲಸದ ಮೇಲೆ ತೀವ್ರವಾದ ಒತ್ತಡದ ದಿನವಾಗಿರುತ್ತದೆ. ನೀವು ಕಷ್ಟದ ಯೋಜನೆಯನ್ನು ಎದುರಿಸಬೇಕಾಗಬಹುದು. ಏಕತಾನತೆಯ ಕಾರ್ಯವು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಸಾರ್ವಜನಿಕ ವಲಯದಲ್ಲಿರುವವರಿಗೆ ವಿಷಯಗಳು ಖಿನ್ನತೆಯನ್ನುಂಟುಮಾಡುತ್ತವೆ. ನಿಮ್ಮ ಅನುಭವವು ಕೆಲವು ಅಂಶಗಳಲ್ಲಿ ಉಪಯುಕ್ತವಾಗುವುದರಿಂದ ನಿಮ್ಮ ಅಧೀನ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬಹುದು. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಸಾಮಾನ್ಯವಾದ ದಿನ. ಕೆಲವು ಯೋಜನೆಯ ಮೂಲಕ ನೀವು ಹಣವನ್ನು ವ್ಯಯಿಸುವಿರಿ. ವೈಯಕ್ತಿಕ ಸಂಬಂಧದ ದೃಷ್ಟಿಯಿಂದ ಇಂದು ಶಾಂತಿಯುತ ದಿನವಾಗಿರುತ್ತದೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ನೀವು ಒತ್ತಡ ರಹಿತರಾಗುತ್ತೀರಿ. ನವ ದಂಪತಿಗಳು ತಮ್ಮ ಆರಂಭಿಕ ಹಂತವನ್ನು ಆನಂದಿಸುತ್ತಾರೆ. ವಿದ್ಯಾರ್ಥಿಗಳು ಶೈಕ್ಷಣಿಕ ರಂಗದಲ್ಲಿ ತಮ್ಮ ಸಣ್ಣ ತಪ್ಪುಗಳ ಬಗ್ಗೆ ಕೆಲಸ ಮಾಡಬೇಕು. ಅಪೇಕ್ಷಿತ ಫಲಿತಾಂಶಗಳಿಗಾಗಿ ನಿಮ್ಮ ದಿನವನ್ನು ಧ್ಯಾನದೊಂದಿಗೆ ಪ್ರಾರಂಭಿಸಿ.

ಅದೃಷ್ಟ ಬಣ್ಣ: ತುಕ್ಕು

ಅದೃಷ್ಟ ಸಂಖ್ಯೆ: 34

ಅದೃಷ್ಟ ಸಮಯ: ಬೆಳಿಗ್ಗೆ 7:30 ರಿಂದ 12: 30 ರವರೆಗೆ

ಮೀನ: 19 ಫೆಬ್ರವರಿ - 20 ಮಾರ್ಚ್

ಮೀನ: 19 ಫೆಬ್ರವರಿ - 20 ಮಾರ್ಚ್

ಇದು ಶಿಕ್ಷಣ ತಜ್ಞರಿಗೆ ಪ್ರಕಾಶಮಾನವಾದ ದಿನವಾಗಿರುತ್ತದೆ. ಕೆಲಸದ ಮುಂಭಾಗದಲ್ಲಿ ನಿಮ್ಮ ಸಾಮರ್ಥ್ಯವನ್ನು ತೋರಿಸಲು ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ. ಕಾರ್ಪೊರೇಟ್ ವಲಯದಲ್ಲಿರುವವರು ಉದ್ಯೋಗ ಬದಲಾವಣೆಗೆ ಯೋಜಿಸಬಹುದು. ಜನರು ನಿಮ್ಮ ತ್ಯಾಗವನ್ನು ಗೌರವಿಸುವುದರಿಂದ ಸಣ್ಣ ರಾಜಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಸಂಗಾತಿಯೊಂದಿಗೆ ಹೃದಯ ಪೂರ್ವಕವಾಗಿ ಮಾತನಾಡುವಿರಿ. ಅದು ನಿಮಗೆ ನಿರಾಳತೆಯನ್ನು ನೀಡುತ್ತದೆ. ಒಡಹುಟ್ಟಿದವರ ಪೈಪೋಟಿ ಪೋಷಕರಿಗೆ ಕಳವಳಕ್ಕೆ ಕಾರಣವಾಗಬಹುದು. ನಿಮ್ಮ ಪ್ರಿಯತಮೆಯ ಕಡೆಗೆ ನೀವು ಗಮನ ಹರಿಸಬೇಕಾಗುವುದು. ನಿಮ್ಮ ಉತ್ಸಾಹವನ್ನು ಅನುಸರಿಸುವುದರಿಂದ ನೀವು ಸಂಪೂರ್ಣ ಭಾವನೆ ಹೊಂದುತ್ತೀರಿ. ಕುಟುಂಬದೊಂದಿಗೆ ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ರಿಯಲ್ ಎಸ್ಟೇಟ್ ಮತ್ತು ಷೇರು ಮಾರುಕಟ್ಟೆಯಲ್ಲಿರುವವರಿಗೆ ಲಾಭದಾಯಕ ದಿನ. ವ್ಯಾಯಾಮ ಅಥವಾ ಯೋಗದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಆರೋಗ್ಯವು ಸಾಮಾನ್ಯವಾಗಿರುತ್ತದೆ.

ಅದೃಷ್ಟ ಬಣ್ಣ: ಕೇಸರಿ

ಅದೃಷ್ಟ ಸಂಖ್ಯೆ: 24

ಅದೃಷ್ಟ ಸಮಯ: ಬೆಳಿಗ್ಗೆ 4:05 ರಿಂದ ಮಧ್ಯಾಹ್ನ 3:55 ರವರೆಗೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Daily Horoscope 12 Oct 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Saturday, October 12, 2019, 4:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X