For Quick Alerts
ALLOW NOTIFICATIONS  
For Daily Alerts

ಸಕಾರಾತ್ಮಕವಾಗಿ ಜಾಬ್ ಇಂಟರವ್ಯೂ ಎದುರಿಸುವುದು ಹೇಗೆ? ಇಲ್ಲಿದೆ ನೋಡಿ ಸರಳ ಟಿಪ್ಸ್

|

ಹೊಸ ನೌಕರಿಯೊಂದನ್ನು ಹುಡುಕುವಾಗ ಅದಕ್ಕಾಗಿ ಅರ್ಜಿ ಹಾಕುವುದು ಹಾಗೂ ಕಂಪನಿಗೆ ಹೋಗಿ ಸಂದರ್ಶನ (ಇಂಟರವ್ಯೂ) ಎದುರಿಸುವುದು ಇವೆಲ್ಲ ವೃತ್ತಿ ಜೀವನದ ಭಾಗವೇ ಆಗಿವೆ. ಆದರೆ ಇಂಟರವ್ಯೂ ಎದುರಿಸುವುದು ಬಹಳಷ್ಟು ಜನರಿಗೆ ಒಂದು ರೀತಿಯ ಅವ್ಯಕ್ತ ದುಗುಡನ್ನು ಮನಸ್ಸಿನಲ್ಲಿ ಉಂಟುಮಾಡುತ್ತದೆ. ಎಷ್ಟೇ ಕೂಲ್ ಆಗಿ ಇರಬೇಕೆಂದರೂ ಸಂದರ್ಶನದಲ್ಲಿ ಏನು ಕೇಳುತ್ತಾರೋ, ಏನಾಗುತ್ತದೋ ಎಂಬ ಸಣ್ಣ ಆತಂಕ ಮನೆ ಮಾಡಿರುತ್ತದೆ. ಸ್ಥಿತಪ್ರಜ್ಞರಾಗಿ ನಿರಾಳ ಮನಸ್ಸಿನಿಂದ ಇಂಟರವ್ಯೂ ಎದುರಿಸುವುದು ಹೇಗೆಂಬ ಬಗ್ಗೆ ಇಲ್ಲಿ ತಿಳಿಸಲಾಗಿದ್ದು ನೀವೂ ಓದಿಕೊಳ್ಳಿ.

ಆತ್ಮವಿಶ್ವಾಸದಿಂದ ಇಂಟರವ್ಯೂ ಎದುರಿಸಲು ಕೆಲ ಉಪಾಯಗಳು

ಆತ್ಮವಿಶ್ವಾಸದಿಂದ ಇಂಟರವ್ಯೂ ಎದುರಿಸಲು ಕೆಲ ಉಪಾಯಗಳು

ಎಲ್ಲರೂ ಅಲ್ಲದಿದ್ದರೂ ಅನೇಕರು ಇಂಟರವ್ಯೂ ಎದುರಿಸುವ ಸಂದರ್ಭದಲ್ಲಿ ಒಂದು ರೀತಿಯ ಒತ್ತಡಕ್ಕೆ ಸಿಲುಕುತ್ತಾರೆ ಎಂಬುದು ವಾಸ್ತವ. ಹೀಗೆ ಒತ್ತಡ ಅಥವಾ ನರ್ವಸ್‌ನೆಸ್ ಉಂಟಾದಾಗ ಅದರ ವಿರುದ್ಧ ಹೋರಾಡುವ ಬದಲು ಅದನ್ನು ಒಪ್ಪಿಕೊಂಡೇ ಹೇಗೆ ಸರಳವಾಗಿ ಇಂಟರವ್ಯೂ ಎದುರಿಸಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ಇಂಟರವ್ಯೂಗೆ ಮುನ್ನ ಉಂಟಾಗುವ ಒತ್ತಡ ನಿವಾರಣೆಗೆ ಇಲ್ಲಿವೆ ಮಹತ್ವದ ಟಿಪ್ಸ್.

ಬೇಗ ಹೊರಡಿ, ಬೇಗ ನಿರಾಳರಾಗಿ

ಬೇಗ ಹೊರಡಿ, ಬೇಗ ನಿರಾಳರಾಗಿ

ಇಂಟರವ್ಯೂ ಎಂದ ಮೇಲೆ ಮೊದಲೇ ಒತ್ತಡ ಮನೆ ಮಾಡಿರುತ್ತದೆ. ಅಂಥದ್ದರಲ್ಲಿ ಮನೆ ಬಿಡಲು ತಡ ಮಾಡಿ ಟ್ರಾಫಿಕ್‌ನಲ್ಲೋ ಅಥವಾ ಇನ್ನಾವುದೋ ಸಮಸ್ಯೆಗೆ ಸಿಲುಕಿ ಪರಿಸ್ಥಿತಿಯನ್ನು ಗೋಜಲು ಮಾಡಿಕೊಳ್ಳಬಾರದು. ಬೇಗ ಮನೆಯಿಂದ ಹೊರಟು ಒಂದಿಷ್ಟು ಸಮಯ ಇರುವಾಗಲೇ ಸಂದರ್ಶನದ ಸ್ಥಳ ತಲುಪಿ ಬಿಡಬೇಕು. ಅಲ್ಲಿಗೆ ಹೋದ ನಂತರ ಕೆಲ ಹೊತ್ತು ಶಾಂತವಾಗಿದ್ದು ಮನಸ್ಸನ್ನು ತಹಬಂದಿಗೆ ತರಲು ಯತ್ನಿಸಬೇಕು. ಜೊತೆಗೆ ಅಲ್ಲೇ ಎಲ್ಲಾದರೂ ಟೀ ಅಥವಾ ಕಾಫಿ ಹೀರುತ್ತ ನಿರಾಳರಾಗಲು ಪ್ರಯತ್ನಿಸಬಹುದು.

Most Read: ಕೆಲಸದ ಸಂದರ್ಶನದಲ್ಲಿ ಆಡಬಾರದ ಮಾತುಗಳಿವು!

ಸಂದರ್ಶನಕ್ಕಾಗಿ ಅತಿಯಾದ ಸಿದ್ಧತೆ ಮಾಡಿಕೊಳ್ಳುವುದು

ಸಂದರ್ಶನಕ್ಕಾಗಿ ಅತಿಯಾದ ಸಿದ್ಧತೆ ಮಾಡಿಕೊಳ್ಳುವುದು

ಸಂದರ್ಶನದಲ್ಲಿ ನನಗೆ ಗೊತ್ತಿರದ ಪ್ರಶ್ನೆಗಳನ್ನು ಕೇಳಿದರೆ ಏನು ಮಾಡುವುದು ಎಂಬ ಚಿಂತೆ ಅನೇಕರದ್ದಾಗಿರುತ್ತದೆ. ಇದಕ್ಕೆ ಒಂದು ಉಪಾಯವಿದೆ. ಸಂದರ್ಶನದಲ್ಲಿ ಕೇಳಬಹುದಾದ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧತೆ ಮಾಡಿಕೊಳ್ಳಿ. ನಿಮ್ಮ ಗೆಳೆಯ ಅಥವಾ ಬಂಧು ಮಿತ್ರರನ್ನು ಕರೆದು ಒಂದು ಪ್ರಾಯೋಗಿಕ ಸಂದರ್ಶನ ಮಾಡಿ ನೋಡಿ. ನೀವು ಕೆಲಸಕ್ಕೆ ಅರ್ಜಿ ಹಾಕಿದ ಕಂಪನಿಯ ಬಗ್ಗೆ ಆದಷ್ಟೂ ಅಧ್ಯಯನ ನಡೆಸಿ. ಯಾವುದೇ ವಿಷಯಗಳು ಬಿಟ್ಟು ಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಆತ್ಮವಿಶ್ವಾಸದಿಂದಿರಿ.

ಅಲ್ಲಿ ಏನಾಗಬಹುದು ಎಂಬುದರ ಬಗ್ಗೆ ಕಲ್ಪಿಸಿಕೊಳ್ಳಿ

ಅಲ್ಲಿ ಏನಾಗಬಹುದು ಎಂಬುದರ ಬಗ್ಗೆ ಕಲ್ಪಿಸಿಕೊಳ್ಳಿ

ಸಂದರ್ಶನದಲ್ಲಿ ಏನಾಗಬಹುದು? ಯಾವೆಲ್ಲ ಪ್ರಶ್ನೆಗಳನ್ನು ಕೇಳಬಹುದು? ಯಾವ ಸಂದರ್ಭದಲ್ಲಿ ಕಷ್ಟ ಎದುರಾಗಬಹುದು? ಈ ಎಲ್ಲ ಅಂಶಗಳ ಬಗ್ಗೆ ಮನದಲ್ಲಿಯೇ ಚಿತ್ರಣ ಕಲ್ಪಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮಗೆ ಗೊತ್ತಿರದನ್ನು ಕೇಳಿದಾಗಲೂ ಆತಂಕ ಉಂಟಾಗದೆ ನಿರಾಳ ಮನಸ್ಥಿತಿಯಿಂದ ಇರಬಹುದು.

ಸರಳ ಹಾಗೂ ಆರಾಮದಾಯಕ ಉಡುಪು ಧರಿಸಿ

ಸರಳ ಹಾಗೂ ಆರಾಮದಾಯಕ ಉಡುಪು ಧರಿಸಿ

ಸಂದರ್ಶನಕ್ಕೆ ಹೋಗುವಾಗ ತೀರಾ ಬಿಗಿಯಾದ ಉಡುಪು ಅಥವಾ ವಿಚಿತ್ರ ಫಾರ್ಮಲ್ ಡ್ರೆಸ್ ಧರಿಸುವುದರಿಂದ ಅಲ್ಲಿ ಒಂದು ರೀತಿಯ ಮುಜುಗರ ಉಂಟಾಗಬಹುದು. ಇದರಿಂದ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಾಗಬಹುದು. ಆದ್ದರಿಂದ ಸರಳ ಹಾಗೂ ಆರಾಮದಾಯಕ ಉಡುಪು ಧರಿಸುವುದು ಒಳಿತು. ಯಾವ ಉಡುಪು ಧರಿಸಬೇಕು ಹಾಗೂ ಸಂದರ್ಶನಕ್ಕೆ ಹೋಗುವಾಗ ಯಾವೆಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ಹಿಂದಿನ ದಿನವೇ ನಿರ್ಧರಿಸಿ ಸಿದ್ಧತೆ ಮಾಡಿಟ್ಟುಕೊಳ್ಳಿ.

Most Read: ಸಂದರ್ಶನದಲ್ಲಿ ಯಶಸ್ಸನ್ನು ಕಾಣಲು ಏಕೆ ವಿಫಲರಾಗುತ್ತಾರೆ?

ಇನ್ನೊಬ್ಬರ ಬಗ್ಗೆ ಚಿಂತೆ ಮಾಡಬೇಕಿಲ್ಲ

ಇನ್ನೊಬ್ಬರ ಬಗ್ಗೆ ಚಿಂತೆ ಮಾಡಬೇಕಿಲ್ಲ

ವಾಕ್ ಇನ್ ಇಂಟರವ್ಯೂ ಇದ್ದಾಗ ನೀವು ಅಲ್ಲಿ ನೆರೆದ ಇತರ ಅಭ್ಯರ್ಥಿಗಳೊಂದಿಗೆ ಅಥವಾ ಈಗ ತಾನೆ ಇಂಟರವ್ಯೂ ಮುಗಿಸಿ ಹೊರಗೆ ಬಂದ ವ್ಯಕ್ತಿಯ ಜೊತೆ ಮಾತನಾಡುವ ಸಂದರ್ಭ ಒದಗಿ ಬರಬಹುದು. ಒಳಗಡೆ ಏನು ಕೇಳಿದರು ಎಂಬ ಬಗ್ಗೆ ಕೇಳಿ ತಿಳಿಯುವುದು ಒಳ್ಳೆಯದೇ ಆದರೂ ಎಲ್ಲರೂ ಸತ್ಯವನ್ನೇ ಹೇಳುತ್ತಾರೆ ಎನ್ನುವಂತಿಲ್ಲ. ಕೆಲವರು ಏನನ್ನೋ ಹೇಳಿ ನಿಮ್ಮ ದಾರಿ ತಪ್ಪಿಸಲು ಯತ್ನಿಸಬಹುದು. ಇದರಿಂದ ಹುಷಾರಾಗಿರುವುದು ಅಗತ್ಯ. ಹೀಗಾಗಿ ಬೇರೆಯವರು ಏನು ಹೇಳುತ್ತಾರೆ ಎಂಬುದಕ್ಕಿಂತ ನಿಮ್ಮ ವಿವೇಚನೆ ಏನು ಹೇಳುತ್ತದೆ ಅದರಂತೆ ಮಾಡುವುದೇ ಸೂಕ್ತ.

ಸಕಾರಾತ್ಮಕ ಮನಸ್ಥಿತಿ ಇರಲಿ

ಸಕಾರಾತ್ಮಕ ಮನಸ್ಥಿತಿ ಇರಲಿ

ಎಂಥದೇ ಪರಿಸ್ಥಿತಿ ಎದುರಾದರೂ ಸಕಾರಾತ್ಮಕ ಮನಸ್ಥಿತಿ ಇದ್ದಲ್ಲಿ ಎಲ್ಲವನ್ನೂ ಜಯಿಸಬಹುದು. ಏನೋ ಕೆಟ್ಟದ್ದಾಗಲಿದೆ ಎಂದು ಸತತವಾಗಿ ಅಂದುಕೊಳ್ಳುವುದರಿಂದ ಏನೂ ಒಳಿತಾಗದು. ಯಾವಾಗಲೂ ಸಕಾರಾತ್ಮಕ ಮನಸ್ಥಿತಿಯಿಂದ ಇದ್ದು ಮನಸ್ಸಿನಲ್ಲಿನ ಉತ್ಸಾಹದ ಚಿಲುಮೆ ಪುಟಿಯುತ್ತಿರುವಂತೆ ಇದ್ದಾಗ ಎಲ್ಲ ಸಂದರ್ಭಗಳಲ್ಲೂ ಸುಲಭವಾಗಿ ದಾಟಿ ಬರಬಹುದು. ಇದು ಇಂಟರವ್ಯೂಗೆ ಸಹ ಅನ್ವಯಿಸುತ್ತದೆ. ಏನಾಗಲಿದೆ, ಹೇಗಾಗಲಿದೆ ಎಂದು ತೀರಾ ಚಿಂತೆ ಮಾಡುವುದನ್ನು ಬಿಟ್ಟು ಎಲ್ಲವೂ ಒಳ್ಳೆಯದೇ ಆಗಲಿದೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ ಜಯ ಸಿಕ್ಕೇ ಸಿಗುತ್ತದೆ.

English summary

Tips while attending job interviews

Although not everyone might admit it, most of us get nervous while attending job interviews.Instead of fighting this feeling, it would be more helpful if we try to accept it and take measures to make the interview a smooth process.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X