For Quick Alerts
ALLOW NOTIFICATIONS  
For Daily Alerts

ನಿಮ್ಮ ರಾಶಿಚಕ್ರದ ಪ್ರಕಾರ ಯಾವ ಪ್ರಾಣಿ ಸಾಕುವುದು ಸೂಕ್ತ

|

ಇತ್ತೀಚಿನ ದಿನಗಳಲ್ಲಿ ಮನೆಗೊಂದು ಸಾಕುಪ್ರಾಣಿ ಅಥವಾ ಪಕ್ಷಿಗಳನ್ನು ಸಾಕುವುದು ಸಾಮಾನ್ಯವಾಗಿದೆ. ಅವುಗಳು ಸಹ ನಮ್ಮಲ್ಲಿ ಒಂದಾಗಿ, ಮನೆಯ ಸದಸ್ಯರಂತೆ ಪ್ರಮುಖ ಸ್ಥಾನನ್ನು ಪಡೆದಿದೆ ಎಂದರೆ ತಪ್ಪಾಗಲಾರದು. ಹಾಗಿದ್ದರೆ ನೀವೂ ಸಹ ಪ್ರಾಣಿ ಅಥವಾ ಪಕ್ಷಿಯನ್ನು ಪಡೆಯಬೇಕು, ಅದನ್ನು ಚೆನ್ನಾಗಿ ಸಾಕಬೇಕು ಎಂಬ ಅಲೋಚನೆಯಲ್ಲಿದ್ದೀರಾ. ಆದರೆ ಯಾವ ಪ್ರಾಣಿಗಳ ಆಯ್ಕೆ ಸರಿ, ನಮ್ಮ ಮನೆಗೆ ಅಥವಾ ನಿಮ್ಮ ಮನಸ್ಥಿತಿಗೆ ಯಾವುದು ಹೊಂದಿಕೊಳ್ಳುತ್ತದೆ ಎಂಬ ಗೊಂದಲವೇ ಚಿಂತೆ ಬೇಡ, ನಾವಿಲ್ಲಿ ನಿಮಗೆ ಸಲಹೆ ನೀಡುತ್ತೇವೆ.

ನಿಮಗೆ ಗೊತ್ತೆ ಜ್ಯೋತಿಶಾಸ್ತ್ರದ ಪ್ರಕಾರ ನಿಮ್ಮ ರಾಶಿಚಕ್ರದ ಸಹ ನಿಮ್ಮ ಜೀವನಶೈಲಿ, ಮನಸ್ಥಿತಿ ಹಾಗೂ ನಿಮ್ಮ ಮನೆಸ್ಥಿತಿಗೆ ಹೊಂದಿಕೊಳ್ಳುವಂಥ ಸಾಕುಪ್ರಾಣಿ ಯಾವುದು ಎಂದು ತಿಳಿಸುತ್ತದೆ. ಅಲ್ಲದೇ, ನೀವು ಯಾವ ರೀತಿಯ ಪ್ರಾಣಿಗಳೊಂದಿಗೆ ಉತ್ತಮವಾಗಿ ಸಂವಹನ ನಡೆಸುತ್ತೀರಿ, ಅದಕ್ಕೆ ಎಷ್ಟು ಗಮನಹರಿಸುತ್ತೀರಿ, ಅದರ ಬಯಕೆಗಳು ಮತ್ತು ಸೂಚಿಸುತ್ತದೆ.

ನಿಮ್ಮ ರಾಶಿಚಕ್ರದ ಆಧಾರದ ಮೇಲೆ ಯಾವ ಸಾಕುಪ್ರಾಣಿ ಅಥವಾ ಪಕ್ಷಿ ಕೂಡಿಬರುತ್ತದೆ ಎಂಬುದರ ಕುರಿತು ಕೆಲವು ಆಸಕ್ತಿಕರ ಸಂಗತಿಗಳು ತಿಳಿಯಲು ಮುಂದೆ ಲೇಖನ ಓದಿ.

ಮೇಷ: ನಾಯಿ

ಮೇಷ: ನಾಯಿ

ಮೇಷ ರಾಶಿಯು ಇತರೆ ಎಲ್ಲಾ ರಾಶಿಗಳಿಗಿಂತ ಹೆಚ್ಚು ದಿಟ್ಟ ವ್ಯಕ್ತಿತ್ವದ ಹಾಗೂ ಗಾಢ ಪ್ರೇಮವನ್ನು ತೋರುವ ರಾಶಿಯಾಗಿದೆ. ಯಾವಾಗಲೂ ಹೆಚ್ಚು ಚೈತನ್ಯ ಇರುವ ಎಲ್ಲು ನಿಲ್ಲದೆ ಚಲಿಸುತ್ತಲೇ ಇರುತ್ತಾರೆ. ಎಂದಿಗೂ ಉತ್ತಮವಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ ಮತ್ತು ಸದಾ ನಗು-ನಗುತ್ತಾ, ಸುಮುತ್ತಲ ವಾತಾವರಣವನ್ನು ಲವಲವಿಕೆಯಿಂದ ಇರಿಸಿಕೊಳ್ಳುವ ಸಾಮಾಜಿಕ ವ್ಯಕ್ತಿಗಳಾಗಿರುತ್ತಾರೆ. ಆದ್ದರಿಂದ ಮೇಷರಾಶಿಯವರಿಗೆ ಸಾಕಷ್ಟು ಚೈತನ್ಯಶೀಲ ನಾಯಿಯೊಂದು ಇವರಿಗೆ ಅತ್ಯುತ್ತಮ ಜೋಡಿಯಾಗಿರುತ್ತದೆ. ಏಕೆಂದರೆ ನಾಯಿಗಳಿಗೆ ವಿಶೇಷ ಗಮನಹರಿಸಬೇಕು, ಇದನ್ನು ಸಾಧ್ಯವಾಗಿಸುವುದು ಮೇಷ ರಾಶಿಯವರಿಂದ ಮಾತ್ರ ಸಾಧ್ಯ.

ವೃಷಭ ರಾಶಿ: ಹ್ಯಾಮಸ್ಟರ್

ವೃಷಭ ರಾಶಿ: ಹ್ಯಾಮಸ್ಟರ್

ವೃಷಭ ರಾಶಿಯವರು ತುಂಬಾ ಸೌಮ್ಯ ಹಾಗೂ ಮೃದು ಸ್ವಭಾವದವರಾಗಿದ್ದು. ಅಲ್ಲದೇ ಇವರು ಇತರರ ಅವಲಂಬಿತರಾಗಿದ್ದು ಸೋಮಾರಿಯೂ ಹೌದು. ತಮಾಷೆ ಮಾಡಲು ವಿನೋದಮಯವಾದ ಸಮಯವನ್ನು ಕಳೆಯಲು ಬಿಳಿ ಇಲಿ ಅತ್ಯುತ್ತಮ ಪ್ರಾಣಿ. ಇದನ್ನು ಆಡಿಸಲು ಹೆಚ್ಚು ಶಕ್ತಿಯ ಅಗತ್ಯತೆಯೂ ಇಲ್ಲ. ಅಲ್ಲದೇ ಕಡಿಮೆ ಕಡಿಮೆ ವೆಚ್ಚದಲ್ಲೇ ನಿರ್ವಹಣೆ ಮಾಡಬಹುದಾದ ಮುದ್ದು ಪ್ರಾಣಿಯಾಗಿದೆ. ಇದೂ ಸಹ ನಿಮ್ಮೊಂದಿಗೆ ಚೆನ್ನಾಗಿ ಆಡಲು, ಮೋಜಿನ ಸಮಯ ಕಳಡಯಲು ಇಷ್ಟಪಡುತ್ತದೆ.

ಮಿಥುನ ರಾಶಿ: ಗಿಳಿ

ಮಿಥುನ ರಾಶಿ: ಗಿಳಿ

ಮಿಥುನ ರಾಶಿಯವರು ಪ್ರಾಣಿ ಪ್ರಿಯರು, ಇವರು ಯಾವಗಲೂ ಪ್ರಾಣಿಗಳ ಜತೆ ನಿರಣತರವಾಗಿ ಮಾತನಾಡುತ್ತಾ, ಅದರ ಬಗ್ಗೆ ಯೋಚಿಸುತ್ತಾ ಅದನ್ನು ಹೆಚ್ಚು ಚಟುವಟಿಕೆಯಿಂದ ಇಡಲು ಪ್ರಯತ್ನಿಸುತ್ತಾರೆ. ಆದ್ದರಿಂದ ಇವರಿಗೆ ಇದೇ ರೀತಿ ಪ್ರತಿಕ್ರಿಯೆ ನೀಡುವಂಥ ಹೇಳುಮಾಡಿಸಿದ ಸಾಕುಪಕ್ಷಿ ಗಿಳಿ. ಗಿಳಿಬಹಳ ಬುದ್ಧಿವಂತ ಪಕ್ಷಿ ಹಾಗೂ ಎಲ್ಲರ ಚಿತ್ತವನ್ನು, ಆಸಕ್ತಿಯನ್ನು ತನ್ನತ್ತ ಸೆಳೆಯುತ್ತದೆ, ಅಲ್ಲದೇ ನಿಮ್ಮೊಂದಿಗೆ ಮಾತನಾಡುವ ಚಾತುರ್ಯವನ್ನು ಸಹ ಹೊಂದಿದೆ.

ಕರ್ಕ ರಾಶಿ: ಸಾಕುವ ಮುಳ್ಳುಹಂದಿ

ಕರ್ಕ ರಾಶಿ: ಸಾಕುವ ಮುಳ್ಳುಹಂದಿ

ಕರ್ಕ ರಾಶಿಯವರು ಸ್ವಲ್ಪ ಮೂಡಿ ಮತ್ತು ಭಾವನಾತ್ಮಕ ಸ್ವಭಾವದವರು. ಸಾಕಷ್ಟು ಶಕ್ತಿಶಾಲಿ ಸಾಮರ್ಥ್ಯವುಳ್ಳ ಪ್ರಾಣಿ ಹೊಂದಿಕೆಯಾಗುವುದಿಲ್ಲ. ಸಣ್ಣದಾದ ಮುದ್ದಾಡಲು ಹಿತ ಎನಿಸುವ ಪ್ರಾಣಿಯನ್ನು ಇಷ್ಟಪಡುತ್ತೀರಿ. ನಿಮ್ಮ ಪ್ರೀತಿ ಮತ್ತು ಹೆಚ್ಚಿನ ಗಮನವನ್ನು ಕೇಳುವ ಮುದ್ದಾದ ಸಾಕುವ ಮರಿ ಮುಳ್ಳುಹಂದಿ ಪ್ರಾಣಿ ನಿಮಗೆ ಹೆಚ್ಚು ಇಷ್ಟವಾಗುತ್ತದೆ. ಮೊದಲಿಗೆ ಕೇಳಿದಾಗ ವಿಚಿತ್ರ ಎನಿಸಿದರೂ ಮರಿ ಮುಳ್ಳುಹಂದಿ ನಿಮಗೆ ಹೆಚ್ಚು ಇಷ್ಟವಾಗುವ ಪ್ರಾಣಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಿಂಹ ರಾಶಿ: ಬಂಗಾಳ ಬೆಕ್ಕು

ಸಿಂಹ ರಾಶಿ: ಬಂಗಾಳ ಬೆಕ್ಕು

ಸಿಂಹ ರಾಶಿಯವರು ಹೆಚ್ಚಾಗಿ ತಮ್ಮ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ತನ್ನ ಸುತ್ತಲು ಸುಂದರವಾದದ್ದು ಇರಬೇಕು ಎಂದು ಇಷ್ಟಪಡುತ್ತಾರೆ. ನಿಮ್ಮ ಸಾಕು ಪ್ರಾಣಿ ಸಹ ಇದೇ ರೀತಿ ವಿಭಿನ್ನವಾಗಿ ಆಕರ್ಷಣೀಯವಾಗಿ ಇರಬೇಕು ಎಂದು ಬಯಸಿದರೆ ಬಂಗಾಳದ ಬೆಕ್ಕನ್ನು ಸಾಕಿ. ಇದು ನೋಡದಾಕ್ಷಣ ಎಲ್ಲರನ್ನು ಆಕರ್ಷಿಸವಂಥ ಗುಣವನ್ನು ಹೊಂದಿದೆ, ಅಲ್ಲದೇ ನಿಮ್ಮ ಮನಸ್ಸನ್ನು ಸೂರೆಗೊಳ್ಳುವ ಸ್ವಭಾವ ಇದಕ್ಕಿದೆ.

ಕನ್ಯಾ ರಾಶಿ: ಮೀನು

ಕನ್ಯಾ ರಾಶಿ: ಮೀನು

ಎಲ್ಲಾ ರಾಶಿಚಕ್ರಗಳಿಗೆ ಹೋಲಿಸಿದರೆ ಕನ್ಯಾ ರಾಶಿಯವರು ಬಹಳ ಸ್ವಚ್ಚತೆಯನ್ನು ಕಾಪಾಡುವವರು, ಶುದ್ಧರು ಎಂದು ಹೇಳಲಾಗುತ್ತದೆ. ಅಲ್ಲದೇ, ವಿಷಯಗಳನ್ನು ಕ್ರಮಬದ್ಧವಾಗಿ, ಸಂಘಟಿತವಾಗಿಡಲು ಇಷ್ಟಪಡುತ್ತಾರೆ. ಇವರಿಗೆ ನಾಯಿ ಅಥವಾ ಬೆಕ್ಕಿನಂತಹ ಯಾವುದನ್ನೂ ಸಾಕಲು ತಾಳ್ಮೆ ಇರುವುದಿಲ್ಲ, ಏಕೆಂದರೆ ಈ ಪ್ರಾಣಿಗಳು ಮನೆಯೆಲ್ಲಾ ಓಡಾಡುತ್ತದೆ, ಮನೆಯಲ್ಲೆಲ್ಲಾ ಚೆಲ್ಲುತ್ತದೆ, ಅವ್ಯವಸ್ಥೆಯನ್ನು ಮಾಡುತ್ತದೆ ಎಂದು. ಅದಕ್ಕಾಗಿ ಇವರಿಗೆ ಹೇಳಿ ಮಾಡಿಸಿದ ಪಜಲಚರ ಮೀನು. ಇದು ಕಡಿಮೆ ಸಮಯ ಹಾಗೂ ನಿರ್ವಹಣೆಯನ್ನು ಬಯಸುವ ಪ್ರಾಣಿ. ಮೀನು ನಮ್ಮ ಜೊತೆ ಒಡಡನಾಡುವ ಉತ್ತಮ ಪ್ರಾಣಿಯಾಗಿ ಬದಲಾಗಬಹುದು. ಅಲ್ಲದೇ ಮನೆಯನ್ನು ಅವ್ಯವಸ್ಥೆ ಮಾಡುವ ಪ್ರಾಣಿಯಂತೂ ಅಲ್ಲವೇ ಅಲ್ಲ.

ತುಲಾ ರಾಶಿ: ಮೊಲ

ತುಲಾ ರಾಶಿ: ಮೊಲ

ತುಲಾ ರಾಶಿಯವರು ಸಹ ಸಿಂಹ ರಾಶಿಯವರಂತೆ ಸುಂದರವಾದ ಸಂಗತಿಗಳಿಂದ ಸುತ್ತುವರಿಯಲು ಇಷ್ಟಪಡುತ್ತಾರೆ. ಇದರರ್ಥ ನೀವು ಸಹ ಸಾಕುವ ಪ್ರಾಣಿಗಳು ನಿಮ್ಮ ಗಮನವನ್ನು ಸೆಳೆಯಬೇಕು ಎಂದು ಬಯಸುತ್ತೀರಿ. ಅಲ್ಲದೇ ನೀವು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ ಮತ್ತು ಅದರೊಂದಿಗೆ ಆಟವಾಡಲು ಸಹ ಬಯಸುತ್ತೀರಿ. ಅದಕ್ಕಾಗಿಯೇ ಮೊಲವು ಪರಿಪೂರ್ಣವಾದ ಪ್ರಾಣಿ. ಇದು ಬಹಳ ಮುದ್ದಾದ, ಪ್ರೀತಿಯ ಮತ್ತು ನೋಡಲು ತುಂಬಾ ಆಕರ್ಷಣೀಯ ಪ್ರಾಣಿಯಾಗಿದೆ.

ವೃಶ್ಚಿಕ ರಾಶಿ: ಹಾವು

ವೃಶ್ಚಿಕ ರಾಶಿ: ಹಾವು

ಇಡೀ ರಾಶಿಚಕ್ರದಲ್ಲೇ ಯಾವುದೇ ಹಾವಿನಂತಹ ಸರೀಸೃಪಕ್ಕೆ ಸೂಕ್ತವಾದ ಹೊಂದಾಣಿಕೆ ಎಂದರೆ ಅದು ವೃಶ್ಚಿಕ ರಾಶಿ ಎನ್ನಬಹುದು. ನೀವು ನಿಗೂಢ ಸ್ವಭಾವದವರು, ಭಾವನಾತ್ಮಕರು ಮತ್ತು ಹಾವಿನಂತೆ ವಿಭಿನ್ನವಾದ ಗಾಢ ಗುಣಗಳನ್ನು ಹೊಂದಿದ್ದೀರಿ. ಈ ರಾಶಿಯವರು ಎಂದಿಗೂ ನಿಗೂಢ ಸ್ವಭಾವ ಮತ್ತು ಅವರ ವಿಲಕ್ಷಣ ಸೌಂದರ್ಯವನ್ನು ಪ್ರಶಂಸಿಸುತ್ತಾರೆ ಮತ್ತು ಅದು ಎಷ್ಟು ಭಿನ್ನವಾಗಿದೆ ಎಂಬುದನ್ನು ಬಹಳ ಮೆಚ್ಚುತ್ತೀರಿ.

ಧನು ರಾಶಿ: ಸಾಕಿದ ಬೆಕ್ಕು

ಧನು ರಾಶಿ: ಸಾಕಿದ ಬೆಕ್ಕು

ವಿಶ್ವ ಪರ್ಯಟನೆ ಮಾಡುವ ರಾಶಿ ಎಂದರೆ ಧನು. ನಿರಂತರವಾಗಿ ಅಲೆದಾಡುವಿಕೆಯು ನಿಮಗೆ ನೆಚ್ಚಿನ ಮತ್ತು ಹೇಳಿ ಮಾಡಿಸಿದ ಕೆಲಸ ಹಾಗೂ ಆಸಕ್ತಿಯ ಕ್ಷೇತ್ರ. ನೀವು ಸಾಕುಪ್ರಾಣಿಗಳನ್ನು ಪಡೆಯಲು ಹೊರಟಿದ್ದರೆ, ಕಡಿಮೆ ನಿರ್ವಹಣೆಯ ಹಾಗೂ ನಿಮ್ಮ ಸಂಪೂರ್ಣ ಗಮನವನ್ನು ಸಾರ್ವಕಾಲಿಕವಾಗಿ ಬಯಸದ ಪ್ರಾಣಿ ಬೇಕಿದೆ. ಇದನ್ನು ಕಂಡುಹಿಡಿಯುವುದು ಕಷ್ಟ, ಆದರೆ ಯಾರಾದರೂ ಸಾಕಿದ ಬೆಕ್ಕು ನಿಮಗೆ ಸೂಕ್ತ ಪೆಟ್ ಆಗಬಹುದು.

ಮಕರ ರಾಶಿ: ಮೊಲದಿಲಿ

ಮಕರ ರಾಶಿ: ಮೊಲದಿಲಿ

ಮಕರ ರಾಶಿಯವರು ಕಠಿಣ ಪರಿಶ್ರಮಿಗಳು ಏಕೆಂದರೆ ಇವರು ಹೆಚ್ಚು ಸಮಯ ಕಚೇರಿಯಲ್ಲೇ ಕಳೆಯಲು ಇಷ್ಟಪಡುತ್ತಾರೆ. ನೀವು ಕೆಲಸದಲ್ಲಿ ಸಾಕಷ್ಟು ಕಾರ್ಯನಿರತವಾಗಿದ್ದರೂ, ತಾಳ್ಮೆಯಿಂದಿರುವ ಪ್ರಾಣಿ ನಿಮಗೆ ಬೇಕಿದೆ. ಇದಕ್ಕಾಗಿ ನಿಮಗೆ ಮೊಲದಿಲಿ ಹೊಂದುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ. ಇವು ನಿಮ್ಮಿಂದ ಹೆಚ್ಚಿನ ಸಮಯ ಅಥವಾ ಕಾಳಜಿಯನ್ನು ಬಯಸುವುದಿಲ್ಲ. ಅವುಗಳು ತಾವಾಗಿಯೇ ತಾವು ಇರುತ್ತದೆ, ಆದರೆ ಇದಕ್ಕೂ ಕೊಂಚ ಸಮಯ ಪ್ರೀತಿ ಮತ್ತು ಕಾಳಜಿಯ ಅಗತ್ಯವಿದೆ.

ಕುಂಭ ರಾಶಿ: ಪಕ್ಷಿಗಳು

ಕುಂಭ ರಾಶಿ: ಪಕ್ಷಿಗಳು

ಕುಂಭ ರಾಶಿಯವರು ಎಂದಿಗೂ ವಿಶಿಷ್ಟವಾದವರಾಗಿದ್ದು, ಇವರ ಸಾಕು ಪ್ರಾಣಿ ಸಹ ಅಷ್ಟೇ ವಿಶಿಷ್ಟವಾಗಿರಬೇಕು. ಮುದ್ದಾಗಿರುವುದಕ್ಕಿಂತ ಹೆಚ್ಚು ಬುದ್ಧಿವಂತ ಸಾಕುಪ್ರಾಣಿಗಳನ್ನು ನೀವು ಹುಡುಕುತ್ತಿದ್ದೀರಿ, ಸಾಕಷ್ಟು ಪ್ರೀತಿಯ ಅಗತ್ಯತೆ ಇರುವ ಪ್ರಾಣಿ ನಿಮಗೆ ಬೇಕಿರುತ್ತದೆ. ಹಾಗಿದ್ದರೆ ನೀವು ಪಕ್ಷಿಯನ್ನು ಸಾಕುವುದು ಒಳಿತು. ಅವು ಚುರುಕಾಗಿ, ಆಸಕ್ತಿದಾಯಕವಾಗಿರುತ್ತದೆ ಮತ್ತು ವಿಭಿನ್ನವಾದ ವಿಶಿಷ್ಟತೆಯನ್ನು ಅಲ್ಲಿ ಕಾಣಬಹುದು.

ಮೀನ ರಾಶಿ: ಸಾಕಿದ ನಾಯಿ

ಮೀನ ರಾಶಿ: ಸಾಕಿದ ನಾಯಿ

ಮೀನ ರಾಶಿಯವರು ಭಾವನಾತ್ಮಕರು ಮತ್ತು ಅವರು ಪ್ರೀತಿಸಲು ಇಷ್ಟಪಡುತ್ತಾರೆ. ನೀವು ಎಲ್ಲ ಸಮಯದಲ್ಲೂ ಮುದ್ದಾಡಬಲ್ಲ ಮತ್ತು ಪ್ರೀತಿಸುವ ಸಾಕುಪ್ರಾಣಿಯನ್ನು ನೀವು ಬಯಸುತ್ತೀರಿ, ಆದರೆ ಅದು ಸಹ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಅಪೇಕ್ಷಿಸುತ್ತೀರಿ. ತರಬೇತಿ ಪಡೆದ ಮತ್ತು ವ್ಯವಹರಿಸಲು ಸುಲಭವಾದ ಯಾರಾದರೂ ಸಾಕಿದ್ದ ನಾಯಿಯನ್ನು ಆರಿಸಿಕೊಳ್ಳಿ. ಸೂಪರ್ ಮುದ್ದಾದ ತಳಿಯನ್ನು ಪಡೆಯಿರಿ ಇದರಿಂದ ನೀವು ಯಾವಾಗಲೂ ಸ್ನೇಹಿತರನ್ನು ಹೊಂದಬಹುದು.

English summary

Based On Your Zodiac Sign Best Pet For You

Your zodiac sign can reveal so much about yourself and what you're looking for in other people, so of course it can also show what kind of animals you would best interact with. Your pet says a lot about who you are, so you want to pick one that goes with your personality, wants, and needs. If you're looking for a pet mainly for cuddles, then you want one that loves a lot of attention. in this article we are discussing about which pet suits you based on your zodiac sign. Read on.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more