Latest Updates
-
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ!
ಋತುಚಕ್ರ ಬೇಗ ಕೊನೆಗೊಳಿಸಿ ಆಸ್ಪತ್ರೆ ಸೇರಿದ ಮಹಿಳೆಯರು!
ಪ್ರಕೃತಿ ಸಹಜವಾಗಿ ಪ್ರೌಢಾವಸ್ಥೆಗೆ ಬಂದಿರುವ ಪ್ರತಿಯೊಂದು ಹೆಣ್ಣು ಕೂಡ ಪ್ರತೀ ತಿಂಗಳು ಋತುಚಕ್ರಕ್ಕೆ ಒಳಗಾಗಬೇಕು. ಇದು ಕೆಲವು ಹೆಣ್ಣು ಮಕ್ಕಳಿಗೆ ತುಂಬಾ ಕಠಿಣ ದಿನಗಳಾಗಿರುವುದು. ಯಾಕೆಂದರೆ ಈ ವೇಳೆ ಅತಿಯಾದ ರಕ್ತಸ್ರಾವ, ನೋವು, ಸೆಳೆತ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇವುಗಳಿಂದಾಗಿ ಋತುಚಕ್ರವು ಯಾಕಾಗಿ ಬರುತ್ತದೆಯಾ ಎಂದು ಕೆಲವರು ಶಾಪವನ್ನಿಡುವರು. ಈ ಐದು ದಿನಗಳನ್ನು ಬೇಗನೆ ಮುಗಿಸಲು 1970ರ ಅವಧಿಯಲ್ಲಿ ಇದ್ದ ಕೆಲವೊಂದು ತಂತ್ರವನ್ನು ಅಳವಡಿಸಿಕೊಂಡು ಇಬ್ಬರು ಹೆಣ್ಣು ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಘಟನೆಯು ನಡೆದಿದೆ.

1970ರಲ್ಲಿ ಪ್ರಯೋಗಿಸುತ್ತಿದ್ದ ಈ ತಂತ್ರವು ಈಗ ಮತ್ತೆ ಟ್ರೆಂಡ್ ಆಗುತ್ತಿದೆ. ವ್ಯಾಕ್ಯೂಮ್ ಬಳಸಿಕೊಂಡು ಋತುಚಕ್ರದ ದಿನಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ ಮತ್ತು ಈ ಕ್ರಮದಿಂದಾಗಿ ಈಗ ಇಬ್ಬರು ಹೆಣ್ಣು ಮಕ್ಕಳು ಆಸ್ಪತ್ರೆ ಸೇರಿರುವರು. ಈ ಬಗ್ಗೆ ನೀವು ಮುಂದೆ ತಿಳಿಯುತ್ತಾ ಸಾಗಿರಿ.

ಇಬ್ಬರು ಮಹಿಳೆಯರು ಆಸ್ಪತ್ರೆ ಸೇರಿದರು
ಸಿಯಾಟಲ್ ನ ಆಸ್ಪತ್ರೆಯೊಂದರ ವೈದ್ಯರ ಪ್ರಕಾರ ಇಬ್ಬರು ಮಹಿಳೆಯರು ವ್ಯಾಕ್ಯೂಮ್ ನ್ನು ಬಳಸಿಕೊಂಡು ತನ್ನ ಋತುಚಕ್ರವನ್ನು ಬೇಗನೆ ಕೊನೆಗೊಳಿಸಲು ಬಯಸಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾವೇ ಬಳಸಿದ ವಿಧಾನ
23 ಮತ್ತು 19 ಹರೆಯದ ಮಹಿಳೆಯರಿಬ್ಬರು ತಾವೇ ಮಾಡಿಕೊಂಡು ವಿಧಾನದಿಂದಾಗಿ ಈಗ ಆಘಾತಕ್ಕೆ ಒಳಗಾಗಿದ್ದಾರೆ. ರಕ್ತವನ್ನು ಹೀರಿಕೊಂಡು ಬೇರೆ ಋತುಚಕ್ರವನ್ನು ಅವರು ಕೊನೆಗೊಳಿಸಲು ಬಯಸಿದ್ದರು. ಇದಕ್ಕಾಗಿ ಅವರು ವ್ಯಾಕ್ಯೂಮ್ ಕ್ಲೀನರ್ ನ್ನು ಬಳಸಿಕೊಂಡರು.

ಋತುಚಕ್ರ ಹೊರತೆಗೆಯುವಿಕೆ
70ರ ದಶಕದಲ್ಲಿ ಋತುಚಕ್ರ ಹೊರತೆಗೆಯುವಿಕೆಯನ್ನು ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಇದನ್ನು ಗರ್ಭಪಾತ ಮಾಡಲು ಮನೆಯಲ್ಲಿ ಬಳಸುತ್ತಿದ್ದ ತಂತ್ರವಾಗಿತ್ತು. ಇದು ನಿಜವಾದ ತಂತ್ರವಲ್ಲ ಮತ್ತು ಗರ್ಭಪಾತವು ಕಾನೂನುಬಾಹಿರವಾಗಿದ್ದ ರಾಷ್ಟ್ರಗಳಲ್ಲಿ ಹೀಗೆ ಮಾಡಲಾಗುತ್ತಿತ್ತು. ಗರ್ಭಪಾತವು ಕಾನೂನುಬದ್ಧವಾದ ಬಳಿಕ ಈ ತಂತ್ರವನ್ನು ಕೈಬಿಡಲಾಗಿತ್ತು. ಆದರೆ ಈಗ ಮತ್ತೆ ಜನಪ್ರಿಯವಾಗುತ್ತಲಿದೆ.

ವೈದ್ಯರು ವಿವರಿಸಿರುವ ಪ್ರಕಾರ
ಮಹಿಳೆಯರಿಗೆ ಚಿಕಿತ್ಸೆ ನೀಡಿರುವಂತಹ ವೈದ್ಯರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ ಮತ್ತು ಇಂತಹ ಯಾವುದೇ ತಂತ್ರವನ್ನು ಬಳಸದಂತೆ ಅವರು ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರಿಗೆ ಚಿಕಿತ್ಸೆ ವೇಳೆ ಉಪಸ್ಥಿತರಿದ್ದ ನರ್ಸ್ ಹೇಳುವ ಪ್ರಕಾರ, ನನಗೆ ಗೊತ್ತಿಲ್ಲ, ಇದು ಯುರೇಕಾ, ಡೈಸನ್ ಹೂವೆರ್ ಅಥವಾ ವಾಲ್ ಮಾರ್ಟ್ ಬ್ರಾಂಡ್ ಆಗಿದೆಯಾ ಎಂದು? ಆದರೆ ಇದು ನಿಜವಾದ ವ್ಯಾಕ್ಯೂಮ್ ಕ್ಲೀನರ್ ಆಗಿತ್ತು ಮತ್ತು ಇದು ತುಂಬಾ ಅಪಾಯಕಾರಿ. ಇಂದಿನ ವ್ಯಾಕ್ಯೂಮ್ ಕ್ಲೀನರ್ ಗಳು ತುಂಬಾ ಶಕ್ತಿಶಾಲಿ ಆಗಿರುತ್ತದೆ. ಇದು ರಕ್ತಕ್ಕಿಂತಲೂ ಹೆಚ್ಚಿನದನ್ನು ಹೀರಿಕೊಳ್ಳುವ ಸಾಧ್ಯತೆಯಿತ್ತು.
ಇದರ ಬಗ್ಗೆ ಮತ್ತಷ್ಟು ವಿವರ ನೀಡಿರುವ ಆಕೆ, ಮಹಿಳೆಯರ ಋತುಚಕ್ರ ಎನ್ನುವುದು ತನ್ನದೇ ಆಗಿರುವ ಉದ್ದೇಶದಿಂದಾಗಿ ಅದು ಸ್ಥಿರವಾಗಿ ಸ್ರಾವವಾಗುತ್ತಿರುತ್ತದೆ. ಇದನ್ನು ಮನುಷ್ಯರ ಜೀವವು ಸಹಿಸಿಕೊಳ್ಳಬಲ್ಲದು. ವ್ಯಾಕ್ಯುಮ್ ಕ್ಲೀನರ್ ಬಳಸಿದರೆ ರಕ್ತಸ್ರಾವವು ಒಂದು ಸಾವಿರ ಪಟ್ಟು ಹೆಚ್ಚಾಗುವುದು ಮತ್ತು ಇದನ್ನು ದೇಹವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ದೇಹವು ಆಘಾತದ ಸ್ಥಿತಿಗೆ ತಲುಪುವುದು.
ಅದೃಷ್ಟವಶಾತ್ ಈ ಮಹಿಳೆಯರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಹಾನಿಕಾರಕ ತಂತ್ರಗಳನ್ನು ಬಳಸದಂತೆ ಮಹಿಳೆಯರಿಗೆ ವೈದ್ಯರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.



Click it and Unblock the Notifications