For Quick Alerts
ALLOW NOTIFICATIONS  
For Daily Alerts

ಈ ಮಗು ಗರ್ಭದಲ್ಲಿರುವಾಗಲೇ ತಲೆಬುರುಡೆಯಿಂದ ಹೊರಗಡೆ ಮೆದುಳು ಬೆಳೆಯಿತಂತೆ!

|

ಮಹಿಳೆಗೆ ತಾನು ಗರ್ಭವತಿ, ಮಗುವಿನ ತಾಯಿ ಆಗುವ ಸಂದರ್ಭ ಬಂದಿದೆ ಎನ್ನುವುದಕ್ಕಿಂತ ದೊಡ್ಡ ಸಂಭ್ರಮ ಹಾಗೂ ಸಂತೋಷ ಮತ್ತೊಂದಿಲ್ಲ. ಪ್ರತಿಯೊಬ್ಬ ಮಹಿಳೆ ಕೂಡ ತಾಯ್ತನದ ಆನಂದ ಪಡೆಯಲು ಬಯಸುವಳು. ಆಕೆ ತಾನು ಗರ್ಭಿಣಿಯಾದ ದಿನದಿಂದಲೇ ಮಗುವಿನ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಳ್ಳಲು ಆರಂಭಿಸುವಳು. ತನ್ನ ಮಗು ಹೇಗೆ ಇದ್ದರೂ ಅದನ್ನು ಆಕೆ ಸ್ವೀಕಾರ ಮಾಡುವಳು. ಕೆಲವೊಂದು ಸಂದರ್ಭದಲ್ಲಿ ಗರ್ಭದಲ್ಲಿರುವಂತಹ ಮಗುವಿನಲ್ಲಿ ನ್ಯೂನ್ಯತೆಗಳು ಕಾಣಿಸಿಕೊಳ್ಳುವುದು. ಈ ವೇಳೆ ವೈದ್ಯರು ಗರ್ಭಪಾತ ಮಾಡಿಸಿಕೊಳ್ಳಲು ಸಲಹೆ ನೀಡುವರು. ಆದರೆ ಹೆಚ್ಚಿನ ಮಹಿಳೆಯರಿಗೆ ಇದು ದೊಡ್ಡ ಆಘಾತ ಆಗಿರುವುದು.

ತಾನು ಕಟ್ಟಿಕೊಂಡಿರುವಂತಹ ಕನಸುಗಳು ಒಂದೇ ಕ್ಷಣದಲ್ಲಿ ನುಚ್ಚುನೂರು ಆಗುವುದು. ಕೆಲವು ಮಹಿಳೆಯರು ಧೈರ್ಯ ಮಾಡಿಕೊಂಡು ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಬಯಸುವರು. ಹೇಗೆ ಇದ್ದರೂ ಅದು ತನ್ನ ಮಗು ಎನ್ನುವ ಭಾವನೆಯು ಆಕೆಯಲ್ಲಿ ಅದಾಗಲೇ ಮೂಡಿರುತ್ತದೆ. ಇದರಿಂದ ಮಗು ಹೇಗಿದ್ದರೂ ಚಿಂತಿಲ್ಲ, ಅದನ್ನು ನಾನು ಸಾಕಿ ಸಲಹಿ ದೊಡ್ಡದು ಮಾಡುತ್ತೇನೆ ಎನ್ನುವ ಭಾವನೆಯು ಮಹಿಳೆ ಯಲ್ಲಿರುತ್ತದೆ. ಈ ಲೇಖನದಲ್ಲಿ ಗರ್ಭದಲ್ಲೇ ತಲೆಬುರುಡೆಯಿಂದ ಹೊರಗಡೆ ಮೆದುಳು ಬೆಳೆಯುತ್ತಿದ್ದ ಮಗುವಿನ ತಾಯಿ ಕೈಗೊಂಡ ನಿರ್ಧಾರ ಏನು ಎಂದು ವಿವರವಾಗಿ ಹೇಳಲಿದ್ದೇವೆ. ಮಗು ಹೆಚ್ಚು ಕಾಲ ಬದುಕುವ ಸಾಧ್ಯತೆಯು ಕಡಿಮೆ ಇರುವುದರಿಂದ ಗರ್ಭಪಾತ ಮಾಡಬೇಕೆಂದು ವೈದ್ಯರು ಸೂಚಿಸಿದರು. ಮುಂದೆ ಏನಾಯಿತು ನೀವೇ ಓದಿ...

ಅಲ್ಟ್ರಾಸೌಂಡ್ ಪರೀಕ್ಷೆ ವೇಳೆ ಈ ಸ್ಥಿತಿ ಬಗ್ಗೆ ತಿಳಿಯಿತು

ಅಲ್ಟ್ರಾಸೌಂಡ್ ಪರೀಕ್ಷೆ ವೇಳೆ ಈ ಸ್ಥಿತಿ ಬಗ್ಗೆ ತಿಳಿಯಿತು

ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಿಕೊಂಡ ವೇಳೆ ಗರ್ಭದಲ್ಲಿರುವ ಪುಟ್ಟ ಡಾಮಿನಿಕ್ ಪಿಯೊ ಗುಂಡ್ರಮ್ ಗೆ ಈ ಪರಿಸ್ಥಿತಿ ಇರುವುದು ಕಂಡುಬಂತು. ಸ್ಕ್ಯಾನಿಂಗ್ ವೇಳೆ ತಿಳಿದು ಬಂದ ವಿಚಾರವೆಂದರೆ ಮಗುವಿನ ಮುಖದ ಸೀಳಿನಿಂದಾಗಿ ಆತನ ಮೆದುಳಿನ ಅಂಗಾಂಶಗಳು ಹೊರಗಡೆ ಬೆಳೆಯುತ್ತಿದೆ ಮತ್ತು ಆತನ ಮುಖದ ಮೇಲೆ ಗಾಲ್ಫ್ ಚೆಂಡಿನಂತಹ ರಚನೆಯು ನಿರ್ಮಾಣ ಆಗಿದೆ.

ಗರ್ಭಪಾತ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದರು

ಗರ್ಭಪಾತ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದರು

ಧರ್ಮನಿಷ್ಠ ಕ್ರೈಸ್ತ ಸಮುದಾಯದ ಈ ದಂಪತಿಗೆ ಈಗಾಗಲೇ ಏಳು ಮಂದಿ ಮಕ್ಕಳಿದ್ದಾರೆ. ಆದರೂ ವೈದ್ಯರು ಸಲಹೆ ಮಾಡಿದ ವೇಳೆ ಈ ದಂಪತಿ ಮಾತ್ರ ಗರ್ಭ ಪಾತ ಮಾಡಿಸಿಕೊಳ್ಳಲು ನಿರಾಕರಿಸಿತು. ತಮ್ಮ ಮಗುವಿನ ಜೀವವನ್ನು ಅವರು ದೇವರ ಕೈಗೆ ನೀಡಲು ಬಯಸಿದ್ದರು.

Most Read: ರಾತ್ರಿ ಬೆಳಗಾಗುದರೊಳಗಡೆ ಗರ್ಭಧರಿಸಿ, ಮಗುವಿಗೆ ಜನ್ಮ ನೀಡಿದ ಮಹಿಳೆ!!

ಈ ಪರಿಸ್ಥಿತಿಯ ಬಗ್ಗೆ ರೋಗನಿರ್ಣಯ ಮಾಡಿರುವುದು

ಈ ಪರಿಸ್ಥಿತಿಯ ಬಗ್ಗೆ ರೋಗನಿರ್ಣಯ ಮಾಡಿರುವುದು

ಈ ಪುಟ್ಟ ಮಗುವು ಅಪರೂಪದಲ್ಲಿ ಅಪರೂಪದ ಪರಿಸ್ಥಿತಿಯಾಗಿರುವ ಎನ್ಸೆಫಾಲೋಸಿಲ್ ನಿಂದ ಬಳಲುತ್ತಿದ್ದಾನೆ. ಇದು ತಲೆಬುರುಡೆಯಿಂದ ಹೊರಗಡೆ ಮೆದುಳಿನ ಅಂಗಾಂಶಗಳು ಬೆಳೆಯುವಂತಹ ಪರಿಸ್ಥಿತಿ ಆಗಿದೆ. ಈ ಮಗುವಿನ ತುಟಿಗಳಿಂದ ಹಣೆಯ ತನಕ ತ್ರಿಕೋನಾಕಾರದ ಅಂತರವು ಇದೆ. ಇದನ್ನು `ಟೆಸ್ಸಿಯರ್ ಮಿಡ್ಲೈನ್'ಮುಖದ ಸೀಳು ಎಂದು ಕರೆಯಲಾಗುತ್ತದೆ. ಮೆದುಳಿನ ಅಂಗಾಂಶಗಳು ಹೊರಗಡೆ ಬಂದು, ಅದು ಒಂದು ಗಾಲ್ಫ್ ಆಕಾರದಲ್ಲಿ ರಚನೆ ಆಗುವುದು. ಇದು ಆತನ ಹಣೆಯ ಭಾಗದಲ್ಲಿ ಇರುವುದು.

Most Read: ನೋವು ನಿವಾರಣೆಗೆ ಹಗ್ಗ ಹಾಕಿಕೊಂಡು ನೇತಾಡುವುದು- ಇದು ಚೀನಾದ ಹೊಸ ಟ್ರೆಂಡ್ ಅಂತೆ!!

ಆತ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದರು

ಆತ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದರು

ಗರ್ಭಧಾರಣೆ ವೇಳೆ ಪೋಷಕರು ತುಂಬಾ ಗಟ್ಟಿ ಮನಸ್ಸು ಮಾಡಿಕೊಳ್ಳುವಂತೆ ವೈದ್ಯರು ಆ ದಂಪತಿಗೆ ಎಲ್ಲಾ ಸಲಹೆಗಳನ್ನು ನೀಡಿದ್ದರು. ಯಾಕೆಂದರೆ ವೈದ್ಯರ ಪ್ರಕಾರ ಆ ಮಗು ಹುಟ್ಟಿದ ಕೆಲವು ತಿಂಗಳು ಮಾತ್ರ ಬದುಕುಳಿಯುತ್ತದೆ ಎಂದು ನಂಬಿದ್ದರು. ಆ ಮಹಿಳೆ ತುಂಬಾ ದಿಟ್ಟೆಯಾಗಿದ್ದ ಕಾರಣದಿಂದಾಗಿ ಗರ್ಭಪಾತ ಮಾಡಿಸಿಕೊಳ್ಳದೆ ಮಗುವಿಗೆ ಜನ್ಮ ನೀಡಿದಳು. ಮಗು ನಿರೀಕ್ಷೆಯನ್ನು ಮೀರಿ ಬದುಕುಳಿದಿದೆ. ಇದರ ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಈಗ ಮಗು ಸಾಮಾನ್ಯ ಜೀವನ ಸಾಗಿಸುವಂತೆ ಮಾಡಲಾಗಿದೆ. ಆ ಮಗುವಿಗೆ ಈಗ ಆರು ವರ್ಷವಾಗಿದೆ. ಆದರೆ ತುಂಬಾ ಆರೋಗ್ಯವಾಗಿದ್ದಾನೆ ಮತ್ತು ತನ್ನ ವಯಸ್ಸಿನ ಮಕ್ಕಳಂತೆ ಆಟವಾಡುತ್ತಾನೆ.ಇದರಿಂದ ಆ ಕುಟುಂಬದ ಆತ್ಮವಿಶ್ವಾಸ ಹಾಗೂ ದೇವರ ಮೇಲಿನ ನಂಬಿಕೆಯು ಹೆಚ್ಚಾಗಿದೆ.

ನಿಮಗೆ ಇಂತಹ ಪವಾಡಗಳ ಮೇಲೆ ನಂಬಿಕೆ ಇದೆಯಾ? ಇಂತಹ ಅನುಭವ ನಿಮಗೆ ಆಗಿದ್ದರೆ ಅದನ್ನು ಕಮೆಂಟ್ ಬಾಕ್ಸ್ ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯದಿರಿ.

English summary

This baby brain was outside while he was inside his mother's

A young boy named Little Dominic Pio Gundrum was born with a very rare disorder known as encephalocele. It is a medical condition where a part of the brain grows outside of the skull. The doctors suggested the parents to abort the child, but they went ahead with the pregnancy and gave birth to the little boy whose brain was outside his skull.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X