For Quick Alerts
ALLOW NOTIFICATIONS  
For Daily Alerts

ವೃಶ್ಚಿಕ ರಾಶಿಯ ನಕಾರಾತ್ಮಕ ಗುಣಗಳು ಬಹಳ ಅಪಾಯಕಾರಿಯಂತೆ

|

ಅರ್ಥಗರ್ಭಿತವಾಗಿ ವರ್ತಿಸುವ, ಭಾವನಾತ್ಮಕ ಗುಣ ಇರುವ, ಸೂಕ್ಷ್ಮ ಮನಸ್ಥಿತಿಯ ವೃಶ್ಚಿಕ ರಾಶಿಯು ಹೆಚ್ಚು ಸಹಾನುಭೂತಿಯ ಗುಣಗಳನ್ನು ಹೊಂದಿದೆ. ಇತರೆ ರಾಶಿಚಕ್ರಗಳಿಗಿಂತ ಹೆಚ್ಚು ಸಕಾರಾತ್ಮಕ ಗುಣಗಳನ್ನು ಹೊಂದಿದೆ ಎನ್ನಲಾಗುತ್ತದೆ. ಈ ಬಗ್ಗೆ ಇದರ ಬಗ್ಗೆ ಹಲವು ಲೇಖನಗಳಲ್ಲಿ ಚರ್ಚಿಸಿದ್ದೇವೆ.

ಹೆಚ್ಚು ಸಕಾರಾತ್ಮಕ ಗುಣಗಳೇ ಇರುವ ವೃಶ್ಚಿಕ ರಾಶಿಯವರಲ್ಲಿ ಹಲವು ನಕಾರಾತ್ಮಕ ಗುಣಗಳು ಸಹ ಇದೆ. ಚಂದ್ರನಿಂದ ಆಳಲ್ಪಡುವ ವೃಶ್ಚಿಕ ರಾಶಿಯವರ ಕೆಟ್ಟ ಗುಣಗಳು ನಿಮಗೆ ಅಪಾಯಕಾರಿ ಸಹ ಎನಿಸಬಹುದು. ಯಾವೆಲ್ಲಾ ನಕಾರಾತ್ಮಕ ಗುಣಗಳು ಇವರಲ್ಲಿದೆ ಮುಂದೆ ನೋಡೋಣ:

1. ವೃಶ್ಚಿಕ ಅತಿರೇಕದ ಭಾವನೆ

1. ವೃಶ್ಚಿಕ ಅತಿರೇಕದ ಭಾವನೆ

ನೀರಿನ ಅಂಶದ ವೃಶ್ಚಿಕ ರಾಶಿಯು ಚಿಹ್ನೆಯನ್ನು ನೀರಿನಿಂದ ಆಳಲಾಗುತ್ತದೆ ಮತ್ತು ಇತರ ನೀರಿನ ಕರ್ಕ ಮತ್ತು ಮೀನ ರಾಶಿಯವರಂತೆ ಚಂದ್ರನಿಂದ ಆಳಲ್ಪಟ್ಟ ರಾಶಿ. ಆದ್ದರಿಂದ ಇವರು ಭಾವನಾತ್ಮಕ ವರ್ತನೆಯಲ್ಲಿ ಸಾಕಷ್ಟು ವಿಭಿನ್ನ ಗುಣವನ್ನು ಹೊಂದಿದ್ದಾರೆ. ಅತೀ ಸಂತೋಷದಿಂದ ಸಂತಸದ ಉತ್ತುಂಗದಲ್ಲಿರುವ ಇವರು ಇದ್ದಕ್ಕಿಂದ್ದಂತೆ ಅತೀವ ದುಖಃಕ್ಕೆ ಒಳಗಾಗಬಹುದು. ಇವರು ಇತರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಪ್ರತಿಯಾಗಿ ತನ್ನನ್ನುಇತರರು ಅರ್ಥಮಾಡಿಕೊಳ್ಳಬೇಕು ಎಂದು ನಿರೀಕ್ಷಿಸುತ್ತಾರೆ.

ಕೆಲವು ಬಾರಿ ಸಂಭಾಷಣೆ ಮಾಡುವ ಅಂತ್ಯದಲ್ಲಿ ಭಾವನಾತ್ಮಕವಾಗಬಹುದು. ವೃಶ್ಚಿಕ ರಾಶಿಯವರನ್ನು ಗಂಭೀರವಾಗಿ ಪರಿಗಣಿಸದಿದ್ದಾಗ ಇವರು ತುಂಬಾ ಕೋಪಗೊಳ್ಳಬಹುದು ಎಚ್ಚರ.

2. ಮೂಡಿ ಮತ್ತು ಬೆಂಬಿಡದ ವ್ಯಕ್ತಿತ್ವ

2. ಮೂಡಿ ಮತ್ತು ಬೆಂಬಿಡದ ವ್ಯಕ್ತಿತ್ವ

ವೃಶ್ಚಿಕ ರಾಶಿಯವರು ಸಹಾನುಭೂತಿ ಮತ್ತು ಅನುಭೂತಿಯನ್ನು ಎದುರಿಸದಿದ್ದಾಗ ಇವರ ವ್ಯಕ್ತಿತ್ವದಲ್ಲಿರುವ ನಕಾರಾತ್ಮಕ ಗುಣಗಳು ಹೊರಬರುತ್ತದೆ. ಇವರು ಬಯಸುವ ವಾತ್ಸಲ್ಯ ತಿರುಗಿ ನೀಡದಿದ್ದರೆ ವೃಶ್ಚಿಕ ರಾಶಿಯವರು ತುಂಬಾ ಮೂಡಿ ಆಗುತ್ತಾರೆ ಮತ್ತು ಇವರು ಬಯಸಿದ್ದು ಸಿಗುವವರೆಗೂ ಮತ್ತೆ ಹೋಗುವ ಮಾತೇ ಇಲ್ಲ, ನಿಮ್ಮ ಹಿಂದೆಯೇ ಇರುತ್ತಾರೆ, ಹಿಂಜರಿಯುವುದಿಲ್ಲ. ಇವರು ಯಾವಾಗಲೂ ನಿಮ್ಮ ಎಲ್ಲಾ ಸಮಯದಲ್ಲೂ ನಿಮಗೆ ಅಂಟಿಕೊಂಡೇ ಇರುತ್ತಾರೆ.

3. ಅತೀವ ಅನುಮಾನ

3. ಅತೀವ ಅನುಮಾನ

ತಮ್ಮ ಸುತ್ತ ನಡೆಯುತ್ತಿರುವ ಎಲ್ಲದರ ಬಗ್ಗೆ ತಿಳಿದಿಲ್ಲದಿದ್ದಾಗ ವೃಶ್ಚಿಕ ರಾಶಿಯವರು ತುಂಬಾ ಅನುಮಾನಾಸ್ಪದವಾಗಿರುತ್ತಾರೆ. ಪ್ರತಿ ಸಣ್ಣ ವಿವರಗಳ ಬಗ್ಗೆ ಅವರು ನಿಮ್ಮನ್ನು ಪ್ರಶ್ನಿಸುತ್ತಾರೆ ಮತ್ತು ನೀವು ಸುಳ್ಳು ಹೇಳುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಹಿಂದೆ ಗೂಢಚರ್ಯೆ ಮಾಡುತ್ತಾರೆ.

ಇವರು ತಾವು ದಾರಿ ತಪ್ಪುತ್ತಿಲ್ಲ ಅಥವಾ ಭಯದಿಂದ ಉಂಟಾಗುವ ಅನುಮಾನ ಸಹ ಇರಬಹುದು. ತಮ್ಮ ಸುತ್ತಮುತ್ತಲಿನವರು ಏನು ಮಾಡಲು ಬಯಸುತ್ತಾರೆ ಎಂಬುದನ್ನು ಸ್ಥಿರವಾಗಿ ತೋರಿಸುವವರೆಗೆ ಅವರು ಇತರರ ಉದ್ದೇಶಗಳನ್ನು ಅನುಮಾನಿಸುತ್ತಾರೆ.

4. ನಿರಾಶಾವಾದಿ

4. ನಿರಾಶಾವಾದಿ

ವೈಫಲ್ಯಗಳನ್ನು ಎದುರಿಸುವಾಗ ಅಥವಾ ಕಳೆದುಕೊಳ್ಳುವ ಸಾಧ್ಯತೆಯಿರುವಾಗ ವೃಶ್ಚಿಕ ರಾಶಿಯವರು ನಿರಾಶಾವಾದಿಗಳಾಗುವ ಸಾಧ್ಯತೆಯಿದೆ. ಅವರು ಹೊಂದಿರುವ ಅಭದ್ರತೆಯ ಪರಿಣಾಮವಾಗಿ ಅವರು ನಕಾರಾತ್ಮಕ ಆಲೋಚನೆಗಳನ್ನು ಅನುಮತಿಸುತ್ತಾರೆ. ಏಕೆಂದರೆ ವೃಶ್ಚಿಕ ರಾಶಿಯವರು ಜೀವನದಲ್ಲಿ ನಿರಾಕರಣೆಯನ್ನು ಎದುರಿಸಲು ಹೆದರುವ ಪ್ರವೃತ್ತಿಯನ್ನು ಹೊಂದಿರುವವರು. ಆಗಾಗ್ಗೆ, ಅವರು ತಮ್ಮ ನಕಾರಾತ್ಮಕ ದೃಷ್ಟಿಕೋನಗಳನ್ನು ಸಹ ವ್ಯಕ್ತಪಡಿಸುತ್ತಾರೆ ಮತ್ತು ಅವರು ಈ ಸ್ಥಿತಿಯಲ್ಲಿದ್ದಾಗ ಸಕಾರಾತ್ಮಕವಾಗಿ ಯೋಚಿಸಲು ಹಿಂಜರಿಯುತ್ತಾರೆ.

5. ಬಯಸಿದ್ದು ಸಿಗದಿರುವಾಗ ನಿಮ್ಮ ಅಭಿಪ್ರಾಯದ ಮೇಲೆ ಪ್ರಭಾವ ಬೀರುತ್ತಾರೆ

5. ಬಯಸಿದ್ದು ಸಿಗದಿರುವಾಗ ನಿಮ್ಮ ಅಭಿಪ್ರಾಯದ ಮೇಲೆ ಪ್ರಭಾವ ಬೀರುತ್ತಾರೆ

ವೃಶ್ಚಿಕ ರಾಶಿಯವರ ಗುಪ್ತ ಗುಣಲಕ್ಷಣಗಳಲ್ಲಿ ಒಂದು ಇದಾಗಿದೆ. ಇವರು ಅಗತ್ಯವಿದ್ದಾಗ ಬಹಳ ಕುಶಲತೆಯಿಂದ ಮಾತನಾಡುತ್ತಾರೆ, ನಿಮ್ಮ ಅಭಿಪ್ರಾಯದ ಮೇಲೆ ಪ್ರಭಾವ ಬೀರುತ್ತಾರೆ. ಯಾವಾಗಲೂ ತಿಳುವಳಿಕೆಯಿಂದ ತುಂಬಿರುವುದರಿಂದ, ಸುತ್ತಮುತ್ತಲಿನವರು ತಮ್ಮ ಇಚ್ಛೆಯಂತೆ ಮಾಡಲು ಏನು ಹೇಳಬೇಕೆಂದು ಮತ್ತು ಏನು ಮಾಡಬೇಕೆಂದು ಅವರಿಗೆ ತಿಳಿದಿದೆ. ತಮ್ಮ ದಾರಿ ತಲುಪಲು ಕಷ್ಟವಾದಾಗ ಅಥವಾ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಎನಿಸಿದಾಗ, ಅವರು ಯಾವ ಮನಸ್ಥಿತಿಯವರಾಗಿದ್ದರೂ ಬಯಸಿದ್ದನ್ನು ಹೊಂದದೆ ಹೆಚ್ಚು ಸಮಯ ಹೋದರೆ ಬಯಸಿದ ಸಂದರ್ಭಗಳನ್ನು ಒಂದಲ್ಲ ಒಂದು ರೀತಿಯಲ್ಲಿ ರಚಿಸಿಕೊಳ್ಳುತ್ತಾರೆ.

ವೃಶ್ಚಿಕ ರಾಶಿಯವರ ನಕಾರಾತ್ಮಕ ಗುಣಲಕ್ಷಣಗಳ ಹೊರತಾಗಿಯೂ, ಭಯ ಇಲ್ಲದ ಹೊರತು ಕನಿಷ್ಠ ಮಟ್ಟಕ್ಕೆ ತಿರುಗುವ ಸಾಧ್ಯತೆ ಇಲ್ಲ.

English summary

According To Astrology, Negative Personality Traits Of The Cancer Zodiac Sign in Kannada

Here we are discussing about Cancer negative traits are rarely shown, but you will be surprised. Here are five negative traits of a Cancer personality that may make them intimidating to other zodiac signs. Read more.
Story first published: Thursday, June 24, 2021, 18:28 [IST]
X
Desktop Bottom Promotion