For Quick Alerts
ALLOW NOTIFICATIONS  
For Daily Alerts

ಇ ಸಿಗರೇಟ್ ಸ್ಫೋಟಿಸಿ ಹುಡುಗನ ಬಾಯೊಳಗಿನ ಹಲ್ಲುಗಳೇ ಛಿದ್ರ!

|

ಇಂದಿನ ದಿನಗಳಲ್ಲಿ ಯುವಜನರಲ್ಲಿ ತುಂಬಾ ಜನಪ್ರಿಯವಾಗುತ್ತಿರುವುದು ಸಿಗರೇಟ್. ಅದರಲ್ಲೂ ಸಾಮಾನ್ಯ ಸಿಗರೇಟ್ ನ್ನು ಸೇದಲು ಹಲವಾರು ಅಡೆತಡೆಗಳು ಇರುವ ಕಾರಣದಿಂದಾಗಿ ಯುವಜನತೆಯು ಇ ಸಿಗರೇಟಿಗೆ ಮೊರೆ ಹೋಗುತ್ತಿದೆ. ಇದು ಆರೋಗ್ಯಕ್ಕೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ ಎಂದು ಒಂದು ಗುಂಪು ವಾದ ಮಾಡುತ್ತಿದ್ದರೆ, ಇನ್ನೊಂದರ ಪ್ರಕಾರ ಈ ಸಿಗರೇಟ್ ಕೂಡ ಹಾನಿ ಮಾಡುತ್ತದೆ. ಹೀಗಾಗಿ ಇ ಸಿಗರೇಟ್ ಸೇದಬಾರದು ಎಂದು ಹೇಳಲಾಗುತ್ತದೆ. ಆದರೆ ಯುವಜನತೆ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಇ ಸಿಗರೇಟ್ ಸೇದುವರು. ಇದು ಕೂಡ ಒಂದು ಕೆಟ್ಟ ಅಭ್ಯಾಸವಾಗಿದೆ.

ಆದರೆ ಈ ಲೇಖನದಲ್ಲಿ ಕೆಟ್ಟ ಅಭ್ಯಾಸದಿಂದ ಯಾವ ರೀತಿ ತೊಂದರೆ ಆಗುತ್ತದೆ ಎಂದು ನಾವು ನಿಮಗೆ ಹೇಳಿಕೊಡಲಿದ್ದೇವೆ. ಯಾಕೆಂದರೆ ಇಲ್ಲೊಬ್ಬ ಯುವಕನು ಇ ಸಿಗರೇಟ್ ಸೇದುವ ವೇಳೆ ಅದು ಸಿಡಿದಿದೆ. ದ ನ್ಯೂ ಇಂಗ್ಲೆಂಡ್ ಜರ್ನಲ್ ಮೆಡಿಸಿನ್ ನಲ್ಲಿ ಈ ಘಟನೆಯನ್ನು ಹಂಚಿಕೊಂಡು ಜನರಿಗೆ ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಇದರ ಬಗ್ಗೆ ನೀವು ತಿಳಿಯಿರಿ.

ಇ ಸಿಗರೇಟ್ ಎನ್ನುವುದು ಇಂದಿನ ದಿನಗಳಲ್ಲಿ ಯುವ ಜನತೆಯಲ್ಲಿ ಜನಪ್ರಿಯ

ಇ ಸಿಗರೇಟ್ ಎನ್ನುವುದು ಇಂದಿನ ದಿನಗಳಲ್ಲಿ ಯುವ ಜನತೆಯಲ್ಲಿ ಜನಪ್ರಿಯ

2016ರಲ್ಲಿ ಸರ್ಜನ್ ಜರ್ನಲ್ ನಡೆಸಿರುವಂತಹ ಅಧ್ಯಯನದ ಪ್ರಕಾರ ಇ ಸಿಗರೇಟ್ ಸೇವನೆಯು ಶೇ.900ರಷ್ಟು ಯುವಜತೆಯಲ್ಲಿ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

Most Read: ಮಹಿಳೆಯ ಹೊಟ್ಟೆಯಲ್ಲಿತ್ತು ಒಂದು ಅಡಿ ಉದ್ದದ ಹುಳ

ತನಗೆ ವ್ಯಾಪ್ ಪೆನ್ ನೀಡಬೇಕೆಂದು ಆ ಯುವಕ ಕೇಳಿಕೊಂಡ

ತನಗೆ ವ್ಯಾಪ್ ಪೆನ್ ನೀಡಬೇಕೆಂದು ಆ ಯುವಕ ಕೇಳಿಕೊಂಡ

17ರ ಹರೆಯದ ಯುವಕ ತಾನು ಧೂಮಪಾನ ತ್ಯಜಿಸಲು ತನಗೆ ವ್ಯಾಪ್ ಪೆನ್ ಉಡುಗೊರೆಯಾಗಿ ನೀಡಬೇಕು ಎಂದು ಆತ ತನ್ನ ತಾಯಿಯಲ್ಲಿ ಹೇಳಿಕೊಂಡ. ದುರಾದೃಷ್ಟದಿಂದಾಗಿ ಈ ಪೆನ್ ಸಿಡಿದ ಕಾರಣದಿಂದಾಗಿ ಆ ಯುವಕನ ಮುಖದಲ್ಲಿ ಗುಂಡು ಬಿಟ್ಟಿರುವಂತಹ ಗಾಯವಾಗಿದೆ. ಆತನ ಬಾಯಿಯನ್ನು ನೋಡಿದ ವೇಳೆ ಇದು ಕಂಡುಬರುತ್ತದೆ.

ಆತ ತೀವ್ರವಾಗಿ ಗಾಯಗೊಂಡ

ಆತ ತೀವ್ರವಾಗಿ ಗಾಯಗೊಂಡ

ಆತನ ಗಾಯದ ಸಮಸ್ಯೆಯು ಎಷ್ಟು ತೀವ್ರವಾಗಿತ್ತು ಎಂದರೆ ಆಗ ಚಿಕಿತ್ಸೆಗಾಗಿ ಸುಮಾರು 400 ಕಿ.ಮೀ. ದುರ ತೆರಳಿದ. ನೆವಾಡದ ಸಣ್ಣ ನಗರದಿಂದ ಆತ ಉತ್ಹಾಗೆ ಚಿಕಿತ್ಸೆಗಾಗಿ ಬರಬೇಕಾಯಿತು.

ಚಿಕಿತ್ಸೆ

ಚಿಕಿತ್ಸೆ

ಯುವಕನಿಗೆ ಚಿಕಿತ್ಸೆ ನೀಡುತ್ತಿರುವ ವೇಳೆ ಕೆಲವು ಹಲ್ಲುಗಳನ್ನು ತೆಗೆಯಲಾಯಿತು ಮತ್ತು ಹಾನಿಗೀಡಾಗಿರುವ ಅಂಗಾಂಶವನ್ನು ಕೂಡ. ಹಾನಿಯು ತೀವ್ರವಾಗಿದ್ದ ಕಾರಣದಿಂದಾಗಿ ಎಲುಬಿನ ಸ್ಥಿತಿರೀಕರಣಕ್ಕಾಗಿ ಕೆಲವು ಕೃತಕ ಅಂಗಾಂಶಗಳನ್ನು ಅಲ್ಲಿ ಅಳವಡಿಸಲಾಯಿತು.

ಆತನಿಗೆ ಇ ಸಿಗರೇಟ್ ನ್ನು ಉಡುಗೊರೆ ನೀಡಲು ಆತನ ತಾಯಿಗೆ ಇಷ್ಟವಿರಲಿಲ್ಲ

ಆತನಿಗೆ ಇ ಸಿಗರೇಟ್ ನ್ನು ಉಡುಗೊರೆ ನೀಡಲು ಆತನ ತಾಯಿಗೆ ಇಷ್ಟವಿರಲಿಲ್ಲ

ಈ ಪೆನ್ ಸ್ಫೋಟಗೊಳ್ಳಬಹುದು ಎಂಧು ಆತನ ತಾಯಿ ಕೂಡ ಎಚ್ಚರಿಕೆ ನೀಡಿದ್ದರು ಮತ್ತು ಇದು ಸುರಕ್ಷಿತವಲ್ಲವೆಂದು ಅವರು ಹೇಳಿದ್ದರು. ಆಕೆ ಈ ಬಗ್ಗೆ ಆನ್ ಲೈನ್ ನಲ್ಲಿ ಕೆಲವು ರಿವ್ಯೂವ್ ಕೂಡ ಓದಿದ್ದರು. ಆದರೆ ಹುಡುಗ ತುಂಬಾ ಹಠ ಮಾಡಿದ ಕಾರಣದಿಂದಾಗಿ ಆಕೆ ಇದನ್ನು ಉಡುಗೊರೆ ನೀಡಿದ್ದರು. ಇದನ್ನು ಬಳಸಲು ಆರಂಭಿಸಿದ ತಿಂಗಳಲ್ಲೇ ಈ ಘಟನೆಯು ನಡೆದಿದೆ.

Most Read: ಪ್ರಿಯತಮೆ ಜತೆಗೆ ಮಾತನಾಡಲು ಸಾಫ್ಟವೇರ್ ರಚಿಸಿದ ಟೆಕ್ಕಿ!

ಆ ಘಟನೆ ಬಗ್ಗೆ ತಾಯಿ ಹೇಳಿರುವುದು ಹೀಗೆ…

ಆ ಘಟನೆ ಬಗ್ಗೆ ತಾಯಿ ಹೇಳಿರುವುದು ಹೀಗೆ…

ತನ್ನ ಮಗನ ಕೋಣೆಯಿಂದ ದೊಡ್ಡ ಮಟ್ಟದ ಸದ್ದು ಕೇಳಿಬಂತು ಮತ್ತು ಆತ ನೋವಿನಿಂದ ಕಿರುಚಾಡುತ್ತಿದ್ದ. ಆಕೆ ಆತನ ಕೋಣೆಗೆ ಹೋದ ವೇಳೆ ರಕ್ತವು ಒಸರುತ್ತಿತ್ತು ಮತ್ತು ಮುಖದಲ್ಲಿ ದೊಡ್ಡ ತೂತು ಕೂಡ ಆಗಿತ್ತು. ವೈದ್ಯರು ಈ ಘಟನೆಯನ್ನು ದ ನ್ಯೂ ಇಂಗ್ಲೆಂಡ್ ಜರ್ನಲ್ ಆಪ್ ಮೆಡಿಸಿನ್ ನಲ್ಲಿ ಪ್ರಕಟಿಸಲಾಗಿದೆ ಮತ್ತು ಇ ಸಿಗರೇಟ್ ಬಳಸುವ ಅಪಾಯವನ್ನು ಇಲ್ಲಿ ಹೇಳಲಾಗಿದೆ.

English summary

Vape Pen Explodes & Damages Teen's Teeth

A 17-year-old teen was left with injuries that looked like "close-range gunshot wounds." The injuries were caused after a vape pen exploded in his mouth. Apparently, his mum had gifted him to help him quit smoking. His injuries were so severe that his doctors had submitted the case to the New England Journal of Medicine warning about the potential
X
Desktop Bottom Promotion