For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯಶಾಸ್ತ್ರದ ಪ್ರಕಾರ 6 ರಾಶಿಯವರು ಮಕ್ಕಳಿಗೆ ಒಳ್ಳೆಯ ತಂದೆಯಾಗಿರುವರು!

|

ಮಕ್ಕಳಿಗೆ ತಂದೆತಾಯಿಯ ಪ್ರೀತಿಗಿಂತ ಮಿಗಿಲಾಗಿರುವುದು ಯಾವುದೂ ಇಲ್ಲ. ತಂದೆತಾಯಿ ಪ್ರೀತಿ ಹಾಗೂ ಅವರ ಮಾರ್ಗದರ್ಶನದಲ್ಲಿ ಬೆಳೆದ ಮಕ್ಕಳು ನಿಜವಾಗಿಯೂ ಪುಣ್ಯವಂತರು ಎಂದು ಹೇಳಬಹುದು. ಯಾಕೆಂದರೆ ಇಂತಹ ಭಾಗ್ಯವು ಪ್ರತಿಯೊಬ್ಬರಿಗೂ ಸಿಗದು. ತಂದೆತಾಯಿಯು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿದರೆ ಮಕ್ಕಳು ಕೂಡ ತಪ್ಪುದಾರಿ ಹಿಡಿಯುವುದು ತಪ್ಪುತ್ತದೆ. ತಂದೆ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಮಕ್ಕಳ ಪಾಲನೆಯಲ್ಲಿ ಕೈಜೋಡಿಸಬೇಕು. ಮಕ್ಕಳ ಲಾಲನೆಪಾಲನೆ ಮಾಡುವುದು ಕೇವಲ ತಾಯಿಯಾದವಳ ಜವಾಬ್ದಾರಿ ಎಂದು ಬಿಟ್ಟರೆ ಆಗ ಖಂಡಿತವಾಗಿಯೂ ದೊಡ್ಡ ಸಮಸ್ಯೆಯಾಗುವುದು. ತಂದೆಯು ಜವಾಬ್ದಾರಿಯಿಲ್ಲದೆ ವರ್ತಿಸಿದರೆ ಮಕ್ಕಳಿಗೂ ಅದರಿಂದ ದೊಡ್ಡ ಸಮಸ್ಯೆಯಾಗುವುದು.

ಕೆಲವರು ಮಕ್ಕಳ ಪಾಲನೆಯಲ್ಲಿ ತಾಯಿಯಷ್ಟೇ ಪಾತ್ರ ವಹಿಸುವರು. ಹದಿಹರೆಯದ ಮಕ್ಕಳೊಂದಿಗೆ ಸ್ನೇಹಿತರೊಂದಿಗೆ, ತಮಾಷೆ ಮಾಡುತ್ತಾ ಕಳೆಯುವರು. ಹೊರಗಿನವರಿಗೆ ಇವರು ತಂದೆ ಮಗನಾ ಅಥವಾ ಗೆಳೆಯರಾ ಎಂದು ತಿಳಿಯಲು ಸಾಧ್ಯವಾಗದು. ಇದಕ್ಕೆ ಕಾರಣ ಅವರ ರಾಶಿ ಚಕ್ರವೆಂದರೆ ನೀವು ನಂಬಲೇಬೇಕು. ಪರಿಪೂರ್ಣ ತಂದೆ ಎನ್ನುವುದಕ್ಕೆ ಯಾವುದೇ ರೀತಿಯ ವ್ಯಾಖ್ಯಾನವಿಲ್ಲ ಮತ್ತು ತಂದೆ ಹಾಗೂ ಮಗನ ಪರಸ್ಪರ ಹೊಂದಾಣಿಕೆಯು ಇಲ್ಲಿ ಮುಖ್ಯವಾಗಿ ಇರುವುದು. ಕೆಲವು ರಾಶಿಗಳ ಜನರು ತಮ್ಮ ಮಕ್ಕಳಿಗೆ ತುಂಬಾ ಹತ್ತಿರವಾಗಿರುವರು ಮತ್ತು ಅವರಲ್ಲಿನ ತಂದೆಯ ಗುಣವನ್ನು ಮಕ್ಕಳು ಕೂಡ ಪ್ರಶಂಸೆ ಮಾಡುವರು. ಉತ್ತಮ ತಂದೆಯಾಗುವಂತಹ ರಾಶಿಗಳು ಯಾವುದು ಎಂದು ನೀವು ಈ ಲೇಖನದಲ್ಲಿ ಓದಿಕೊಳ್ಳಿ.

ವೃಷಭ

ವೃಷಭ

ವೃಷಭ ರಾಶಿಯವರು ತುಂಬಾ ತಾಳ್ಮೆಯ ವ್ಯಕ್ತಿಗಳು. ಆದರೆ ಇವರಿಗೆ ಕೋಪ ಬಂದರೆ ಇವರನ್ನು ಸಂಭಾಲಿಸುವುದು ತುಂಬಾ ಕಷ್ಟದ ಕೆಲಸ. ಕೆಲವೊಮ್ಮೆ ವಿಪರೀತ ಕೋಪವು ಇವರಿಗೆ ಬರುವುದು. ಇವರಲ್ಲಿನ ತಾಳ್ಮೆಯು ಮಕ್ಕಳ ಎಲ್ಲಾ ಒಳ್ಳೆಯ ನಡವಳಿಕೆ ಮತ್ತು ಕೆಟ್ಟದನ್ನು ಸಹಿಸಿಕೊಳ್ಳುವರು. ವೃಷಭ ರಾಶಿಯ ವ್ಯಕ್ತಿಗಳಲ್ಲಿ ತುಂಬಾ ಬಲಿಷ್ಠವಾಗಿ ಆತ್ಮಬಲವಿರುವುದು. ಕಠಿಣವಾಗಿ ದುಡಿಯುವ ಎತ್ತಿನಂತೆ ಈ ಬಲವಿರುವುದು. ತಮ್ಮ ಮಕ್ಕಳಿಗಾಗಿ ಪರಿಸ್ಥಿತಿಯು ಏನು ಬಯಸುತ್ತದೆಯೋ ಅದನ್ನು ಮಾಡಲು ಅವರು ತಯಾರಾಗಿ ಇರುವರು.

ಕರ್ಕಾಟಕ

ಕರ್ಕಾಟಕ

ಕುಟುಂಬವು ಹೇಳಿಕೊಟ್ಟಿರುವಂತಹ ಮೌಲ್ಯಗಳನ್ನು ಒಬ್ಬ ಕರ್ಕಾಟಕ ರಾಶಿಯವನಿಂದ ನಿರೀಕ್ಷೆ ಮಾಡಬಹುದು. ತಮ್ಮ ಕುಟುಂಬವನ್ನು ಗುರುತಿಸಲು ಅವರು ಈ ಮೌಲ್ಯಗಳನ್ನು ರಚಿಸಿಕೊಳ್ಳಲು ತುಂಬಾ ಇಷ್ಟಪಡುವರು. ಮಕ್ಕಳು ಮೌಲ್ಯಗಳನ್ನು ಗೌರವಿಸಬೇಕು ಎಂದು ಅವರು ಬಯಸುವರು. ಇಂತಹ ಉನ್ನತ ಮೌಲ್ಯಗಳು ಮತ್ತು ಒಳ್ಳೆಯ ಗುಣಗಳು ತಂದೆಯಿಂದ ಮಗನಿಗೆ ವರ್ಗಾವಣೆ ಆಗುವುದು ಎಷ್ಟು ಮುಖ್ಯ ಎಂದು ಅವರಿಗೆ ತಿಳಿದಿರುವುದು. ಇದರಿಂದ ಎಲ್ಲವನ್ನು ತಿಳಿದಿಕೊಂಡಿರುವಂತಹ ಅವರು ಪರಿಪೂರ್ಣ ತಂದೆ ಆಗುವರು.

Most Read: ಲಿಂಗ ಪರಿವರ್ತನೆ ಮಾಡಿಕೊಂಡ ಈ ಪುರುಷರು-ಈಗ ಸುಂದರ ಹುಡುಗಿಯರಂತೆ ಕಾಣುತ್ತಿದ್ದಾರೆ!!

ಸಿಂಹ

ಸಿಂಹ

ಸಿಂಹ ಕಾಡಿನ ರಾಜ. ರಾಜನ ಗುಣ ಹಾಗೂ ನಡತೆಗಳು ಸಿಂಹ ರಾಶಿಯವರಿಗೆ ಸಹಜವಾಗಿಯೇ ಬಂದಿರುವುದು. ಇವರು ತಮ್ಮ ಮಕ್ಕಳಿಗೆ ಪ್ರತಿಯೊಂದು ಹಂತದಲ್ಲೂ ಸುರಕ್ಷತೆ ಮತ್ತು ರಕ್ಷಣೆ ನೀಡಲು ಬಯಸುವರು. ಮಕ್ಕಳು ಏನಾದರೂ ಕೇಳಿದರ ಅದಕ್ಕೆ ಇಲ್ಲವೆನ್ನಲು ಅವರಿಗೆ ತುಂಬಾ ಕಷ್ಟವಾಗುವುದು. ಇದರ ಬದಲಿಗೆ ಮಕ್ಕಳು ಶಿಸ್ತಿನಿಂದ ಇರಬೇಕು ಎಂದು ಅವರು ಯಾವಾಗಲೂ ಬಯಸುವರು. ಉಳಿದಿರುವುದನ್ನು ಅವರು ನೋಡಿಕೊಳ್ಳುವರು.

ತುಲಾ

ತುಲಾ

ತುಲಾ ರಾಶಿಯವರು ಯಾವಾಗಲೂ ತಮ್ಮ ಸುತ್ತ ಶಾಂತಿ ಹಾಗೂ ಸಂತೋಷ ಇರಬೇಕೆಂದು ಬಯಸುವರು. ಪರಿಹರಿಸಬಲ್ಲ ಸಮಸ್ಯೆಗೆ ಜನರು ಅಸಂತೋಷದಿಂದ ಇರುವುದನ್ನು ನೋಡಲು ಇವರಿಂದ ಸಾಧ್ಯವಿಲ್ಲ. ತಮ್ಮ ಮಕ್ಕಳ ವಿಚಾರದಲ್ಲೂ ಇವರು ಇದನ್ನೇ ಅನುಸರಿಸುವರು. ತುಲಾ ರಾಶಿಯವರು ತುಂಬಾ ಭಾವನಾತ್ಮಕವಾಗಿ ಇರುವರು. ಈ ಎಲ್ಲಾ ಗುಣಗಳಿಂದಾಗಿ ತುಲಾ ರಾಶಿಯವರು ತಮ್ಮ ಮಕ್ಕಳ ಪ್ರೀತಿಯ ಅಪ್ಪನಾಗಿ, ಎಲ್ಲಾ ಬೇಡಿಕೆ ಈಡೇರಿಸುವರು.

ಮಕರ

ಮಕರ

ಮಕರ ರಾಶಿಯವರು ತಮ್ಮ ವೃತ್ತಿ ಬಗ್ಗೆ ಹೆಚ್ಚು ಗಮನಹರಿಸುವವರು ಎನ್ನುವ ಮಾತಿದೆ. ಇದು ನಿಜ ಕೂಡ. ಆದರೆ ಅವರು ಪ್ರತಿನಿತ್ಯವು ಕೆಲಸ ಮಾಡುವುದು ಕೂಡ ತಮ್ಮ ಕುಟುಂಬದವರಿಗಾಗಿ. ಕುಟುಂಬದವರ ಕನಸುಗಳು ನನಸಾಗಬೇಕೆಂದು ಅವರು ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುವರು. ಮಹಾತ್ವಾಕಾಂಕ್ಷಿ ಹಾಗೂ ಭಾವನಾತ್ಮಕವಾಗಿ ಇರುವಂತಹ ಮಕರ ರಾಶಿಯವರು ಕುಟುಂಬಕ್ಕಿಂತ ಮೇಲಾಗಿ ವೃತ್ತಿ ಆಯ್ಕೆ ಮಾಡಬಹುದು. ಆದರೆ ಅಂತಿಮವಾಗಿ ಎಲ್ಲವನ್ನು ಅವರು ಮಾಡುವುದು ಕುಟುಂಬದವರಿಗಾಗಿ. ಅವರ ವೃತ್ತಿ ನೈತಿಕತೆಯನ್ನು ಮಕ್ಕಳು ಕೂಡ ತೊಡಗಿಸಿಕೊಳ್ಳುವರು.

Most Read: ರಾಶಿಚಕ್ರದ ಪ್ರಕಾರ ಅವಮಾನಕ್ಕೆ ಒಳಗಾದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುವುದು ನೋಡಿ...

ಮೀನ

ಮೀನ

ಕಾಳಜಿ ಇರುವಂತಹ ಮೀನ ರಾಶಿಯವರು ಪರಿಪೂರ್ಣ ತಂದೆಯಾಗುವರು. ಯಾಕೆಂದರೆ ಇವರು ತಮ್ಮ ಭಾವನೆಗಳನ್ನು ಹೇಳಿಕೊಳ್ಳುವರು ಮತ್ತು ತಮ್ಮ ಮಕ್ಕಳ ಮಟ್ಟದಲ್ಲಿ ಇವರು ಸಂಪರ್ಕದಲ್ಲಿ ಇರುವರು. ಮಕ್ಕಳಿಗೆ ತಂದೆಯ ಹೃದಯದಲ್ಲಿ ಎಷ್ಟು ಪ್ರೀತಿ ಇದೆಯಾ ಅದನ್ನು ಅವರು ವ್ಯಕ್ತಪಡಿಸುವರು. ಇದರಿಂದಾಗಿ ನಂಬಿಕೆಯು ಬಲಗೊಳ್ಳುವುದು. ನಂಬಿಕೆ ಎನ್ನುವುದು ಯಾವುದೇ ಸಂಬಂಧದ ಮೂಲವಾಗಿರುವುದು. ಇದರಿಂದ ಮಕ್ಕಳು ಕೂಡ ಮೊದಲಿಗೆ ಪ್ರೀತಿ ವ್ಯಕ್ತಪಡಿಸುವರು. ಇದನ್ನು ಅವರು ತಮ್ಮ ತಂದೆಯಿಂದಲೇ ಕಲಿತುಕೊಳ್ಳುವರು.

English summary

These Zodiac Signs Make The Best Dads

Ever wondered how you would behave and look when you become a dad? Though there is no definition of a perfect dad, we still believe there are some qualities which children want to have in their dads. Based on these qualities, the zodiac signs Taurus, Cancer, Leo, Libra, Pisces are believed to be near-perfect dads.
X
Desktop Bottom Promotion