For Quick Alerts
ALLOW NOTIFICATIONS  
For Daily Alerts

ಶುಕ್ರವಾರವಾದ ದಿನ ಭವಿಷ್ಯ (6-12-2019)

|

ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ. ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ ಅನುಭವ ಹಾಗೂ ನೆನಪುಗಳು ಮಾತ್ರವೇ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಆ ಅನುಭವಗಳೇ ಜೀವನ ಎಂದರೇನು? ಎನ್ನುವ ಪಾಠವನ್ನು ಹೇಳಿಕೊಡುತ್ತವೆ. ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ಯಾವೆಲ್ಲಾ ಘಟನೆಗಳು ನಡೆಯಬಹುದು? ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

 

ಸಂವತ್ಸರ: ವಿಕಾರಿನಾಮ

ಆಯನ: ದಕ್ಷಿಣಾಯನ

ಋತು: ಹೇಮಂತ

ಮಾಸ: ಮಾರ್ಗಶಿರ

ಪಕ್ಷ: ಶುಕ್ಲ

ತಿಥಿ: ನವಮಿ

ನಕ್ಷತ್ರ: ಪೂರ್ವ ಭದ್ರ

ರಾಹುಕಾಲ: ಮಧ್ಯಾಹ್ನ 1.30ರಿಂದ 2.48ರವರೆಗೆ

ಯಮಗಂಡಕಾಲ: ಮಧ್ಯಾಹ್ನ 02.54ರಿಂದ ಸಂಜೆ 4.18ರವರೆಗೆ

ಗುಳಿಕಕಾಲ: ಬೆಳಿಗ್ಗೆ07.56ರಿಂದ 9.20ರವರೆಗೆ

ದುರ್ಮುಹೂರ್ತ: ಬೆಳಿಗ್ಗೆ 8.47ರಿಂದ 9.31ರವರೆಗೆ ಮತ್ತು ಮಧ್ಯಾಹ್ನ 12.29ರಿಂದ 01.14ರವರೆಗೆ

ಸೂರ್ಯೋದಯ: ಬೆಳಿಗ್ಗೆ 6.33

ಸೂರ್ಯಾಸ್ತ: ಸಂಜೆ 5.41

1. ಮೇಷ ರಾಶಿ

1. ಮೇಷ ರಾಶಿ

ಇಂದು ನಿಮಗೆ ಅದ್ಭುತ ದಿನವಾಗಿರುತ್ತದೆ. ವೈಯಕ್ತಿಕ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಬಹಳ ಸಮಯದಿಂದ ನೀವು ಬಯಸುತ್ತಿದ್ದ ಕಾರ್ಯ ಇಂದು ನೆರವೇರಲಿದೆ. ನೀವಿಂದು ಕುಟುಂಬದವರೊಂದಿಗೆ ಖುಷಿ-ಖುಷಿಯಾಗಿ ಕಳೆಯುತ್ತೀರಿ. ನೀವು ನಿಮ್ಮ ಕೆಲಸದ ಕಡೆ ಶ್ರದ್ಧೆ ನೀಡಿದರೆ ಉತ್ತಮ ಪ್ರತಿಫಲ ದೊರೆಯಲಿದೆ. ನೀವು ವ್ಯಾಪಾರಿಗಳಾಗಿದ್ದರೆ ನಿಮ್ಮ ಪ್ರತಿಸ್ಪರ್ಧಿ ಹಾಗೂ ವಿರೋಧಿಗಳನ್ನು ಮೀರಿಸುತ್ತೀರಿ. ನಿಮ್ಮ ಕಾರ್ಯಕ್ಕೆ ಸಫಲತೆ ದೊರೆಯಲಿದೆ. ಸ್ನೇಹಿತರ ದೆಸೆಯಿಂದಾಗಿ ನಿಮಗೆ ಆರ್ಥಿಕ ಲಾಭ ದೊರೆಯಲಿದೆ. ನಿಮ್ಮ ಪ್ರೀತಿ ಜೀವನದ ಬಗ್ಗೆ ಒಂದು ನಿರ್ಧಾರವನ್ನು ತೆಗೆದುಕೊಳ್ಳುವಿರಿ, ನೀವಿಂದು ನಿರ್ಧಾರವನ್ನು ತುಂಬಾ ಯೋಚಿಸಿ ತೆಗೆದುಕೊಂಡರೆ ಜಯ ನಿಮ್ಮದಾಗುವುದು. ಇಂದು ನೀವು ಯಾತ್ರೆ ಮಾಡುವ ಸಾಧ್ಯತೆ ಇದೆ, ಆದರೆ ಪ್ರಯಾಣದ ವೇಳೆ ಸ್ವಲ್ಪ ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 34 ಅದೃಷ್ಟ

ಒಳ್ಳೆಯ ಸಮಯ: ಬೆಳಿಗ್ಗೆ 9.20 ರಿಂದ1:30ರವರೆಗೆ

2. ವೃಷಭ ರಾಶಿ
 

2. ವೃಷಭ ರಾಶಿ

ಕಾರ್ಯಕ್ಷೇತ್ರದಲ್ಲಿ ಸ್ಥಿತಿ ಅನುಕೂಲಕರವಾಗಿದೆ. ಇವತ್ತು ನೀವು ಹೆಚ್ಚು ಗಮನಕೊಟ್ಟು ಕೆಲಸ ಮಾಡಿ. ತುಂಬಾ ದಿನದಿಂದ ಬಾಕಿ ಉಳಿದಿರುವ ಕೆಲಸವು ಇಂದು ಪೂರ್ಣವಾಗುವುದು. ಕೆಲ ದಿನಗಳಿಂದ ಕೆಲಸದ ಒತ್ತಡ ಅಧಿಕವಿದ್ದ ಕಾರಣ ನಿಮಗಾಗಿ ಹೆಚ್ಚಿನ ಸಮಯ ಸಿಕ್ಕಿರಲಿಲ್ಲ. ಇಂದು ನೀವು ಹೆಚ್ಚು ಶ್ರದ್ಧೆ ಇಟ್ಟು ಕೆಲಸ ಮಾಡಿದರೆ ಅದು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ನೀವಿಂದು ಕುಟುಂಬ ಸಮೇತರಾಗಿ ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವಿರಿ. ಇದಕ್ಕಾಗಿಯೇ ನೀವು ಬೆಳಗ್ಗಿಯಿಂದ ಸಿದ್ಧತೆಯಲ್ಲಿ ತೊಡಗುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ನಿಮಗಿಂದು ಅಮೂಲ್ಯವಾದ ವಸ್ತು ದೊರೆಯಲಿದೆ. ವೈವಾಹಿಕ ಬದುಕಿನಲ್ಲಿ ಯಾವುದೇ ಕಲಹ ಉಂಟಾಗದಿರಲು ನೀವು ಯೋಚಿಸಿ ಮಾತುಗಳನ್ನು ಪ್ರಯೋಗಿಸಿ. ನೀವು ಕೆಟ್ಟ ಪದಗಳನ್ನು ಬಳಸಿದರೆ ಅದು ನಿಮ್ಮ ಸಂಗಾತಿಯ ಭಾವನೆಗಳಿಗೆ ತುಂಬಾ ನೋವುಂಟಾಗುವುದು. ಮಾನಸಿಕ ಆರೋಗ್ಯ ಕಾಪಾಡಿಕೊಂಡರೆ ಆರೋಗ್ಯ ಸ್ಥಿತಿ ಉತ್ತಮವಾಗಿರುವುದು.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 8

ಅದೃಷ್ಟ ಸಮಯ: ಮಧ್ಯಾಹ್ನ 1.5ರಿಂದ 5:00 ರವರೆಗೆ

3. ಮಿಥುನ ರಾಶಿ

3. ಮಿಥುನ ರಾಶಿ

ಗೃಹಸ್ಥ ಜೀವನ ಸುಖಕರವಾಗಿದೆ, ನಿಮ್ಮ ಪ್ರೀತಿ ಪಾತ್ರರೊಂದಿಗಿನ ಸಂಬಂಧಗಳು ಮತ್ತಷ್ಟು ಉತ್ತಮವಾಗಲಿದೆ. ನಿಮಗಿಂದು ಶುಭ ಸುದ್ದಿ ದೊರೆಯಲಿದ್ದು ಅದು ನಿಮ್ಮ ಮನೆಯ ವಾತಾವರಣವನ್ನು ಮತ್ತಷ್ಟು ಖುಷಿಯಾಗಿಸುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಪ್ರೀತಿ, ಅನುಬಂಧ ಮತ್ತಷ್ಟು ಗಟ್ಟಿಯಾಗುವುದು. ಮಕ್ಕಳ ಕುರಿತ ನಿಮ್ಮ ಚಿಂತೆಗಳು ದೂರವಾಗುವುದು. ಮಕ್ಕಳು ನಿಮ್ಮನ್ನು ಹಾಗೂ ನಿಮ್ಮ ಮಾತುಗಳನ್ನು ಗೌರವಿಸುವಂತಾಗುವುದು. ಕೆಲಸದ ಜಾಗದಲ್ಲಿಯೂ ನೀವು ಉತ್ತಮವಾಗಿ ಕೆಲಸ ಮಾಡುತ್ತೀರಿ, ಇದರಿಂದ ನಿಮ್ಮ ಮೇಲಿನ ಅಧಿಕಾರಿಗಳಿಗೆ ನಿಮ್ಮ ಬಗ್ಗೆ ಮೆಚ್ಚುಗೆ ಉಂಟಾಗುತ್ತದೆ. ನೀವು ವ್ಯವಹಾರಸ್ಥರಾಗಿದ್ದರೆ ಬಯಸಿದ್ದಕ್ಕಿಂತಲೂ ಹೆಚ್ಚುಲಾಭ ಗಳಿಸುವಿರಿ. ನೀವಿಂದು ಖುಷಿ-ಖುಷಿಯಾಗಿರುವಿರಿ ಹಾಗೂ ಆರೋಗ್ಯ ಸ್ಥಿತಿಯೂ ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ:27

ಸಮಯ: ಬೆಳಿಗ್ಗೆ 6 ರಿಂದ ರಾತ್ರಿ 9 ಗಂಟೆವರೆಗೆ

4. ಕರ್ಕ

4. ಕರ್ಕ

ಯಾವುದೇ ಹೊಸ ಕಾರ್ಯಕ್ಕೆ ಈ ದಿನ ಶುಭವಲ್ಲ. ಉದ್ಯೋಗಿಗಳು ಈ ದಿನ ತುಂಬಾ ಎಚ್ಚರವಹಿಸಬೇಕು, ಏಕೆಂದರೆ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಅತೃಪ್ತಿ ಹೊಂದಬಹುದು. ಆದರೆ ನೀವು ನಿಮ್ಮ ಕೆಲಸವನ್ನು ಉತ್ತಮವಾಗಿ ಮಾಡಿ ಅವರ ಅತೃಪ್ತಿ, ನಿಮ್ಮ ಕೆಲಸದ ಬಗ್ಗೆ ಅವರಿಗಿದ್ದ ಭಾವನೆಗಳನ್ನು ದೂರಮಾಡಬಹುದು. ವ್ಯಾಪಾರಸ್ಥರಿಗೆ ಈ ದಿನ ಸಹಜ ದಿನವಾಗಿದೆ. ಈ ದಿನ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಒಳ್ಳೆಯದು. ನೀವು ಬದಲಾವಣೆ ಬಯಸುತ್ತಿದ್ದರೆ ಅದಕ್ಕೆ ತಕ್ಕುದಾದ ಸಮಯವಲ್ಲ. ನೀವು ಮದುವೆಯಾಗದಿದ್ದರೆ ಮದುವೆ ಪ್ರಪೋಸಲ್ ಬರುವ ಸಾಧ್ಯತೆ ಇದೆ. ನಿಮ್ಮ ಪೋಷಕರ ಆರೋಗ್ಯ ಉತ್ತಮವಾಗಿರಲಿದೆ.

ಅದೃಷ್ಟ ಬಣ್ಣ:ಕಿತ್ತಳೆ

ಅದೃಷ್ಟ ಸಂಖ್ಯೆ: 9

ಅದೃಷ್ಟ ಸಮಯ: ಮಧ್ಯಾಹ್ನ 12.50 ರಿಂದ ರಾತ್ರಿ 10.30ವರೆಗೆ

5. ಸಿಂಹ ರಾಶಿ

5. ಸಿಂಹ ರಾಶಿ

ಕೆಲವು ಮಾನಸಿಕ ಒತ್ತಡದಿಂದಾಗಿ ಈ ದಿನ ಅಷ್ಟಾಗಿ ಲವಲವಿಕಯಿಂದ ಕೂಡಿರುವುದಿಲ್ಲ. ನೀವು ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳ್ಳೆಯದು. ಕೆಲವು ಪ್ರಮುಖ ಕೆಲಸವನ್ನು ಮುಗಿಸಲು ಈ ದಿನ ಹೆಚ್ಚಿನ ಪರಿಸ್ರಮ ಹಾಕಬೇಕಾಗುತ್ತದೆ. ನಿಮ್ಮ ಕೆಲಸ ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದ್ದು ಆಗಿದ್ದರೆ ಉತ್ತಮ ಲಾಭ ಗಳಿಸುವವಿರಿ. ಕುಟುಂಬದಲ್ಲಿ ಸ್ವಲ್ಪ ಏರಳಿತ ಉಂಟಾಗಬಹುದು. ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ದೊಡ್ಡ ವಿವಾದ ಬರಬಹುದು. ನೀವು ಸಮಧಾನ ಚಿತ್ತರಾಗಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಿಮ್ಮ ಸಂಗಾತಿಗಾಗಿ ಹೆಚ್ಚಿನ ಸಮಯ ಮೀಸಲಿಡಿ.

ಅದೃಷ್ಟ ಬಣ್ಣ: ಕಡು ನೀಲಿ

ಅದೃಷ್ಟ ಸಂಖ್ಯೆ: 19

ಅದೃಷ್ಟ ಸಮಯ: ಸಂಜೆ 5.20ರಿಂದ ರಾತ್ರಿ 8.20

6. ಕನ್ಯಾ

6. ಕನ್ಯಾ

ಇವತ್ತು ಹಣಸಿಕಾಸಿನ ತೊಂದರೆ ಎದುರಾಗುವ ಸಾಧ್ಯತೆ ಇದೆ. ಕೆಲವೊಮದು ಮಾನಸಿಕ ಒತ್ತಡದಿಂದಾಗಿ ಕೆಲಸದ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ನಿಮ್ಮ ಅನೇಕ ಕೆಲಸಗಳು ಇವತ್ತು ಅಪೂರ್ಣವಾಗಬಹುದು. ನೀವು ಉದಾಸೀನದಿಂದ ಕೆಲಸ ಮಾಡುತ್ತಿದ್ದರೆ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುವಿರಿ. ಇದರಿಂದ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೆ. ಅನಗ್ಯತ ಜಗಳದಲ್ಲಿ, ಮಾತುಕತೆಯಲ್ಲಿ ತೊಡಗಿ ನಿಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡಬೇಡಿ. ನೀವೇ ಏನೇ ಹೇಳಿದರು ದೊಡ್ಡ ಸಮಸ್ಯೆಯಾಗಬಹುದು, ಆದ್ದರಿಂದ ಯೋಚಿಸಿ ಮಾತನಾಡಿ. ನಿಮ್ಮ ಪ್ರಣಯ ಬದುಕು ಉತ್ತಮವಾಗಿರುವುದು. ನಿಮ್ಮ ಕಷ್ಟದ ಸಂದರ್ಭದಲ್ಲಿ ಸಂಗಾತಿಯ ಬೆಂಬಲ ಸಿಗುವುದು. ನೀವು ನಿಮ್ಮ ನೋವು, ಖುಷಿ ಎರಡನ್ನೂ ಅವರೊಂದಿಗೆ ಹಂಚಿಕೊಳ್ಳುವಿರಿ.

ಅದೃಷ್ಟ ಬಣ್ಣ: ಪಿಂಕ್

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಬೆಳಗ್ಗೆ 8 ಗಂಟೆಯಿಂದ ಸಂಜೆ 3 ಗಂಟೆವರೆಗೆ

7. ತುಲಾ ರಾಶಿ

7. ತುಲಾ ರಾಶಿ

ನಿಮ್ಮ ಸಾಮಾಜಿಕ ಬದುಕಿನ ಕಡೆಗೆ ಹೆಚ್ಚಿನ ಗಮನ ಕೊಡಿ. ಸಮಾಜದ ಪ್ರಮುಖ ಗಣ್ಯ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಅವರ ಮುಂದೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಿ. ನಿಮ್ಮ ಸಂಬಂಧ ಬಲಪಡಿಸುವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಸಂಗಾತಿಯ ಪ್ರೀತಿ ಹಾಗೂ ಬೆಂಬಲ ನಿಮಗಿದ್ದು, ಈ ದಿನ ನೀವಿಬ್ಬರು ರೊಮ್ಯಾಂಟಿಕ್‌ ಆಗಿ ಕಳೆಯುವಿರಿ. ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಸ್ವಲ್ಪ ಅಧಿಕ ಹಣ ಖರ್ಚಾಗುವುದು. ಕೆಲಸದ ಜಾಗದಲ್ಲಿ ಹೆಚ್ಚು ಪರಿಶ್ರಮದಿಂದ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 3

ಅದೃಷ್ಟ ಸಮಯ: ಸಂಜೆ 6.45ರಿಂದ ರಾತ್ರಿ 11.5ರವರೆಗೆ

8. ವೃಶ್ಚಿಕ ರಾಶಿ

8. ವೃಶ್ಚಿಕ ರಾಶಿ

ನಿಮ್ಮ ಯೋಜನೆಗಳಿಗೆ ಒಂದು ರೂಪು ನೀಡಲು ಈ ದಿನ ಶುಭವಾಗಿದೆ. ಇನ್ನು ಯಾವುದಾದರೂ ಹೊಸ ಕೆಲಸದಲ್ಲಿ ತೊಡಗಿಸಿಕೊಳ್ಳಲು ಕೂಡ ಈ ದಿನ ಶುಭವಾಗಿದೆ. ನಿಮ್ಮ ವರ್ಗಾವಣೆ ಅಥವಾ ಬಡ್ತಿಗೆ ಸಂಬಂಧಪಟ್ಟಂತೆ ಶುಭ ಸುದ್ದಿ ದೊರೆಯಲಿದೆ. ವ್ಯಾಪಾರಸ್ಥರಿಗೆ ಕೂಡ ಈ ದಿನ ಲಾಭದಾಯಕವಾಗಿದೆ. ಪೂರ್ವಜರ ಆಸ್ಥಿಯಿಂದ ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಹೊಸ ಗಾಡಿ ಕೊಳ್ಳಬಯಸುವುದಾದರೆ ಶೋರೂಂಗೆ ಹೋಗಲು ಒಳ್ಳೆಯ ದಿನವಾಗಿದೆ. ನಿಮ್ಮ ಸಂಗಾತಿಯೊಂದಿಗೆ ಖುಷಿ-ಖುಷಿಯಾಗಿರುವಿರಿ. ಇನ್ನು ಆರೋಗ್ಯದ ದೃಷ್ಟಿಯಿಂದಲೂ ಈ ದಿನ ಮಂಗಳಕರವಾಗಿದೆ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಬೆಳಗ್ಗೆ 4.15ರಿಂದ ರಾತ್ರಿ 12.20ರವರೆಗೆ

9. ಧನು ರಾಶಿ

9. ಧನು ರಾಶಿ

ಈ ದಿನ ಯಾವುದೇ ರೀತಿಯ ವಾದಗಳಿಂದ ದೂರವಿರುವುದು ಒಳ್ಳೆಯದು, ಅದರ ಬದಲಿಗೆ ನೀವು ಮಾಡ ಬೇಕಾದ ಕೆಲಸದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಲೆಯದು. ನೆರೆಹೊರೆಯವರ ಹತ್ತಿರ ತರ್ಕ ಮಾಡಲು ಹೋಗಲೇಬೇಡಿ. ಕೆಲಸದ ಜಾಗದಲ್ಲಿ ನಿಮ್ಮ ಸಹದ್ಯೋಗಿಗಳು ನಿಮ್ಮ ಸಮಸ್ಯೆ ಪರಿಹರಿಸಲು ಸಹಾಯ ಮಾಡುತ್ತಾರೆ, ಅವರಿಗೆ ಧನ್ಯವಾದ ಹೇಳಲು ಮರೆಯಬೇಡಿ. ಹಣಕಾಸಿನ ದೃಷ್ಟಿಯಿಂದಲೂ ಈ ದಿನ ಶುಭವಾಗಿದೆ. ಖರ್ಚು ಸ್ವಲ್ಪ ಹೆಚ್ಚಾದಾಗ ನೀವು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವಿರಿ. ವೈವಾಹಿಕ ಜೀವನ ಚೆನ್ನಾಗಿದೆ, ಸಂಗಾತಿಯೊಂದಿಗೆ ಚೆನ್ನಾಗಿ ಇರುವಿರಿ, ನಿಮ್ಮ ಪ್ರೀತಿಪಾತ್ರರ ಸಲಹೆಯಿಂದ ಒಳಿತಾಗಲಿದೆ. ಪ್ರಣಯ ಬದುಕಿನಲ್ಲಿ ಕೋಪವನ್ನು ನಿಯಂತ್ರಿಸಿದರೆ ಒಳ್ಳೆಯದು.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 31

ಅದೃಷ್ಟ ಸಮಯ: ಬೆಳಗ್ಗೆ 9.15ರಿಂದ ಸಂಜೆ 5.50ರವರೆಗೆ

10. ಮಕರ ರಾಶಿ

10. ಮಕರ ರಾಶಿ

ಯಾವುದಕ್ಕೂ ದ್ವೇಷ ಸಾಧಿಸಲು ಹೋಗಬೇಡಿ, ಇದರಿಂದ ನಿಮಗೇ ನೋವುಂಟಾಗುವುದು. ಮನೆಯ ವಾತಾವರಣ ಶಾಂತಿಯಿಂದ ಕೂಡಿರುತ್ತದೆ. ಕುಟುಂಬದ ಜತೆಗೆ ಚೆನ್ನಾಗಿ ಸಮಯ ಕಲೆಯುವಿರಿ. ನಿಮ್ಮ ಪೋಷಕರ ಪ್ರೀತಿ ಹಾಗೂ ಆಶೀರ್ವಾದದಿಂದ ಖುಷಿಯಾಗುವಿರಿ. ಸಂಗಾತಿಯ ಮೂಡ್‌ ಅಷ್ಟಾಗಿ ಚೆನ್ನಾಗಿರುವುದಿಲ್ಲ, ಆದ್ದರಿಂದ ವಾದ ಮಾಡುವ ಬದಲು ಮೌನವಾಗಿರುವುದೇ ಒಳ್ಳೆಯದು. ನಿಮ್ಮ ಸಂಗಾತಿಯೊಂದಿಗೆ ಇಷ್ಟದ ರೆಸ್ಟೋರೆಂಟ್‌ಗೆ ಹೋಗಿ ಊಟ ಮಾಡಿ, ವೃತ್ತಿ ಜೀವನ ದೃಷ್ಟಿಯಿಂದಲೂ ಈ ದಿನ ಸಹಜವಾಗಿರಲಿದೆ. ಹಣಕಾಸಿನ ಸ್ಥಿತಿಯೂ ತೃಪ್ತಿದಾಯಕವಾಗಿರುವುದು.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಮಧ್ಯಾಹ್ನ 12.45ರಿಂದ ಸಂಜೆ 5. 20ರವರೆಗೆ

11. ಕುಂಭ ರಾಶಿ

11. ಕುಂಭ ರಾಶಿ

ಕೆಲಸದ ಜಾಗದಲ್ಲಿ ಯಶಸ್ಸು ದೊರೆಯಲು ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡು ಮಾಡಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ತೊಂದರೆಯನ್ನು ತರಬಹುದು, ಆದ್ದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿ. ನಿಮ್ಮ ಆತ್ಮೀಯರಿಂದ ಹನಕಾಸಿನ ಬೆಂಬಲ ಕೂಡ ದೊರೆಯಲಿದೆ. ವೈವಾಹಿಕ ಜೀವನ ಚೆನ್ನಾಗಿರುವುದು. ನಿಮ್ಮ ಪ್ರೇಮಿ ಜತೆಗಿನ ಸಮಬಂಧ ಮತ್ತಷ್ಟು ಗಟ್ಟಿಯಾಗುವುದು. ನಿಮ್ಮ ಒಡಹುಟ್ಟಿದವರ ಜತೆ ಅಭಿಪ್ರಾಯ ವ್ಯತ್ಯಾಸ ಉಂಟಾಗಿ ಅದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 21

ಅದೃಷ್ಟ ಸಮಯ: ಬೆಳಗ್ಗೆ 7.15ರಿಂದ ಮಧ್ಯಾಹ್ನ 2.5ರವರೆಗೆ

12. ಮೀನ ರಾಶಿ

12. ಮೀನ ರಾಶಿ

ಕೌಟಂಬಿಕ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ನಿಮ್ಮ ಪೋಷಕರು ನಿಮ್ಮ ಮೇಲೆ ಯಾವುದೋ ಕಾರಣಕ್ಕೆ ಒತ್ತಡ ಹಾಕುವವರು. ಅವರು ಮದುಗೆ ಒತ್ತಾಯ ಮಾಡಿದಾಗ ಅವರ ವರ್ತನೆ ನಿಮಗೇ ವಿಚಿತ್ರ ಅನಿಸಬಹುದು. ಈ ಸಂದರ್ಭದಲ್ಲಿ ನಿಮ್ಮ ಅನಿಸಿಕೆಗಳನ್ನು ಹೇಳಿ, ನಿರ್ಧಾರ ಬೇಗನೆ ತೆಗೆದುಕೊಳ್ಳಬೇಡಿ ಎಂದು ತಿಳಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಈ ದಿನ ಶಾಪಿಂಗ್ ಸ್ವಲ್ಪ ಅದಿಕವೇ ಮಾಡುವಿರಿ. ಕೆಲಸದ ಜಾಗದಲ್ಲೂ ಕೆಲಸದ ಒತ್ತಡ ಅಧಿಕವಿರುವುದಿಲ್ಲ, ಆದ್ದರಿಂದ ಸ್ನೇಹಿತರ ಜತೆ ಔಟಿಂಗ್ ಹೋಗಲು ಸಮಯ ಸಿಗಬಹುದು. ಆರೋಗ್ಯ ಸ್ಥಿತಿಯೂ ಉತ್ತಮವಾಗಿರಲಿದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆಯವರೆಗೆ

English summary

Daily Horoscope 06 Dec 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Friday, December 6, 2019, 4:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more